UNIVERSAL
LIBRARY
೧
OU 20228
೬೬11೬೮1]
IVSHAINN
ಇದನ್ನು
ಸ್ ನ್ ಇಗ ಹ
ಗದಿಗೆಯ್ಯಾ ಹುಚ್ಚಯ್ಯಾ ಹೊನ್ನಾಪುರಮಠ
ಡಿಬ್ಬಿ ಸ್ಟ ಕೋರ್ಟ ವ್ಲೀಡರ ಧಾರವಾದ್ದ
ಇವರು ರಣಿಓ
ುತ್ರವ್ರಳ್ಳ ಧಾರವಾಡ ಚಂದ್ರೋದಯ ಮುದ್ರಣಾಲಯದಲ್ಲಿ
ಅಲ್ಲಿಯೇ ಪ್ರಸಿದ್ಧ ಮಾಡಿದರು.
ih —
ಸುಧಾರಿಬ ಜೆಳೆಸಿದ
೨ನೇ ಆವೃ
ರಾ ವಾ
(ಕ
೧೯೩೨ ಸಪಟಂಬರ.
ಕಾಸಾ ಅಲ) ಪದಿ ಅ
ಈ ಗ್ರಂಧದ ಎಲ್ಲ ತರದ ಅಧಿಕಾರವನ್ನು ಗೃಂಧಕರ್ತರು
ತಮ್ಮ ಸ್ವಾಧೀನದಲ್ಲಿ ಇಟ್ಟೆ ಕೊಂಡಿರುತ್ತಾರೆ.
ವಾ
ಬೆಲೆ ೮ ಆಣೆ.
ಪ್ರಸ್ತಾವನೆ.
——
ಶ್ರೀರಾಮಕೃಷ್ಣ ಪರಮಹಂಸರಂಧ ಮಡೂತ್ನರು ಜಗತ್ತಿನ ದೊರಕು
ವದು ಒಹಳೆ ವಿರಳ, ಇವ ಓಜಸ್ವಿಯಾದ ಚರಿತ್ರವನ್ನಾಗಲ, ಸತೃಹೆಗಳ
ನ್ರಾಗಲಿ, ಸುಬೋಧ ವಚನಗಳನ್ನಾಗಲ ಓದಿದವರು ಮತು ಸೇಳದವರು
4 ಜಿ ನಕ
ಅವರು ಜಗತ್ತಿನಲ್ಲಿಯ ದೊಡ್ಡ ವಿಭೂತಿಗಳೆಂದು ಎಂದಿಗೂ ಹೇಳದೆ ಇರಲಾ
ರರು ಅವರ ಚರಿತ್ರದ ಮೇಲಿಂದ ಇಷ್ತು ಶ್ರೀವಿಷ್ಣ್ಯ ನ ಅವತಾರಣಾ, ದ್ದ
ಜಿಂತಲೂ ಇವರ ಸತ್ಯಥೆಗಳು ಮತ್ತು ಸುಬೋಧ ವಚನಗಳು ಟನಸಾ
ಮಾನ್ಯರಿಗೆ ಭಗವದ್ಗೀತೆಯಕಿಂತಲು ಹೆಚ್ಚು ಉಪಯುಕ್ಕೆವಾದವ್ರಗಳೆಂತ
ಸ್ಪಷ್ಟವಾಗಿ ತಿಳಿಯುವದ.. ಇವರೆ ಒ
ಶಾಮೃತದ ಒಗ್ಗೆ ಬಾಬು ಕೇಶವ ಚೆಂದ್ರಸೇನ, ಸ್ವಾಮಿ ಶ್ರ
ಹಾತ್ನಾ ಗಾಂದಿ ಮೊದಲಾದವರು ಆತ್ಮಂತ ಸ್ತುತಿಯನ್ನು ಮಾಡಿ ಇವರಿಗೆ ತಮ
; 5 5 ತ
ತ
ಲೂ
[cs
ನಿನ್ನೀವ: ಭಕ್ಕಿಯನ್ನ ಮ್ಯಕ್ಕನೊಳೆಸಿರುತ್ತಾರೆ. ಅದ್ದದೆ ಪ್ರೊಫೆಸರ ಮ್ಯಾ
ಕ ಮುಲ್ಲರರಂಥಧ ಜರ್ಮನಿಯ ಪಂಡಿತರು ಮತ್ತು ವೇದಶಾಸ್ತ್ರ ಪಾರಂಗತರ.
ಹಾಗೂ ಇತರ ಆನ್ಲೇಕ ಪಾಶ್ಚಿ ಮಾತ್ಯ ಪಂಡಿತರೆ ಐವರನ್ನು ಅನೇಕ ಕಡೆಗೆ
ತಾವೂ ಅವರ ಭಕ್ಕರ ಮಾಲಿಕೆಯನ್ನ್ಲಂಯೇ ಸೇರಿ
ಆತ್ಮ ಗೌರವವನ್ನು ಪಡೆದುಕೊಂಡು ತಮ್ಮ ದೇಹವನ್ಪ ಸಾರ್ಥಕಗೊಳಸಿ
4
ಕೇಳುವದು ಪರವಭಾಗುನೇ ಸರಿ ಮಾಖಯಾವತಿಯಲ
ಟ್ [ea
&
ದ್ಲಾಕೆ. ಇಂಧ ಮಹಾತ್ಮರ ಪುಣ್ಯ ಚರಿತ್ರವನ್ನೂ ಸುಬೋಧ ವಚನಗಳನ್ನೂ
-
ರುವ ಅದ್ವೈತ ಆಶ್ರಮದವರು ಸನ್ನದ೯೦೦ರಿಂದ ೧೯೧೩ನೇ ರಸಿಂಯತನಕ
ಆ
ಪ್ರಬುದ್ಧ ಭಾರತವೆಂಬ ಮಾಸಿಕ ಪುಸ್ತಕದನ್ತಿಯೂ ಬತರ ಒಂಗಾಲಿ ಮತು
ಪ ಎ ೨೨ ೨
ಅಂಗ್ಲಿಷ ಪತ್ರಿಕೆಗಳಲ್ಲಿಯೂ ಪ್ರಸಿ್ಣನಾದ ಶ್ರೀಪರಮಹುಸರ ಸತೃಥೆಗಳನ್ನೂ
ಸುಬೋಧ ವಚನಗಳನ್ನೂ ಒತ್ತ್ಕಿಗೆ ಸಂಗ್ರಹ ಮಾಡಿ ಭಾಗ ೧ ಮತು
ಬಿ
ಕಟ
ಒತ್ತ್ಮೀಗೆ
ವ್ ಮತ್
ಛಾಗ ೨ ಎಂಒ ಎರಡು ಇಂಗ್ಲಿಷ ಪುಸ್ತಕಗಳನ್ನು ಪ್ರಸಿದ್ಧಪಡಿಸಿರುತ್ತಾರೆ.
ಎಪಿ ೨0
TS, ಬ ಮಾ
ಅವುಗಳನ್ನು ನಾನು ಮೂಲ ಆಧಾರವಾಗಿಟ್ಟುಕೊಂಡು ಅವುಗಳ್ಳು ಯ ಾಾ
ಹಿ ಕ್ರ ವಾ್
ವತ್ತು ಕಥೆಗಳನ್ನು ನನ್ನ ಕನ್ನಡ ವಾಚಕರಿಗಾಗಿ ಭಾಷಾಂತರ ಮಾಡಿ ಆ ಕಥೆ
ಗಳ ಕೆಳಗೆ ಅವುಗಳ ಮೇಲಿಂದ ಲಕ್ಷ ಕಿದಲ್ಲಿಡತಕ್ಕೆ ತಾತ್ರರ್ಯವನ್ನು ಸಹ ಬರೆ
ದಿರುತ್ತೆ ನೆ. ಈ ಕಥೆಗಳು ಶ್ರೀಪರಮಹಂಸರು ಹೇಳಿದ ಯಾವತ್ತು ಮುಖ್ಯ
ಕಥೆಗಳಿದ್ದು ಈ ಕಥೆಗಳ ಹೊರತಾಗಿ ಇನ್ನೂ ಹೆಚ್ಚು ಕಥೆಗಳು ಇರುವದಿಲ್ಲ
ವೆಂದು ಮಾತ್ರ ನಾನು ಹೇಳಲಾರೆನು. ಆದರೆ ಈಗ ಉಪಲಬ್ಧವಾಗಿರುವ ಸಾ
ಹಿತ್ಯಗಳಿಂದ ಆರಿಸಿ ತೆಗೆದುಕೊಂಡ ಕಥೆಗಳು ಈ ನನ್ನ ಪುಸ್ತಕದಲ್ಲಿ ಪೂರ್ಣ
ವಾಗಿ ಬಂದಿರುತ್ತ ವೆಂದು ಮಾತ್ರ ನಾನು ಹೇಳುತ್ತೇನೆ. ಈ ನನ್ನ ಪುಸ್ತಕವು
ಚಿಕ್ಕದಿದ್ದಾಗ್ಯೂ ಯಾವತ್ತು ಕನ್ನಡ ಬಂಧುಭಗಿನಿಯರ ವಾಚನಕ್ಕೆ ಅತ್ಯುಂತ
ಉಪಯೋಗ ಬೀಳುವದೆಂತಲೂ ಅವರೆಲ್ಲರ ಆತ್ಮಿಕ ಉನ್ನತಿಗೆ ಇದು ಬಹಳ
ಸಹಾಯವಾಗುವದೆಂತಲೂ ನನಗೆ ಆತ್ಮವಿಶ್ವಾಸವುಂಟು.
ತಮ್ಮ ವಿಧೇಯ
ಧಾರವಾಡ. ಗೆ. ಹು. ಹೊನ್ನಾಪುರಮಠ.
ತಾ. ೫-೧೧-೧೯೨೮ } ಗ್ರಂಥಕರ್ತ.
೨ ನೇ ಆವೃತ್ತಿಯ ಪ್ರಸ್ತಾವನೆ.
೧ಿನೇ ಆವೃತ್ತಿಯ ಪ್ರತಿಗಳು ಸುಮಾರು ೪ ವರ್ಷಗಳ ತರುವಾಯ
ತೀರಿಹೋದ್ದರಿಂದ ಈಗ ಈ ಎರಡನೇ ಆವೃತ್ತಿಯನ್ನು ಹೊಸದಾಗಿ ಮುದ್ರಿ
ಸಿರುತ್ತೆ ನೆ. ೧ ನೇ ಆವೃತ್ತಿ ಯ ಪುಸ್ತಕದಲ್ಲಿ ನನಗೆ ಕಂಡುಬಂದ *ೆಲಕೆಲವು
ತಪ್ಪುಗಳನ್ನು ತಿದ್ದಿರುವದಲ್ಲದೆ, ೭೭ ರಿಂದ ೮೮ ಪೂರಾ ಅಂದರೆ ಹನ್ನೆರಡು ವಿಷ
ಯಗಳನ್ನು ಈ ಎರಡನೇ ಆವೃತ್ತಿಯಲ್ಲಿ ಹೆಚ್ಚಿಗೆ ಸೇರಿಸಿ ಈ ಪುಸ್ತಕದ ಬೆಲೆ
ಯು ಹತ್ತು ಆಣೆ ಇದ್ದದ್ದನ್ನು ಎಂಟು ಆಣೆ ಮಾಡಿರುತ್ತೆ ನೆ.
ತಮ್ಮ ವಿಧೇಯ
ಧಾರವಾಡ. ಗೆ. ಹು. ಹೊನ್ನಾಪುರಮಠ.
ತಾ. ೨೨-೧೦-೧೯೩೨ } ಗ್ರಂಥಕರ್ತ.
ಶ್ರೀರಾಮಕೃಷ್ಣ ಸರಮಹಂಸರ
ಸಂಕಿಪ್ತ ಚರಿತ್ರವು.
———DO—.
ಶ್ರೀರಾಮಕೃಷ್ಣ ಪರಮಹಂಸರು ಶ್ರೀಸ್ವಾಮಿ ವಿವೇಕಾನಂದರ ಗುರು
ಗಳು. ನಮ್ಮ ಭರತಖಂಡದಲ್ಲಿ ಅರ್ವಾಚೀನ ಕಾಲದೊಳಗೆ ಆಗಿಹೋದ ನಾ
ಧುಸಜ್ಜನರಲ್ಲಿ ಶ್ರೀರಾಮಕೃಷ್ಣ ಪರಮಹಂಸರು, ಶ್ರೀಸಾ ಮಿ ವಿವೇಕಾನಂದರು
ಮತ್ತು ಶ್ರೀಸ್ವಾಮಿ ರಾಮತೀರ್ಧರು ಮುಖ್ಯರೆಂಬುವದನ್ನು ನಿಸ್ಸಂದೇಹವಾಗಿ
ಹೇಳಬಹುದು. ಶ್ರೀಸ್ವಾಮಿ ರಾಮಕೃಷ್ಣ ಪರಮಹಂಸರು ಬಂಗಾಲದೇಶದ
ಒಬ್ಬ ಶ್ರೇಷ್ಠ ಯೋಗಿಗಳಿದ್ದರು. ಇವರಿಗೆ ಎಲ್ಲ ಯೋಗಶಕ್ತಿಗಳು ಚನ್ನಾಗಿ
ಗೊತ್ತಿದ್ದರೂ ಇವರು ಎಂದಿಗೂ ಸಿದ್ಧಿಯ ಚಮತ್ಕಾರಗಳನ್ನು ಮಾಡಿ ತೋರಿ
ಸಲಿಲ್ಲ. ಇವರು ಪರಮೇಶ್ವರನ ದೊಡ್ಡ ಭಕ್ಕರಿದ್ದರು. ಇವರು ಅರ್ಯಧ
ರ್ಮದ ರಹಸ್ಯವನ್ನು ಚನ್ನಾಗಿ ತಿಳಿದುಕೊಂಡಂತೆಯೇ ಕ್ರಿಸ್ತೀ ಮತ್ತು ಮಹ
ಮ್ಹದೀ ಧರ್ಮಗಳ ರಹಸ್ಯವನ್ನು ಸಹ ಚನ್ನಾಗಿ ತಿಳಿದುಕೊಂಡಿದ್ದರು. ಅವರು
ಪರಮೇಶ್ವರನು ಸರ್ವವ್ಯಾಪಿಯಿರುತ್ತಾನೆಂಬ ಪೂರ್ಣ ವಿಶ್ವಾಸದಿಂದ ಅತನಿಗೆ
ತಮ್ಮ ಭಕ್ತಿಯನ್ನರ್ಪಿಸುತ್ತಿದ್ದರು. ಆದುದರಿಂದ ಇವರು ಶ್ರೀವಿಷ್ಣು ವಿನ್ನು
ಪ್ರಸನ್ನ ಮಾಡಿಕೊಂಡಂತೆಯೇ ಕ್ರಿಸ್ತನನ್ನೂ ಮಹಮ್ಮದನನ್ನೂ ಪ್ರಸನ್ನ
ಮಾಡಿಕೊಂಡಿದ್ದರು. ಇವರ ದರ್ಶನಕ್ಕಾಗಿಯೂ ಅವರ ಉಪದೇಶಾಮೃ
ತವನ್ನು ಕೇಳಿಕೊಳ್ಳು ವದಕ್ಕಾಗಿಯೂ ದೂರ ದೂರಿನ ಜನರು ಇವರ ಕಡೆ
ಗೆ ಬರುತ್ತಿದ್ದರು. ಇವರ ಕಾಲಕ್ಕೆ ಪ್ರಾರ್ಧನಾ ಸಮಾಜದ ಸ್ಮಾಪಕರೂ
ಮೂರ್ತಿಪೂಜೂ ನಿಷೇಧಕರೂ ಆಗಿದ್ದ ಪ್ರಸಿದ್ಧ ಬಾಬು ಕೇಶವ ಚಂದ್ರಸೇನ
ರು ದಕ್ಷಿಣೇಶ್ವರದಿಂದ ಎರಡು ಮೈಲು ದೂರಿರುವ ಬೇಲಗಡಿಯೆಂಬಲ್ಲಿ ಶಾಂತಿ
ಗೃಹವನ್ನು ಕಟ್ಟಿಕೊಂಡು ಈಶ್ವರ ಪ್ರಾರ್ಧನೆಯನ್ನು ಮಾಡುತ್ತ ಇರುತ್ತಿದ್ದರು.
ಅವರು ಆ ಕಾಲಕ್ಕೆ ದೊಡ್ಮ ಸಾಧುಗಳೆಂದು ಹೆಸರುವಾಸಿಯಾಗಿದ್ದರು. ಶ್ರೀ
ರಾಮಕೃಷ್ಣರು ಒಮ್ಮೆ ಬಾಬು ಕೇಶವ ಚಂದ್ರಸೇನರನ್ನು ಕಾಣಲಿಕ್ಕೆ ಬೇಲಗ
ಡಿಗೆ ಹೋಗಿ ಅವರ ಕೂಡ ಎಷ್ಟೋ ಹೊತ್ತಿನವರೆಗೆ ಪಾರಮಾರ್ಥಿಕ ವಿಷ
ವಕು ವು;
ಬಿಡಿಸಿ ಅದನ್ನು ಇವರ ಸೋದರಳೆಯಗೆ ಒಪ್ಪಿಸಿದರು. ಆದರೂ ಮಥುರಾ
ದಾಸರ ಪ್ರೀತಿಯು ಇವರ ಮೇಲೆ ಕಡಿಮೆಯಾಗಿದ್ದಿ ಲ್ಲ. ಅವರು ಇವರಿಗೆ
ಯಾವಾಗಲು « ಪಿತಾಜಿ” ಎಂದು ಅನ್ನುತ್ತಿದ್ದರು. ಇವರ ಮದುವೆಯಾದಾ
ಗ್ಯೂ ಇವರಿಗೆ ಮದುವೆಯಾದ ಅರವು ಇದ್ದಿಲ್ಲ. ಇವರ ಹೆಂಡತಿಯು ೧೬
ವರ್ಷದ ಪ್ರಾಯದವಳಾಗಿ ಇವರ ಕಡೆಗೆ ಬಂದಾಗ್ಗೆ ಇವರು. ಅವಳನ್ನು
ಬಹಳ ಸನ್ನಾನಪೂರ್ವಕವಾಗಿ ಬರಮಾಡಿಕೊಂಡು ಅವಳಿಗೆ-*“ ಮೊದಲಿನ
ರಾಮಕೃಷ್ಣನು ಸತ್ತನು. ನಾನು ಹೊಸ ರಾಮಕೃಷ್ಣನು ಇರುತ್ತೇನೆ. ನ
ನಗೆ ಜಗತ್ತಿನೊಳಗಿನ ಹೆಂಗಸರೆಲ್ಲ ತಾಯಿಯ ಸಮಾನರಿರುತ್ತಾರೆ” ಎಂದು
ಹೇಳಿದರು. ಇದನ್ನು ಕೇಳಿ ಅ ಸಾಧ್ವೀಮಣಿಯಾದ ಶಾರದಾದೇವಿಯು ಇ
ವರ ಮುಂದೆ ಕೈಜೋಡಿಸಿ“ ನಿಮ್ಮ ಅಪ್ಪುಣೆಯು ನನಗೆ ಮಾನ್ಯವಿರುತ್ತದೆ.
ಆದರೆ ನಿಮಗೆ ಅಡಿಗೆಯನ್ನು ಮಾಡಿ ಬಡಿಸಲಿಕ್ಕೂ ಇತರ ಸೇವೆಯನ್ನು ಮಾಡ
ಲಿಕ್ಕೂ ಅಪ್ಪಣೆಯನ್ನು ಕೊಡಬೇಕು? ಎಂದು ಬೇಡಿಕೊಂಡಳು. ಅದಕ್ಕೆ
ಇವರು ಒಪ್ಪಿ ಕೊಂಡದ್ದರಿಂದ ಅವಳು ಅಲ್ಲಿಯೇ ನಿಂತುಕೊಂಡು ಪತಿಯ ಸೇವೆ
ಯನ್ನು ಮಾಡಹತ್ತಿದಳು. ಕಡೆಯತನಕ ಅವರಿಬ್ಬರೂ ತಮ್ಮ ದೃಢನಿಶ್ಚಯ
ವನ್ನು ಬಿಡಲಿಲ್ಲ. ಹಾಗೂ ಶಾರದಾದೇವಿಯು ಪತಿಯ ಅಜ್ಜಿ ಯನ್ನು ಎಂದೂ
ಮಾರಿ ನಡೆಯಲಿಲ್ಲ. ಇವರಾದರೂ ಅವಳ ಮೇಲೆ ಜಗಜ್ಜನನಿಯಂತೆ ಪೇಮ
ಮಾಡುತ್ತಿದ್ದರು.
ಇವರಿಗೆ ದುಡ್ಡಿನ ಸಲುವಾಗಿ ಮೊದಲಿನಿಂದಲೂ ಬಹಳ ತಿರಸ್ಕಾರ
ವಿತ್ತು. ಇವರು ಒಂದು ಸಾರೆ ಒಂದು ಮುಸ್ಟಿ ತುಂಬ ಮಣ್ಣಿನ್ನೂ ಒಂದು
ಮುಸ್ಟಿ ತುಂಬ ಬೆಳ್ಳಿಯ ಚೂರುಗಳನ್ನೂ ಗಂಗಾನದಿಗೆ ತೆಗೆದುಕೊಂಡು ಹೋ
ಗಿ-« ಇವೆರಡರ ಯೋಗ್ಯತೆಯು ಅಷ್ಟೇ ಇರುತ್ತದೆ” ಎಂದು ಆ ನದಿಯಲ್ಲಿ
ಚಲ್ಲಿಕೊಟ್ಟರು. ಅಂದಿನಿಂದ ಇವರು ದುಡ್ಡನ್ನು ಕೈಯಿಂದ ಸಹ ಮುಟ್ಟಲಿಲ್ಲ
ರಾಣಿರಾಸಮೋನಿಯವರ ಅಳೆಯರಾದ ಮಥುರಾದಾಸರು ಒಂದುಸಾರೆ ಒಂದು
ಸಾವಿರ ರೂಪಾಯಿ ಬೆಲೆ ಬಾಳುವ ಜರದ ಶಾಲನ್ನು ತಂದು ಇವರ ಮೈಮೇಲೆ
ಹೊದಿಸಿದರು. ಆಗ ಇವರು ಆ ಶಾಲನ್ನು ತೆಗೆದುಕೊಂಡು ಅದರಿಂದ ತಮ್ಮ
ಸುತ್ತುಮುತ್ತಲಿನ ಕಸವನ್ನು ಉಡುಗಿ ಮಥುರಾದಾಸರಿಗೆ-« ಇವೆಲ್ಲ ಪದಾರ್ಥ
ಬ ೫ ಎಂ
ಗಳು ಒಣ ಜಂಭವನ್ನು ಬೆಳೆಸುತ್ತವೆ. ನಿಜವಾಗಿ ಹರಕು ಅರಿವೆಯ ತುಂಡಿ
ನಲ್ಲಿಯೂ ಈ ಜರದ ಶಾಲಿನಲ್ಲಿಯೂ ಏನೂ ಭೇದವಿರುವದಿಲ್ಲ? ಎಂದು
ಹೇಳಿದರು. ಇನ್ನೊಮ್ಮೆ ಮಥುರಾದಾಸರು ಕಾಲಿಕಾದೇವಾಯಲದ ೨೫ ಸಾವಿರ
ರೂಪಾಯಿಗಳ ವಾರ್ಷಿಕ ಉತ್ಪನ್ನವನ್ನು ಶೆ ಇವರ ಹೆಸರಿನಿಂದ ಮಾಡಿಕೊಡು
ತ್ಮೇವೆಂದು ಇವರ ಮುಂದೆ ತಿಳುಹಿಸಿದರು. ಆಗ ಇವರು ಮಥುರಾದಾಸರಿಗೆ-
« ನೀವು ಈ ಪ್ರಕಾರ ಇನ್ನೊಮ್ಮೆ ಮಾತು ತೆಗೆದರೆ ನಾನು ಇಲ್ಲಿಂದ ಬಿಟ್ಟು
ಹೋಗುವೆನು” ಎಂದು ಹೇಳಿದರು. ಮತ್ತೊಮ್ಮೆ ಒಬ್ಬ ಶ್ರೀಮಂಶ ಮಾರ
ವಾಡಿಯು ಇವರ ಹೆಸರಿನಿಂದ ಕೆಲವು ಸಾವಿರ ರೂಪಾಯಿಗಳನ್ನು ಧರ್ಮಾರ್ಥ
ಕಾರ್ಯಗಳ ಸಲುವಾಗಿ ಒಂದು ಬ್ಯಾಂಕಿನಲ್ಲಿಡುತ್ತೇನೆಂದು ಹೇಳಲು ಇವರು
ಅದನ್ನು ತಾವು ಸ್ವೀಕರಿಸಲಾರೆವೆಂದು ಸ್ಸಷ್ಟವಾಗಿ ಉತ್ತ ರಕೊಟ್ಟರು.
ಈ ಪ್ರಕಾರ ಇವರು ಕನಕ ಮತ್ತು ಕಾಂತಾ ಇವುಗಳನ್ನು ತುಚ್ಛ
ಮಾಡಿದ್ದರು. ಇವರಿಗೆ ಪ:ಮೇಶ್ವರನ ಸಾಕ್ಷಾತ್ಕಾರವಾಗಿತ್ತು. ಇವರ ತಂದೆ
ಯಾದ ಖುದಿರಾಮರು ಗಯೆಯ ಯಾತ್ರೆಯನ್ನು ಮಾಡಲಿಕ್ಕೆ ಹೋದಾಗ್ಗೆ
ಶ್ರೀವಿಷ್ಣು ವು ಅವರ ಕನಸಿನಲ್ಲಿ-“ ನಾನು ನಿಮ್ಮ ಹೊಟ್ಟೆಯಿಂದ ಹುಟ್ಟಿ ಬರು
ತ್ಲೇನೆ” ಎಂದು ಹೇಳಿದ್ದನು. ಆದುದರಿಂದ ಇವರ ತಂದೆತಾಯಿಗಳು ಇವರಿಗೆ
ಗದಾಧರನೆಂದು ಹೆಸರಿಟ್ಟಿದ್ದರು. ಮುಂದೆ ಜನರು ಇವರಿಗೆ «ರಾಮಕೃಷ್ಣ '
ಎಂದು ಕರೆಯಹತ್ತಿದರು. ಈ ಪ್ರಕಾರ ಇವರು ಭಗವಂತನ ಅವತಾರವನ್ನೆತ್ತಿ,
ತಮ್ಮ ಆತ್ಮಜ್ಯೋತಿಯನ್ನು ಬೆಳಗಿ ತಮ್ಮ ಪ್ರಭಾವವನ್ನೂ ಕೀರ್ತಿಯನ್ನೂ
ಬರೀ ಭರತಖಂಡದಲ್ಲಿ ಅಲ್ಲ, ಇಡೀ ಭೂಮಂಡಲದಲ್ಲಿ ಹರಡಿದರು. ಇವರ
ಅವತಾರದ ಕಾಲದಲ್ಲಿ ಸಂಭವಿಸಿದ ಪ್ರತಿಯೊಂದು ಸಂಗತಿಯೂ ಇವರ ಬಾಯಿ
ಯಿಂದ ಬಂದ ಪ್ರತಿಯೊಂದು ಕಥೆಯೂ ಇಡೀ ಮಾನವೀ ಜಾತಿಯ ಹಿತಾ
ರ್ಥವಾಗಿ ಮಾಡಲ್ಪಟ್ಟ ಅತಿ ಉಚ್ಚ ತರವಾದ ಸುಬೋಧ ಪರಿಮಳದಿಂವ ತುಂ
ಬಿ ತುಳುಕುತ್ತವೆಂದು ಹೇಳಲಿಕ್ಕೆ ಏನೂ ಸಂದೇಹವಿಲ್ಲ.
ಇವರು ಸನ್ನ ೧೮೩೩ ನೇ ಇಸ್ವಿಯಲ್ಲಿ ಅವತಾರವನ್ನೆ ತ್ತಿ ಸನ್ನ ೧೮೮೬
ನೇ ಇಸವಿ ಅಗಷ್ಟ ತಿಂಗಳದ ೧೬ ನೇ ತಾರೀಖಿನ ದಿವಸ ದೈನೀಭೂತರಾದರು,
ಅವರ ಬಗ್ಗೆ ಜರ್ಮನಿಯ ಪ್ರಸಿದ್ಧ ಸಂಸ್ಕೃತ ಪಂಡಿತರೂ ವೇದಶಾಸ್ತ್ರ ಪಾರಂ
a
ಗತರೂ ಆದ ಪ್ರೊಫೆಸರ ಮ್ಯಾಕ್ಸಮುಲ್ಲರೆರು ಮತ್ತು ಇತರ ಪಾಶ್ಚಿಮಾತ್ಯ
ಪಂಡಿತರು ಬಹಳ ಪೂಜ್ಯಬುದ್ಧಿಯನ್ನು ವಹಿಸಿ ಇವರ ಚರಿತ್ರಗಳನ್ನು ತಮ್ಮ
ತಮ್ಮ ಭಾಷೆಗಳಲ್ಲಿ ಮುದ್ರಿಸಿ ತಮ್ಮ ಸ್ವದೇಶಬಾಂಧವರ ಮುಂದೆ ಅವರ ಸ್ತುತಿ
ಸ್ತೋತ್ರಗಳನ್ನು ವಿಶೇಷವಾಗಿ ಮಾಡಿರುತ್ತಾರೆ. ಸ್ವಾಮಿ ಶ್ರದ್ಧಾ ನಂದರು
ಶ್ರೀರಾಮಕೃಷ್ಣ ಲೀಲಾಪ್ರಸಂಗ' ಎಂಬ ಒಂಗಾಲಿ ಗ್ರಂಥದಲ್ಲಿ ಶ್ರೀಪರಮ
ಹಂಸರ ಬಗ್ಗೆ ಬರೆಯುವಾಗ್ಗೆ - ಇವರಲ್ಲಿ ಸದ್ಗುರುವಿನ ಕುರುಹುಗಳು ಇವರ
ಜೀವನದ ಯಾವತ್ತು ಅವಸ್ಥೆ “ಳಲ್ಲಿಯೂ ಉಜ್ವಲವಾಗಿದ್ದವು” ಎಂದು ಬರೆ
ದಿರುತ್ತಾರೆ. ಹಾಗೂ ಮಹಾತ್ಮಾಗಾಂಧಿಯವರು ಶ್ರೀಪರಮಹಂಸರ ಜೀವನ
ಚರಿತ್ರವೆಂಬ ಒಂದು ಇಂಗ್ಲಿಷ ಗ್ರಂಧದ ಮುನ್ನುಡಿಯನ್ನು ಬರಯುವಾಗ್ಗೆ-
44 ಶ್ರೀರಾಮಕೃಷ್ಣರು ದೇವಭಕ್ತಿಯ ಪ್ರತ್ಯಕ್ಷ ಮೂರ್ತಿಯಿದ್ದರು. ಅವರ
ಸುಬೋಧ ವಚನಗಳು ಬ್ರಹ್ಮಸತ್ಯಂ ಜಗನ್ಮಿ ಥ್ಯಾ ಎಂಬುವದನ್ನು ಎಲ್ಲ
ವಾಚಕರಿಗೆ ಮನದಣಿಯಾಗುವಂತೆ ಬೋಧಿಸುತ್ತವೆ. ಹಾಗೂ ಅವರ ವಚನ
ಗಳು ಬರೀ ಒಬ್ಬ ವಿದ್ವಾನ್ ಗೃಹಸ್ಥನ ಬಾಯಿಂದ ಬಂದ ಉಪದೇಶಗಳಿರದೆ
ಅವರ ಸಜೀವ ಗ್ರಂಥದ ಪುಟಗಳೂ ಸ್ವಂತ ಅನುಭವದ ಮಾತುಗಳೂ ಇರು
ತವೆ” ಎಂದು ಬರೆದಿರುತ್ತಾರೆ. ಸಾರಾಂಶ- ಈ ಮಹಾತ್ಮರ ಗುಣಗಳನ್ನೂ
ಅವರು ಹೇಳಿದ ಉಪದೇಶಾಮೃತವನ್ನೂ ಎಷ್ಟು ವರ್ಣಿಸಿದರೂ ಕಡಿಮೆಯೇ
ಸರಿ. ಆದುದರಿಂದ ಇಂಥ ಜಗದ್ವಿಭೂತಿಗಳ ಸತ್ಯಥೆಗಳನ್ನೂ ಸುಬೋಧ ವಚ
ನಗಳನ್ನೂ ಓದುವದು ಮತ್ತು ಕೇಳುವದು ಸುಕೃತಪುಣ್ಯನೆಂದು ನಾವು ಇಲ್ಲಿ
ಹೇಳದಿರಲಾರೆವು.
ನತ್ತ ತಿಸಜಿ ರರ ಇ ೯ ges)
ದು
fe
RN
೨೨
ನಿಷಯಾನುಕ್ರಮಣಿಕೆ.
-ಆಾರತಾಾ-
ವಿಸಯಗಳಾು.
ಒಂದು ಹಾವೂ ಒಬ್ಬ ಸನ್ಯಾಸಿಯೂ ...
ನಾರದನ ಗರ್ವಹರಣ ...
ಭಾಗವತದ ಅರ್ಧವು.
ಘಂಟಾಕರ್ಣನು.
ನಾಲ್ಕು ಮಂದಿ ಕುರುಡರು.
ಕಾರ್ತೀಕಸ್ವಾಮಿಯು ನ್ನ
ಮಾನ. ಮಾರುವ ಹೆಂಗಸರು.
ಒಬ್ಬ ಬ್ರಾ ತ್ರಹ್ಮಣನ ಗೋಹತ್ಯವು.
ಆಜ ಗರ್ವಹರಣವು.
ಶ್ರೀರಾಮಚಂದ್ರನ ವೈರಾಗ್ಯವು.
ಜನಕರಾಜನ ಬೇವನ್ನುಕ್ತಿಯು.
" ಈಗಿನ ವಿದ್ಯಾವಂತನ
ಮಿ 9
ಮೈರಾಗ್ಯು ಪ್ರಾಪ್ತಿಯು...
ಸಚ್ಚಿ ದಾನಂದನ ರೂಪಗಳು.
ಯಾತ್ರೆಗೆ ಹೋದ ಗಂಡಹೆಂಡರು.
ಮುಂದೆ ಹೋಗು.
ಒಂದು ಹುಲಿಯ ಮರಿಯು.
ಒಬ್ಬ ಗೊಲ್ಲತಿಯ ಭಕಿ ಯು.
¢ ೧ ಡಿ
ದೇವರು ನೈವೇದ್ಯುವನ್ನು ಉಂಡದ್ದು. ...
ಪರಮೇಶ್ವರನ ಕೃಪೆಯೇ ಕಾಮಧೇನುವು.
ಆನೆಯೂ ದೇವರು! ಮಾವುತನೂ ದೇವರು!
ಬ್ರಹ್ಮಜ್ಞಾನಿಯ.
ಅಂಜ
ಪ್ರಪಂಚದ ರೀತಿಯು,
eee
°°.
ee
ee
೨೩
೨೪
88
೨೩
೨೮
೩೦
೩೧
ತಿಷ
೩೪
೩೫
೩೨
ತೀ
458858
F
೪ಲಿ
ತಿ ಕ್ರಮ
ಪುತ್ರಶೋಕವು ವ್ಯರ್ಥವಾದದ್ದು. ... ಎ. ೩೮ ೩೮
ಹನುಮಂತದೇವರ ಗುಡಿಸಲವು. ಭ್ಯ ಎ೨. ಜಿಲ್ಲಿತಿರ
ಒಬ್ಬ ಭಿಕ್ಷುಕನ ಬಳಿಗೆ ಇನ್ನೊಬ್ಬ ಭಿಕ್ಷುಕನು ಹೋದದ್ದು . ೩೯-೪೧
ಒಬ್ಬ ಸಾಧುವಿನ ಭೂತದಯವು. ಡೆ ೬. ೪೧-೪೨
ದೇವರು ಸರ್ವೋತ್ಯ ಎಷ್ಟ ಬಣ್ಣ ಗಾರನು. ಎ... ೪೨-೪೩
ಒಬ್ಬ ಡಾಂಭಿಕ ಅಕ್ಕ ಸಾಲಿಗನು. ... ಎ... ೪೩-೪೫
ತ್ರೀರಾಮಪ್ರ ಭುವಿನ ol ಯು. ಸ ಎ ೪೫-೪೭
ವಕಾಗ್ರಚಿತ ವ. ಖಿ .... ಅಕಿ-ಲಲ
ಮೂರು ಮಂದಿ ಕಳ್ಳರು. po 10 ೪೯-೫೦
ಸಿದ್ಧ ಪುರುಷನ ಪಶ್ಚ್ರಾತ್ತಾಪವು. ... ೬... ೫೦-೫೧
ಪ್ರನರ್ಜನ್ಮವು. ಸ ಸ ೬... ೫೧-೫೨
ತ್ಯಾಗವೇ ಶಾಂತಿಯು. .., ತ ಎ೬. ೫೨-೫೩
ಕನಕ ಮತ್ತು ಕಾಂತಾ. ನಾ ೨ ೫೩-೫೫
ಶ್ರೀಮಂತಿಕೆಯ ಗರ್ವವು. AW ಎ. ೫೫-೫೬
ದ್ರಮ್ಯದ ತಿರನ್ಯಾರವು. .. ಡ್ಡ ಎ. ೫೬೨೫೫೭
ದುಷ್ಟ ವಾಸನೆಗಳನ್ನು ಆಸಿ ಚೆ ೬. ೫೭-೫೮
ಅಹಂಕಾರವು. ಎ ಅ ಎ... ೫೯-೫ರ
ದುಡ್ಡಿನ ಸೊಕ್ಕು ಇ ೬ 8&0
ಈಶ್ವರಪ್ರಾಸ್ತಿ ಮಾಡಿಕೊಂಡವನೂ ಚಿಕ್ಕ 'ಕೃಮಗುವೂ ಒಂದೇ. ೬೧-೬೨
ಒಕ್ಕಲಿಗನ ಕುಶಲತನವು. ಹ ಎಲ ಊ೬೨ಒಷಿ
ಮಾಯಾನಿವಾರಣವು. ... " ಎ೬ ಪಿ ೬೪
ಹೆಂಡತಿಯು ಅಂತಃಪುರದ ಗುರುವು! ... ೧ 5-೬8
ಪೂರ್ಣ ಶ್ರದ್ಧೆಯು ಬೇಕು. ಬ ಎ೬೬. ED
ಭೋಜನ ಸ್ವಾತಂತ್ರ ಕವ: ಸ TD NS
ಧರ್ಮೋಪದೇಶಕರೂ ವೈದ್ಯರೂ. ಜೀ ... 8೦-೩೦
ಕಪ್ಪೆಯ ಒದರುವಿಕೆಯೂ ಹಾವಿನ ನೆರಳುವಿಕೆಯೂ ... ೩೧-೬೧
ಕೆ
೫7
೫೨
೫೩
೫೫
೫೭
೬೦
೬೧
೬೩
೬೪
೬೫
ಓತಿ
೬೮
88855
೩೩
೬೪
ಹಗ
ಒಬ್ಬ ವ್ಯಾಖ್ಯಾತನ ಅಜ್ಞಾನವು. ಭಾ ೬... 8೨-85
ಒಬ್ಬ ಸಾಧುವು ರೋಗಿಗೆ ಹೇಳಿದ ಔಷಧವು ೬ ಶತಿ ತಜಿ
ಆಲಸ್ಯುವು ಮನುಷ್ಯನ ವೈರಿಯು. ಚ ಎ೬೬ ಪ ೨೪
ಒಬ್ಬ ಒಕ್ಕಲಿಗನ ದೃಢನಿಶ್ಚಯವು. ... ಎ೬ 6೪ ಕಒ
ಅಂತಃಕರಣವೇ ದೇವರ ಗುಡಿಯು. ... ಎ ೬ ಡಿಕ
ಎಷ್ಟುಮಂದಿ ಸೂರ್ಯರು? ಸ ೨೬. ಕಲಿ 8೯
ಆತೆಗಳ ಮನೋರಾಜ್ಯವು. oR ಎ. 8೯-೬2೯
ಯಮುನಾನದಿಗೆ ವ್ಯಾಸಯಸಿಯ ಪ್ರಾರ್ಥನೆ. .... ಲಂ-ಲಗ
ಪರಮೇಶ್ವರನು ಕಲ್ಪವೃಕ್ಷವು. ಸ 2... ೮೧-೮೧
ಪರಮೇಶ್ವರನಿಗೆ ಯಾವದೂ ಅಸಂಭವವಿಲ್ಲ. ೬.೬. ಲಿಲಿ
ಒಬ್ಬ ವೇಷಧಾರಿ ಸಾಧುವು. ಹ ೬... ಲಿಲಾ
ಅಪಾತ್ರ ದಾನವು. ಶಿ ಸ 6. ಲ್‌ು-ಲಾ
ಜ್ಞಾನವೆಂಬ ವಿದ್ಯುಲ್ಲತೆಯ ಬೆಳಕು. ... .. ಲೌ-ಲ೫
ಆತ್ಮದ ಅಂತಿಮ ಧ್ಯೇಯವು. ಫಿ ೬... ೮೫-೮೬
ಅತ್ಯಾಶೆಯು ಗತಿಗೆಡಿಸಿತು. ಸ ಎ... ಲಾರ
ನಿಃಸ್ವಾರ್ಥ ಪ್ರೇಮವು. ... ಟಿ 1. ಆಂ
ಭಗವದ್ಗೀತೆಯ ಅರ್ಧವು. NN .... 2070)
ಒಂದು ದುಡ್ಡಿನ ಬೆಲೆಯ ಜ್ಞಾನವು... 4 ಳ೧-೯೨
ಕಾಮಿನಿ ಕಾಂಚಾಣಗಳ ತ್ಯಾಗವು. ,,, ೬೬. ೯ಶಿಇಳ
ಮಾದಿಗನ ಬುದ್ಧಿ ಚಾತುರ್ಯವು. pe 7)
ನಿರಕ್ಷರಿಯಾದ ಜ್ಞಾನಿಯು. ಮ THN
ನಿನ್ನ ಮನೆಯೇ ಗೋಕುಲ ವೃಂದಾವನವು. ಎ. 4೬-೯ೀ
ಇಬ್ಬರು ಮಿತ್ರರು. 2 es ೬೬. ೬-೪
Ne ವಿನಾಶಕ್ಕೆ ಕಾರಣವು. ... ಲಲ
ಹಾಲು ಕುಡಿಸುವ ದಾಯಿಯು. ಹ ೯೯-೧೦೦
ಜೇಷ್ಟೆಯು ಸಂಕಟದ ಮೂಲವು, ... +». ೧೦೦-೧೦೧
೬೫
ಯ ಯರ
ಎಮ ಕಮ
ಅರಿವೆಗಳ ಸುಖಸ್ಟಪ್ನವು. ನೆ 4. ೧೦೧-೧೦೨
ವಿಧೇಯತ್ವವು ಮತ್ತು ಅವಿಧೇಯತ್ವವು. ಎಎ. ೧೦೨-೧೦೨
ಜಗನ್ಮಾತೆಯು ಎಲ್ಲವು ಇರುವಳು ಹಾಗೂ ಎಲ್ಲವನ್ನು
ಮಾಡುವಳು. ಜೇ ೨. ೧೦೩-೧೦೩
ಮನಸ್ಸಿನ ಸ್ವತಂತ್ರ ತೆಯನ್ನು Re ೬ (OA-TOV
ದೇವರಿಗೆ ಪೂರ್ಣವಾಗಿ ಭೋಗ ದ್ದು. ...೧೦೫-೧೦೫
ದಿವ್ಯಾಮೃತ ಪ್ರಾಶನ. ... ವ +.» ೦೬-೧೦೬
ಶುದ್ರ ಅನುಕರಣ. ... Me 4. ೧೦೬-೧೦೩೭
ಸಂಕುಚಿತ ಮನಸ್ಸು. .,, ಚ ... ೧೦೭-೧೦೯
ಚಂಚಲ ಮನಸ್ಸು. .. ... ೧೦೯-೧೧೦
ಸಂಸಾರದ ಮನುಷ್ಯನೂ ಸಾಕಿದ BNE ಒಂದೇ ೧೧೦-೧೧೧
ದಿವ್ಯ ಪ್ರೇಮವಿದ್ದಲ್ಲಿ ದೇವರು ದರ್ಶನ ಕೊಡುತ್ತಾನೆ... ೧೧೧-೧೧೧
ನಮ್ರತೆಯ ಉಪದೇಶ.... ಚ .. ೧೧೧-೧೧೨
ಜಗತ್ತಿನ ಬಾಳುವೆಯು ಒಂದು ಕ್ಷಣದ ಆಟವು. ... ೧೧೩-೧೧೩
ಬ್ರಹ್ಮಚರ್ಯದ ಮಹತ್ವವು. ತ ೬. ೧೧೩-೧೧೪
ಶ್ರೀರಾಮಕೃಷ್ಣ ಪರಮ
ಹಂಸರ ಸತ್ನಥೆಗಳು.
ಮುಗಿತ ಜಾ
- ೧. ಒಂದು ಹಾವೂ ಒಬ್ಬ ಸನ್ಯಾಸಿಯೂ,
ಒಂದಾನೊಂದು ಸ್ಥಳದಲ್ಲಿ ಒಂದು ಹಾವು ಇರುತ್ತಿತ್ತು. ಅದು ತನ್ನ
ದಾರಿಯಿಂದ ಹೋದವರ ಮೈಮೇಲೆ ಏರಿ ಹೋಗಿ ಅವರನ್ನು ಕಚ್ಚುತ್ತಿ ತ್ತು.
ಇದರಿಂದ ಅವರು ಕೂಡಲೇ ಸಾಯುತ್ತಿದ್ದರು. ಆದಕಾರಣ ಯಾರಿಗೂ ಆ
ದಾರಿಯಿಂದ ಹೋಗುವ ಧೈರ್ಯವು ಆಗುತ್ತಿದ್ದಿಲ್ಲ ಯಾರಾದರೂ ದಾರಿಕಾ
ರರು ಒಮ್ಮೊಮ್ಮೆ ಆ ದಾರಿಯಿಂದ ಹೋಗಲಿಕ್ಕೆ ಹತ್ತಿದರೆ ಅದರ ಸಮಾಪದ
ಅಡವಿಯಲ್ಲಿ ದನಗಳನ್ನು ಮೇಯಿಸುತ್ತಿದ್ದ ದನ ಕಾಯುವ ಹುಡುಗರು ಆ
ದಾರಿಕಾರರಿಗೆ-«: ನೀವು ಈ ದಾರಿಯಿಂದ ಹೋಗಬೇಡಿರಿ. ಇಲ್ಲಿ ಒಂದು ಕೆಬ್ಬ
ಹಾವು ಇರುತ್ತದೆ” ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದರು. ಆದರೆ ಒಂ
ದಾನೊಂದು ದಿವಸ ಒಬ್ಬ ಸನ್ಯಾಸಿಯು ಆ ದಾರಿಯಿಂದ ಹೋಗುವದನ್ನು
ದನ ಕಾಯುವ ಒಬ್ಬ ಹುಡುಗನು ಕಂಡು ಅವನ ಬಳಿಗೆ ಲಗುಬಗೆಯಿಂದ
ಓಡಿ ಹೋಗಿ ಇದರಂತೆ ಹೇಳಿದನು. ಅಗ ಆ ಸನ್ಯಾಸಿಯು-« ನನಗೇನೂ
ಹಾವಿನ ಅಂಜಿಕೆಯು ಇರುವದಿಲ್ಲ. ನನಗೆ ಹಾವಿನ ಬಾಧೆಯಾಗದಂತೆ ಮಂ
ತ್ರ ಮಾಡಲಿಕ್ಕೆ ಚನ್ನಾಗಿ ಬರುತ್ತದೆ? .ಎಂದು ಹೇಳಿ ಆ ದಾರಿಯಿಂದ
ನಡೆದನು. ಅಗ ಆ ಹಾವು ಸನ್ಯಾಸಿಯ ಹೆಜ್ಜೆಯ ಸಪ್ಪಳವನ್ನು ಕೇಳಿ ತನ್ನ
ಹುತ್ತಿನೊಳಗಿಂದ ಹೊರಗೆ ಬಂದು ಅವನನ್ನು *ಕಚ್ಚಲಿಕ್ಕೆ ಅವನ ಬೆನ್ನು ಹ
ತ್ರಿತು. ಆಗ ಆ ಸನ್ಯಾಸಿಯು- ಮಿತ್ರಾ, ನನ್ನನ್ನು ಕಚ್ಚಲು ಬಯಸುವಿಯಾ?”
ಎಂದು ಆ ಹಾವಿನ ಮೇಲೆ ಮಂತ್ರ ಪ್ರಯೋಗವನ್ನು ಮಾಡಿದನು. ಇದರಿಂದ
ಜಡ ಇಕಿ
ಆ ಹೂವಿನ ವೀರಾವೇಶವೆಲ್ಲ ಹೊರಟು ಹೋಗಿ ಅದು ತೀರಾ ನಮ್ರವಾ
ಯಿತು. ಆದುದರಿಂದ ಆದು ಆ ಸನ್ಯಾಸಿಗೆ ಏನೂ ಉತ್ತರ ಕೊಡದೆ ಸು
ಮ್ಲ ನಾಯಿತು. ಆ ಮೇಲೆ ಆ ಸನ್ಯಾಸಿಯು ಆ ಹಾವಿಗೆ-4"ನೀನು ಎರಡನೆಯ
ವರಿಗೆ ಯಾಕೆ ಅಪಾಯ ಮಾಡುತ್ತೀ? ನೀನು ಯಾವಾಗಲು ದೇವರ ಧ್ಯಾನ
ಮಾಡು; ಅಂದರೆ ನೀನು ದೇವರ ಮೇಲೆ ಪ್ರೀತಿ ಮಾಡಲಿಕ್ಕೆ ಕಲಿಯುವೆ. ಇದ
ರಿಂದ ಎರಡನೆಯವರಿಗೆ ಅಪಾಯ ಮಾಡುವ ನಿನ್ನ ಆಪೇಕ್ಷೆಯು ಹೋಗು
ವದು? ಎಂದು ಹೇಳಿ ಅಲ್ಲಿಂದ ಹೊರಟು ಹೋದನು. ಆಗಿನಿಂದ ಆ ಹಾವು
ಜನರನ್ನು ಕಚ್ಚುವದನ್ನು ಬಿಟ್ಟಿತು. ಆ ಮೇಲೆ ದನಕಾಯುವ ಹುಡುಗರು
ಆ ಹಾವು ಕಚ್ಚುವದಿಲ್ಲವೆಂದು ತಿಳಿದು ಅದನ್ನು ಕಲ್ಲಿನಿಂದ ಹೊಡೆಯಲಿಕ್ಕೆ ಹ
ತ್ತಿದರು. ಆದರೂ ಅದು ನಮ್ರಭಾವದಿಂದ ಇದ್ದು ಅವರಿಗೆ ಏನೂ ಅಪಾಯ
ಮಾಡುತ್ತಿದ್ಕಿಲ್ಲ. ಇದರಿಂದ ಒಂದು ದಿವಸ ಆ ದನ ಕಾಯುವ ಹುಡುಗರು ಅ
ದರ ಬಾಲ ಹಿಡಿದು ಅದನ್ನು ಗಿಮಿ ಗಿಮಿ ತಿರುಗಿಸಿ ಅನೇಕ ಸಾರೆ ಅದನ್ನು ನೆ
ಲಕ್ಕೆ ಅಪ್ಪಳಿಸಿದರು. ಆಗ ಆ ಹಾವಿನ ಬಾಯಿಂದ ರಕ್ತವು ಬರಲಿಕ್ಕೆ ಹತ್ತಿ
ಆದು ಎಚ್ಚರದಪ್ಪಿ ಬಿದ್ದುಕೊಂಡಿತು. ಇದರಿಂದ ಆ ಹಾವ್ರ ಸತ್ತಿತೆಂದು ಆ
ಹುಡುಗರು ಹೊರಟು ಹೋದರು. ಆ ಮೇಲೆ ರಾತ್ರಿಯ ಕಾಲಕ್ಕೆ ಅದು ಎಚ್ಚ
ರಿಕೆಯ ಮೇಲೆ ಬಂದು ಬಹಳ ಕಷ್ಟದಿಂದ ತನ್ನ ಹುತ್ತಿನಲ್ಲಿ ಹೋಗಿ ಸೇರಿ
ಹೊಂಡಿತು. ಮುಂದೆ ಕೆಲವು ದಿವಸಗಳ ತರುವಾಯ ಆ ಸನ್ಯಾಸಿಯು ಆ ದಾರಿ
ಯಿಂದ ಹಾದು ಹೋಗುವಾಗ ಆ ಹಾವನ್ನು ಹುಡುಕಿದನು. ಆದು ಎಲ್ಲಿಯೂ
ಕಾಣಿಸಲಿಲ್ಲ. ಕಡೆಗೆ ದನ ಕಾಯುವ ಹುಡುಗರು ಅದು ಸತ್ತು ಬಹಳ ದಿವಸ
ಗಳಾದವೆಂದು ಹೇಳಿದರು. ಆದರೆ ಆ ಸಾಧುವು ತನ್ನ ಮಂತ್ರಪ್ರಭಾವದಿಂದ ಆ
ಹಾವು ಸತ್ತಿರಲಿಕ್ಕಿಲ್ಲವೆಂದು ಪೂರ್ಣವಾಗಿ ವಿಶ್ವಾಸವಿಟ್ಟು ಅದರ ಹುತ್ತಿನಹ
ತ್ತರ ಹೋಗಿ ಅದನ್ನು ಕೆಲವು ಹೊತ್ತು ಕೂಗಿದನು. ಆ ಮೇಲೆ ಆದು ತನ್ನ
ಹುತ್ತಿನ ಹೊರಗೆ ಬಂದು ತನ್ನ ಗುರುವಿಗೆ ನಮಸ್ಕಾರ ಮಾಡಿತು. ಆಗ ಅವ
ನ ಮತ್ತು ಅದರ ನಡುವೆ ನಡೆದ ಸಂಭಾಷಣವೇನಂದರೆ:
ಸನ್ಯಾಸಿ--ಮಿತ್ರಾ, ಕ್ಲೇಮದಿಂದಿರುವೆಯಾ?
ಶಲ ತ
ಹಾವು--ಸ್ವಾಮಿಾ, ನಿಮ್ಮ ದಯದಿಂದ ಶ್ಷೇಮದಿಂದಲೂ, ಸುಖದಿಂದ
ಲೂ ಇರುತ್ತೇನೆ.
ಸನ್ಮಾ ಸಿ--ಅದರೆ ನೀನು ಇಷ್ಟು ಯಾಕೆ ಸೊರಗಿರುತ್ತೀ? ನಿನ್ನ ವೆ
ಯಲ್ಲಿ ಅಸ್ಕಿ ನಾಜರಗಳೇ ಕಾಣುತ್ತ ವಲ್ಲ!
ಹಾವು--ಸ್ವಾವಿಸ, ನೀವು ಅಪ್ಪಣೆ ಮಾಡಿದಂದಿನಿಂದ ನಾನು ಎರಡ
ನೇಯವರನ್ನು ಕಚ್ಚುವದನ್ನು ಬಿಟ್ಟುಕೊಟ್ಟರುತ್ತೇನೆ. ಒಣಎಲೆಗಳೂ ಮಣ್ಣೂ
ಮಾತ್ರ ನನ್ನ ಆಹಾರವಾಗಿರುತ್ತವೆ. ಅದುದರಿಂದ ನಾನು ಸೊರಗಿರುತ್ತೇನೆ.
ಸನ್ಯಾಸಿ--ಈ ಆಹಾರದ ಕಾರಣದಿಂದಲೇ ಮಾತ್ರ ನೀನು ಇಷ್ಟು
ಸೊರಗುವ ಕಾರಣವಿಲ್ಲ. ಮತ್ತೇನಾದರೂ ಕಾರಣವಿರಬಹುದು. ಸ್ವಲ್ಪ ವಿ
ಚಾರ ಮಾಡಿ ಹೇಳು,
ಹಾವು--ಹಾ! ಈಗ ನನಗೆ ನೆನಪಾಯಿತು. ನನ್ನ ಸ್ವಭಾವದಲ್ಲಿ ಬ
ದಲು ಆಗಿರುತ್ತ ದೆಂದು ನೋಡಿ ಹುಡುಗರು ನನ್ನನ್ನು ಸಗ
ಒಮ್ಮೆ ಬಹಳ ಹೊಡೆದರು. ಅದುದರಿಂದ ನಾನು ಸೊರಗಿರುತ್ತೇನೆ.
ಸನ್ಯಾಸಿ--ಅಯ್ಕೋ ಪಾಪ! ನಿನ್ನ ಶತ್ರುಗಳು ನಿನಗೆ ಹಿಂಸೆಪಡಿಸಿದಾ
ಗ್ಗೆ ನೀನು ಆತ್ಮರಕ್ಷಣ ಮಾಡಿಕೊಳ್ಳಬೇಕೆಂಬುವದು ನಿನಗೆ ಹೇಗೆ ಗೊತ್ತಾಗ
ಲಿಲ್ಲ? ನಾನು ನಿನಗೆ ಈಶ್ವರನು ಹುಟ್ಟಿಸಿದಂಥ ಯಾವ ಪ್ರಾಣಿಗೂ ಕಚ್ಚಬಾ
ರಡೆಂದು ಮಾತ್ರ ಅಪ್ಪುಣೆಯನ್ನು ಮಾಡಿದ್ದೆ ನು. ಆದರೆ ನಿನ್ನನ್ನು ಕ್ಲೋಲಕ್ಕೆ
ಬಂದವರ ಮೇಲೆ ನೀನು ನಿನ್ನ ಹೆಡೆಯನ್ನು ಎತ್ತಿ ಫೂತ್ವಾರ ಮಾಡಿ ಅವರನ್ನು
ನಿನ್ನಿಂದ ದೂರ ಮಾಡಬಾರದೆಂದು ಹೇಳಿದ್ದೆ ನೋ?
ಇದನ್ನು ಕೇಳಿ ಹಾವು ನಾಚಿಕೊಂಡು ಏನೂ ಉತ್ತರ ಕೊಡದೆ ತನ್ನ
ಹುತ್ತನ್ನು ಸೇರಿತು.
ತಾತ್ಪರ್ಯ.
ಕೇಡು ಮಾಡುವವರಿಗೆ ಪ್ರತಿಕೇಡು ಮಾಡದಿದ್ದರೂ ಅವರನ್ನು ನಿರ್ವಿ
ಣ್ಯ ಮಾಡುವ ಶಕ್ತಿಯು ನಮ್ಮಲ್ಲಿ ಇರುತ್ತದೆಂದು ಆವರಿಗೆ ತೋರಿಸಿ, ನಮ್ಮ
ರಕ್ಷಣ ಮಾಡಿಕೊಳ್ಳ ತಕ್ಕದ್ದು. ನಾವು ಎರಡನೇಯವರಿಗೆ ಕೇಡು ಮಾಡದಿ
ಮುಳ್ಳ ಬ
ದ್ದರೂ ಎರಡನೆಯವರು ನಮಗೆ ಕೇಡು ಮಾಡದಂತೆ ಎಚ್ಚೆರಿಕೆಯನ್ನು ತೆಗೆ
ದುಕೊಳ್ಳುವದು ಯಾವಾಗಲು ಒಳೆ ಕೇದು.
೨. ನಾರದನ ಗರ್ವಹರಣ.
ಒಂದಾನೊಂದು ಸಾರೆ ನಾರದನಿಗೆ ತಾನು ಎಲ್ಲರಿಗಿಂತ ಹೆಚ್ಚಿನ ಭಗವ
ದ್ಭಕ್ತನೆಂಬ ಗರ್ವವು ಬಂದಿತ್ತು. ಇದನ್ನು ತಿಳಿದುಕೊಂಡು ಒಂದು ದಿವಸ
ಶ್ರೀವಿಷ್ಣು ವು ಅವನಿಗೆ-«« ನಾರದಾ, ನೀನು ಭೂಲೋಕಕ್ಕೆ ಹೋಗಿ ಬಾ.
ಆಲಿ ನನ್ನೊಬ್ಬ )) ದೊಡ್ಡ ಭಕ್ಕನಿರುತ್ತಾನೆ. ಅವನನ್ನು ನೀನು ನೋಡಿಕೊಂಡು
ಬರುವದು ಒಡೆ ಅಗತ್ಯವಿರುತ್ತ ದೆ” ಎಂದು ಹೇಳಿದನು. ಇದನ್ನು ಕೇಳಿ
ನಾರದನು ಆ ಸ್ಥಳಕ್ಕೆ ಹೋದನು. ಅಲ್ಲಿ ಒಬ್ಬ ಒಕ್ಕಲಿಗನು ಮುಂಜಾನೆ ಎದ್ದ
ಕೂಡಲೆ ಒಂದು ಸಾರೆ ಹರಿಯ ನಾಮಸ್ಕರಣ ಮಾಡಿ, ನೇಗಿಲಕ್ಕೆ ಎತ್ತುಗ
ಳನ್ನು ಹೂಡಿಕೊಂಡು ತನ್ನ ಹೊಲಕ್ಕೆ ಹೋಗಿ, ಅಲ್ಲಿ ಹಗಲೆಲ್ಲ ಬದಕು
ಮಾಡಿ, ಹೊಲದಿಂದ ತಿರುಗಿ ಬಂದು ತನ್ನ ಊಟ ತೀರಿಸಿಕೊಂಡ ಬಳಿಕ, ಮಲ
ಗಿಕೊಳ್ಳುವ ಕಾಲಕ್ಕೆ ಮತ್ತೊಮ್ಮೆ ಆ ಭಗವಂತನ ಹೆಸರನ್ನು ಸ್ಮರಣ ಮಾಡು
ತ್ತಿದ್ದನು. ಈ ಪ್ರಕಾರ ಅವನ ನಿತ್ಯದ ಪರಿಪಾಠವಿತ್ತು. ಇದನ್ನು ನೋಡಿ ನಾ
ರೆದನು-« ಈ ತ ೈಲಿಗನಲ್ಲಿ ಇಂಥಾದ್ದೇನು ಭಕ್ತಿ ಯುಂಟು? ಅವನು ದಿನಾಲು
ಎರಡು ಸಾರೆ ಮಾತ್ರ ಭಗವಂತನ ನಾಮಸ್ಮರಣ ಮಾಡುತ್ತಾನೆ. ನಾನು ಅ
ಹೋರಾತ್ರಿ ಅತನ ನಾಮಸಂಕೀರ್ತನ ಮಾಡಿ ಅವನ ಭಜನ ಮಾಡುವಲ್ಲಿ
ಮಗ್ಗನಾಗಿರುತ್ತಿದ್ದು, ನನಗೆ ಈ ಒಕ್ಕಲಿಗನನ್ನು ನೋಡಿಕೊಂಡು ಬರಲಿಕ್ಕೆ
ಭಗವಂತನ: ಹೇಳಿದನಲ್ಲ!” ಎಂದು ಆಶ್ಚರ್ಯಪಟ್ಟು ತಿರುಗಿ ಶ್ರೀವಿಷ್ಣುವಿನ
ಹತ್ತರ ಹೋಗಿ-« ದೇವಾ! ನಾನು ನಿಮ್ಮ ಭಕ್ತನನ್ನು ನೋಡಿ ಬಂದೆನು.
ಅವನು ದಿವಸ ಕೈ ಎರಡು ಸಾರೆ ಮಾತ್ರ ನಿಮ್ಮ ಧ್ಯಾನ ಮಾಡಿ ಯಾವಾಗಲು
ತನ್ನ ಉದ್ಯೋಗ ಮಾಡುವಲ್ಲಿ ತೂಕ ಸ ಅವನಲ್ಲೇನು ನೀವು ವಿಶೇ
ಷ ಭಕ್ತಿಯನ್ನು ಕಂಡಿರಿ?” ಎಂದು ಕೇಳಿದನು. ಅದಕ್ಕೆ ಭಗವಂತನು-« ನಾ
ತಮಾಗಶ್ರಿಕ್ಕ ಬ
ರದ, ಈ ಎಣ್ಣೆ ತುಂಬಿದ ಧಾಲಿಯನ್ನು ತೆಗೆದುಕೊಂಡು ಇದರೊಳಗಿಂದ ಒಂ
ದೂ ತಟೆಕು ಎಣ್ಣಿಯನ್ನು ಚಲ್ಲದಂತೆ ಎಚ್ಚರಿಕೆಯಿಂದ ಊರಲ್ಲೆಲ್ಲ ಪ್ರದಕ್ಷಿಣ
ಮಾಡಿಕೊಂಡು ನನ್ನ ಕಡೆಗೆ ತಿರುಗಿ ಬಾ? ಎಂದು ಹೇಳಿದನು. ಅದರಂತೆ
ನಾರದನು ಮಾಡಲಾಗಿ ಭಗವಂತನು- «ನಾರದಾ, ಈಹೊತ್ತಿನ ದಿವಸ ಊರಲ್ಲಿ
ತಿರುಗಾಡುವಾಗ ನೀನು ನನ್ನ ನಾಮಸ್ಮರಣವನ್ನು ಎಷ್ಟು ಸಾರೆ ಮಾಡಿದಿ?”
ಎಂದು ಕೇಳಿದನು. ಅದಕ್ಕೆ ನಾರದನು-(« ಪ್ರಭೋ, ನಾನು ಒಂದು ಸಾರೆ
ಯಾದರೂ ನಿಮ್ಮ ನಾಮಸ್ಮರಣವನ್ನು ಮಾಡಲಿಲ್ಲ. ಈ ಥಾಲಿಯೊಳಗಿಂದ
ಒಂದು ತಟಕು ಸಹ ಎಣ್ಣೆಯನ್ನು ಚಲ್ಲಬಾರದೆಂದು ನೀವು ಅಪ್ಪಣೆಯನ್ನು
ಮಾಡಿದ್ದಿರಿ. ಆದುದರಿಂದ ನಿಮ್ಮ ಅಪ್ಪಣೆಯ ಪ್ರಕಾರ ಒಂದು ತಟಕು ಸಹ ಎ
ಣ್ಲಿಯನ್ನು ಚಲ್ಲಬಾರದೆಂದು ನೀವು ಕೊಟ್ಟ ಎಣ್ಣಿಯ ಥಾಲಿಯ ಕಡೆಗೆ ನನ್ನ
ಯಾವತ್ತು ಲಕ್ಷ್ಯವನ್ನು ಕೊಟ್ಟೆನು. ಇಂಥ ಸಮಯದಲ್ಲಿ ನಿಮ್ಮ ನಾಮಸ್ಮರಣ
ವನ್ನು ಮಾಡುವದು ಸಾಧ್ಯವಿದ್ದಿಲ್ಲ ಎಂದು ಉತ್ತರ ಕೊಟ್ಟನು. ಆಗ ಭಗ
ವಂತನು ನಕ್ಕು" ಇದೊಂದು ಎಣ್ಣಿಯ ಧಾಲಿಯನ್ನು ತರಬೇಕಾದರೆ ನಿನಗೆ
ನನ್ನ ಹೆಸರನ್ನು ಒಂದು ಸಾರೆ ಸಹ ಸ್ಮರಣ ಮಾಡಲಿಕ್ಕೆ ಆಗಲಿಲ್ಲ. ಅಂದ
ಮೇಲೆ ದಿನಾಲು ತನ್ನ ಸಂಸಾರದ ಭಾರವನ್ನು ತಲೆಯ ಮೇಲೆ ಹೊತ್ತುಕೊಂ
ಡಿದ್ದ ಒಕ್ಕಲಿಗನು ನನ್ನ ಹೆಸರನ್ನು ದಿನಾಲು ಎರಡು ಸಾರೆ ತಪ್ಪದೆ ನೆನಸು
ವದು ದೊಡ್ಡದಲ್ಲವೇ?” ಎಂದು ಹೇಳಲು, ನಾರದನು ನಾಚಿಕೊಂಡು ತನ್ನ
ಗರ್ವವನ್ನು ಬಿಟ್ಟುಕೊಟ್ಟನು.
ತಾತ್ಸರ್ಯ.
ಯಾರು ಎಷ್ಟು ಸಾರೆ ದೇವರ ಹೆಸರನ್ನು ತೆಗೆದುಕೊಳ್ಳುತ್ತಾರೆಂಬದರ
ಮೇಲೆ ಅವರ ಭಕ್ತಿಯು ಅವಲಂಬಿಸಿರುವದಿಲ್ಲ. ಸಾವಿರಾರು ಕೆಲಸಗಳು
ಬಂದರೂ, ಸಾವಿರಾರು ಸಂಕಟಗಳು ಒದಗಿದರೂ, ಯಾರು ತಪ್ಪದೆ ಅತನ
ನ್ನು ನೆನಸುತ್ತಾರೋ ಅವರೇ ನಿಜವಾದ ಭಕ್ತರು. ಭಕ್ತಿಗೆ ಹೊರಗಿನ ಜಂಭ
ವು ಬೇಕಾಗುವದಿಲ್ಲ. ಅದು ನಿಜವಾದ ಅಂತಃಕರಣದಿಂದ ಬರಶಕ್ಕದ್ದು.
ಕಾ ೬
ಕ. ಭಾಗವತದ ಅರ್ಥವು.
ಒಂದಾನೊಂದು ದಿವಸ ಒಬ್ಬ ವಿದ್ಯಾ ನ್ ಬೂ ತ್ರಹ್ಮಣನು ಒಬ್ಬ ವಿದ್ವಾನ್
ಮತ್ತು ಜ್ಲ್ಯಾನಸಂಪನ್ನ ರಾಜನ ಹರಗ ಹೋಗಿ -«« ಎಕ್ಕೆ ರಾಜನೇ!
ನಾನು ಎಲ್ಲ ಧರ್ಮ ಗ್ರಂಥಗಳಲ್ಲಿ ಒಹಳ ಪ್ರವೀಣನಿರುತ್ತಿದ್ದು ನನಗೆ ಭಾಗವ
ತದ ಅರ್ಥವ್ರ ಚನ್ನಾಗಿ ತಿಳಿದಿರುತ್ತ ದೆ. ಆದುದರಿಂದ ನಾನು ಭಾಗವತವನ್ನು
ಹೇಳುತ್ತೇನೆ ಕೇಳು. ನಿನ್ನಂಥವರು ಭಾಗವತವನ್ನು ಅವಶ್ಯವಾಗಿ ಕೇಳತಕ್ಕ
ದ್ದು” ಎಂದು ನುಡಿದನು. ಭಾಗವತವನ್ನು ಚನ್ನಾಗಿ ಓದಿಕೊಂಡು ಅದರ ನಿಜ
ವಾದ ಅರ್ಥವನ್ನು ತಿಳಿದುಕೊಂಡವರು ಈಶ್ವರ ಪ್ರಾಪ್ತಿಯಲ್ಲಿ ತಲ್ಲೀನರಾಗು
ವರಲ್ಲದೆ ಇತರ ಜನರಂತೆ ದ ದ್ರಮ್ಯಪ್ರಾಪ್ತಿ ಯಗೋಸ್ಟ ಜ್ಯ ಅಧವಾ ಮಾನ ಪ್ರಾ
ಪ್ರಿಯಗೋಸ್ಕರ ಹೊರಗೆ ಎಂದಿಗೂ ಅಡ್ಡಾ ಡುವದಿಲ್ಲೆ ಂಬುವದು ಆ ರಾಜ
ನಿಗೆ ಚನ್ನಾಗಿ ಗೊತ್ತಿತ್ತು. ಆದುದರಿಂದ ಅವನು ಆ ಬ್ರಾಹ್ಮಣನಿಗೆ ಪ ಪಂಡಿತ
ನೇ, ನಿನಗೆ ಇನ್ನೂ ಭಾಗವತದ ಅರ್ಧವು ಚನ್ನಾಗಿ ತಿಳಿದಂತೆ ಕಂಡುಬರು
ವದಿಲ್ಲ. ಆದುದರಿಂದ ನೀನು ಮನೆಗೆ ಹೋಗಿ ಇನ್ನೊಮ್ಮೆ ಭಾಗವತವನ್ನು
ಓದಿ ಅದರ ಅರ್ಥವನ್ನು ಚನ್ನಾಗಿ ತಿಳಿದುಕೋ. ನಿನಗೆ ಭಾಗವತದ ಅರ್ಥ
ವ್ರ ಚನ್ನಾಗಿ ತಿಳಿದಿರುತ್ತದೆಂದು ನನ್ನ ಮನವರಿಳೆಯಾದ ಬಳಿಕ ನಾನು
ನಿನ್ನ ಕಡೆಯಿಂದ ಭಾಗವತವನ್ನು ಅವಶ್ಯವಾಗಿ ಕೇಳುವೆನು? ಎಂದು ಉತ್ತ
ರಕೊಟ್ಟನು. ರಾಜನು ಕೊಟ್ಟ ಉತ್ತರವನ್ನು ಕೇಳಿ ಆ ಬ್ರಾಹ್ಮಣನು-«ರಾ
ಜನು ಎಂಥ ಹುಚ್ಚನಿರುವನು! ಇವನು ಜ್ಞಾ ನಿಯೆಂದು ನಾನು ತಿಳಿದುಕೊಂ
ಡದ್ದು ವ್ಯರ್ಥವಿರುತ್ತದೆ. ನಾನು ಇಷ್ಟು ವರ್ಷ ಭಾಗವತವನ್ನು ಅಧ್ಯಯನ
ಮಾಡಿದರೂ ನನ್ನಿಂದ ಭಾಗವತವನ್ನು “ಕುವ ಮುಂಚೆಯೇ ನನಗೆ ಅದರ
ಅರ್ಥವು ತಿಳಿದಿಲ್ಲವೆನ್ನುತ್ತಾನೆ. ಇದು ಎಂಥ ಅಶ್ಚರ್ಯವು [ » ಎಂದು ತನ್ನ
ಮನಸ್ಸಿನಲ್ಲಿ ಅಂದುಕೊಂಡು ರಾಜನಿಗೆ ಏನೂ ಉತ್ತರ ಕೊಡದೆ ಖಿನ್ನ
ನಾಗಿ ತನ್ನ ಮನೆಗೆ ಹೋದನು. ಹಾಗೂ ಭಾಗವತವನ್ನು ಪುನಃ ಅಧ್ಯಯನ
ಮಾಡಿ ಕೆಲವು ದಿವಸಗಳ ನಂತರ ಪುನಃ ಆ ರಾಜನ ಸಭೆಗೆ ಹೋಗಿ-“ ರಾಜ
ನೇ, ಇನ್ನಾದರೂ ಭಾಗವತವನ್ನು ಕೇಳು. ನನಗೆ ಅದರ ಅರ್ಧವು ಚನ್ನಾಗಿ
ತಿಳಿದಿರುತ್ತ ದೆ” ಎಂದು ಹೇಳಿದನು. ಆಗ ರಾಜನು ಅವನಿಗೆ ಮುಂಚಿನಂತೆ-
ಹಾವ: (ಈ ವಾವ:
« ನಿನಗೆ ಇನ್ನೂ ಭಾಗವತದ ಅರ್ಥವು ಚನ್ನಾಗಿ ತಿಳಿದಿಲ್ಲ. ಮನೆಗೆ ಹೋಗಿ
ಇನ್ನೊಮ್ಮೆ ಆದರ ಅಧ್ಯಯನ ಮಾಡು” ಎಂದು ಉತ್ತರ ಕೊಟ್ಟೆನು. ರಾಜ
ನು ಕೊಟ್ಟ ಅಪಮಾನಕಾರಕ ಉತ್ತರವನ್ನು ಕೇಳಿ ಆ ಬ್ರಾಹ್ಮಣನಿಗೆ ಬಹಳ
ಸಿಟ್ಟು ಬಂತು. ಅದರೆ ರಾಜನು ತನಗೆ ತಿರುತಿರುಗಿ ಆದೇ ಉತ್ತರವನ್ನು ಕೊ
ಟ್ರದ್ದರಿಂದ ಈ ಉತ್ತರದಲ್ಲಿ ಏನಾದರೂ ವಿಶೇಷ ಅರ್ಥವು ಇರಬಹುದೆಂದು
ತಿಳಿದು ಪುನಃ ಮನೆಗೆ ಒಂದು ತನ್ನ ಮನೆಯ ಕೋಣೆಯ ಬಾಗಿಲವನ್ನು ಮು
ಚ್ಚಿಕೊಂಡು ಏಕಾಗ್ರಚಿತ್ತದಿಂದ ಭಾಗವತವನ್ನು ಆಧ್ಯಯನ ಮಾಡಹತ್ತಿದ
ನು. ಆವನು ಆಹಾರ ನಿದ್ರೆಗಳನ್ನುಮರೆಯುವಷ್ಟು ಅದರಿ ಅಧ್ಯಯನದಲ್ಲಿ ಮ
ಗ್ನನಾಗಿ ಹೋದನು. ಅವನಿಗೆ ಸೂರ್ಯೋದಯವು ಮತ್ತು ಸೂರ್ಯಾಸ್ತ
ವ್ರ ಯಾವಾಗ ಆದವು ಎಂಬುವದರ ಎಚ್ಚರವು ಸಹ ಉಳಿಯಲಿಲ್ಲ. ಈ ಪ್ರ
ಕಾರ ಅವನು ಏಕಾಗ್ರಚಿತ್ತದಿಂದ ಭಾಗವತವನ್ನು ಅಧ್ಯಯನ ಮಾಡಲಾಗಿ
ಅವನಿಗೆ ಭಾಗವತದ ನಿಜವಾದ ರಹಸ್ಯವು ತಿಳಿಯಲಿಕ್ಕೆ ಹತ್ತಿ ಆದರ ಪ್ರಕಾಶ
ವು ಅವನ ಅಂತಃಕರಣದ ಮೇಲೆ ಬೀಳಲಿಕ್ಕೆ ಹತ್ತಿತು. ಆದುದರಿಂದ ಅವನಲ್ಲಿ
ದ್ರಮ್ಯ, ಮರ್ಯಾದೆ, ಇಚ್ಛಾ, ಆಶೆ ಲೋಭ, ಅಹಂಕಾರ ಇವುಗಳು ಇಲ್ಲದಂ
ತೆ ಆದವು. ಸೂರ್ಯೋದಯವಾದ ಕೂಡಲೆ ಕತ್ತಲೆಯು ಹೊರಟುಹೋಗು
ವಂತೆ ಅವನ ಅಂತ8ಕರಣದಲ್ಲಿ ಬ್ಹಾನಸೂರ್ಯನು ಉದಯವಾದ್ದರಿಂದ ಅವ
ನ ಮನಸ್ಸಿನಲ್ಲಿ ರಾಜನ ದರಬಾರಕ್ಕೆ ತಿರುಗಿ ಹೋಗಬೇಕೆಂಬ ವಿಚಾರವು
ಉಳಿಯಲಿಲ್ಲ. ಅವನು ರಾಜನನ್ನು ಪೂರ್ಣವಾಗಿ ಮರೆತನೆಂದರೂ ಆಡ್ಡಿ ಇಲ್ಲ.
ಈ ಪ್ರಕಾರ ಅವನ ಮನಸ್ಸಿನ ಸಿದ್ಧತೆಯ ಆಗಲು ಅವನು ಈಶ್ವರನಿಗೆ ಆತ್ಮಾ
ರ್ಪಣವನ್ನು ಮಾಡಿ ಅಹೋರಾತ್ರಿ ಭಗವಂತನ ಆರಾಧನೆಯಲ್ಲಿ ಮಗ್ನನಾದನು-
ಈ ಪ್ರಕಾರ ಕೆಲವು ದಿವಸಗಳು ಕಳೆದ ಹೋದ ತರುವಾಯ ರಾಜನಿ
ಗೆಳ ಬ್ರಾಹ್ಮಣನ ನೆನಪು ಆಯಿತು. « ಇಷ್ಟು ದಿವಸಗಳಾದರೂ ಆ ಬ್ರಾಹ್ಮ
ಣನು ನನ್ನ ಕಡೆಗೆ ತಿರುಗಿ ಬರಲಿಲ್ಲ. ಅವನು ಏನು ಉದ್ಯೋಗವನ್ನು ನಡೆ
ಸಿರುವನೋ ನೋಡೋಣ” ಎಂದು ರಾಜನು ತನ್ನ ಮನಸ್ಸಿನಲ್ಲಿ ವಿಚಾರ
ಮಾಡಿ ತನ್ನ ಸಂಗಡ ವಿಶೇಷ ಮಂದಿ ಪರಿಚಾರಕರನ್ನು ಕರೆದುಕೊಳ್ಳದೆ ಆಬ್ರಾ
ಹ್ಮಣನ ಮನೆಗೆ ಹೋದಾಗ ಆ ಬ್ರಾಹ್ಮಣನು ಪರಮೇಶ್ವರನ ಧ್ಯಾನದಲ್ಲಿ ನಿಮ
೨೨. ಅ ೨.
ಗ್ನನಾಗಿದ್ದನು. ಅವನ ಮುಖದ ಮೇಲೆ ಮಾತ್ರವ್ಲದೆ ಸರ್ವಾಂಗದ ಮೇಲೆ
ಒಂದು ಪ್ರಕಾರದ ದಿವ್ಯ ತೇಜಸ್ಸು ಉಂಬಾಗಿತ್ತು. ರಾಜನು ಆ ಬ್ರಾಹ್ಮಣನ
ದೇದೀಪ್ಯಮಾನವಾದ ಮತ್ತು ಗಂಭೀರವಾದ ಮುದ್ರೆಯನ್ನು ನೋಡಿ ಅನಂದ
ಪಟ್ಟು ಸದ್ದದಿತ ಅಂತಃಕರಣದಿಂದ ಅವನನ್ನು ನಮಸ್ಕರಿಸಿ ಬಹಳ ಲೀನತೆ
ಮಿಂದ -* ಪಂಡಿತ ಶ್ರೇಷ್ಠ ನೇ! ಈಗ ಮಾತ್ರ ನಿನಗೆ ಭಾಗವತದ ನಿಜವಾದ
ಅರ್ಥವು ತಿಳಿದಿರುವದೆಂದು ನನಗೆ ಪೂರ್ಣವಾಗಿ ಮನವರಿಕೆಯಾಗಿರುತ್ತದೆ.
ಇನ್ನು ಮೇಲೆ ನೀನು ದಯಮಾಡಿ ನನ್ನನ್ನು ನಿನ್ನ ಶಿಷ್ಯನಾಗಿ ಮಾಡಿಕೋ”
ಎಂದು ನುಡಿದನು. ರಾಜನು ಈ ಪ್ರಕಾರ ಮಾತಾಡಿದ್ದನ್ನು ಕೇಳಿ ಆ ಬ್ರಾಹ್ಮ
ಣನು ರಾಜನ ಮೋರೆಯ ಕಡೆಗೆ ಒಂದು ಸಾರೆ ಮಾತ್ರ ನೋಡಿ ಅವನಿಗೆ ಏನೂ
ಉತ್ತರ ಕೊಡದೆ ಸುಮ್ಮನಾದನು.
ತಾತ್ಪರ್ಯ.
ಈಶ್ವರಪ್ರಾ ಪ್ಲಿಯಲ್ಲಿ ಮಗ್ನ ರಾದವರಿಗೆ ಐಶ್ವರ್ಯವಾಗಲಿ, ಮರ್ಯಾದೆ
ಯಾಗಲಿ ಬೇಕಾಗುವದಿಲ್ಲ. ಅವರಿಗೆ ಗುರುತ್ವವು ಸಹ ತುಚ್ಛ ವೆನಿಸುವದು.
ಸಾವ್ರಯಾವದೇ ಗ್ರಂಥವನ್ನು ಅಭ್ಯಾಸ ಮಾಡಿದರೂ ಅದರ ಶಾಬ್ಬಿಕ ಆರ್ಥ
ವನ್ನು ತಿಳಿದುಕೊಂಡು ತೃಪ್ಪರಾಗದೆ ಅದರ ನಿಜವಾದ ಮರ್ಮವನ್ನು ಅಂದರೆ
ರಹಸ್ಯವನ್ನು ತಿಳಿದುಕೊಂಡಲ್ಲಿ ನಮಗೆ ಜ್ಞಾನಪ್ರಾಪ್ತಿಯಾಗುವದು.
೪. ಘಂಟಾ ಕರ್ಣನು.
ಒಂದಾನೊಂದು ಪಟ್ಟಣದಲ್ಲಿ ಒಬ್ಬ ಗೈಹಸ್ಕನು ಶಿವನ ಆರಾಧನೆಯನ್ನು
ಮಾಡುತ್ತಿದ್ದನು. ಅವನಂಥ ಶಿವಭಕ್ತನು ಬಹುಶಃ ಎಲ್ಲಿಯೂ ಇರಲಿಕ್ಕಿಲ್ಲ
ವೆಂದು ಯಾವಾಗಲು ಜನರು ಅನ್ನುತ್ತಿದ್ದರು. ಆದರೆ ಅವನ ಭಕ್ತಿಯಲ್ಲಿ ಒಂ
ದು ದೋಷವಿತ್ತು. ಅದೇನಂದರೆ: ಅವನು ಶಿವನ ಹೊರತಾಗಿ ಇತರ ಯಾವ
ದೇವರನ್ನೂ ಮನ್ನಿಸುತ್ತಿದ್ದಿಲ್ಲ. ಅವನು ಇತರ ದೇವರನ್ನು ಬಹಳ ತಿರಸ್ಕಾರ
ಮಾಡುತ್ತಿದ್ದನು. ಅವನಿಗೆ ಕೈಲಾಸನಾಥನಾದ ಶ್ರೀಶಂಕರನು ಒಂದು ದಿವಸ
RL
ಪ್ರತ್ಯಕ್ಷುನಾಗಿ-« ಭಕ್ತಾ? ಎಲ್ಲ ದೈವತುಗಳು ಒಂದೇ ಇರುತ್ತವೆಂದು ತಿಳೆ.
ಆದುದರಿಂದ ನೀನು ಯಾವ ದೇವರಿಗಾದರೂ ತಿರಸ್ಕಾರ ಅಧವಾ ಉಪಹಾಸ
ಮಾಡಿದರೆ ನೀನು ಪ್ರತ್ಯಕ್ಸು ನನಗೆಆ ಪ್ರಕಾರ ಮಾಡಿದಂತೆ ಆಗುವದು. ನಾನು
ಇತರ ದೇವರಿಂದ ಭಿನ್ನವಿರುವದಿಲ್ಲ. ಆದುದರಿಂದ ನೀನು ಯಾವಕ್ಲಿಯವರೆಗೆ
ಇತರ ದೇವರಿಗೆ ಭಕ್ತಿಪೂರ್ವಕವಾಗಿ ಶರಣು ಹೋಗುವದಿಲ್ಲವೋ ಅಥವಾ
ಆ ದೇವರ ವಿಷಯದಲ್ಲಿ ಪೂಜ್ಯ ಒುದ್ದಿಯನ್ನು ತಾಳುವದ್ದವೋ ಅಲ್ಲಿಯವರೆಗೆ
ನಾನು ನಿನ್ನ ಮೇಲೆ ಸಂತುಷ್ಛನಾಗುವದಿಲ್ಲ. ಹಾಗೂ ನಿನ್ನ ಮೇಲೆ ದಯವನ್ನು
ತೋರಿಸುವದಿಲ್ಬ ? ಎಂದು ಹೇಳಿ ಅಂತರ್ಥಾನವನ್ನು ಹೊಂದಿದನು. ಭಗವಾ
ನ್ ಶಂಕರನು ಈ ಪ್ರಕಾರ ಎಚ್ಚರಿಕೆಯನ್ನು ಕೊಟ್ಟರೂ ಆ ಮನುಷ್ಯನು ದು
ರಾಗ್ರಹದಿಂದ ಇತರ ದೇವರನ್ನು ಒಹಿರಂಗವಾಗಿ ಮೊದಲಿನಕಿಂತ ಹೆಚ್ಚು ತಿರ
ಸ್ಕಾರ ಮಾಡಹತ್ತಿದನು. ಇದನ್ನು ನೋಡಿ ಶ್ರೀ ಶಂಕರನು ಮತ್ತೊಮ್ಮೆ ಅವ
ನಿಗೆ ಹರಿಹರ ರೂಪವನ್ನು ಧರಿಸಿ ದರ್ಶನವನ್ನು ಕೊಟ್ಟನು. ಆಗ ಅವನು ಹ
ರನ ಹಿಂದೆ ಅಡಗಿಕೊಂಡು ಹರಿಯ ದರ್ಶನವನ್ನು ತೆಗೆದುಕೊಳ್ಳುವದನ್ನು
ತಪ್ಪಿಸಹತ್ತಿದನು. ಇಷ್ಟೇ ಆಲ್ವ ಅವನು ಮಹಾದೇವರ ಪೂಜಿಯನ್ನು ಮಾಡು
ವಾಗ ವಿಷ್ಣುವಿನ ಮೋರೆಯ ಕಡೆಗೆ ನೋಡಲೂ ಇಲ್ಲ. ಆದುದರಿಂದ ಶ್ರೀಶಂ
ಕರನು ತನ್ನಅ ಭಕ್ತನ ಆಹಂಕಾರವನ್ನೂ ದುರಾಗ್ರಹವನ್ನೂ ನೋಡಿ ಸಿಟ್ಟ
ಬಂದು ಮನಸ್ಸಿನೊಳಗೆ ಬಹಳ PENNE ಆಂತರ್ಧಾನವನ್ನು ಹೊಂದಿ
ದನು. ಇಷ್ಟಾದರೂ ಅವನ ತಾಮಸ ಭಕ್ತಿಯು ತಿಲಮಾತ್ರವಾದರೂ ಕಡಿಮೆ
ಯಾಗಲಿನ್ಲ. ಅವನು ಮೊದಲಿನಕಿಂತ ಹೆಚ್ಚಿಗೆ ಇತರ ದೇವರನ್ನು ತಿರಸ್ಕಾರ
ಮಾಡಲಕ್ಕ ಹತ್ತಿ ಅವರನ್ನು ಅವಮಾನ ಮಾಡಲಿಕ್ಕೆ ಅರಂಭಿಸಿದನು. ಅವನ
ವಿಲಕ್ಷಣ ಸ್ವಭಾವವನ್ನು ಕಂಡು ಊರೊಳಗಿನ ಹುಜುಗರು ಅವನನ್ನು ಸಿಟ್ಟಿಗೆ
ಬ್ಬಿಸುವದಕ್ಕಾಗಿ ಅವನನ್ನು ನೋಡಿದ ಕೂಡಲೆ -.«ಶಿ ಶ್ರೀವಿಷ್ಣು ; ಸದಾಂ ಚತು
ರ್ಭುಜ, ಮೈಕುಂಠನಾಯಕ ” ಎಂದು ಅವನ ಮುಂದೆ ದೊಡ್ಡ ಧ್ವನಿಯಿಂದ
ಕೂಗಲಾರಂಭಿಸಿದರು. ಈ ಪ್ರಕಾರ ಹುಡುಗರು ಶ್ರೀವಿಷ್ಣುವಿನ ಹೆಸರ
ನ್ನು ತನ್ನ ಮುಂದೆ ಕೂಗಳಲಿಕ್ಕೆ ಹತ್ತಿದ್ದನ್ನು ಕಂಡು ಅವನಿಗೆ ಬಹಳ ಅಸಹ್ಯ
ವಾಯಿತು. ಆದುದರಿಂದ ಅವನು ತನ್ನ ಮುಂದೆ ಹುಡುಗರು ಶ್ರೀವಿಷ್ಣುವಿನ
2
ಹ ಗ ರ ಹೆ
ಹೆಸರನ್ನು ತೆಗೆದುಕೊಂಡು ಕೂಗಿದ ಕೂಡಲೆ ಅದು ತನಗೆ *ೇಳಿಸಬಾರೆ
ದೆಂದು ತನ್ನ ಎರಡೂ ಕಿವಿಗಳಿಗೆ ಎರಡು ಗಂಟೆಗಳನ್ನು ಕಟ್ಟಿಕೊಂಡು ತನ್ನ
ಕಿವಿಗಳಿಂದ ಅವುಗಳನ್ನು ಬಾರಿಸಹತ್ತಿದನು. ಕಡೆಕಡೆಗೆ ಅವನು ಊರೊಳಗೆ
ದಾರಿಯಿಂದ ಅಡ್ಡಾಡುವಾಗ ಯಾವಾಗಲು ತನ್ನ ತಲೆಯನ್ನು ಅಗಳಾಡಿಸುತ್ತ
ಗಂಟಿಗಳನ್ನು ಬಾರಿಸುತ್ತಿದ್ದನು. ಅವನ ಉದ್ದೇಶವು ತನ್ನ ಕಿವಿಗೆ ಶ್ರೀವಿಷ್ಣು
ವಿನ ಹೆಸರು ಒಮ್ಮೆಯಾದರೂ ಕೇಳಿಸಬಾರದೆಂದು ಇತ್ತು. ಅವನ ಈ ಹುಚ್ಚು
ತನವನ್ನು ನೋಡಿ ಜನರು ಅವನಿಗೆ "ಘಂಟಾಕರ್ಣ' ನೆಂದು ಹೆಸರಿಟ್ಟರು.
ಘಂಟಾಕರ್ಣನು ಜೀವಂತವಿರುವಾಗ ತನ್ನ ದುರಾಗ್ರಹದ ಸಲುವಾಗಿ ಅತಿ
ಶಯ ದುಃಖವನ್ನೂ, ಹಿಂಸೆಯನ್ನೂ ಭೋಗಿಸಬೇಕಾಯಿತು. ಇಷ್ಟೇ ಅಲ್ಲ,
ಅವನು ಸತ್ತ ಮೇಲೆ ಅವನಿಗೆ ಯಮಲೋಕದನ್ಲಿ ಸಹ ಯಾತನೆಗಳು ತಪ್ಪ
ಲಿಲ್ಲ. ಬಂಗಾಲದಲ್ಲಿ ಈಗಲೂ ಫಾಲ್ಗುಣ ಮಾಸದಲ್ಲಿ ಒಂದು ದಿವಸ ಜನರು
ಘಂಟಾಕರ್ಣನ ಮೂರ್ತಿಯನ್ನು ಮಾಡಿ ಶಮ್ಮ ಕೈಯೊಳಗಿನ ಬಡಗಿಯಿಂದ
ಅದನ್ನು ಹೊಡ ಹೊಡದು ನಾಶಪಡಿಸುತ್ತಾರೆ. ಇದು ಹರಿಹರರಲ್ಲಿ ಭೇದವ
ನ್ನೆಣಿಸುವ ದುರಾಗ್ರಹದ ಫಲವು.
ತಾತ್ಪರ್ಯ.
ಪರಮೇಶ್ವರನಿಗೆ ಅನಂತ ಹೆಸರುಗಳು ಮತ್ತು ಅನಂತ ರೂಪಗಳು ಇರು
ತ್ತವೆ. ನಾವು ಆತನನ್ನು ಬೇಕಾದ ಹೆಸರಿನಿಂದ ಸ್ಮರಣ ಮಾಡಿ, ಬೇಕಾದ ರೂ
ಪದಿಂದ ಮತ್ತು ಬೇಕಾದ ರೀತಿಯಿಂದ ಆರಾಧಿಸಿದರೂ ಅವನು ಸಂತುಷ್ಟನಾ
ಗುವನು. ಆದುದರಿಂದ ಯಾರು ಬೇಕಾದ ದೇವರನ್ನು ಆರಾಧಿಸಿದರೂ ಇತರೆ
ದೇವರನ್ನು ಸರ್ವಥಾ ನಿಂದಿಸಬಾರದು.
೫. ನಾಲ್ಕು ಮಂದಿ ಕುರುಡರು.
ಒಂದು ಊರೊಳಗೆ ನಾಲ್ಕು ಮಂದಿ ಕುರುಡರು ಇರುತ್ತಿ ದ್ದರು. ಒಂದು
ಸಾಕೆ ಆ ಊರ ಇನಾಮದಾರನು ಒಂದು ಆನೆಯನ್ನು ಮಾರಲಿಕ್ಕೆ ತೆಗೆದುಕೊಂ
ಡು ಬಂದನು. ಅದನ್ನು ನೋಡಲಿಕ್ಕೆ ಆ ಊರೊಳಗಿನ ಎಲ್ಲ ಸಣ್ಣ ದೊಡ್ಡ
ಎ... ಗಗ ಎ...
ಜನರು, ಹೆಂಗಸರು, ಹುಡುಗರು ಸಹ ನೋಡಲಿಕ್ಕೆ ಹೋದರು. ಈ ವರ್ತ
ಮಾನವು ಆ ಊರೊಳಗಿದ್ದ ನಾಲ್ಕು ಮಂದಿ ಕುರುಡರಿಗೆ ತಿಳಿಯಲು, ಅವರೂ
ಆನೆಯನ್ನು ನೋಡಲಿಕ್ಕೆ ಹೋದರು. ಅನೆಯಂಥ ದೊಡ್ಡ ಪ್ರಾಣಿಯು ಜಗ
ತ್ತಿನಲ್ಲಿ ಯಾವದೂ ಇಲ್ಲವೆಂದು ಅವರು ಮುಂಚಿತವಾಗಿ ಕೇಳಿದ್ದರಿಂದ ಆನೆ
ಯನ್ನು ನೋಡಿ ಬರಲಿಕ್ಕೆ ಅವರು ಬಹಳ ಉತ್ಕಂಠತೆಯಿಂದ ಹೋದರು. ಆದ
ರೆ ಅವರಿಗೆ ನೋಡಲಿಕ್ಕೆ ಕಣ್ಣುಗಳಿಲ್ಲದ್ದರಿಂದ ಅವರು ಆ ಆನೆಯ ಮೇಲೆ ಕೈ
ಯಾಡಿಸಿ ತಮ್ಮ ಸ್ಪರ್ಶದಿಂದ ಆನೆಯು ಎಂಥ ಪ್ರಾಣಿಯು ಇರುತ್ತದೆಂಬದನ್ನು
ತಿಳಿದುಕೊಳ ಬೇಕೆಂದು ಆದರ ಸಮಾಪಕ್ಕೆ ಹೋಗಿ ಅದರ ಮೇಲೆ ತಮ್ಮ ಸ್ಸ
ಯಾಡಿಸಿದರು. ಒಬ್ಬನು ಅದರ ಕಾಲುಗಳ ಮೇಲೆ, ಇನ್ನೊಬ್ಬನು ಅದರ
ಸೊಂಡೆಯ ಮೇಲೆ, ಮೂರನೇಯವನು ಅದರ ಹೊಟ್ಟೆಯ ಮೇಲೆ ಮತ್ತು
ನಾಲ್ಕನೇಯವನು ಅದರ ಕಿವಿಗಳ ಮೇಲೆ ಕೈಯಾಡಿಸಿದನು. ಈ ಪ್ರಕಾರ
ನಾಲ್ಕು ಮಂದಿ ಕುರುಡರು ತಮ್ಮ ತಮ್ಮ ಕೈಯಾಡಿಸಿ ಆನೆಯನ್ನು ನೋಡಿ
ಕೊಂಡು ಮನೆಗೆ ಹೋದನಂತರ ಎಲ್ಲರೂ ಒತ್ತಟ್ಟಿಗೆ ನೆರೆದು ಆನೆಯು
ಯಾವ ಪ್ರಕಾರ ಇರುತ್ತ ದೆಂದು ತಮ್ಮ ತಮ್ಮೊಳಗೆ ವಾದವಿವಾದ ಮಾಡಹ
ತ್ಮಿದರು. ಒಬ್ಬರ ಅಭಿಪ್ರಾಯವು ಇನ್ನೊಬ್ಬರ ಅಭಿಪ್ರಾಯಕ್ಕೆ ಕೂಡ
ಲಿಲ್ಲ. ಆನೆಯ ಕಾಲುಗಳ ಮೇಲೆ ಕೈಯಾಡಿಸಿ ನೋಡಿದ ಕುರುಡನು-* ಆ
ನೆಯು ಕಂಬದಂತೆ ಇರುತ್ತದೆ” ಎಂದು ಹೇಳಿದನು. ಆದರ ಸೊಂಡೆಯ ಮೇಲೆ
ಕೈಯಾಡಿಸಿದಂಥ ಎರಡನೇ ಕುರುಡನು" ಆನೆಯು ಒಂದು ತೊಲೆಯ ಮುಂ
ಡಿಗೆಯಂತೆ ಇರುತ್ತದೆ” ಎಂದು ಹೇಳಿದನು. ಅದರ ಹೊಟ್ಟಿಯ ಮೇಲೆ ಕೈ
ಯಾಡಿಸಿ ನೋಡಿದ ಮೂರನೇ ಕುರುಡನು-" ಆನೆಯು ಕೊಡದಂತೆ ಇರುತ್ತ
ದೆ” ಎಂದು ಹೇಳಿದನು. ಅದರ ಕಿವಿಗಳ ಮೇಲೆ ಕೈಯಾಡಿಸಿ ನೋಡಿದಂಥ
ನಾಲ್ಕನೇ ಕುರುಡನು-"" ಆನೆಯು ಮೊರದಂತೆ ಇರುತ್ತದೆ” ಎಂದು ಹೇಳಿ
ದನು. ಈ ಪ್ರಕಾರ ನಾಲ್ಕು ಮಂದಿ ಕುರುಡರು ಆನೆಯು ಎಂಥಾದ್ದಿರುತ್ತ
ದೆಂಬ ಬಗ್ಗೆ ಬೇರೆ ಬೇರೆ ಮಾತಾಡಿ ತಮ್ಮ ತಮ್ಮೊಳಗೆ ಜಗಳಾಡಲಿಕ್ಕೆ ಹತ್ತಿ
ದರು. ಈ ಪ್ರಕಾರ ಈ ನಾಲ್ಕು ಜನರು ಜಗಳಾಡುವದನ್ನು ಕೇಳಿ ಆ ದಾರಿ
ಯಿಂದ ಹೋಗುತ್ತಿ ದ್ದ ಒಬ್ಬ ಗೃಹಸ್ಥನು ಅವರ ಒಳಿಗೆ ಬಂದು-« ಅಪ್ಪಗಳಿ
೨ ಗಿ೨ ೨.
ರಾ! ನೀವು ಯಾಕೆ ಜಗಳಾಡುತ್ತೀರಿ?” ಎಂದು ಕೇಳಿದನು. ಅದಕ್ಕೆ ಆ ನಾ
ಲ್ವ ಮಂದಿ ಕುರುಡರು ಅವನ ಮುಂದೆ ತಮ್ಮ ಜಗಳದ ಯಾವತ್ತು ಸಂಗತಿ
ಯನ್ನು ತಿಳಿಸಿದರು. ಆ ಕುರುಡರ ಚಮತ್ಕಾರವಾದ ಜಗಳವನ್ನು ಕೇಳಿ ಆ
ಗೃಹಸ್ಥನು ನಕು - ಅಪ್ಪಗಳಿರಾ! ನೀವೆಲ್ಲರು ಸುಮ್ಮನೆ ವಾದವಿವಾದವನ್ನು
ನಡೆಸಿರುತ್ತೀರಿ. ನಿಮ್ಮಲ್ಲಿ ಒಬ್ಬರೂ ಆನೆಯನ್ನು ಪ್ರತ್ಯುಕ್ಪವಾಗಿ ನೋಡಿಲ್ಲ.
ನಿಮ್ಮಲ್ಲಿ ಒಬ್ಬನು ಆನೆಯು ಕಂಬದಂತೆ ಇರುತ್ತದೆಂದು ಹೇಳುತ್ತಾನೆ. ಆದರೆ
ಆನೆಯ ಕಾಲುಗಳು ಮಾತ್ರ ಕಂಬದಂತೆ ಇರುತ್ತ ವೆ. ನಿಮ್ಮಲ್ಲಿ ಇನ್ನೊಬ್ಬನು
ಆನೆಯು ಮುಂಡಿಗೆಯಂತೆ ಇರುತ್ತದೆಂದು ಹೇಳುತ್ತಾನೆ; ಆದರೆ ಆದರ ಸೊಂ
ಡೆಯು ಮಾತ್ರ ಮುಂಡಿಗೆಯಂತೆ ಇರುತ್ತದೆ. ನಿಮ್ಮಲ್ಲಿ ಮೂರನೇಯವನು ಆ
ನೆಯು ಕೊಡದಂತೆ ಇರುತ್ತದೆಂದು ಹೇಳುತ್ತಾನೆ; ಅದರೆ ಅನೆಯ ಹೊಟ್ಟೆಯು
ಮಾತ್ರ ಕೊಡದಂತೆ ಈರುತ್ತದೆ. ಹಾಗೂ ನಿಮ್ಮಲ್ಲಿ ನಾಲ್ಕನೇಯವನು ಆನೆ
ಯು ಮೊರದಂತೆ ಇರುತ್ತದೆಂದು ಹೇಳುತ್ತಾನೆ, ಆದರೆ ಆದರ ಕಿವಿಗಳು ಮಾತ್ರ
ಮೊರದಂತೆ ಇರುತ್ತವೆ. ನೀವು ನಾಲ್ಕೂ ಮಂದಿ ಆನೆಯ ಒಂದೊಂದೇ ಭಾಗ
ದ ಮೇಲಿಂದ ಅನೆಯನ್ನು ಪರೀಕ್ಷಿಸಿರುತ್ತೀರಿ. ನಿಮ್ಮಲ್ಲಿ ಯಾರೂ ಆನೆಯನ್ನು
ಪೂರ್ಣವಾಗಿ ಪರೀಕ್ಷೆ ಮಾಡಿ ತಿಳಿದುಕೊಂಡಿಲ್ಲ? ಎಂದು ಹೇಳಿ ಆ ನಾಲ್ಕು
ಮಂದಿಯನ್ನು ಸಮಾಧಾನ ಮಾಡಿದನು.
ತಾತ್ಪರ್ಯ.
ಇದೇ ಪ್ರಕಾರ ಜನರು ಪರಮೇಶ್ವರನ ಬಗ್ಗೆ ಜ್ಞಾನವಿರದೆ ಅತನ ಸ್ವ
ರೂಪದ ಬಗ್ಗೆ ಸುಮ್ಮನೆ ವಾದವಿವಾದ ಮಾಡುತ್ತಾರೆ. ಸದ್ಗುರುವಿನ ಸಹಾ
ಯವಿಲ್ಲದೆ ಒಬ್ಬರಿಗೂ ಅತನ ಸ್ವರೂಪವು ಗೊತ್ತಾಗುವದಿಲ್ಲ.
೬. ಕಾರ್ತೀಕ ಸ್ವಾಮಿಯು.
ಒಂದು ಸಾರೆ ಒಬ್ಬನು ಭಗವಾನ್ ರಾಮಕೃಷ್ಣ ಪರಮಹಂಸರಿಗೆ-..
«« ನಿಮಗೆ ಹೆಂಡತಿಯು ಇದ್ದರೂ ನೀವು ಸಂಸಾರವನ್ನು ಯಾಕೆ ಜಿಟ್ಟಿರುತ್ತಿ ¢
ಎರು ಗಿ ಎಂ
ರಿ?” ಎಂದು ಪ್ರಶ್ನೆ ಮಾಡಿದನು. ಆದಕ್ಕೆ ಉತ್ತರವಾಗಿ ಅವರು ಪಾರ್ವತಿ
ದೇವಿಯ ಮಗನಾದ ಕಾರ್ತೀಕಸ್ವಾಮಿಯ ಕಥೆಯನ್ನು ಹೇಳಿದರು. ಅದೇ
ನಂದರೆ:
ಒಂದು ಸಾಕೆ ಗಣನಾಯಳಕನಾದ ಕಾರ್ತೀಕಸ್ವಾಮಿಯು ಆಡುವಾಗ
ಒಂದು ಬೆಕ್ಕಿಗೆ ತನ್ನ ಉಗುರುಗಳಿಂದ ಚಿವರಿದನು. ಮುಂದೆ ಆವನು ತನ್ನಮ
ನೆಗೆ ಹೋಗಿ ನೋಡಲಾಗಿ ಅವನ ತಾಯಿಯಾದ ಪಾರ್ವತಿಯ ಗಲ್ಲದ ಮೇಲೆ
ತಾನು ಚಿವರಿದ ಗುರುತುಗಳು ಮೂಡಿದ್ದವು. ಅವುಗಳನ್ನು ನೋಡಿ ಕಾರ್ತೀಕ
ಸ್ವಾಮಿಗೆ ಆಶ್ಚರ್ಯವೆನಿಸಿತು. ಆಗ ಅವನು ಪಾರ್ವತೀದೇವಿಗೆ- ತಾಯಿಯೇ,
ನಿನ್ನ ಗಲ್ಲದ ಮೇಲೆ ಈ ಚಿವರಿದ ಗುರುತುಗಳು ಯಾಕೆ ಮೂಡಿರುತ್ತ ವೆ?
ಎಂದು ಕೇಳಿದನು. ಅದಕ್ಕೆ ಆ ಜಗದಂಬೆಯು- ಮಗನೇ, ಇದು ನಿನ್ನದೇ
ಕೆಲಸವು. ನಿನ್ನ ಉಗುರುಗಳಿಂದಲೇ ಈ ಚಿವರುಗಳು ಅಗಿರುವವು” ಎಂದು
ಉತ್ತರ ಕೊಟ್ಟಳು. ಆಗ ಕಾರ್ತೀಕಸ್ವಾಮಿಯು ಹೆಚ್ಚು ಆಶ್ಚರ್ಯಪಟ್ಟು.
« ಅದು ಹೇಗೆ? ನಾನು ನಿನ್ನನ್ನು ಚಿವರಿದ್ದು ನನ್ನ ನೆನಪಿಗೆ ಬರಲೊಲ್ಲದು ?
ಎಂದು ಕೇಳಿದನು. ಅದಕ್ಕೆ ಪಾರ್ವ ತಿದೇವಿಯು-“ಬಾಲಕನೇ ನೀನು ಈಹೊ
ತ್ತು ಮುಂಜಾನೆ ಬೆಕ್ಕಿಗೆ ಏನು ಮಾಡಿದೆಂಬುವದನ್ನು ನೆನಪು ಮಾಡಿಕೋ” ಎಂ
ದು ಹೇಳಿದಳು. ಇದನ್ನು ಕೇಳಿದವನೇ ಕಾರ್ತೀಕಸ್ಟಾಮಿಯು ಅತ್ಯುಂತ ಆಶ್ಚ
ರ್ಯದಿಂದ ಪಾರ್ವತಿದೇವಿಗೆ-: ಆದರೆ ನಾನು ಬೆಕ್ಕಿಗೆ ಚಿವುಕಿದ ಗುರುತುಗಳು
ನಿನ್ನ ಗಲ್ಲದ ಮೇಲೆ ಹೇಗೆ ಬಂದವು?” ಎಂದು ಕೇಳಿದನು. ಆದಕ್ಕೆ ಜಗಜ್ಜನನಿ
ಯು-«ಮಗುವೇ, ಈ ಜಗತ್ತಿನೊಳಗೆ ನನ್ನ ಹೊರತು ಏನೂ ಇರುವದಿಲ್ಲ. ಈ
ಸೃಷ್ಟಿಯಲ್ಲಿ ನಾನೇ ಇರುತ್ತೇನೆ. ನೀನು ಯಾರಿಗೆ ದುಃಖ ಕೊಟ್ಟರೂ ಆ ದುಃ
ಖವನ್ನು ನಾನೇ ಅನುಭೋಗಿಸಬೇಕಾಗುವದು? ಎಂದು ಉತ್ತರ ಕೊಟ್ಟಳು.
ಇದರಿಂದ ಕಾರ್ತೀಕಸ್ವಾಮಿಯು ಪ್ರ ತಿಯೊಬ್ಬ ಸ್ತಿ ಸ್ತ್ರೀಯನ್ನು ತನ್ನ ತಾಯಿಯೇ
ದು ತಿಳಿದು ತಾನು ಎಂದಿಗೂ ಮದುವೆ ಮಾಡಿಕೊಳ ಲಿಕ್ಕಿಲ್ಲವೆಂದು ನಿಶ್ಚಯ
ಮಾಡಿದನು.
« ಇದೇ ಮೇರೆಗೆ ನಾನಾದರೂ ಪ್ರತಿಯೊಬ್ಬ ಸ್ತ್ರೀಯನ್ನು ನನ್ನ ತಾಯಿ
ಯೆಂದು ತಿಳಿಯುತ್ತೇನೆ” ಎಂದು ಭಗವಾನರು ಊಟ ರ ಕೊಟ್ಟೆರು.
ಮಾಗಳ ಮಾ
ತಾತ್ಸರ್ಯ.
ಧಗವದ್ಧ್ಯಾನದಲ್ಲಿ ನಿಮಗ್ನ ರಾಗಿ ಭಗವಂತನ ಸಾಕ್ಷಾತ್ಕಾರವನ್ನು ಮಾ
ಡಿಕೊಂಡವರು ಸಂಸಾರವನ್ನು ತುಚ್ಛ ಮಾಡುತ್ತಾರೆ. ಅವರು « ನಾನು, ನನ್ನ
ಹೆಂಡತಿ, ನನ್ನ ಮಕ್ಕಳು” ಎಂಬ ಭೇದವನ್ನು ಮಾಡುವದಿಲ್ಲ. ಎಲ್ಲ ಪುರು
ಸರು ತಮ್ಮ ಅಣ್ಣತಮ್ಮಂದಿರೆಂತಲೂ, ಎಲ್ಲ ಸ್ತ್ರೀಯರು ತಮ್ಮ ಅಕ್ಕತಂಗಿಯ
ರೆಂತಲೂ ತಿಳಿದುಕೊಂಡು ಅವರೊಡನೆ ಶುದ್ಧ ಭಾವದಿಂದ ನಡೆಯುತ್ತಾರೆ.
೭. ಮಾನ ಮಾರುವ ಹೆಂಗಸರು.
ಕೆಲವು ಮಾನ ಮಾರುವ ಹೆಂಗಸರು ಒಂದು ದಿವಸ ತಮ್ಮ ವಿಸಾನಗಳ
ಮಾರಾಟದ ಸಲುವಾಗಿ ಪರಸ್ಕಳದ ಸಂತೆಗೆ ಹೋಗಿ ಸಂಜಿಯ ಹೊತ್ತಿ ನಲ್ಲಿ
ತಮ್ಮ ತೆರವಾದ ಬುಟ್ಟಿಗಳನ್ನು ತಲೆಯ ಮೇಲೆ ಇಟ್ಟುಕೊಂಡು ತಮ್ಮ ಊರಿ
ಗೆ ಬರುತ್ತಿದ್ದರು. ಆಗ ದೊಡ್ಡ ಆಣೇಕಲ್ಲಿನ ಮಳೆಯು ಸುರಿಯಿತು. ಆದುದ
ರಿಂದ ಅವರು ಆ ಮಳೆಯೊಳಗೆ ಸಿಕ್ಕು ತಮ್ಮ ಊರಿಗೆ ಬರಲಾರದೆ ಆ ರಾತ್ರಿ
ದಾರಿಯೊಳಗಿದ್ದ ಒಬ್ಬ ಹೂಗಾರವಸ ಮನೆಯಲ್ಲಿ ಇಳಕೊಂಡರು. ಆ ಹೂ
ಗಾರವನು ಅವರಿಗೆ ಇರಲಿಕ್ಕೆ ಒಂದು ಕೋಣೆಯನ್ನು ಕೊಟ್ಟನು. ಅದರೆ ಆ
ಕೋಣೆಯಲ್ಲಿ ಅವನು ಹೂವುಗಳನ್ನು ಇಟ್ಟಿದ್ದ ಕಾರಣ ಆ ಹೂವುಗಳ ಸುವಾ
ಸನೆಯು ಆ ಕೋಣೆಯಲ್ಲಿ ತುಂಬಿ ಹೋಗಿತ್ತು. ಇದರಿಂದ ಆ ವಿನ ಮಾರುವ
ಹೆಂಗಸರಿಗೆ ಸ್ವಲ್ಪ ಸಹ ನಿದ್ರೆಯು ಹತ್ತಲಿಲ್ಲ. ಆಗ ಅವರಲ್ಲಿ ಒಬ್ಬ ಜಾಣೆ
ಯಾದ ಹೆಂಗಸು-* ನಾವು ನಮ್ಮ ನಮ್ಮ ಬುಟ್ಟಿಗಳ ಮೇಲೆ ಸ್ವಲ್ಪ ನೀರು
ಹಾಕಿ ಅವುಗಳನ್ನು ನಮ್ಮ ಸಮಾಪದಲ್ಲಿ ಇಟ್ಟುಕೊಂಡು ಮಲಗೋಣ. ಅಂ
ದರೆ ಈ ಹೂವುಗಳ ವಾಸನೆಯ ತ್ರಾಸದಿಂದ ನಮ್ಮ ನಿದ್ರೆಯು ಕೆಡಲಿಕ್ಕಿಲ್ಲ ೫
ಎಂದು ಹೇಳಿದಳು. ಇದಕ್ಕೆ ಎಲ್ಲರು ಸಂತೋಷದಿಂದ ಒಪ್ಪಿಕೊಂಡು ಅದ
ರಂತೆ ಮಾಡಿದರು. ಆಗ ಅವರಿಗೆ ಬೇಗನೆ ನಿದ್ರೆಯು ಹತ್ತಿ ಅವರು ಗೊರ್ರ
ಗೊರ್ರೆಂದು ಚನ್ನಾಗಿ ನಿದ್ರೆ ಮಾಡಿದರು.
ಗ್ರ ಷನ
ತಾತ್ಸರ್ಯ.
ಕಲಿತದ್ದು ಕಲ್ಲು ಹಾಕಿದರೂ ಹೋಗದು. ಮನುಷ್ಯನಿಗೆ ಒಮ್ಮೆ ಯಾವ
ದಾದರೂ ರೂಢಿಯು ಸೇರಿದರೆ ಅದನ್ನು ಬಿಡುವದು ಅವನಿಗೆ ಬಹಳ ಕಷ್ಟವಾ
ಗುವದು. ಮನುಷ್ಯನು ಯಾವಾಗಲು ಈ ರೂಢಿಯ ಬಲುಮೆಗೆ ಒಳಪಟ್ಟು
ನಿರ್ವಿಣ್ಯನಾಗುತ್ತಾನೆ. ಇದರಂತೆಯೇ ಸಂಸಾರ ಲಂಪಟರಾದ ಜನರು ದ್ರವ್ಯ
ಸಂಪಾದನೆಯ ಮತ್ತು ಸುಖಾಭಿಲಾಷೆಯ ವಿಚಾರಗಳಲ್ಲಿ ಮಗ್ಗರಾಗಿರುವದರಿಂ
ದ ಅವರಿಗೆ ಶುದ್ಧವುಳ್ಳ ತೆ ವೈರಾಗ್ಯದ ವಾತಾವರಣದಲ್ಲಿ ಇರಬೇಕಾದರೆ ಬಹಳ
ಕಸವಿಸಿಯೂ ತೊಂದರೆಯೂ ಆಗುವವು.
ಲೆ. ಒಬ್ಬ ಬ್ರಾಹ್ಮಣನ ಗೋಹತ್ಯವು.
ಒಬ್ಬ ಬ್ರಾಹ್ಮಣನು ಬಹಳ ಶ್ರಮ ಮಾಡಿ ಒಂದು ಸುಂದರವಾದ
ತೋಟವನ್ನು ಸಿದ್ಧ ಮಾಡಿದ್ದನು. ಆದರಲ್ಲಿ ಅವನು ಆನೇಕ ತರದ ಹೂವಿನ
ಮತ್ತು ಹಣ್ಣಿನ ಗಿಡಗಳನ್ನು ಹಚ್ಚಿ ಆವುಗಳನ್ನು ಬಹಳ ಪ್ರೀತಿಯಿಂದ ಜೋ
ಕೆ ಮಾಡುತ್ತಿದ್ದನು. ಹೀಗಿರಲು ಒಂದು ದಿವಸ ಒಂದು ಆಕಳು ಅವನ ಕಣ್ಣು
ತಪ್ಪಿಸಿ ಆ ತೋಟವನ್ನು ಹೊಕ್ಕು ಆವನು ಪ್ರೀತಿಯಿಂದ ಹಚ್ಚಿ ಬೆಳೆಸಿದ ಒಂ
ದು ಬಹಳ ಅಮೌಲ್ಯವಾದ ಮಾವಿನ ಸಸಿಯನ್ನು ತಿಂದಿತು. ಇದನ್ನು ಕಂಡು
ಆ ಬ್ರಾಹ್ಮಣನು ಸಿಟ್ಟಿಗೆದ್ದು ಆ ಆಕಳವನ್ನು ತನ್ನ ಕೋಲಿನಿಂದ ಒಳೆತಾಗಿ
ಹೊಡೆಯಲು ಅದು ಆ ಕೋಲಿನ ಪೆಟ್ಟಿನಿಂದ ಸತ್ತು ಬಿದ್ದಿತು. ಆ ಬಳಿಕ ಈ
ಗೋಹಶ್ಯದ ವರ್ಶಮಾನವು ಹಾ ಹಾ ಅನ್ನುವಷ್ಟರಲ್ಲಿ ಊರೊಳಗೆ ತಿಳಿಯಿತು
ಇದನ್ನು ಕೇಳಿ ಜನರು ಅವನ ಬಳಿಗೆ ಬಂದು-* ನೀನು ಬ್ರಾಹ್ಮಣನಿದ್ದು ಗೋ
ಹತ್ಯ ಮಾಡಿದೆ. ಅದುದರಿಂದ ನೀನು ಈ ಪಾಪದ ಸಲುವಾಗಿ ಪ್ರಾಯಶ್ಚಿತ್ತ
ತೆಗೆದುಕೊಳ್ಳಬೇಕು?” ಎಂದು ಹೇಳಿದರು. ಅದಕ್ಕೆ ಅವನು-« ನಾನು ಅದ
ನ್ನು ಮಾಡಲಿಲ್ಲ. ನನ್ನ ಕೈ ಮಾಡಿರುತ್ತದೆ. ಇಂದ್ರನು ಯಾವತ್ತು ಇಂದ್ರಿ
ಯಗಳ ಅಧಿಪತಿಯು ಇರುತ್ತಾನೆ. ಆದುದರಿಂದ ಯಾರಾದರೂ ಗೋಹತ್ಯ
ಮಾಡಿದರೆ ಆ ಅಪರಾಧದ ಹೊಣೆಯು ಇಂದ್ರನದೇ ಇರುತ್ತದೆ. ನನ್ನದೇನೂ
ವಸರ ಯಾಹಿ
ಅಲ್ಲ” ಎಂದು ಅವರಿಗೆ ಉತ್ತರ ಕೊಟ್ಟನು. ಇದನ್ನು ಸ್ವರ್ಗದಲ್ಲಿದ್ದ ಇಂದ್ರ
ನು ಕೇಳಿ ಒಬ್ಬ ಮುದುಕ ಬ್ರಾಹ್ಮಣನ ವೇಷ ಹಾಕಿಕೊಂಡು ಆ ತೋಟದ
ಒಡೆಯನ ಕಡೆಗೆ ಒಂದು ಕೆಳಗೆ ಬರೆದ ಪ್ರಕಾರ ಅವನೊಡನೆ ಸಂಭಾಷಣೆ
ಮಾಡಿದನು:
ಇಂದ್ರ--ಸ್ವಾಮಾ, ಈ ತೋಟವು ಯಾರದು?
ಬ್ರಾಹ್ಮ ಜ--ನನ್ನದು.
ಇಂದ್ರೆ--ಇದು ಎಂಥ ಸುಂದರವಾದ ತೋಟವಿರುತ್ತ ಜಿ! ಇದು
ಇಷ್ಟು ಚಂದವಾಗಿಯೂ ಚಮತ್ವಾರವಾಗಿಯೂ ಇರುವದನ್ನು ನೋಡಿದರೆ
ನಿಮ್ಮ ತೋಟ ಮಾಡುವವನು ಬಹಳ ಕು`ಲನಿರುತ್ತಾನೆಂದು ಕಾಣುತ್ತದೆ.
ಬಾ ತ್ರಿಹ್ಮ ೫-- (ಅನಂದದಿಂದ) ಸ್ವಾಮಿ, ನಾನೇ ಇದನ್ನು ಮಾಡಿರು
ತ್ತೆ ನೆ. ನಾನೇ ನನ್ನ ಮೇಲ್ವಿಚಾರಣೆಯಲ್ಲಿ ನನ್ನ ಆಳುಗಳ ಕೈಯಿಂದ ಈ
ಪ್ರಕಾರ ಗಿಡಗಳನ್ನು ಚಂದದಿಂದ ಹಚ್ಚಿಸಿರುತ್ತೇನೆ.
ಇಂದ್ರ--ಹೀಗೋ? ನೀವು ಒಹಳ ಚತುರರಿರುವಿರಿ. ಈ ತೋಬಕ್ಕೆ
ಹೋಗುವ ದಾರಿಯನ್ನು ಮಾಡಿಸಿದವರಾರು? ಈ ದಾರಿಯನ್ನು ಮಾಡಿಸುವಲ್ಲ
ಸಹ ಬಹಳ ಕಲ್ಪನಾಚಾತುರ್ಯವೂ ಪರಿಶ್ರಮವೂ ಉಪಯೋಗವಾಗಿರುತ್ತವೆ
ಬಾ ತ್ರಹ್ಮಣ--( ಹೆಚ್ಚಿಗೆ ಆನಂದದಿಂದ) ಇದನ್ನೆನ್ಸ ನಾನ: ಮಾಡಿರು
ತ್ತೇನೆ.
ಇಂದ್ರ--ಈ ಎಲ್ಲ ಕೆಲಸಗಳು ನಿಮ್ಮವೇ ಇದ್ದು ಇವಕ್ಕೆಲ್ಲ ನೀವೇ
ಸ್ತುತಿಗೆ ಪಾತ್ರಿರಿರುವಾಗ ಈ ತೋಟದೊಳಗೆ ಆಕಳವನ್ನು ಕೊಂದದ್ದರ
ಹೊಣೆಯನ್ನು ಆ ಬಡ ಇಂದ್ರನ ಮೇಲೆ ಯಾಕೆ ಹಾಕುತ್ತೀರಿ?
ಇದರಿಂದ ಆ ಬ್ರಾಹ್ಮಣನಿಗೆ ತಲೆಹೊಡೆದಂತಾಗಿ ಅವನು ಉತ್ತರ ಕೊ
ಡದೆ ಸುಮ್ಮನಾದನು.
ತಾತ್ಪರ್ಯ.
ಮನುಷ್ಯನು ತನ್ನ ಒಳ್ಳೇ ಕೆಲಸದ ಯಶಸ್ಸನ್ನು ತೆಗೆದು ಕೊಳ್ಳಲಿಕ್ಕೆ
ಆತುರನಿರುತ್ತಿದ್ದು ಕೆಟ್ಟ ಕೆಲಸದ ಹೊಣೆಯನ್ನುಮಾತ್ರ ತಪ್ಪಿಸಿಕೊಳ್ಳು ತ್ತಾನೆ.
ಎ [ಗತಿ ಎ.ಎ
“ ಮಾಡುವವನೂ ಮಾಡಿಸುವವನೂ ಪರಮೇಶ ಶೃರನು” ಎಂಬದನ್ನು ಮರೆಯು
ವದರಿಂದ ಈ ಪ ಪ್ರಕಾರದ ಪ ಪ ತ್ರ ಮಾದವುಂಟಾಗುತ. ಡೆ.
೯. ಅರ್ಜುನನ ಗರ್ವಹರಣವು.
ಒಂದು ಸಾರೆ ಅರ್ಜುನನಿಗೆ ತನ್ನಂತೆ ಶ್ರೀಕೃಷ್ಣನಲ್ಲಿ ಪ್ರೇಮ-ಭಕ್ತಿ-
ವಿಶ್ವಾಸವುಳ್ಳ ವರು ಮತ್ತುಅವನ ಸ್ನೇಹವುಳ್ಳ ವರು ಯಾರೂ ಇಲ್ಲೆಂಬ ಗರ್ವವು
ಬಂದಿತ್ತು. ಆಗ ಆ ಸರ್ವಜ್ಞಾನಿಯಾದ ಪ್ರಭುವು ತನ್ನ ಸ್ನೇಹಿತನ ಗರ್ವವನ್ನು
ತಿಳಿದುಕೊಂಡು ಒಂದು ದಿವಸ ಅವನನ್ನು ತನ್ನೊಡನೆ ಅಡ್ಡಾಡಲಿಕ್ಕೆ ಊರಹೊ
ರಗೆ ಕರೆದುಕೂಂಡು ಹೋದನು. ಅವರಿಬ್ಬರೂ ಇನ್ನೂ ದೂರ ಹೋಗಿದ್ದಿಲ್ಲ.
ಇಷ್ಟರಲ್ಲಿ ಒಬ್ಬ ಬ್ರಾಹ್ಮಣನು ಒಂದು ಕತ್ತಿ ಯನ್ನು ತನ್ನ ನಡದಲ್ಲಿ ರುಳು
ಪಿಸುತ್ತ ಒಣ “ನ್ನು ತಿನ್ನುತ್ತಿರುವದನ್ನು ಅರ್ಜುನನು ಕಂಡನು, ಆಗ
ಅರ್ಜುನನು ತನ್ನ ಮನಸ್ಸಿನೊಳಗೆ... ಇವನು ಆಹಿಂಸೆಯು ತನ್ನ ಶ್ರೇಷ್ಠ
ವಾದ ಕರ್ತವ್ಯವೆಂಬ ವಿಶ್ವಾಸವುಳ್ಳಂಧ ಶ್ರೀವಿಷ್ಣು ಭಕ್ತನೆಂದು ಕಾಣುತ್ತದೆ.
ಆದುದರಿಂದಲೇ ಇವನು ಹುಲ್ಬುಗಳಲ್ಲಿ ಸಹ ಜೀವವಿರುತ್ತ ದೆಂದು ಹಸರು ಹುಲ್ಲ
ನ್ನು ತಿನ್ನುವ ಬದಲಾಗಿ ಒಣಗಿದ ಹುನ್ನು ತಿನ್ನುತ್ತಿದ್ದಾನೆ. ಹೀಗಿದ್ದು ಇಂಥ
ಪಾಪಭೀರು ಬ್ರಾಹ್ಮಣನ ಹತ್ತರ ಈ ಕತ್ತಿಯು ಯಾಕೆ ಶಾ ಎಂ
ದು ಸ್ವಲ್ಪ ಹೊತ್ತು ಬಹಳ ದಿಗಲುಒಡಿದು ನಿಂತನು. ಕಡೆಗೆ ಅವನು ತ್ರಿ
ಷ್ಮನಿಗೆೊ4 ಪ್ರ ಜೋ, ಇದೇನು? ಇದೆಲ್ಲವು ವಿಸಂಗತವಾಗಿ ಕಾಣುತ್ತ ko ಸ
ದು ತೃಣದಂಥ ಸಣ್ಣ ಪ್ರಾಣಿಯನ್ನು ಸಹ ಹಿಂಸೆ ಮಾಡಬಾರದೆಂದು ನಡೆ
ಯುತ್ತಿರುವ ಈ ಧರ್ಮನಿಷ್ಠ ಬ್ರಾಹ್ಮಣನಲ್ಲ ದ್ವೇಷ ಮತ್ತು ಮೃತ್ಯುಗಳ ಚಿಹ್ನ
ವೆಂದೆನಿಸುವ ಕತ್ತಿಯು ಯಾಕೆ ಇರುವದು?” ಎಂದು ಕೇಳಿದನು. ಅದಕ್ಕೆ
ತ್ರೀಕೃಷ್ಣನು- ಅರ್ಜುನಾ, ಇದನ್ನು ಅವನಿಗೆ ನೀನೇ ಕೇಳಿಕೋ ” ಎಂದು
ಹೇಳಿದನು.
ತರುವಾಯ ಅರ್ಜುನನು ಆ ಬ್ರಾಹ್ಮಣನ ಕಡೆಗೆ ಹೋಗಿ-« ಸ್ವಾಮಾ,
ನೀವು ಯಾವ ಜೀವಾತ್ಮಕ್ಕೂ ಹಿಂಸೆ ಮಾಡುವದಿಲ್ಲವಾದ್ದರಿಂದ ಒಣ ಹುಲ್ಲು
3
ಗಿಲಿ
ಭಕ್ಷಣ ಮಾಡುತ್ತೀರಿ. ಹೀಗಿದ್ದು ನೀವು ನಿಮ್ಮ ಹತ್ತ ರಈ ಕತ್ತಿ ಯನ್ನು:
ಯಾಕೆ ಇಟ್ಟಿರುವಿರಿ?” ಎಂದು ಕೇಳಿದನು. ಅದಕ್ಕೆ ಆ ಬ್ರಾಹ್ಮಣನು
ಅರ್ಜುನನ ಮೋರೆಯ ಕಡೆಗೆ ನೋಡಿ-«: ನಾನು ನಾಲ್ಕು ವ್ಯಕ್ತಿಗಳ ಶಾಸನ
ಮಾಡಲಿಕ್ಕೆ ಈ ಕತ್ತಿಯನ್ನು ಯಾವಾಗಲು ನನ್ನ ಹತ್ತರ ಇಟ್ಟುಕೊಂ
ಡಿರುತ್ತೇನೆ” ಎಂದು ಹೇಳಿದನು. ಆಗ ಅರ್ಜುನನು ಅವರು ಯಾರು ಯಾರು?”
ಎಂದು ಕೇಳಿದನು. ಅದಕ್ಕೆ ಆ ಬ್ರಾಹ್ಮಣನು- ಮೊದಲನೆಯವನು ಆ ನೀಚ
ನಾರದನು” ಅಂದನು. ಅದಕ್ಕೆ ಅರ್ಜುನನು- "ಯಾಕೆ? ಅವನೇನು ಮಾಡಿ
ರುತ್ತಾನೆ?” ಎಂದು ಕೇಳಿದನು. 'ಅಗೆ ಬ ಬ್ರಾಹ್ಮಣನು-“ ಅವನು ಬಹಳ ಅಧಿಕ
ಪ್ರಸಂಗಿಯು ಇರುತ್ತಾನೆ. ಅವನು ಯಾವಾಗಲು ಭಜನೆ ಮಾಡುತ್ತ ಭಗವಂ
ತನನ್ನು ಎಚ್ಚರ ಮಾಡುತ್ತಾನೆ ನೆ. ಭಗವಂತನ ಸೌಖ್ಯದ ಕಡೆಗೆ ಅವನಿಗೆ ಎಳ್ಳ
ಪ್ರಾದರೂ ಚಿಂತೆಯು ಇಲ್ಲ! ಅವನು ಯೋಗ್ಯಾಯೋಗ್ಯ ವೇಳೆಯನ್ನು ನೆ ಸೇ
ಡದೆ ಹಗಲಿರುಳು ತನ್ನ ಸ್ಮುತಿಸ್ತೋತ್ರಗಳಿಂದ ಭಗವಂತನ ಶಾಂತತೆಯನ್ನು
ಭಂಗಪಡಿಸುತ್ತಾನೆ” ಅಂದನು. « ಹಾಗಾದರೆ ಎರಡನೆಯವನು ಯಾರು?”
ಎಂದು ಅರ್ಜುನನು ಕೇಳಿದನು. ಅದಕ್ಕೆ ಅ ಬ್ರಾ ಹ್ಮಣನು--"« ಅವಿವೇಕಿಯಾದ
ದ್ರೌಪದಿಯು? ಅಂದನು. “ ಆಕೆಯ ಅಪರಾಧವೇನು? ಎಂದು ಅರ್ಜುನನು
ಕೇಳಿದನು. ಆಗ ಆ ಬ್ರಾಹ್ಮಣನು -« ಆಕೆಯ ಅಪರಾಧವೆಷ್ಟೆಂದು ಹೇಳಲಿ!
ಪಾಂಡವರನ್ನು ದುರ್ವಾಸ ಖಷಿಯ ಶಾಪದಿಂದ ತಪ್ಪಿಸುವಗೋಸ್ಕರ ಭಗವಂ
ತನಿಗೆ ಆತನು ಊಟಕ್ಕೆ ಕುಳಿತುಕೊಳ ಸೈವ ಸಮಯದಲ್ಲಿ ಅತನು ಊಟಮಾಡು
ದನ್ನು ಸಹ ಬಿಡಿಸಿ ಕಾಮ್ಯಕವನಕ್ಕೆ ಕರೆಯಿಸಿಕೊಂಡು ಸೊಕ್ಕಿನಿಂದ ತನ್ನ ಮು
ಸರಿಯ ಪಾತ್ರೆಗೆ ಅಂಟಿಕೊಂಡಿದ್ದ ಒಂದು ಪಲ್ಲೆಯ ಚೂರನ್ನುಮಾತ್ರ ಆತನಿಗೆ
ತಿನ್ನಲಿಕ್ಕೆ ಕೊಟ್ಟಳು” ಅಂದನು. «« ಹಾಗಾದರೆ ಮೂರನೆಯವನು ಯಾರು?”
ಎಂದು ಅರ್ಜುನನು ಕೇಳಿದನು. ಅದಕ್ಕೆ ಆಬಾ ್ರಹ್ಮಣನು-« ಆ ನಿರ್ದಯಿ
ದ ಪ್ರಹ್ಲಾದನು” ಅಂದನು. « ಅದು ಹೇಗೆ?” ಎಂದು ಅರ್ಜುನನು ಕೇ
ಲು, ಬ್ರಾಹ್ಮಣನು-« ಅವನು ಭಗವಂತನಿಗೆ ಎಣ್ಣಿ ಕಾಸಿದ ಕಡಾಯಿಯಲ್ಲಿ
ಬೀಳಲಿಕ್ಕೂ, ಆನೆಯ ಕಾಲಿನಿಂದ ತುಳಿಸಿಕೊಳ ೈಲಿಕ್ಕೂ, ಉಕ್ಕಿನ ಬಿರುಸು ಕಂ
ಬದಿಂದ ಹೊರಬೀಳಲಿಕ್ಟೂ ಸ ಹಚ್ಚಿದನು” ಎಂದು ಉತ್ತರ ಕೊಟ್ಟನು. «ಹಾ
ಎ. ಗ೯ ಎಪಿ
ಗಾದಕೆ ಇನ್ನು ನಾಲ್ಕನೆಯವನು ಯಾರು?” ಎಂದು ಅರ್ಜುನನು ಕೇಳಿದನು.
ಅದಕ್ಕೆ ಆ ಬ್ರಾಹ್ನ ್ಮಣನು-.« ದರಿದ್ರನಾದ ಅರ್ಜುನನು?” ಎಂದು ಹೇಳಿದನು.
ಆಗ EE ಅವನು ಏನು ಸ ಮಾಡಿರುತ್ತಾನೆ?” ಎಂದು ಆಶ್ಚ
ರ್ಯದಿಂದ ಕೇಳಿದನು. ಅದಕ್ಕೆ ಆಬಾ ಬ್ರಾ ಹ್ಮಣನು- ಅವನ ನಾಚಿಕೆಗೇಡಿತನ
ವನ್ನು ನೋಡು! ಅವನು ಕುರುಕ್ಷೇತ್ರ ದ ಯುದ್ಧದಲ್ಲಿ ನನ್ನ ಪ್ರಿಯಕರನಾದ
ಭಗವಂತನಿಗೆ ತನ್ನ ಸಾರಥಿಯ ಕೆಲಸವನ್ನು ಮಾಡಲಿಕ್ಕೆ ಹಚ್ಚಿದನು” ಅಂದನು,
ಇದನ್ನು ಕೇಳಿ ಅರ್ಜುನನಿಗೆ ಆ ಬ್ರಾಹ್ಮಣನ ಭಕ್ತಿಯ ಬಗ್ಗೆ ಬಹಳ ಆಶ್ಚರ್ಯ
ವೆನಿಸಿತು. ಆಗಿನಿಂದ ಅವನು ತಾನು ಭಗವಂತನಿಗೆ ಹೆಚ್ಚು ಪ್ರಿಯಕರನೆಂಬ
ಗರ್ವವನ್ನು ಬಿಟ್ಟುಕೊಟ್ಟನು.
ತಾತ್ಪರ್ಯ.
ಯಾರೂ ಯಾವ ವಿಷಯದಲ್ಲಿಯೂ ಗರ್ವವನ್ನು ಮಾಡಬಾರದು. ಒಳ್ಳೇ
ಕೆಲಸದಲ್ಲಿ ಗರ್ವವನ್ನು ಮಾಡಿದರೆ ಆ ಗರ್ವಕ್ಕೆ ಅಭಿಮಾನವೆನ್ನು ತ್ತಾ ರೆ.
ಆದರೂ ಅದು ಸಹ ನಿಂದ್ಯವಿರುತ್ತದೆ. ಅಹಂಕಾರವನ್ನು ಬಿಟ್ಟು ಕಿಂಕರನಾಗಿ
ನಡೆಯುವವನು ಯಾವಾಗಲು ಶ್ರೇಯಸ್ಸನ್ನೂ ಪರಮೇಶ್ವರನ ಅನುಗ್ರಹವ
ನ್ನೂ ಪಡೆಯುವನು.
೧೦. ಶ್ರೀರಾಮಚಂದ್ರನ ವೈರಾಗ್ಯವು.
ದಾಶರಥೀ ರಾಮಚಂದ್ರನು ನು ತನ್ನ ಗುರುಗಳ ಬಳಿಯಲ್ಲಿ ವಿದ್ಯಾಭ್ಯಾಸ
ವನ್ನು ಮುಗಿಸಿ ಜ್ಞಾನಸಂಪನ್ನ ಡೆ ತರುವಾಯ ಸಂಸಾರತ್ಯಾಗವನ್ನು ಮಾಡ
ಜಟ ನಿಶ್ವ ಮಡಿದ ಆಗ ಅವನ ತಂದೆಯಾದ ದಶರಥರಾಜನು
ತನ್ನ ಕುಲಗುರುಗಳಾದ ವಸಿಸ್ಮ ಯಸಿಗಳನ್ನು ಕರೆಯಿಸಿ ಅವರಿಗೆ“ ತಾವು
ರಾಮಚಂದ್ರನಿಗೆ ನಾಲ್ಕು ಉಪದೇಶದ ಮಾತುಗಳನ್ನು ಹೇಳಿ ಅವನ ವೈರಾಗ್ಯ
ವೃತ್ತಿಯನ್ನು ಬಿಡಿಸಬೇಕು” ಎಂದು ವಿನಂತಿ ಮಾಡಿಕೊಂಡನು. ಆ ಪ್ರಕಾರ
ವಸಿಷ್ಠ ಗುರುಗಳು ರಾಮಚಂದೃನ ಬಳಿಗೆ ಹೋಗಿ ರಾಮಚಂದ್ರನಲ್ಲಿ ತೀವ್ರ
ವಾದ ವೈರಾಗ್ಯವು ಹುಟ್ಟಿದ್ದನ್ನು ಅವಲೋಕಿಸಿದರು. ಆ ಮೇಲೆ ಅವರು ಆ
೨. 9೦ __
ವನಿಗೆ-« ರಾಮಭದ್ರಾ, ನೀನು ಮನೆಯನ್ನು ಬಿಟ್ಟು ಹೋಗಬೇಕೆಂದು ನಿಶ್ಚ
ಯಿಸಿರುವದಾಗಿ ಕೇಳುತ್ತೇನೆ. ಇದು ನಿಜವಿದ್ದಲ್ಲಿ ನಾನು ನಿನಗೆ ಒಂದು ಪ್ರ
ಶ್ನೆಯನ್ನು ಕೇಳುತ್ತೇನೆ. ಅದಕ್ಕೆ ನೀನು ಮುಂಚೆ ಉತ್ತರಕೊಟ್ಟು ನನ್ನನ್ನು
ಸಮಾಧಾನ ಮಾಡು. ಅದೇನಂದರೆ: -- ಸಂಸಾರವು ಈಶ್ವರನನ್ನು ಬಿಟ್ಟು ಬೇರೆ
ಇರುತ್ತದೆಯೋ ಹೇಗೆ? ಒಂದು ವೇಳೆ ಸಂಸಾರವು ಈಶ್ವರನನ್ನು ಬಿಬ್ಬಿರುತ್ತಿ
ದ್ದರೆ ನೀನು ವೈರಾಗ್ಯವನ್ನು ಸ್ಪೀಕರಿಸಿ ನಿನ್ನ ಮನಸ್ಸಿಗೆ ಬಂದಲ್ಲಿ ಹೋಗ
ಲಿಕ್ಕೆ ಅಡ್ಡಿಯಿಲ್ಲ” ಎಂದು ಹೇಳಿದರು. ಈ ಪ್ರಕಾರ ವಸಿಷ್ಟರು ಹೇಳಿದ್ದನ್ನು
ಶ್ರೀರಾಮಚಂದ್ರನು ಚನ್ನಾಗಿ ವಿಚಾರ ಮಾಡಿ, ದೇವರು ಸಂಸಾರದಲ್ಲಿ ವ್ಯ
ಕ್ರನು ಆತ್ಮದಲ್ಲಿ ಅವ್ಯುಕ್ತನು ಇರುತ್ತಾನೆಂತಲೂ, ಅವನಲ್ಲಿಯೇ ಯಾವತ್ತು
ಸ್ಕಾವರ ಜಂಗಮ ಸೃಷ್ಟಿಯು ಮತ್ತು ಎಂಬತ್ತು ಲಕ್ಷ ಪ್ರಾಣಿಕೋಟಯು
ಐಕ್ಯವಾಗಿರುತ್ತವೆಂಶಲೂ ತಿಳಿದುಕೊಂಡು ವೈರಾಗ್ಯವನ್ನು ಸ್ವೀಕರಿಸುವ ವಿ
ಚಾರವನ್ನು ಬಿಟ್ಟು ಕೊಟ್ಟನು.
ತಾತ್ಪರ್ಯ.
ಈಶ್ವರನು ಯಾವತ್ತು ಕಡೆಗೆ ವ್ಯಾಪಿಸಿರುತ್ತಾನೆ. ಆತನು ಯಾವತ್ತು
ಪ್ರಾಣಿಮಾತ್ರರಲ್ಲಿ ಇರುತ್ತಾನೆ ಅದುದರಿಂದ ಅವನ ಪ್ರಾಪ್ತಿಯ ಸಲುವಾಗಿ
ಸಂಸಾರವನ್ನು ಬಿಡಬೇಕೆಂದು ಯಾರೂ ತಿಳಿದುಕೊಳ್ಳ ಬಾರದು. ನಾವು ಅರ
ಣ್ಯುಕ್ಕೆ ಹೋಗಲಿ, ಸಂಸಾರದಲ್ಲಿಯೇ ಇರಲಿ, ಈಶ್ವರನ ಬಗ್ಗೆ ಭಕ್ತಿಯನ್ನು
ಇಟ್ಟೆ ಅವನ ಪ್ರಾಪ್ತಿಯು ನಮಗೆ ಆಗುವದೆಂಬದರಲ್ಲಿ ಏನೂ ಸಂಶಯವಿಲ್ಲ.
೧೧. ಜನಕರಾಜನ ಜೀವನ್ಮುಕ್ತಿಯು.
ಒಂದು ಸಾಕೆ ಕೆಲವು ಬ್ರಹ್ಮೋಸಮಾಜದ ಹುಡುಗರು ಭಗವಾನ್
ರಾಮಕೃಷ್ಣ ಪರಮಹಂಸರ ಮುಂದೆ ತಾವು ಜನಕರಾಜನ ಉದಾಹರಣೆಯನ್ನು
ಅನುಕರಣ ಮಾಡಿ ಈ ಜಗತ್ತಿನಲ್ಲಿ ಯಾವದಕ್ಕೂ ಆಸಕ್ತಿಯನ್ನು ತಾಳದೆ ಇ
ರುತ್ತೇವೆಂದು ಹೇಳಿದರು. ಅಗ ಭಗವಾನರು ಅವರಿಗೆ-« ಬಾಯಿಂದ ಹೇಳು
೨... ಠಗಿ
ವದು ಸುಲಭವು. ಅದರೆ ಜನಕರಾಜನಂತೆ ನಡೆಯುವದು ಬಹಳ ಕಠಿಣವಿರು
ತ್ತದೆ. ಸಂಸಾರದಲ್ಲಿ ಶುದ್ಧ ಮನಸ್ಸಿನಿಂದಲೂ ನಿಷ್ಪಾಪದಿಂದಲೂ ಇರಬೇಕಾ
ದರೆ ಜನಕರಾಜನು ಮೊದಲಿಗೆ ಎಂಥ ಉಗ್ರವಾದ ತಪಶ್ಚರ್ಯವನ್ನು ಮಾಡಿ
ದನು? ಆದರೆ ನಿಮಗೆ ಇಂಧ ಕಷ್ಟಗಳನ್ನು ಅನುಭೋಗಿಸಲಿಕ್ಕೆ ನಾನು ಹೇಳು
ವದಿಲ್ಲ. ನೀವು ಈಶ್ವರಭಕ್ತಿಯನ್ನು ಮಾಡುತ್ತ ಯಾವದಾದರೂ ಶಾಂತವಾದ
ಸ್ಥಳದಲ್ಲಿ ಕೆಲವು ಕಾಲ ಇರಬೇಕು. ನಿಮಗೆ ಜ್ಞಾನ ಮತ್ತು ಭಕ್ತಿಗಳು ಲಭ್ಯ
ವಾದ ಮೇಲೆ ಸಂಸಾರವನ್ನು ಸೇರಿರಿ. ಹಾಲನ್ನು ತಣ್ಣಗೆ ಇಟ್ಚಬಳಿಕ ಅದ
ರಿಂದ ಉತ್ತಮವಾದ ಮೊಸರು ಸಿದ್ದವಾಗುತ್ತದೆ. ಹಾಲನ್ನು ಅಲ್ಲಾಡಿಸಿದರೆ
ಅಥವಾ ಅದನ್ನು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರುವಿದರೆ
ಮೊಸರು ಕೆಡುತ್ತದೆ. ಜನಕರಾಜನು ಸಂಸಾರಬಂಧನದಿಂದ ಮುಕ್ತನಿದ್ದ ಕಾ
ರಣ ಅವನಿಗೆ « ವಿದೇಹಿ ” ಅಂದರೆ «« ದೇಹವಿಲ್ಲದವನು” ಎಂದು ಅನ್ನುತ್ತಾ
ರೆ. ಅವನ ದೇಹವು ಬೇವಂತವಿದ್ದರೂ ಅವನು ಆದರ ತಾಪಗಳಿಂದ ಮುಕ್ತ
ನಿದ್ದ ಕಾರಣ ಅವರಿಗೆ ಬೇವನ್ನು ನೆಂಬ ಹೆಸರು ಒಂದಿರುತ್ತದೆ. ದೇಹ
ವು ಇರುತ್ತದೆಂಬ ಭಾವನೆಯನ್ನು ಮನಸ್ಸಿನೊಳಗಿಂದ ತೆಗೆದುಹಾಕುವದು ಅ
ತ್ಯುಂತ ಕಠಿಣವಿರುತ್ತದೆ. ನಿಶ್ಚಯವಾಗಿ ಜನಕರಾಜನು ದೊಡ್ಡ ವೀರನಿದ್ದನು-
ಅವನು ಜ್ಞಾನ ಮತ್ತು ಕರ್ಮ ಎಂಬ ಎರಡು ಶಸ್ತ್ರಗಳನ್ನು ಬಹಳ ಸುಲಭವಾಗಿ
ರುಳುಪಿಸುತ್ತಿ ದ್ದನು.
ತಾತ್ಪರ್ಯ.
ಅಜ್ಞಾನ ಜನರು ಯೋಗ್ಯತೆಯಿಲ್ಲದೆ ದೊಡ್ಡವರ ಸಾಮ್ಯತೆಯನ್ನು
ಹೇಳಿಕೊಂಡರೆ ಅವರ ಮೂಢತನವನ್ನು ಕಂಡು ವಿವೇಕಿಗಳು ನಗುತ್ತಾ ಶೆ
- ಆದುದರಿಂದ ಸಣ್ಣವರು ಸಣ್ಣವರ ಸಾಮ್ಯುತೆಯನ್ನು ಕೊಟ್ಟುಕೊಳ್ಳಬೇಕಲ್ಲದೆ
ದೊಡ್ಡವರ ಸಾಮ್ಯತೆಯನ್ನು ಹೇಳಿಕೊಂಡು ಅತ್ಮಪೌರುಷ ಮಾಡಿಕೊಳ್ಳು
ವದು ಸರಿಯಲ್ಲ. ಕಪ್ಪೆಯು ಎಷ್ಟು ದೊಡ್ಡದಾದರೂ ಅನೆಯಾಗಲಾರದು.
ಕಪ್ಪೆಯು ತಾನು ಅನೆಯಾಗಬೇಕೆಂದು ಹೊಟ್ಟೆಯನ್ನು ಉಬ್ಬಿಸಿದರೆ ಅದರ ಹೊ
ಟ್ಟೈಯು ಹರಿದು ಅದು ಜೀವಕ್ಕೆ ಮಾತ್ರ ಎರವಾಗುವದು. ದೊಡ್ಡವರ ಸಾಮ
ತೆಯನ್ನು ಕೊಟ್ಟುಕೊಂಡು ತಾವು ದೊಡ್ಡವರಂತೆ ನಡೆಯುತ್ತೇಪೆಂದು ಹೇಳಿ
ಎ. ಶಶಿ ಇ.
ಕೊಂಡ ಮಾತ್ರದಿಂದ ಅಂಥವರಿಗೆ ಯಾರೂ ದೊಡ್ಡಸ್ತಿಕೆಯನ್ನು ಕೊಡುವದಿಲ್ಲ.
ಇದರಿಂದ ಅವರಲ್ಲಿ ಇದ್ದ ಯೋಗ್ಯತೆಯು ಸಹ ಕಡಿಮೆಯಾಗಿ ಜನರು ಅವ
ರಿಗೆ « ಡಾಂಭಿಕರು, ಜೊಳ್ಳು ಕೊಚ್ಚುವವರು? ಎಂದು ಅವರ ಮಾತಿನ ಕಡೆಗೆ
ಎಂದೂ ಲಕ್ಷ್ಯ ಕೊಡುವದಿಲ್ಲ.
ಈಗಿನ ನಿದ್ಯಾನಂತನ ಪ್ರಪಂಚದ
ರೀತಿಯು.
ಈಗಿನ ವಿದ್ಯಾವಂತನು ತಾನು ಗೃ ಹಸ್ಕಾಶ್ರಮಿ ಇದ್ದ ರೂಪ ಪ್ರ ಪಂಚದ
ತೊಂದರೆಯನ್ನು ಹಚ್ಚಿ ಕೊಳ ೈದೆ ಪವಿತ್ರನಿಶತ್ತಿ Jon ಮ ಅಗ್ಗಳಿಕೆ
ಯ ಮಾತನ್ನು ನುಡಿಯುತ್ತಾನೆ. ಆದರೆ ಈ ಸುಶಿಕ್ಷಿತ ಗೃಹಸ್ಥಾಶ್ರಮಿಯು ಹೇಗೆ
ನಡೆಯುತ್ತಾ ನೆಂಬುವದನ್ನು ನೋಡಿದರೆ ಯಾರಿಗೂ ಆಶ್ಚರ್ಯವಾಗದೆ ಇಂಲಾ
ರದು. ಅವನ ಮನೆಗೆ ಯಾವನಾದರೊಬ್ಬ ಬಡ ಬ್ರಾ ್ರಾಹ್ಮಣನು ಯಾಚನೆಯ
ಸಲುವಾಗಿ ಬಂದ ಕೂಡಲೆ ಅವನು ತನ್ನ ಯಾವತ್ತು ದುಡ್ಡಿನ ವೃವಹಾರವನ್ನು
ತನ್ನ ಹೆಂಡತಿಯ ಕಡೆಗೆ ಒಪ್ಪಿ ಸವ ಕಾರಣ ಬಹಳ ಆಢೃತೆಯಿಂದ ಅವ
ನಿಗೆ. ಸ್ವಾಮಾ ನಾನು el ಹಣವನ್ನು ಕೈಯಿಂದ ಸಹ ಮುಟ್ಟುವ
ದಿಲ್ಲ. ನೀವು ಸುಮ್ಮನೆ ನನ್ನ ಬಳಿಯಲ್ಲಿ ಯಾಕೆ ವೇಳೆಯನ್ನು ಕಳೆಯುತ್ತೀರಿ ಸ
ಎಂದು ಅನ್ನುತ್ತಾನೆ. ಆದರೆ ಆ ಭಿಕ್ಷುಕನು ಅದನ್ನು ಕೇಳದೆ ಹಟಹಿಡಿದು
ಕುಳಿತ ತರುವಾಯ ಈ ಸದ್ರ ಸ್ಲೋ ಹಸ್ಕೃನು-* ಏನು ಳೂ ಈ ಹಟಮಾರಿ
ಯು ನನ್ನನ್ನು ಬಿಟ್ಟುಹೋಗದದ್ದ ಇವನಿಗೆ ಹೇಗೂ ಒಂದು ರೂಪಾಯಿ '
ಒಗೆಯಬೇಕು ಎಂದು ತನ್ನ ಮನಸ್ಸಿನೊಳಗೆ ವಿಚಾರ ಮಾಡಿ ಅವನಿಗೆ-
« ಒಳ್ಳೆ ಕೇದು. ಈಗ ಹೋಗಿ ನಾಳೆ ಬನ್ನಿರಿ. ನಿಮ್ಮ ಸಲುವಾಗಿ ಏನಾದರೂ
ವ್ಯವಸ್ಥೆಯನ್ನು ಮಾಡಿಸುತ್ತೇನೆ” ಎಂದು ಅವನನ್ನು ಕಳುಹಿಸುವನು ಮಾರ
ನೇ ದಿವಸ ಆ ಯಾಚಕನು ತಿರುಗಿ ಬಂದ ಕೂಡಲೆ ವಿದ್ಯಾವಂತ ಗೃಹಸ್ಥಾ
ಶ್ರಮಿಯು ಒಳಗೆ ತನ್ನ ಹೆಂಡತಿಯ ಕಡೆಗೆ ಹೋಗಿ-« ಪ್ರಿಯಳೇ, ನನ್ನ
೨ ್ರಿಷ ಲ್ಲ
ಕಡೆಗೆ ಒಬ್ಬ ಬಡ ಯಾಚಕನು ಬಂದಿರುತ್ತಾನೆ. ಅವನಿಗೆ ಒಂದು ರೂಪಾಯಿ
ಕೊಟ್ಟು ಬಡು” ಎಂದು ಹೇಳುವನು. " ರೂಪಾಯಿ? ಎಂಬ ಶಬ್ದವು ಅವನ
ಹೆಂಡತಿಯ ಕಿವಿಗೆ ಬಿದ್ದ ಕೂಡಲೆ ಅವಳು ಬಹಳ ಸಿಟ್ಟಿಗೆದ್ದು-'" ಅಹಹಾ,
ನೀವು ಎಂಥ ಉದಾರರು! ರೂಪಾಯಿಗಳು ದಾರಿಯ ಮೇಲೆ ಬಿದ್ದಿ ರುತ್ತವೋ?
ಅವುಗಳನ್ನು ದೊರಕಿಸಲಿಕ್ಕೆ ಕಣ್ಣೀರು ಕಪಾಳಕ್ಕೆ ಬರುತ್ತವೆ!” ಎಂದು ಉ
ತ್ತರ ಕೊಡುವಳು. ಆಗ ಅವನು ಆಕೆಗೆ ಸ್ವಲ್ಪ ವಿನಯದಿಂದ-"" ಪ್ರಿಯೇ,
ಹಾಗಲ್ಲ. ನನ್ನ ಕಡೆಗೆ ಬಂದಿರುವ ಯಾಚಕನು ಸತ್ಪಾತ್ರನಿರುತ್ತಾನೆ. ಅವನಿಗೆ
ಒಂದು ರೂಪಾಯಿಗಿಂತ ಕಡಿಮೆ ಕೊಡುವದು ಯೋಗ್ಯವಲ್ಲ” ಎಂದು ಹೇಳು
ವನು. ಅದಕ್ಕೆ ಆವಳು-"" ಛೇ! ಇಷ್ಟೊಂದು ಕೊಡಲಿಕ್ಕೆ ಆಗುವದಿಲ್ಲ. ಇಲ್ಲಿ
ಒಂದು ಎರಡಾಣೆಯ ನಾಣ್ಯವು ಇರುತ್ತದೆ. ಬೇಕಾದರೆ ಅದನ್ನುತೆಗೆದುಕೊಂಡು
ಹೋಗಿ ಅವನಿಗೆ ಕೊಡಿರಿ” ಎಂದು ಹೇಳುವಳು. ಆ ಪ್ರಕಾರ ಅವನು ಎರಡನೇ
ದಿವಸ ತನ್ನ ಕಡೆಗೆ ಯಾಚಕನು ಒಂದ ಕೂಡಲೆ ಅವನ ಕೈಯಲ್ಲಿ ಈ ಎರಡು
ಆಣೆಯನ್ನು ಒಯ್ದು ಕೊಡುವನು. ಈ ಪ್ರಕಾರ ಆಧುನಿಕ ಸುಶಿಕ್ಷಿತನು ತನ್ನ
ಮನೆಯ ವ್ಯವಸ್ಥೆಯನ್ನು ತಾನು ನೋಡದೆ ಶನ್ನ ಹೆಂಡತಿಯ ಕೈಯಲ್ಲಿ ಎಲ್ಲ
ಕಾರಭಾರವನ್ನು ಒಪ್ಪಿಸಿ ಅವಳ ತಂತ್ರದಿಂದ ನಡೆಯುತ್ತಾನೆ. ಇದು ಒಂದು
ತರದ ಪರವಶತೆಯೇ ಇರುತ್ತದೆ.
ತಾತ್ಪರ್ಯ.
ತಮ್ಮ ಪ್ರಪಂಚದ ಕೆಲಸಗಳನ್ನು ತಾವೇ ಮಾಡದಿರುವ ಮನುಷ್ಯರು
ನಿಜವಾಗಿ ಎರಡನೆಯವರ ಆಳುಗಳಾಗಿ ನಡೆಯಬೇಕಾಗುತ್ತದೆ. ತಮ್ಮ ಸ್ವತಂ
ತ್ರತೆಯನ್ನೂ, ಅಧಿಕಾರವನ್ನೂ ಎರಡನೇಯವರಿಗೆ ಒಪ್ಪಿಸಿ ಬಿಡುವದರಿಂದ
ತಾವು ಒಳ್ಳೆ ಕೈಯವರೆಂತಲೂ ಪವಿತ್ರರೆಂತಲೂ ತಿಳಿದುಕೊಳ್ಳು ವದು ತೀರ ತಪ್ಪು.
ಸತ್ಯರ್ಮಗಳನ್ನು ಸಹ ಮಾಡಲಿಕ್ಕೆ ಸ್ವಾತಂತ್ರ್ಯವಿಲ್ಲದ ಗಂಡಸರು ಸರ್ವಸಾ
ಧಾರಣ ಮನುಷ್ಯರಿಗಿಂತ ಹೀನರೇ ಸರಿ.
ಎ. ೨೪ ಎ
೧೩. ವೈರಾಗ್ಯ ಪ್ರಾಪ್ತಿಯು.
ಒಬ್ಬ ಬ್ರಾಹ್ಮಣನಿಗೆ ಒಬ್ಬ ಸನ್ಯಾಸಿಯ ಸಂದರ್ಶನವಾಗಲು ಅವರವ
ರೊಳೆಗೆ ಬಹಳ ಹೊತ್ತಿನ ತನಕ ಧರ್ಮಸಂಬಂಧವಾಗಿ ಮಾತುಕಥೆಗಳು ನಡೆದ
ವು. ಆಗ ಸನ್ಯಾಸಿಯು ಅ ಬ್ರಾಹ್ಮಣನಿಗೆ... ಮಗನೇ, ಈ ಜಗತ್ತಿನಲ್ಲಿ ಯಾರ
ನ್ನೂ ನಂಬಿ ನಡೆಯಬಾರದು. ನಿನ್ನವರು ಯಾರು ಇದ್ದಾರೆಂದು ನಂಬಿರುವಿ
ಯೋ ಅವರು ನಿಜವಾಗಿ ನಿನ್ನವರಲ್ಲ” ಎಂದು ಹೇಳಿದನು. ಈ ಮಾತಿನಲ್ಲಿ ಆ
ಬ್ರಾಹ್ಮಣನಿಗೆ ನಂಬಿಗೆಯು ಹುಟ್ಟಲಿಲ್ಲ. ಅದುದರಿಂದ ಅವನು-*ನಾನು ರಾತ್ರಿ
ಹಗಲು ನನ್ನ ಕುಟುಂಬದವರ ಹಿತದ ಸಲುವಾಗಿ ದುಡಿಯುತ್ತಿರಲು ಅವರು
ನನ್ನವರಲ್ಲವೆಂದೂ, ಅವರು ನನಗೆ ಆಪತ್ತಿನ ಸಮಯದಲ್ಲಿ ಉಪಯೋಗ ಬೀಳು
ವದಿಲ್ಲವೆಂದೂ ನಾನು ಹೇಗೆ ನಂಬಲಿ?” ಎಂದು ತನ್ನ ಮನಸ್ಸಿನೊಳಗೆ
ವಿಚಾರಮಾಡಿ ಅ ಸಾಧುವಿಗೆ-« ಸ್ವಾವಿಖ, ನನಗೆ ಕಿಂಚಿತ್ತು ತಲೆನೋವು
ಎದ್ದರೆ ಸಾಕು. ನನ್ನ ತಾಯಿಯು ನನ್ನ ವಿಷಯದಲ್ಲಿ ಬಹಳ ಚಿಂತೆ ಮಾಡುತ್ತಾ
ಳೆ. ಹಾಗೂ ನನಗೆ ಗುಣವಾಗುವ ಸಲುವಾಗಿ ತನ್ನ ಜೀವವನ್ನು ಸಹ ಕೊಡ
ಅಕ್ಕೆ ಸಿದ್ಧಳಿರುತ್ತಾಳೆ. ಇಂಥ ನನ್ನ ಪ್ರೀತಿಯ ತಾಯಿಯು ನನ್ನವಳಲ್ಲವೆಂದು
ನಾನು ಹೇಗೆ ತಿಳಿದುಕೊಳ್ಳಲಿ?” ಎಂದು ಹೇಳಿದನು. ಇದನ್ನು ಕೇಳಿ ಆ ಸಾಧುವು
ಅವನಿಗೆ-"- ನೀನು ಹೇಳುವದು ನಿಜವಿರುವ ಪಕ್ಸುದಲ್ಲಿ ನಿನ್ನ ಕುಟುಂಬದ ಎಲ್ಲ
ಜನರನ್ನು ನಿನ್ನ ವರೆಂದು ತಿಳಿಯಲಿಕ್ಕೆ ಅಡ್ಡಿಯಿಲ್ಲ. ಆದರೆ ನಿಜವಾಗಿ ನಿನ್ನ
ತಿಳುವಳಿಕೆಯು ತಪ್ಪು ಇರುತ್ತದೆ. ನಿನ್ನ ತಾಯಿ, ತಂದೆ, ಹೆಂಡತಿ, ಮಕ್ಕಳು ನಿನ್ನ
ಗೋಸ್ಕರ ತಮ್ಮ ಜೀವವನ್ನು ಕೊಡುತ್ತ ೨ರೆಂದು ಸರ್ವಥಾ ನಂಬಬೇಡ. ಬೇ
ಕಾದರೆ ನಾನು ಹೇಳುವ ಮಾತನ್ನು ನೀನು ಚನ್ನಾಗಿ ಪರೀಕ್ಷೆ ಮಾಡು. ನೀನು
ಇಂದು ಮನೆಗೆ ಹೋದಬಳಿಕ ನಿನಗೆ ಏನಾದರೊಂದು ಅತ್ಯಂತ ಶೆಟ್ಟ ಬೇನೆ
ಯು ಬಂದಿರುತ್ತದೆಂದು ಎಡ್ಡು ತೆಗೆದು ಬಹಳ ನರಳುತ್ತ ಮಲಗಿಕೋ. ನಾನು
ನಿನ್ನಲ್ಲಿಗೆ ಬಂದು ಸ್ವಲ್ಪ ಚಮತ್ಕಾರವನ್ನು ಮಾಡುತ್ತೇನೆ” ಎಂದು ಹೇಳಿ
ದನು.
ಇದನ್ನು ಕೇಳಿಕೊಂಡು ಆ ಬ್ರಾಹ್ಮಣನು ತನ್ನ ಮನೆಗೆ ಹೋಗಿ ತನಗೆ
ಒಂದು ದೊಡ್ಡ ಬೇನೆಯು ಬಂದಿದ್ದು ತನ್ನ ಜೀವಕ್ಕೆ ಬಹಳ -ಕಸವಿಸಿಯಾಗು
. ೨೫ ೨೨
ತ್ತದೆಂದು ಎಡ್ಡು ತೆಗೆದು ಹಾಸಿಗೆಯ ಮೇಲೆ ಮಲಗಿಬಿಟ್ಟನು. ಇದರಿಂದ
ಅವನ ಮನೆಯವರು ಎಷ್ಟು ಮಂದಿ ವೈದ್ಯರನ್ನು ಕರೆಯಿಸಿದರೂ ಅವನಿಗೆ
ಏನೂ ಗುಣವಾಗಲಿಲ್ಲ. ಆಗ ಅವನ ತಾಯಿ, ಹೆಂಡತಿ ಮೊದಲಾದವರು
ಅವನ ಹತ್ತರ ಕೂತು ಗೊಳೋ ಎಂದು ಅಳಲಿಕ್ಕೆ ಹತ್ತಿದರು. ಅಷ್ಟರಲ್ಲಿ
ಆ ಸನ್ಯಾಸಿಯು ಅಲ್ಲಿಗೆ ಬಂದು ಅವನ ಬೇನೆಯನ್ನು ಪರೀಕ್ಷಿಸಿದಂತೆ ಮಾಡಿ.
« ಈ ಬೇನೆಯು ಬಹಳ ಭಖಯಂಕರವಿರುತ್ಮದೆ. ಈ ರೋಗಿಯ ಸಲುವಾಗಿ
ಯಾರಾದರೊಬ್ಬರು ತಮ್ಮ ಜೀವವನ್ನು ಕೊಟ್ಟ ಹೊರತಾಗಿ ಇವನು ನೆಟ್ಟ
ಗಾಗುವ ಆಶೆಯು ಇಲ್ಲ” ಎಂದು ಹೇಳಿದನು. ಇದನ್ನು ಕೇಳಿ ಅವರೆಲ್ಲರು
ಗಾಬರಿಯಾದರು. ಯಾರೂ ತಮ್ಮ ಜೀವ ಕೊಡುತ್ತೇವೆಂದು ಉತ್ತರ ಕೊಡ
ಲಿಲ್ಲ. ಆಗ ಆ ಸನ್ಮಾಸಿಯು ಆ ಬ್ರಾಹ್ಮಣನ ತಾಯಿಗೆ ೬ ಅಮ್ಮಾ, ನಿನ್ನ
ಯಾವತ್ತು ಕುಟುಂಬದ ಹೊಟ್ಟಿಗೆ ತಂದು ಹಾಕುವ ನಿನ್ನ ಹರೆಯದ ಮಗನು
ಈ ನಿನ್ನ ಮುಪ್ಪಿನ ಕಾಲದಲ್ಲಿ ಸತ್ತರೆ ನಿನ್ನ ಜೀವವಿರುವಾಗಲೇ ನಿನಗೆ ಸಾವ್ರ
ಬಂದಂತಾಗುವದು. ಆದುದರಿಂದ ಈಗ ನೀನು ನಿನ್ನ ಜೀವವನ್ನು ನಿನ್ನ ಮಗನ
ಬದಲಾಗಿ ಕೊಟ್ಟರೆ ನಾನು ಅವನನ್ನು ಉಳಿಸುವೆನು. ನೀನು ಅವನ ಹಡೆದ
ತಾಯಿಯಿದ್ದು ಅವನ ಸಲುವಾಗಿ ಜೀವ ಕೊಡದಿದ್ದರೆ ಇನ್ನಾರು ಕೊಟ್ಟಾರು?”
ಎಂದು ಹೇಳಿದನು. ಆಗ ಆ ಮುದುಕೆಯು ಬಿಕ್ಕಿ ಬಿಕ್ಕಿ ಅಳುತ-« ಸಾಧು
ಮಹಾರಾಯರೇ, ನನ್ನ ಮಗನ ಸಲುವಾಗಿ ನೀವು ಹೇಳಿದ್ದನ್ನು ಮಾಡ
ಲಿಕ್ಕೆ ನಾನು ಸಿದ್ಧಳಿರುತ್ತೇನೆ. ಅವನ ಜೀವದ ಮುಂದೆ ನನ್ನ ಜೀವದ ಬೆಲೆ
ಯು ಯಾತರದು? ಆದರೆ ನಾನು ಸತ್ತುಹೋದ ಮೇಲೆ ಈ ಚಿಕ್ಕ ಮಕ್ಕಳು
ಮರಿಗಳ ಅವಸ್ಥೆಯು ಏನಾದೀತೆಂದು ನನ್ನ ಮನಸ್ಸಿನಲ್ಲಿ ಬಹಳ ಹೆದರಿಕೆಯು
ಹುಟ್ಟಿರುತ್ತದೆ. ನಾನು ಎಷ್ಟು ದೈವಹೀನಳಾದರೂ ಈ ಚಿಕ್ಕ ಮಕ್ಕಳ ಸಲು
ವಾಗಿ ನಾಲ್ಕೊಪ್ಪತ್ತು ಬದುಕಿ ಇರಬೇಕಾಗಿರುತ್ತದೆ” ಎಂದು ಉತ್ತರಕೊಟ್ಟ
ಳು. ಆ ಮೇಲೆ ಆ ಸನ್ಯಾಸಿಯು ಅವನ ತಂದೆಗೆ ಕೇಳಲು-« ಸ್ವಾಮಾ, ಯಾ
ರೇನು ಮಾಡುವದದೆ? ಪ್ರತಿ ಒಬ್ಬನು ತನ್ನ ಕರ್ಮದ ಫಲವನ್ನು ಅನುಭೋ
ಗಿಸುತ್ತಾನೆ. ಇದು ಜಗತ್ತಿನ ಧರ್ಮವಿರುತ್ತದೆ ಎಂದು ನುಡಿದನು. ಆಗ ಆ
ಸನ್ಯಾಸಿಯು ಆ ಬ್ರಾಹ್ಮಣನ ಹೆಂಡತಿಯ ಕಡೆಗೆ ತನ್ನಮೋರೆ ತಿರುವಿ-* ಎಲ್ಲೆ
4
ಮು ಕ್ತ ಬಯ
ಸಾಧ್ವಿಯೇ, ನಿನ್ನ ಗಂಡನ ಸಲುವಾಗಿ ಅವನ ತಾಯಿತಂದೆಗಳು ತಮ್ಮ ಜೀವ
ವನ್ನು ಕೊಡುವದಿಲ್ಲೆ ನ್ನುತ್ತಾರೆ. ನೀನಾದರೂ ನಿನ್ನ ಜೀವವನ್ನು ಕೊಡುವಿ
ಯಾ?” ಎಂದು ಕೇಳಿದನು. ಆಗ ಅವಳು ದೊಡ್ಡ ಧ ೈನಿಯಿಂದ ಅತ್ತು ತನ್ನ
ತಾಯಿತಂದೆಗಳ ಕಡೆಗೆ ನೋಡಿ ಎಲೋ ತಾಯಿತಂಡೆಗಳಿರಾ! ನಿಮ್ಮ
ಮೋರೆಯನ್ನು ನೋಡಿ ನನಗೆ. ನನ್ನ ಜೀವವನ್ನು ಕೊಡಬಾರದೆಂಬ ಬುದ್ಧಿ
ಹುಟ್ಟುತ್ತದೆ: ನಾನು ಎಷ್ಟು ಹತಭಾಗ್ಯಳು! ನನ್ನ ಹಣೇಬರಹದಲ್ಲಿ ವೈಧವ್ಯ
ವನ್ನು ಅನುಭೋಗಿಸುವದು ಬರೆದಿದ್ದರೆ ಅದರಂತೆ ಅಗಲಿ. ನಾನು ಜೀವ ಕೊ
ಡುವದರಿಂದ ನಿಮಗೆ ನನ್ನ ವಿರಹದಿಂದಾಗುವ ದುಃಖವನ್ನು ನೀವು ಹೇಗೆ ಸಹನ
ಮಾಡಿಕೊಂಡೀರಿ? ಮತ್ತೊಂದೇನಂದರೆ, ನಾನು ಸತ್ತರೆ ನನ್ನ ಗಂಡನು ಇನ್ನೊ
ಬ್ಬಳನ್ನು ಮದುವೆ ಮಾಡಿಕೊಂಡು ನನ್ನನ್ನು ಮರೆಯುವದು ನಿಶ್ಚಯವು”
ಎಂದು ನುಡಿದಳು. ಆಗ ಸನ್ಯಾಸಿಯು ಆ ರೋಗಿಗೆ-«ನಿನ್ನ ಸಲುವಾಗಿ ಯಾ
ರೂ ಜೀವ ಕೊಡಲಿಕ್ಕೆ ಸಿದ್ಧರಿಲ್ಲ. ಆದುದರಿಂದ ಈ ಜಗತ್ತಿನಲ್ಲಿ ಯಾರನ್ನೂ
ನನ್ನವರೆಂದು ಸಂಬಬೇಡೆಂದು ನಾನು ಹೇಳಿದ ಮಾತು ಈಗಾದರೂ ತಿಳಿಯಿ
ತೇ?” ಎಂದು ಕೇಳಿದನು. ಆಗ ಆ ಬ್ರಾಹ್ಮಣನು ಎಚ್ಚರಿಕೆಯ ಮೇಲೆ ಬಂದು
ವೈರಾಗ್ಯವನ್ನು ಸ್ವೀಕರಿಸಿದನು.
ತಾತ್ಸ ರ್ಯ.
ಹೆಂಡರು ಮಕ್ಕಳು, ಬಂಧು ಬಳಗ, ತಾಯಿತಂದೆ ಇವರಲ್ಲಿ ನಾವು ಆಸ
ಕ ರಾಗಿರಬಾರದು. ಪರಮೇಶ್ವರನ ಭಕ್ತಿಯಲ್ಲಿ ನಮ್ಮ ಮನಸ್ಸನ್ನು ಇರಿಸ
ಬೇಕು. ಎಲ್ಲರು ಸಂಸಾರವನ್ನು ತ್ಯಾಗಮಾಡಿ ಸನ್ಯಾಸವನ್ನು ಸ್ವೀಕಾರ ಮಾ
ಡುವ ಕಾರಣವಿಲ್ಲ. ಸಂಸಾರದಲ್ಲಿರುವಾಗಲೂ ಪರಮೇಶ್ವ ರನ ಆರಾಧನೆಯನ್ನು
ಮಾಡುತ್ತ ಪರಮೇಶ್ವರನ ಮೆಚ್ಚಿ ಗೆಗೆ ಪಾತ ಅಗುವ 'ಸತ್ಯರ್ಮಗಳನ್ನು
ಆಚರಿಸಿದರೆ ಸಾಕು. ಸಂಸಾರದಲ್ಲಿದ್ದು ಸ ಸತ್ಯ ಅಹಿಂಸೆ, ಪರೋಪಕಾರ ಮೊದ
ಲಾದ ಸದ್ಗುಣಗಳುಳ್ಳ ವರಾಗಿ ನಡೆಯುವದರಿಂದ ಸದ್ಗತಿಯಾಗುವದು.
ಇಡ ಕಿತ್ತಿ
೧೪. ಸಚ್ಚಿದಾನಂದನ ರೂಪಗಳು.
ಒಂದು ಸಾರೆ ಇಬ್ಬರು ಗೃಹಸ್ಥರು ಅಳ್ಳಿಯ ಗಿಡದ ಮೇಲಿನ ಓತೀ
ಕಾಟದ ಬಣ್ಣವು ಎಂಥಾದ್ದಿ ರುತ್ತದೆಂಬದನ್ನು ಕುರಿತು ತಮ್ಮ ತಮ್ಮೊಳಗೆ ಬಹಳ
ವಿವಾದ ಮಾಡಿದರು. ಒಬ್ಬನು-."" ಓಿತೀಕಾಟವು ಕೆಂಪು ಬಣ್ಣದ್ದು ಇರುತ್ತ
ದೆ? ಎಂದು ಹೇಳಿದನು. ಅದಕ್ಕೆ ಇನ್ನೊಬ್ಬನು- ಛೇ. ನೀನು ಹೇಳುವದು
ತಪ್ಪು. ಅದು ನೀಲಿ ಬಣ್ಣದ್ದು ಇರುತ್ತದೆ? ಅಂದನು. ಇವರಿಬ್ಬರೂ ತಮ್ಮೊ
ಳಗೆ ಎಷ್ಟು ಹೊತ್ತು ವಿವಾದ ಮಾಡಿದರೂ ಒಬ್ಬನ ಮಾತಿಗೆ ಇನ್ನೊಬ್ಬನು
ಒಪ್ಪಿ ಕೊಳ್ಳ ಲಿಲ್ಲ... ಆದುದರಿಂದ ಅವರಿಬ್ಬರೂ ಅಳ್ಳಿಯ ಗಿಡದ ಕೆಳಗೆ ಗುಡ
ಸಲು ಕಟ್ಟಿಕೊಂಡು ಅದರ ಯಾವತ್ತು ಪರೀಕ್ಷೆಯನ್ನು ಮಾಡಿದಂಧ ಮೂ
ರನೇ ಗೃಹಸ್ಕನ ಕಡೆಗೆ ಹೋದರು. ಅಲ್ಲಿ ಒಬ್ಬನು ಆ ಮೂರನೇ ಗೃ
ಹಸ್ಯನಿಗೆ-« ಸ್ವಾಮಾ, ಈ ಅಳಿ ಕೈೆಯಗಿಡದ ಮೇಲಿನ ಓತೀಕಾಟವು ಕೆಂಪು ಬ
ಣ್ಣದ್ದು ಇರುವದಿಲ್ಲವೇ?” ಎಂದು ಕೇಳಿದನು. ಅದಕ್ಕೆ ಅವನು «ಹೌದು ?
ಎಂದು ಉತ್ತರಕೊಟ್ಟನು. ಆಗ ಇನ್ನೊಬ್ಬನು ಅವರಿಗೆ-" ಏನು ಹೇಳುತ್ತೀ?
ಆದು ಕೆಂಪು ಬಣ್ಣದ್ದು ಇರುವದಿಲ್ಲ. ನೀಲಿ ಒಣ್ಣದ್ದು ಇರುತ್ತದೆ” ಅಂದ
ನು ಇದನ್ನು ಕೇಳಿ ಆ ಮೂರನೇ ಗೃಹಸ್ಥನು ವಿನಯದಿಂದ- 4 ಹೌದು.
ಅದು ನೀಲಿ ಒಣ್ಣದ್ದು ಇರುತ್ತದೆ” ಎಂದು ಉತ್ತರ ಕೊಟ್ಟನು. ಈ ಪ್ರಕಾ
ರ ಆ ಮೂರನೇ ಗೃಹಸ್ಥನು ತನಗೆ ಓತೀಕಾಟವು ಯಾವಾಗಲು ತನ್ನ ಒಣ್ಣ
ವನ್ನು ಬದಲಿಸುತ್ತದೆಂಬದು ಗೊತ್ತಿದ್ದ ಕಾರಣ ಅವನು ಇಬ್ಬರಿಗೂ ಹೌದು?
ಎಂದು ಉತ್ತರಕೊಟ್ಟನು.
ತಾತ್ಸರ್ಯ.
ಸಚ್ಚಿದಾನಂದ ಮೂರ್ತಿಗೆ ಅನೇಕ ರೂಪಗಳು ಇರುತ್ತ ಷೆ ಆತನನ್ನು
ಒಂದು ರೂಪದಲ್ಲಿ ನೋಡಿದ ಭಕ್ತನು ಆತನ ರೂಪವು ಅದೊಂದೇ ಪ್ರಕಾರ
ದಿಂದ ಇರುತ್ತ ದೆಂದು ಹೇಳುತ್ತಾ ನೆ. ಆದರೆ ಆತನನ್ನು ಬೇರೆ ಬೇರೆ ರೂಪಗಳಲ್ಲಿ
ನೋಡಿದ ಭಕ ನು-« ಪರಮೇಶ್ವರನಿಗೆ ಆನಂತ ರೂಪಗಳು ಇರುವದರಿಂದ ಈ
ಎಲ್ಲ ರೂಪಗಳ ಆತನವೇ ಇರುತ್ತವೆ” ಎಂದು ಹೇಳುತ್ತಾ ನೆ.
ಎ. 5೨೮ ಎ
೧೫. ಯಾತ್ರೆಗೆ ಹೋದ ಗಂಡಹೆಂಡರು.
ಒಂದು ಸಾರೆ ಒಬ್ಬ ಗಂಡನೂ ಹೆಂಡತಿಯೂ ತಮ್ಮ ಸಂಸಾರವನ್ನು
ತ್ಯಾಗ ಮಾಡಿ, ತೀರ್ಥಯಾತ್ರೆ ಗಳನ್ನು ಮಾಡಿಕೊಂಡು ಬರಲಿಕ್ಕೆ ಹೊರಟರು.
ಅವರಿಬ್ಬರೂ ದಾರಿಯಿಂದ ನಡೆದು ಹೋಗುತ್ತಿರಲು ಗಂಡನು ಒಂದು ವಜ್ರದ
ಹರಳು ನೆಲದ ಮೇಲೆ ಬಿದ್ದಿರುವದನ್ನು ಕಂಡನು. ಆ ಕೂಡಲೆ ಅವನು ತನ್ನ
ಮನಸ್ಸಿನೊಳಗೆ-« ಇದು ನನ್ನ ಹೆಂಡತಿಯ ಕಣ್ಣಿಗೆ ಬಿದ್ದರೆ ಒಂದು ವೇಳೆ
ಆಕೆಗೆ ಇದರ ಮೇಲೆ ಆಶೆಯು ಹುಟ್ಟೀತು. ಇದರಿಂದ ನಮಗೆ ಸಂಸಾರ ತ್ಯಾಗ
ಮಾಡಿದ ಹಾಗೂ ತೀರ್ಥಯಾತ್ರೆಗಳನ್ನು ಮಾಡಿದ ಪುಣ್ಯವು ನಷ್ಟವಾದೀತು”
ಎಂದು ಆಲೋಚಿಸಿ ಆ ವಜ್ರದ ಹರಳನ್ನು ಮುಚ್ಚ ಬೇಕೆಂದು ತನ್ನ ಕಾಲಿನಿಂದ
ಮಣ್ಣು ಸರಿಸಲಿಕ್ಕೆ ಹತ್ತಿದ್ದನು. ಈ ಪ್ರಕಾರ ಗಂಡನು ಮಾಡುತ್ತಿರುವದ
ನ್ನು ನೋಡಿ ಹೆಂಡತಿಯು ಅವನಿಗೆ-« ಏನು ಮಾಡುತ್ತೀರಿ?” ಎಂದು ಕೇಳಿ
ದಳು. ಅದಕ್ಕೆ ಅವನು ಏನೋ ಒಂದು ವಿಧವಾಗಿ ತಪ್ಪಿಸಿಕೊಂಡು ಉತ್ತರ
ಕೊಟ್ಟನು. ಆದರೆ ಅಳೆಗೆ ಹೇಗೂ ಆ ವಜ್ರದ ಹರಳು ಅಲ್ಲಿ ಇರುವದು ಕಂ
ಡಿತು. ಆಗ ಅಕೆಯು-* ನಿಮಗೆ ಇನ್ನೂ ವಜ್ರದಲ್ಲಿಯೂ ಭೂಮಿಯಲ್ಲಿ
ಯೂ ಭೇದವು ಕಾಣುತ್ತಿದ್ದರೆ ಸಂಸಾರ ತ್ಯಾಗವನ್ನು ಏಕೆ ಮಾಡಿದಿರಿ!” ಎಂ
ದು ಕೇಳಿದಳು.
ತಾತ್ಪರ್ಯ.
ುನಸ್ಸಿನ ದುರ್ವ್ಯಾಪಾರಗಳು ಹೋಗಲಿಕ್ಕೆ ಸತ್ಸಂಗತಿಯು ಮತ್ತು
ಸತ್ಯೃಥಾಶ್ರವಣವು ಅವಶ್ಯವಿರುತ್ತ ವೆ. ಶೇತ್ರಗಳಿಗೆ ಹೋಗುವ ಉದ್ದೇಶವಾ
ದರೂ ಇದೇ ಇರುತ್ತದೆ. ನಾವು ಕಾಶೀರಾಮೇಶ್ವರಗಳಿಗೆ ಹೋದರೂ ಅರಿ
ಸಡ್ಜೈರಿಗಳನ್ನು ಬಿಡದಿದ್ದರೆ ನಮಗೆ ಯಾತ್ರೆಗಳಿಗೆ ಹೋಗಿ ಬಂದ ಪುಣ್ಯವು
ಎಂದಿಗೂ ಬರಲಾರದು. ಮಾ
೧೬. ವಂಂಂದೆ ಹೋಗು.
ಒಬ್ಬ ಕಟ್ಟಿಗೆ ಮಾರುವವನು ದಿನಾಲು ಅಡವಿಗೆ ಹೋಗಿ ಕಟ್ಟಿಗೆಯ
ನ್ನು ಕಡಕೊಂಡು ಬಂದು ಅದರ ಮಾರಾಟೆದಿಂದ ಬಂಡ ಸ್ವಲ್ಪ .ಹಣದಿಂದಲೇ
ಎ... ೮೯ ಎ
ಬಡರೀತಿಯಿಂದ ಹೊಟ್ಟಿ ತುಂಬಿಕೊಂಡು ಇರುತ್ತಿದ್ದನು. ಒಂದು ಸಾರೆ ಒಬ್ಬ
ಸನ್ಯಾಸಿಯು ಆ ಕ ಜಂ ಹೋಗುವಾಗ ಅವನು ಕಟ್ಟಿಗೆ ಕಡಿಯುವದ
ನ್ನು ನೋಡಿ-« ತಮ್ಮಾ, ನೀನು ಈ ಅಡವಿಯಲ್ಲಿ ಇನ್ನೂ ಮುಂದೆ ಹೋಗು,
ಅಂದರೆ ನಿನಗೆ ಹೆಚ್ಚು ಲಾಭವಾಗುವದು ” ಎಂದು ಹೇಳಿದನು. ಅದರಂತೆ ಆ
ಕಶ್ಚಿಗೆ ಕಡಿಯುವವನು ಸ್ವಲ್ಪ ಮುಂದೆ ಹೋಗಲು ಅವನಿಗೆ ಗಂಧದ ಮರ
ಗಳು ಕಾಣಿಸಿದವು. ಅವುಗಳನ್ನು ನೋಡಿ ಅವನು ಬಹಳ ಸಂತೋಷಪಟ್ಟು
ಅವುಗಳನ್ನು ಕಡಿದು ಊರೊಳಗೆ ಒಯ್ದು ಮಾರಲಾಗಿ ಅವನಿಗೆ ಸಂತೆಯಲ್ಲಿ
ಮೊದಲಿನಕಿಂತ ಬಹಳ ಬೆಲೆಯು ಬಂದಿತು. ಮರುದಿವಸ ಅವನು ಶನಗೆ ಸ
ನ್ಯಾಸಿಯು ಬರೀ ಗಂಧದ ಮರಗಳ ಬಗ್ಗೆ ಹೇಳಲಿಲ್ಲವೆಂತಲೂ, ಅಡವಿಯಲ್ಲಿ
ಇನ್ನೂ ಮುಂದೆ ಹೋಗೆಂದು ಹೇಳಿರುತ್ತಾನೆಂತಲೂ ವಿವೇಕದಿಂದ ತಿಳಿದುಕೊಂ
ಡು ಆ ಗಂಧದ ಮರಗಳನ್ನು ದಾಓ ಮತ್ತಿಷ್ಟು ಮುಂದೆ ಹೋದನು. ಆಗ ಅ
ವನಿಗೆ ತಾಮ್ರದ ಒಂದು RR ಸಿಕ್ಕಿತು ಅಲ್ಲಿಂದ ಅವನು ತನಗೆ ಶಕ್ಯವಿ
ದಷ್ಟು ತಾಮ್ರವನ್ನು ತೆಗೆದುಕೊಂಡು ಹೋಗಿ ಸಂತೆಯಲ್ಲಿ ಮಾರಲಾಗಿ ಅವ
ನಿಗೆ ನೊದಲಿಸಕಿಂತ ಎಷ್ಟೋ ಪಾಲು ಹೆಚ್ಚು ಬೆಲೆಯು ಬಂದಿತು. ಈ ಪ್ರಕಾರ
ಆವನು ದಿನದಿನಕ್ಕೆ ಆ ಅಡವಿಯಲ್ಲಿ ಮುಂದೆ ಹೋಗಲು ಅವನಿಗೆ ಒಂದು ದಿ
ವಸ ಬೆಳ್ಳಿಯ ಖನಿಯು, ಇನ್ನೊಂದು ದಿವಸ ಬಂಗಾರದ ಖನಿಯು, ಕೊನೆಗೆ
ವಜ್ರದ ಖನಿಯು ಸಿಕ್ಕದ್ದರಿಂದ ಆವನು ಅವುಗಳನ್ನೆಲ್ಲ ಮಾರಾಟ ಮಾಡಿ ಬ
ಹಳ ಶ್ರೀಮಂತನಾದನು.
ತಾತ್ಸರ್ಯ.
ಪ್ರಯತ್ನವನ್ನು ಮಾಡುವವನಿಗೆ ಪ ಪರಮೇಶ್ವರನು ಫಲವನ್ನು ಕೊಡು
ವನು. ತಡ ಪ್ರಯತ್ನ ಕ್ಕ ದೈವವು ಅಂದರೆ ಪರಮೇಶ್ವರನ ಕೃಪೆಯು ಅನು
ಕಂಟಕ. ಆಂದು ಅವನಿಗೆ ಯಾವತ್ತು ಸಿದ್ಧಿ ಯಾಗುವದು. ಜ್ಞಾನ
ವನ್ನು ಸಂಪಾದಿಸುವ ಲವಲವಿಕೆಯುಳ್ಳ ವರು ಪ್ರಯತ್ನ ಮಾಡಿದರೆ ಅವರಿಗೆ
ಜ್ಞಾನದ ಖನಿಯು ದೊರಕಿ, ಸತ್ಯವೂ ಶಾಶ್ವತವೂ ಆದ ಪರಮೇಶ್ವರನ ಜ್ಞಾನದ
ಪ್ರಾಪ್ತಿಯು ಆಗುವದು.
— ಜ೦ ಆ.
೭. ಒಂದು ಹುಲಿಯ ಮರಿಯು.
ಒಂದಾನೊಂದು ಗಬ್ಬ ಇದ್ದ ಹೆಣ್ಣು ಹುಲಿಯು ಆಡುಗಳ ಹಿಂಡನ್ನು
ಕೊಲ್ಲುವದಕ್ಕಾಗಿ ಅವುಗಳ ಮೇಲೆ ಜಿಗಿಯುವಾಗ ಅಕಸ್ಕಾತ್ಮಾಗಿ ಈಯಿತು.
ಈ ಪ್ರಕಾರ ಅದು ಈದನಂತರ ಅದನ್ನು ಒಬ್ಬಾ ನೊಬ್ಬ ಬೇಟಿಗಾರನು ಹೊ
ಜಿದು” ಕೊಂದದ್ದರಿಂದ ಆ ಹುಲಿಯು ಮರಿಯು ಆಡುಗಳ ಹಿಂಡಿನನ್ಲಿಯೇ ಉಳಿ
ಯಿತು. ಅದು 'ಅಲ್ಲಿರುವಾಗ ಮಿಕ್ಕ ಆಡುಗಳಂತೆ ಹುಲ್ಲು ತಿಂದು ಅವುಗಳಂತೆ
ತೌನೂ ಬ್ಯಾ ಎಂದು ಒದರುವದನ್ನು ಕಲಿಯಿತು. ಈ ಪ ಕಾರ ಆ ಹುಲಿಯ
ಮರಿಯು ಬೆಳೆದು ದೊಡ್ಡದಾದ ಬಳಿಕ ಒಂದು ದಿವಸ ಮತ್ತೊ ಂದು ದೊಡ್ಡ
ಹುಲಿಯು ಈ ಆಡುಗಳ ಹಿಂಡಿನ ಮೇಲೆ ಅಭಿಯೋಗ ಮಾಡಿದಾಗ ಆ ಹುಲ್ಲು
ತಿನ್ನುವ ಹುಲಿಯ ಮರಿಯನ್ನು ನೋಡಿ ಬಹಳ ಆಶ್ಚರ್ಯಪಟ್ಟು ಅದರ ಬೆನ್ನ
ಹತ್ತಿ ಒಡಿ ಅದನ್ನು ಹಿಡಿಯಿತು. ಆಗ ಆ ಹುಲ್ಲು ತಿನ್ನುವ ಹುಲಿಯ ಮರಿಯು
ಬ್ಯಾ ಎಂದು ಒದರಲಿಕ್ಕೆ ಹತ್ತಿತು. ಆಗ ಹುಲಿಯು ಆ ಹುಲ್ಲು ತಿನ್ನುವ ಹುಲಿ
ಯ ಮರಿಯನ್ನು ಒಂದು ಹಳ್ಳದ ಹತ್ತರ ತೆಗೆದುಕೊಂಡು ಬಂದು ಅದನ್ನು
ಉದ್ದೇಶಿಸಿ-" ಈ ನೀರೊಳಗೆ ನಿನ್ನ "ನೋರೆಯನ್ನು ನೋಡಿಕೋ. ನಿನ್ನ
ಮೋರೆಯೂ ನನ್ನ ಮೋರೆ ಯೂ ಒಂದೇ ಇರುತ್ತವೆ. ಈ ಮಾಂಸದ ಕ
ರಣಿಯನ್ನು ಸ್ವಲ್ಪ ತಿನ್ನು” ಎಂದು ಹೇಳಿ ಬಲಾತ್ಕಾರದಿಂದ ಆ ಮಾಂಸದ
ಕರಣಿಯನ್ನು ಅದರ ಬಾಯಲ್ಲಿ ಹಾಕಿತು. ಅದರೆ ಆ ಹುಲ್ಲು ತಿನ್ನುವ ಹುಲಿಯ
ಮರಿಯು ಮೊದಲಿಗೆ ಅದನ್ನು ತಿನ್ನದೆ ಸುಮ್ಮನೆ ನಿಂತುಕೊಂಡು ಕೆಲವು ಹೊ
ತ್ತು ಬ್ಯಾ ಬ್ಯಾ ಎಂದು ಒದರಲಿಕ್ಕೆ ಹತ್ತಿತು. ಮುಂದೆ ಅದಕ್ಕೆ ರಕ್ತದ ರುಚಿಯು
ಹತಿ ತ್ಮಿದ್ದರಿಂದ' ಅದು ಆ ಮಾಂಸಿದ ಕಂಣಿಯನ್ನು ತಿನ್ನಲಿಕ್ಕೆ ಹತ್ತಿತು. ಆಗ
ಹುಲಿಯು ಮುಂಚೆ ಹುಲ್ಲು ತಿನ್ನುತ್ತಿದ್ದ ಹುಲಿಯ ಗ ತಮ್ಮಾ, ನಾನೂ
ನೀನೂ ಒಂದೇ ಇರುತ್ತೇವೆಂದು ಈಗಾದರೂ ಮನಗಂಡಿಯಾ? ಇನ್ನುಮೇಲೆ
ನಾವಿಬ್ಬರೂ ಕೂಡಿ ಅಡವಿಯಲ್ಲಿ ಅಡ್ಡಾಡೋಣ ನಡೆ” ಎಂದು ಅದನ್ನು ಕರೆ
ದುಕೊಂಡು ಹೋಯಿತು.
ತಾತ್ಪರ್ಯ.
ಸದ್ಗುರುವಿವ ಕೃಪೆ ಪೆಯಾದ ಬಳಿಕ ನಾವು ಯಾವದಕ್ಕೂ ಅಂಜಬೇಕಾ
ಗುವದಿಲ್ಲ. "ಸಾವು ಯಾರು ಇರುತೆ ತ್ಲೇವೆಂಬುವದನ್ನೂ, ನಮ್ಮ ನನಾದ ಗುಣ
ಹ ಎಮ
ವ್ರ ಏನಿರುತ್ತದೆಂಬುವದನ್ನೂ ಅವನೇ ನಮಗೆ ಜ್ಞಾನ ಮಾಡಿಕೊಡುವನು. ಮ
ನುಷ್ಕನು ಆತ್ಮಜ್ಞಾ ನದ ಸಾಧನ ಮಾಡುವದನ್ನು ಆರಂಭಿಸಿದರೆ ಅವನು ತಾನಾ
ಗಿಯೇ ಯಾವದು ಸತ್ಯವು, ಯಾವದು ಮಿಥ್ಯವು, ೧ BA ಜಗನ್ಮಿ
ಥ್ಯಾ) ಎಂಬದನ್ನು ತಿಳಿದುಕೊಳ್ಳು ವನು.
೧೮. ಒಬ್ಬ ಗೊಲ್ಲತಿಯ ಭಕ್ತಿಯು.
ಒಬ್ಬ ಗೊಲ್ಲತಿಯು ದಿನಾಲು ಒಂದು ನದಿಯ ಆಚೆಯ ದಂಡೆಯಿಂದ
ಬಂದು ಒಬ್ಬ ಬ್ರಾಹ್ಮಣನಿಗೆ ಹಾಲು ಕೊಡುತ್ತಿದ್ದಳು. ನದಿಯಲ್ಲಿ ಹರಗೋ
ಲು ನಡಿಸುವವರು ಹೊತ್ತಿಗೆ ಹರಗೋಲವನ್ನು ನಡಿಸದೆ ಅರುವ ಮೂಲಕ ಒ
ಮ್ಹೊಮ್ಮೆ ಆಕೆಗೆ ಬರಲಿಕ್ಕೆ ತಡವಾಗುತ್ತಿತ್ತು. ಒಂದು ದಿವಸ ಆ ಬ್ರಾಹ್ಮಣನು
ಆ ಗೊಲ್ಲತಿಗೆ-« ಈ ಪ್ರಕಾರ ಯಾಕೆ ತಡಮಾಡುತ್ತೀ?? ಎಂದು ಕೇಳಿವನು.
ಅದಕ್ಕೆ ಅವಳು ಅಂಬಿಗರು ಹೊತ್ತಿಗೆ ಸರಿಯಾಗಿ ಬಂದು ಹರಗೋಲು ನಡಿಸು
ವದಿಲ್ಲವೆಂದು ಹೇಳಿದಳು. ಆಗ ಅವನು-« ಅವ್ವಾ, ಜನರು ಪರಮೇಶ್ವರನ
ಹೆಸರು ತೆಗೆದುಕೊಂಡು ಸಂಸಾರವೆಂಬ ಮಹಾಸಾಗರವನ್ನು ದಾಟುತ್ತಾರೆ,
ಆಂದಬಳಿಕ ನಿನಗೆ ಆತನ ಹೆಸರು ತೆಗೆದುಕೊಂಡು ಸಣ್ಣ ನದಿಯನ್ನು ದಾ
ಬಲಿಕ್ಕೆ ಆಗುವದಿಲ್ಲವೇ?” ಎಂದು ಕೇಳಿದನು. ಮರುದಿವಸದಿಂದ ಆ ಗೊಲ್ಲ
ತಿಯು ವೇಳೆಗೆ ಸರಿಯಾಗಿ ಬಂದು ಆ ಬ್ರಾಹ್ಮಣನಿಗೆ ಹಾಲು ಕೊಡಲಿಕ್ಕೆ ಹ
ತ್ತಿದಳು. ಇದನ್ನು ಕಂಡು ಆ ಬ್ರಾಹ್ಮಣನು ಒಂದು ದಿವಸ ಅಕೆಗೆ- ಈಗ
ಯಾಕೆ ನಿನಗೆ ತಡವಾಗುವದಿಲ್ಲ? ” ಎಂದು ಕೇಳಿದನು. ಅದಕ್ಕೆ ಅವಳು.
« ಸ್ವಾಮಿ, ನೀವು ಹೇಳಿದಂದಿನಿಂದ ನಾನು ಅಂಬಿಗರ ದಾರಿಯನ್ನು ನೋಡದೆ
ಪರಮೇಶ್ವರನ ಹೆಸರು ತೆಗೆದುಕೊಂಡು ನದಿಯನ್ನು ದಾಟ ಬರುತ್ತೇನೆ” ಎಂ
ದು ಹೇಳಿದಳು. ಇದನ್ನು ಆ ಬ್ರಾಹ್ಮಣನು ನಂಬದೆ ಅದನ್ನು ನೋಡಲಿಕೆ
ಅವಳ ಸಂಗಡ ಹೋಗಿ ಅವಳಂತೆಯೇ ತಾನೂ ಆ ನದಿಯ ಮೇಲೆ ನಡೆಯ
ಲಿಕ್ಕೆ ಹತ್ತಲು ನೀರೊಳಗೆ ಮುಳುಗಹತ್ತಿದನು. ಆಗ ಆ ಗೊಲ್ಲತಿಯು ಆ ಬ್ರಾ
ಣನ ಶೋಚನೀಯ ಅವಸ್ಥೆಯನ್ನು ಕಂಡು-. ಸಾಮಾ, ಇದೇನು? ನೀವು
ಪಿಬತಿ;
ಬಾಯಿಂದ ದೇವರ ಹೆಸರು ಉಚ್ಚಾರ ಮಾಡುತ್ತಿದ್ದರೂ ನಿಮ್ಮ ದೋತರವು
ತೋಯ್ದು ಒದ್ದಿಯಾಗಬಾರದೆಂದು ಅದನ್ನು ಮೇಲಕ್ಕೆ ಎತ್ತಿ ಹಿಡಿದಿರುವಿರಿ! ನಿ
ಮಗೆ ಜೀವರ ಮೇಲೆ ಪೂರ್ಣ ನಂಬಿಗೆಯು ಇದ್ದಂತೆ ಕಂಡುಬರುವದಿಲ್ಲ. ”
ಎಂದು ನುಡಿದಳು. ಇದನ್ನು ಕೇಳಿ ಆ ಬ್ರಾಹ್ಮಣನು ನಾಚಿಕೊಂಡು ಸುಮ್ಮ
ನಾದನು.
ತಾತ್ಪರ್ಯ.
ಪರಮೇಶ್ವರನ ಮೇಲೆ ಪೂರ್ಣವಾದ ನಂಬಿಗೆಯನ್ನು ಅಡುವವನಿಗೆ
ಮಾತ್ರ ಆತನು ತನ್ನ ಚಮತ್ಕಾರಗಳನ್ನು ತೋರಿಸುತ್ತಾನೆ. ಜನರಿಗೆ ಮಾತ್ರ
ಬ್ರಹ್ಮಜ್ಞಾನವನ್ನು ಹೇಳಿ ತಾವು ಕಲ್ಲಿನ ಬಂಡೆಯಂತೆ ಇರುವದು ಕೇವಲ ಹಾ
ಸ್ಯಾಸ್ಪದವಾಗಿರುವದು. ನುಡಿಯಂತೆ ನಡೆಯುವವನೇ ಎಲ್ಲರಿಗೂ ಪೂಜ್ಯ
ನಾಗುತ್ತಾನೆ.
೧೯. ದೇವರು ನೈವೇದ್ಯವನ್ನು ಉಂಡದ್ದು.
ಒಬ್ಬಾನೊಬ್ಬ ಬ್ರಾಹ್ಮಣನು ಒಂದು ದೇವರ ಗುಡಿಯ ಪೂಜಾರಿ
ಇದ್ದನು. ಅವನು ಏನೋ ಕಾರಣದಿಂದ ಪರಸ್ಕಳಕ್ಕೆ ಹೋಗಬೇಕಾಯಿತು.
ಆಗ ಅವನು ತನ್ನ ಮಗನಿಗೆ-" ನಾನು ಬರುವವರೆಗೆ ನೀನು ದೇವರ ಫೂಜಿ
ಯನ್ನು ಚನ್ನಾಗಿ ಮಾಡಿ ಅವನಿಗೆ ಭಕ್ತಿಯಿಂದ ನೈವೇದ್ಯುವನ್ನು ಅರ್ಪಿ
ಸು” ಎಂದು ಹೇಳಿದನು. ಇದರಂತೆ ಆ ಹುಡುಗನು ದೇವರ ಪೂಜೆಯನ್ನು
ಮಾಡಿ ದೇವರಿಗೆ ನೈವೇದ್ಯವನ್ನು ಅರ್ಪಿಸಿ ಅವನ ಮುಂದೆ ಕುಳಿತುಕೊಂಡನು.
ಆ ಹುಡುಗನಿಗೆ ತಾನು ನೈವೇದ್ಯವನ್ನು ಅರ್ಪಿಸಿದ ಬಳಿಕ ದೇವರು ಅಲ್ಲಿ ಪ್ರತ್ಯ
ಕವಾಗಿ ಬಂದು ತನ್ನ ನೈವೇದ್ಯುವನ್ನು ಉಣ್ಣುತ್ತಾನೆಂಬ ವಿಶ್ವಾಸವಿತ್ತು. ಆದು
ದರಿಂದ ಅವನು ದೇವರಿಗೆ-* ಪರಮೇಶ್ವರನೇ ! ತೀವ್ರವಾಗಿ ಒಂದು ನಾನು
ತಂದ ನೈವೇದ್ಯವನ್ನು ಉಣ್ಣು. ನಾನು ಬಂದು ಬಹಳ ಹೊತ್ತಾಯಿತು. ಇನ್ನು
ಮೇಲೆ ನಾನು ಹೆಚ್ಚು ಹೊತ್ತು ಇಲ್ಲಿ ಕೂತುಕೊಳ್ಳಲಾರೆನು? ಎಂದು ಅವನಿಗೆ
—ಷಿಷ
ಪ್ರಾರ್ಥನೆಯನ್ನು ಮಾಡಿದನು ಆದರೂ ದೇವರು ಅಲ್ಲಿಗೆ ಬರಲಿಲ್ಲ ಅಥವಾ
ಅವನ ಕೂಡ ಏನೂ ಮಾತಾಡಲಿಲ್ಲ. ಆಗ ಅವನು ಕೆಲವು ಹೊತ್ತು ಬಿಕ್ಕಿ
ಬಿಕ್ಕಿ ಅತ್ಮು-4 ದೇವರೇ, ನಮ್ಮ ತಂದೆಯು ನಿನಗೆ ನೈವೇದ್ಯವನ್ನು ಚನ್ನಾಗಿ
ಉಣ್ಣಿಸಿ ನಿನ್ನನ್ನು ಶಾಂತ ಮಾಡೆಂದು ನನಗೆ ಅಪ್ಪಣೆ ಮಾಡಿರುತ್ತಾನೆ. ನಮ್ಮ
ತಂದೆಯು ನಿನಗೆ ನೈವೇದ್ಯುವನ್ನು ಅರ್ಪಣ ಮಾಡಿದಾಗ ನೀನು ಬಂದು ಉ
ಣ್ಣುವೆ. ಆದರೆ ನಾನು ತಂದಿದ್ದ ನೈವೇದ್ಯವನ್ನು ನೀನು ಉಣ್ಣಲೊಲ್ಲೆ. ನಾ
ನೇನು ಅಂಧ ಅಪರಾಧವನ್ನು ಮಾಡಿರುವೆ?” ಎಂದು ದೈನ್ಯುಭಾವದಿಂದ ಅವ
ನನ್ನು ಕುರಿತು ಬಹಳ ಪರಿಯಿಂದ ಬೇಡಿಕೊಂಡನು. ಇಗ ಪರಮೇಶ್ವರನು
ಮನುಷ್ಯರೂಪದಿಂದ ಅಲ್ಲಿಗೆ ಬಂದು ಆ ಹುಡುಗನು ತಂದಿದ್ದ ನೈವೇದ್ಯವನ್ನು
ಉಂಡು ಹೋದನು. ಆ ಬಳಿಕ ಆ ಹುಡುಗನು ಗುಡಿಯೊಳಗಿಂದ ಮನೆಗೆ ಒರ
ಲಾಗಿ ಅವನ ಮನೆಯವರು-« ನೈವೇದೃವು ಏನಾಯಿತು? ಅದನ್ನು ಎಲ್ಲಿ ಬಿ
ಟ್ರ ಬಂದೆ?” ಎಂದು ಶೇಳಿದರು. ಆಗ ಆ ಹುಡುಗನು. ಅದನ್ನು ದೇವರು
ಉಂಡನು? ಎಂದು ತನ್ನ ಭಾವಿಕತನದಿಂದ ಉತ್ತರ ಕೊಟ್ಟನು. ಇದನ್ನು
ಹೇಳಿ ಅವನ ಮನೆಯವರಿಗೆ ಆಶ್ಚರ್ಯವಾಗಿ ಅವರು ಗುಡಿಗೆ ಬಂದು ನೋಡ
ಲಾಗಿ ಆ ಹುಡುಗನು ದೇವರ ಮುಂಸೆ ಇಟ್ಟಿದ್ದ ನೈವೇದ್ಯದ ಎಡೆಯು ತೆರ
ವಾಗಿರುವದನ್ನು ನೋಡಿ ಅವರು ಬಹಳ ಆಶ್ಚರ್ಯಪಟ್ಟು ಏನೂ ಮಾತಾಡದೆ
ಸುಮ್ಮನಾದರು.
ತಾತ್ಪರ್ಯ.
ಪರಮೇಶ್ವರನ ಮೇಲೆ ನಿಜವಾದ ವಿಶ್ವಾಸವಿಟ್ಟು ಆತನನ್ನು ಭಕ್ತಿ
ದ ಬೇಡಿಕೊಳ್ಳುವವರಿಗೆ ಅತನು ನಿಶ್ಚಯವಾಗಿ ಫಲವನ್ನು ಕೊಡುತ್ತಾನೆ
೨೦. ಪರಮೇಶ್ವರನ ಕೃಪೆಯೇ ಕಾಮಧೇನುವು.
ಒಂದು ದಿವಸ ಒಬ್ಬ ಗೃಹಸ್ಥನ ಮಗನು ಬೇನೆಯಿಂದ ಮರಣಾವಸ್ಥೆಗೆ
ಬಂದಿದ್ದನು. ಆಗ ಒಬ್ಬ ಸಾಧುವ್ರ ಆ ಗೃಹಸ್ಯನಿಗೆ-« ನಿನ್ನ ಮಗನನ್ನು ಜೀವ
ದಿಂದ ಬದುಕಿಸಲಿಕೈೆ ಒಂದು ಉಪಾಯವದೆ. ನೀನು ಒಬ್ಬ ಸತ್ತ ಮನುಷ್ಯನ
5
ಯುಂ
೨ ೩೪ ೨.
ತಲೆ ಬುರಡಿಯೊಳಗೆ ಸ್ವಾತೀಮಳೆಯ ಹನಿಗಳೂ, ನಾಗರಹಾವಿನ ವಿಷವೂ
ಕೂಡಿರುವದನ್ನು ತಂದುಕೊಟ್ಟರೆ ನಾನು ನಿನ್ನ ಮಗನನ್ನು ಬದುಕಿಸುತ್ತೆ ನೆ?
ಎಂದು ಹೇಳಿದನು. ಇದನ್ನು ಕೇಳಿ ಆ ಗೃಹಸ್ಥನು ತನ್ನ ಮಗನ ಬೇವವನ್ನು
ಉಳಿಸುವದಕ್ಕಾಗಿ ಈ ಕೊನೆಯ ಪ್ರಯತ್ನವನ್ನು ಮಾಡಬೇಕೆಂದು ನಿಶ್ಚಯ
ಮಾಡಿದನು. ಮರುದಿವಸವೇ ಸ್ವಾತೀ ನಕ್ಷಕ್ರವು ಬಂತು. ಆಗ ಅವನು--
« ಪರಮೇಶ್ವರನೇ, ಸ್ವಾತೀ ನಕ್ಷತ್ರವಂತೂ ಬಂದಿತು. ನೀನು ಹೇಗಾದರೂ
ಮಾಡಿ ನನ್ನ ಪ್ರಯತ್ನವನ್ನು ಸಿದ್ಧಿಗೆ ಒಯ್ದು ನನ್ನ ಮಗನಿಗೆ ಜೀವದಾನ
ಹೊಡು” ಎಂದು ಬೇಡಿಕೊಂಡು ಸಾಧುವು ಹೇಳಿದ ಪದಾರ್ಥವನ್ನು ಹುಡುಕಿ
ತರಲಿಕ್ಕೆ ಅಡವಿಯೊಳಗೆ ಹೋದನು. ಅಲ್ಲಿ ಒಂದು ಗಿಡದ ಕೆಳಗೆ ಒಬ್ಬ ಸತ್ತ
ಮನುಷ್ಯನ ತಲೆಬುರಡಿಯು ಬಿದ್ದಿತ್ತು. ಆಗ ಅವನು ಪರಮೇಶ್ವರನಿಗೆ ಪ್ರಾ
ರ್ಥಿಸುತ್ತ ಸ್ವಲ್ಪ ದೂರ ನಿಂತಿರಲು ಸ್ವಾತೀ ಮಳೆಯಾಗಿ ಆ ತಲೆ ಬುರಡಿಯೊ
ಳಗೆ ನೀರಹನಿಗಳು ಬಿದ್ದವು. ಇದನ್ನು ನೋಡಿ ಅವನು- ದೇವರೆ, ಇನ್ನು
ನೀನು ಉಳಿದದ್ದನ್ನು ಅನುಗ್ರಹ ಮಾಡು ” ಎಂದು ಬೇಡಿಕೊಂಡನು. ಆ
ಬಳಿಕ ಸ್ವಲ್ಪ ಹೊತ್ತಿ ನಲ್ಲಿಯೇ ಆ ತಲೆ ಬುರಡಿಯ ಹತ್ತರ ಒಂದು ಕಪ್ಪೆಯು
ಬಂದು ಕುಳಿತದ್ದನ್ನು ಕಂಡು ಅವನು ತಿರುಗಿ ಪರಮೇಶ್ವರನಿಗೆ ಪ್ರಾರ್ಥನೆ
ಮಾಡಿದನು. ಆಗ ಹುಲ್ಲಿನೊಳಗಿಂದ ಒಂದು ನಾಗರ ಹಾವು ಆ ಕಪ್ಪೆಯನ್ನು
ಹಿಡಿಯಲಿಕ್ಕೆ ಬರಲಾಗಿ ಅದು ಆ ತಲೆ ಬುರಡಿಯ ಮೇಲಿಂದ ಜಿಗಿದು ಹೋ
ಯಿತು. ಇದರಿಂದ ಆ ಹಾವಿನ ವಿಷವು ಅಲ್ಲಿ ಇದ್ದ ತಲೆ ಬುರಡಿಯುಲ್ಲಿ ಬಿದ್ದಿತು.
ಅಗ ಅವನು ಅತ್ಯಂತ ಸಂತೋಷಭರಿತನಾಗಿ-.« ಎಲ್ಲೆ ದಯಾಸಾಗರನಾಹ
ಭಗವಂತನೇ! ನಿನ್ನ ಕೃಪೆಯಿಂದ ಅಸಂಭವನೀಯ ಸಂಗತಿಗಳು ಸಹ ಸಂಭವ
ನೀಯವಾಗುತ್ತವೆ. ' ಇನ್ನು ನನ್ನ ಮಗನು ಬದಕುವದೇ ನಿಜವು” ಎಂದು
ನುಡಿದು ಅದನ್ನು ತೆಗೆದುಕೊಂಡು ಹೋಗಿ ಸಾಧುವಿಗೆ ಕೊಡಲಾಗಿ ಆ ಸಾ
ಧುವು ಅವನ ಮಗನ ಜೀವವನ್ನು ಬದುಕಿಸಿದನು.
ತಾತ್ಸ ರ್ಯ.
ವಿಶ್ವಾಸದಂತೆ ಫಲವು ದೊರಕುತ್ತದೆ. ಪರಮೇಶ್ವರನಲ್ಲಿ ವಿಶ್ವಾಸವಿಟ್ಟ
ವರಿಗೆ ಎಂದೂ ನಿರಾಶೆಯಾಗಬೇಕಾಗುವಬಲ್ಲ.
ಎ. ೩೫ __
೨೧. ಆನೆಯೂ ದೇವರು! ಮಾವುತನೂ
ದೇವರು!
ಭಗವಾನ ರಾಮಕೃಷ್ಣ ಪರಮಹಂಸರು ಒಂದು ಸಾರೆ ಒಬ್ಬ ಶಿಷ್ಯು
ನಿಗೆ ಜೀವಾತ್ಮನು ಪರಮಾತ್ಮನು ಇರುತ್ತಾನೆ” ಎಂದು ಹೇಳಿದರು. ಇದನ್ನು
ಆ ಶಿಷ್ಯನು ಅಶ್ರರಶಃ ಅರ್ಧ ಮಾಡಿಕೊಂಡು ಒಂದು ದಿವಸ ದಾರಿಯೊಳಗೆ
ಒಂದು ಆನೆಯು ತನ್ನ ಮೈಮೇಲೆ ಏರಿ ಬಂದಾಗ್ಯೂ ತಾನು ಹಿಂದಕ್ಕೆ ಸರಿದು
ಕೊಳ್ಳಲಿಲ್ಲ. ಆಗ ಆ ಆನೆಯ ಮೇಲೆ ಕುಳಿತಿದ್ದ ಮಾವುತನು ಅವನಿಗೆ- ಹಿಂ
ದಕ್ಕೆ ಸರಿ ಸರಿ” ಎಂದು ಎಷ್ಟೋ ಸಾಕೆ ಕೂಗಿ ಹೇಳಿದನು. ಆದಕ್ಕೆ ಆ ಶಿಷ್ಯ
»ು-* ನಾನು ಯಾಕೆ ಸರಿಯಬೇಕು? ನಾನೂ ದೇವರು. ಆನೆಯೂ ದೇವರು.
ದೇವರಿಗೆ ಸ್ವಂತ ಆಂಬೆಕೆಯು ಯಾತರದು?? ಎಂದು ಹೇಳಿ ಹಿಂದಕ್ಕೆ ಸರಿದು
ಕೊಳ್ಳದೆ ಅಲ್ಲಿಯೇ ನಿಂತುಕೊಂಡನು. ಆಗ ಆನೆಯು ಅವನನ್ನು ತನ್ನ ಸೊಂ
ಡೆಯಿಂದ ಹಿಡಿದು ಮೇಲಕ್ಕೆತ್ತಿ ಅವನನ್ನು ನೆಲದ ಮೇಲೆ ಒತ್ತ ಟಿಗೆ ಚಲ್ಲಿಕೊ
ಸತು. ಇದರಿಂದ ಅವನಿಗೆ ಬಹಳ ಗಾಯವಾಯಿತು. ಆ ಮೇಲೆ ಅವನು ಈ
ನಡೆದ ಸಂಗತಿಯನ್ನು ಭಗವಾನರ ಮುಂದೆ ತಿಳಿಸಿದನು ಆಗ ಅವರು- “ನೀನು
ದೇವರಿರುವದು ನಿಜವು. ಆನೆಯಾದರೂ ದೇವರಿರುವದು ನಿಜವು. ಆದರೆ ಅದರ
ಮೇಲೆ ಕುಳಿತಿದ್ದ ಮಾವುತನಾದರೂ ದೇವರು. ಅಂದಮೇಲೆ ನೀನು ಆ ಎತ್ತ
ರದ ಮೇಲೆ ಕುಳಿತಿದ್ದ ದೇವರು ಹೇಳಿದ ಮಾತನ್ನು ಏಕೆ ಕೇಳಲ್ಲಿ? 7 ಎಂದು
ಹೇಳಿದರು.
ತಾತ್ಸರ್ಯ.
ಬುದ್ಧಿಯ ಮಾತನ್ನು ಅಕ್ತರಶಃ ಅರ್ಧ ಮಾಡಬಾರದು. ಅದರೆ ತಾತ್ಪ
ರ್ಯವನ್ನು ಗ್ರಹಿಸಿ ವಿವೇಕದಿಂದಲೂ ಎಚ್ಚರಿಕೆಯಿಂದಲೂ ನಡೆಯತಕ್ಕದ್ದು.
೨೨. ಬ್ರಹ್ಮೆಜ್ಞಾನಿಯೆಂ.
ಒಂದು ದಿವಸ ಒಬ್ಬ ಬ್ರಹ್ಮಜ್ಞಾನಿಯಾದ ಸಾಧುವು ಭಗವಾನ್ ಕಾನ
ಕೃಷ್ಣ ಪರಮಹಂಸರು ಇರುತ್ತಿದ್ದ ರಾಣಿ ರಾಶಮೋನಿಯವರ ಕಾಲಿಕಾಗು
— ಶೂ —
ಡಿಗೆ ಬಂದನು. ಆ ದಿವಸ ಅವನು ಏನೂ ಉಂಡಿದ್ದಿಲ್ಲ. ಅವನಿಗೆ ಬಹಳ ಹಸಿ
ವೆಯಾಗಿದ್ದರೂ ಅವನು ಯಾರಿಗೂ ಅನ್ನವನ್ನು ಬೇಡಲಿಲ್ಲ. ಆಗ ಒಂದು ನಾ
ಯಿಯ. ಆ ಗುಡಿಯ ಮೂಲಿಯೊಳಗೆ ಚನ್ಲಿಕೊಟ್ಟದ್ದ ಅನ್ನವನ್ನು ತಿನ್ನುವದನ್ನು
ಅವನು ಕಂಡನು. ಆಗ ಅವನು ಅದರ ಹತ್ತರ ಹೋಗಿ ಆದನ್ನು ಅಪ್ಪಿ ಕೊಂ
ಡು ತಮ್ಮಾ, ನನಗೆ ಪಾಲು ಕೊಡದೆ ನೀನೊಬ್ಬನೇ ತಿನ್ನುವದು ಯೋಗ್ಯ
ವೇ?” ಎಂದು ಹೇಳಿ ಅದರಗೂಡ ತಾನೂ ತಿಂದು, ಆನಂತರ ಅತ್ಯಾನಂದದಿಂದ
ಗುಡಿಯೊಳಗೆ ಬಂದು, ಆ ಗುಡಿಯ ತುಂಬ ತನ್ನ ಧ್ವನಿಯು ಕೇಳಿಸುವಂತೆ ಕಾ
ಲಿಕಾದೇವಿಯ ಸ್ತು ತಿಸ್ಕೋತ್ರಗಳನ್ನು ಹಾಡಿ, ತನ್ನ ಭಕ್ತಿಯನ್ನು ಸಮರ್ಪಿಸಿ
ದನು. ಆ ಮೇಲೆ ಅವನು ಆ ಗುಡಿಯನ್ನು ಬಿಟ್ಟು ಹೋಗುವಾಗ ಭಗವಾನರು
ತಮ್ಮೊಬ್ಬ ಶಿಷ್ಯನಿಗೆ" ಆವನು ಎಲ್ಲಿ ಹೋಗುತ್ತಾ ನೆ ನೋಡು; ಹಾಗೂ ಅವನು
ಏನು ಮಾಡುತ್ತಾನೆಂಬುವದನ್ನು ನನಗೆ ಬಂದು ತಿಳಿಸು” ಎಂದು ಹೇಳಿದರು.
ಆ ಪ್ರಕಾರ ಭಗವಾನರ ಶಿಷ್ಯನು ಆ ಸಾಧುವಿನ ಬೆನ್ನ ಹತ್ತಿ ಕೆಲವು ದೂರ
ಹೋಗಲಾಗಿ ಅವನು ತಿರುಗಿ ನೋಡಿ- ಏಕೆ ನನ್ನ ಬೆನ್ನ ಹತ್ತುವೆ?” ಎಂದು
ಕೇಳಿದನು. ಅದಕ್ಕೆ ಆ ಶಿಷ್ಯನು ಆ ಸಾಧುವಿಗೆ -« ಸ್ವಾಮಿ, ನನಗೆ ಸ್ವಲ್ಪ
ಉಪದೇಶವನ್ನು ಹೇಳಿರಿ” ಎಂದು ಹೇಳಿದನು. ಆಗ ಆ ಸಾಧುವು-« ಯಾವಾ
ಗ ನಿನ್ನ ಕಣ್ಣಿಗೆ ಕಂದಕದೊಳಗಿನ ನೀರು ಮತ್ತು ಪವಿತ್ರವಾದ ಗಂಗಾನದಿ
ಯ ನೀರು ಒಂದೇ ಕಾಣಿಸುತ್ತವೆಯೋ, ಹಾಗೂ ಯಾವಾಗ ನಿನ್ನ ಕಿವಿಗೆ ಮ
ಧುರವಾದ ಕೊಳಲಿನ ನಾದವು ಮತ್ತು ಜನಸಮೂಹದ ಸಪ್ಪಳವು ಒಂದೇ ಕೇ
ಳಿಸುತ್ತವೋ ಅಗ ನಿನಗೆ ಬ್ರಹ್ಮಜ್ಞಾನವು ಬರುವದು? ಎಂದು ಹೇಳಿದನು. ಇ
ದರಂತೆ ಆ ಶಿಷ್ಯನು ಭಗವಾನರ ಕಡೆಗೆ ಬಂದು ತಿಳಿಸಲಾಗಿ ಭಗವಾನರು ಅವ
ನಿಗೆ. « ಆ ಮನುಷ್ಯನಿಗೆ ಬ್ರಹ್ಮಾನಂದವು ಆಗಿದ್ದು ಬ್ರಹ್ಮಜ್ಞಾನವು ಪ್ರಾಪ್ತವಾ
ಗಿರುತ್ತದೆ. ಸಿದ್ಧರು ಒಮ್ಮೊಮ್ಮೆ ಸಣ್ಣ ಮಕ್ತಳಂತೆಯೂ, ಒಮ್ಮೊಮ್ಮೆ ಹೊ
ಲಸು ಜನರಂತೆಯೂ, ಒಮ್ಮೊಮ್ಮೆ ಹುಚ್ಚರಂತೆಯೂ ಬೇರೆ ಬೇರೆ ವೇಷಗಳಿಂದ
ಅಡ್ಡಾಡುತ್ತಾರೆ ” ಎಂದು ಹೇಳಿದರು.
ತಾತ್ಸರ್ಯ.
ಬ್ರಹ್ಮಜ್ಞಾನಿಗಳನ್ನು ಅವರ ಆಚರಣೆಯಿಂದಲೇ ಪರೀಕ್ಷೆ ಮಾಡಿಕೊಳ್ಳ
ಎ. ತಿಕ್ರಿ ೨
ತಕ್ಕದ್ದು. ಅವರ ವೇಷಗಳ ಮೇಲಿಂದ ನಂಬಿ ಯಾರೂ ತಪ್ಪು ಗ್ರಹಿಕೆಯನ್ನು
ಮಾಡಿಕೊಳ್ಳಬಾರದು.
೨೩. ಪುತ್ರಶೋಕವು ವ್ಯರ್ಥವಾದದ್ದು.
ಒಬ್ಬಾನೊಬ್ಬ ಬುದ್ಧಿ ವಂತ ಒಕ್ಕಲಿಗನಿಗೆ ಒಬ್ಬನೇ ಮಗನು ಇದ್ದನು.
ಆದುದರಿಂದ ಸ್ವಾಭಾವಿಕವಾಗಿ ಆ ಒಕ್ಕಲಿಗನ ಪ್ರತಿಯು ಅವನ ಮೇಲೆ ಬಹ
ಳ ಅತ್ತು. ಒಂದು ದಿವಸ ಅಕಸ್ಮಾತ್ತಾಗಿ ಅ ಹುಡುಗನು ಮಾರಿಕಾ ಬೇನೆ
ಯಿಂದ ಸತ್ತನು. ಆದುದರಿಂದ ಅವನ ಮನೆಯೊಳಗಿನ ಯಾವತ್ತು ಜನರಿಗೆ
ಅತಿಶಯ ದುಃಖವಾಗಿ ಅವರು ಅಳಲಿಕ್ಕೆ ಹತ್ತಿದರು. ಆದರೆ ತಂದೆಯು ಮಾತ್ರ
ಶಾಂತ ಮನಸ್ಸು ಮಾಡಿ ಕುಳಿತುಕೊಂಡು ಬಿಟ್ಟಿದ್ದನು ಅವನೇನೂ ಆಳಲಿಲ್ಲ
ಇಷ್ಟೇ ಅಲ್ಲ, ಅವನು ತನ್ನ ಮನೆಯ ಜನರಿಗೆ ಅಳಬೇಡಿರೆಂದು ಸಮಾಧಾನ
ಮಾಡಲಿಕ್ಕೆ ಹತ್ತಿದನು. ಇದನ್ನು ನೋಡಿ ಅವನ ಹೆಂಡತಿಯು ತನ್ನ ಗಂಡ
ನಿಗೆ ಮಗನು ಸತ್ತ ಬಗ್ಗೆ ಏನೂ ದುಃಖವಾಗಿಲ್ಲವೆಂದು ತಿಳಿದುಕೊಂಡು ತಿರ
ಸ್ವಾರದಿಂದ-« ನಮ್ಮ ಪ್ರೀತಿಯ ಮಗನು ಸತ್ತದ್ದಕ್ಕಾಗಿ ನಿಮ್ಮ ಕಣ್ಣೊಳಗಿಂದ
ಒಂದು ಹನಿ ಸಹ ಕಣ್ಣೀರು ಬರಲೊಲ್ಲದು. ನೀವು ಎಂಧಾ ನಿರ್ದಯರು
ಇದ್ದೀರಿ? ೫ ಎಂದು ನುಡಿದಳು ಆಗ ಆ ಒಕ್ಕಳಿಗನು ಶಾಂತ ರೀತಿಯಿಂದ
“ ಪ್ರಿಯೇ, ನಿನ್ನೆ ರಾತ್ರಿ ಕನಸಿನಲ್ಲಿ ನಾನು ಅರಸನಾಗಿ ಎಂಟು ಮಂದಿ ಗಂಡು
ಮಕ್ಕಳನ್ನು ಹಡೆದದ್ದರಿಂದ ಬಹಳ ಸುಖಿಯಾಗಿದ್ದೆ ನು. ಈಗ ನಾನು ಆ ಎಂಟು
ಮಂದಿ ಮಕ್ಕಳು ಹೋದದ್ದ ಕ್ಕಾಗಿ ದುಃಖ ಮಾಡಬೇಕೋ, ಈ ನಮ್ಮ ಪ್ರಿ
ಯಕರ ಮಗನು ಹೋದದ್ದಕ್ಕಾ ಗಿ ದುಃಖಮಾಡಬೇಕೋ ಎಂಬದು ನನಗೆ
ತಿಳಿಯಲೊಲ್ಲದು ” ಎಂದು ಉತ್ತರ ಕೊಟ್ಟನು. ಇದನ್ನು ಕೇಳಿ ಆ ಒಕ್ಕಲಿ
ಗನ ಹೆಂಡತಿಯು ಏನೂ ಉತ್ತರ ಕೊಡಲಾರದೆ ಸುಮ್ಮನಾದಳು.
ತಾತ್ಪರ್ಯ.
ಜ್ಞಾನಿಗಳು ಈ ಜಗತ್ತಿನಲ್ಲಿ ನಡೆಯುವ ಸಂಗತಿಗಳು ಕೇವಲ ಸ್ವಪ್ನಮ
ಯವಾಗಿರುತ್ತವೆಂತಲೂ, ಆತ್ಮದ ಹೊರತಾಗಿ ಯಾವದೂ ನಿಜವಲ್ಲವೆಂತಲೂ
ಎಂ ನೀ ಎ೯.
ಚೆನ್ನಾಗಿ ತಿಳಿದಿರುವರು. ಆದುದರಿಂದ ಅವರು ಸುಖದು&ಖಗಳು, ಲಾಭಹಾ
ನಿಗಳು ಜಯಾಪಜಗಳು ಒಂದೇ ಎಂದೂ ತಿಳಿದುಕೊಂಡು ಸಮಾಧಾನದಿಂದ
ವರ್ತಿಸುವರು. ಅವರು ಸುಖ ಬಂದಾಗ ಹಿಗ್ಗುವದಿಲ್ಲ; ದುಃಖ ಬಂದಾಗ ತಗ್ಗು
ವದಿಲ್ಲ.
ಗ ಆ. ೨.
೨೪. ಹನುಮಂತದೇವರ ಗುಡಿಸಲವು.
ಒಬ್ಬ ಮನುಷ್ಯನು ಒಂದು ಪರ್ವತದ ತುದಿಯ ಮೇಲೆ ಒಂದು ಗುಡಿಸ
ಲವನ್ನು ಕಟ್ಟಿಸಿದ್ದನು. ಅದನ್ನು ಕಬ್ಬಿಸಲಿಕ್ಕೆ ಅವನಿಗೆ ಬಹಳ ವೆಚ್ಚವೂ ಶ್ರ
ಮವೂ ತಾಗಿದ್ದವು. ಕೆಲವು ದಿವಸಗಳ ನಂತರ ಒಂದು ದೊಡ್ಡ ಬಿರುಗಾಳಿಯು
ಬೀಸಿದ್ದರಿಂದ ಆ ಗುಡಿಸಲದೊಳಗೆ ಗಾಳಿಯು ತುಂಬಿಹೋಯಿತು. ಇದರಿಂದ
ಆ ಗುಡಿಸಲವು ಈಗ ಬೀಳುತ್ತದೋ ಇನ್ನೊಂದು ಗಳಿಗೆಗೆ ಬೀಳುತ್ತದೋ ಎಂ
ಬುವಂತೆ ಅಲ್ಲಾಡಹತ್ತಿತು. ಆಗ ಆ ಗುಡಿಸಲದ ಒಡೆಯನು ಅದನ್ನು ಉಳಿಸಿ
ಕೊಳ್ಳಬೇಕೆಂದು ವಾಯುನಿಗೆ-"" ದೇವಾ, ನಿನಗೆ ಕೈಮುಗಿದು ಬೇಡಿಕೊಳ್ಳು
ತ್ತೇನೆ. ನನ್ನ ಗುಡಿಸಲವನ್ನು ಕೆಡವಬೇಡ ” ಎಂದು ಪ್ರಾರ್ಥಿಸಿದನು. ಅದಕ್ಕೆ
ವಾಯುದೇವರು ಕೇಳಲ್ಲ ಅವನು ಎಷ್ಟು ಪ್ರಾರ್ಥಿಸಿದರೂ ಆ ಗುಡಿಸಲವು
ಅಗಳಾಡುವದು ನಿಲ್ಲಲಿಲ್ಲ. ಆಗ ಅವನು, ಹನುಮಂತದೇವರು ವಾಯುದೇ
ವರ ಮಗನಿರುವದರಿಂದ ಹನುಮಂತದೇವರದೇ ಗುಡಿಸಲವಿರುತ್ತದೆಂದು ವಾ
ಯುದೇವರಿಗೆ ಬೇಡಿಕೊಂಡರೆ ವಾಯುದೇವರು ತನ್ನ ಮೊರೆಯನ್ನು ಕೇ
ಳದೆ ಇರಲಿಕ್ಕಿಲ್ಲವೆಂದು ವಿಚಾರ ಮಾಡಿ-*" ಭಗವಾನ್ ಪವನದೇವಾ! ಇದು
ನಿನ್ನ ಮಗನಾದ ಹನುಮಂತದೇವರ ಗುಡಿಸಲವಿರುತ್ತ ಡೆ. ಅದುದರಿಂದ ಅದ
ನ್ನು ಹೇಗಾದರೂ ಕಾಪಾಡು” ಎಂದು ಪುನಃ ಬೇಡಿಕೊಂಡನು. ಆದರೂ
ವಾಯುದೇವರು ಕೇಳಲಿಲ್ಲ. ಆ ಮೇಲೆ ಅವನು ಈ ಗುಡಿಸಲವು ಹನುಮಂತ
ದೇವರ ಒಡೆಯನಾದ ಪ್ರ ಭುರಾಮಚಂದ್ರ ನದೇ ಇರುತ್ತ ದೆಂದು ಬೇಡಿಕೊಂಡರೆ
ವಾಯುದೇವರಿಗೆ ತನ್ನ ಮೇಲೆ ದಯವು ಬಾರಜಿ ಇರಲಿಕ್ಕಿಲ್ಲವೆಂದು ತಿಳಿದು
ಅವನು-« ಪ್ರಭೋ, ಈ ಗುಡಿಸಲವು ಭಗವಾನ್ ಶ್ರೀರಾಮಚಂದ,ನದು ಇರು
— ಡರ
ತ್ರಜಿ. ಇದನ್ನು ನೀನು ರಕ್ಷಿಸು” ಎಂದು ಬಹಳ ದೀನವಾಣಿಯಿಂದ ಪ್ರಾರ್ಥಿ
ಸಿದನು. ಆದರೂ ವಾಯುದೇವರಿಗೆ ಕರುಣೆಯು ಹುಬ್ಬಲಿಲ್ಲ. ಗುಡಿಲಸವು
ಬಹಳ ಹೋಯ್ದಾಡಹತ್ತಲು ಅದು ತನ್ನ ಮೇಲೆ ಕಡಕೊಂಡು ಬೀಳುವದೋ
ಐನೋ ಎಂದು ಅವನು ಅಂಜಿಕೂಂಡು ತನ್ನ ಜೀವವನ್ನು ಉಳಿಸಿಕೊಳ್ಳುವದ
ಕ್ಕಾಗಿ ಆ ಗುಡಿಸಲ ಬಿಟ್ಟು ಹೊರಗೆ ಓಡಿಬಂದು-. ಈ ಗುಡಿಸಲವು ಹಾಳಾಗಿ
ಹೋಗಲಿ! ಅದರ ಗೊಡವೆಯು ನನಗೇನು?” ಎಂದು ಅದಕ್ಕೆ ಶಪಿಸಹತ್ತಿ
ದನು.
ತಾತ್ಪರ್ಯ.
ಆರ್ಧಿಕ ಲಾಭದ ಸಲುವಾಗಿ ಅಥವಾ ಐಹಿಕ ಸುಖದ ಸಲುವಾಗಿ
ಒಣ ಮಾತುಗಳಿಂದ ವೇಳೆಯನ್ನು ಕಳೆಯದೆ ಪರಮೇಶ್ವರನ ಭಕ್ತಿಯನ್ನು ಮಾ
ಡಿದರೆ ಆತನಿಂದ ನಿಜವಾದ ಕಲ್ಯಾಣವು ಆಗುವದು.
೨೫. ಒಬ್ಬ ಭಿಕ್ಷುಕನ ಬಳಿಗೆ ಇನ್ನೊಬ್ಬ
ಭಿಕ್ಷುಕನು ಹೋದದ್ದು.
ಜಕಬರ ಬಾದರಹನ ಆಳಿಕೆಯಲ್ಲಿ ದಿಲ್ಲಿಯ ಹತ್ತರ ಇರುವ ಒಂದು ಅಡ
ವಿಯೊಳಗೆ ಒಬ್ಬ ಫಕೀರನು ಒಂದು ಗುಡಿಸಲವನ್ನು ಕಟ್ಟಿ ಕೊಂಡು ಇರುತ್ತಿ
ದನು. ಅನೇಕರು ಮೇಲಿಂದ ಮೇಲೆ ಆನನ ದರ್ಶನಕ್ಕಾಗಿ ಬರುತ್ತಿದ್ದರು. ಆ
ದರೆ ತನ್ನ ಕಡೆಗೆ ಬರುವ ಈ ಗೃ ಹಸ್ಯರಿಗೆ ಅದರಾತಿಧೈೃವನ್ನು ಮಾಡಲಿಕೈ ಅ
ವನ ಹತ್ತರ ಏನೂ ಹಣವು ಇದ್ದಿಲ್ಲ. ಆದುದರಿಂದ ಆ ಫಕೀರನು ಸಾಧುಗಳಿಗೂ
ಫಕೀರರಿಗೂ ಅಕಬರ ಬಾದಶಹನು ಉದಾರತನದಿಂದ ಹಣದ ಸಹಾಯವನ್ನು
ಮಾಡುತ್ತಾನೆಂಬ ಖ್ಯಾತಿಯನ್ನು ಕೇಳಿ ಆ ಬಾದಶಹನ ಕಡೆಗೆ ಹೋದನು.
ಆಗ ಅ ಬಾದಶಹನು ಮಸೂತಿಯೊಳಗೆ ನಮಾಜ ಮಾಡುತ್ತಿದ್ದನು. ಆದುದ
ರಿಂದ ಅವನ ನಮಾಜ ಮುಗಿಯುವತನಕ ಸಕೀರನು ಅ ಸ್ಥಳದ ಹತ್ತರಸ್ವಲ್ಪ
ಹೊತ್ತು ಕುಳಿತುಕೊಂಡನು. ಆ ಕಾಲಕ್ಕೆ ಅಕಬರನು ತನ್ನ ನಮಾಜದಲ್ಲಿ-
ಭರಿ ತಾನ
4 ಪ್ರಭುವೇ, ನನಗೆ ಹೆಚ್ಚು ಹಣವೂ, ಹೆಚ್ಚು ಅಧಿಕಾರವೂ, ಹೆಚ್ಚು ದೇಶಗ
ಳೂ ಸಿಗುವಂತೆ ಅನುಗ್ರಹಿಸು” ಎಂದು ದೇವರಿಗೆ ಬೇಡಿಕೊಂಡನು. ಅದನ್ನು
ಆ ಫಕೀರನು ಕೇಳಿ ಒಮ್ಮಿಂದೊಮ್ಮೆ ಆ ಸ್ಥಳವನ್ನು ಬಿಟ್ಟು ಹೋಗಲಾರಂಭಿ
ಸಿದನು. ಇದನ್ನು ಆ ಬಾದಶಹನು ನೋಡಿ ಅವರಿಗೆ ಪುನಃ ಕುಳಿತುಕೊಳ್ಳ
ಲಿಕ್ಕೆ ಕೈಸನ್ನೆಯನ್ನು ಮಾಡಿದನು. ನಮಾಜು ಮುಗಿದ ಬಳಿಕ ಬಾದಶಹನು
ಆ ಫಕೀರನಿಗೆ-" ನೀನು ನನ್ನನ್ನು ಕಾಣುವದಕ್ಕಾಗಿ ಬಂದಿದ್ದಿ. ಹೀಗಿದ್ದು
ನೀನು ನನ್ನ ಸಂಗಡ ಏನೂ ಮಾತಾಡದೆ ತಿರುಗಿ ನಡೆದಿದ್ದ ಕಾರಣವೇನು?”
ಎಂದು ಕೇಳಿದನು. ಆಗ ಸಕೀರನು-"" ಬಾದಶಹರೇ, ನಾನು ಬಂದ ಉದ್ದೆ (
ಶವನ್ನು ನಿಮ್ಮ ಮುಂದೆ ತಿಳಿಸಿ ನಿಮಃ? ಸುಮ್ಮನೆ ಯಾಕೆ ಶ್ರಮ ಕೊಡಲಿ!”
ಎಂದು ಹೇಳಿದನು. ಆ ನಂತರ ಬಾದಶೆಹನು ಫಕೀರನಿಗೆ ಬಹಳ ಆಗ್ರಹ ಮಾ
ಡಿದ್ದರಿಂದ ಫಕೀರನು-" ಬಾದಶಹರೇ, ನನ್ನ ಕಡೆಗೆ ಅನೇಕ ಜನರು ಉಪದೇ
ಶವನ್ನು ಕೇಳಲಿಕ್ಕೆ ಬರುತ್ತಾರೆ. ಅದರೆ ನನ್ನ ಬಳಿಯಲ್ಲಿ ಹಣವಿಲ್ಲದ ಮೂಲಕ
ಅವರಿಗೆ ಆದರಾತಿಥ್ಯು ಮಾಡುವದು ನನ್ನಿಂದ ಆಗಲೊಲ್ಲದು. ಆದುದರಿಂದ ನಾನು
ನಿಮ್ಮ ಬಳಿಗೆ ಸಹಾಯ ಬೇಡಬೇಕೆಂದು ಬಂದೆನು? ಎಂದು ಹೇಳಿದನು. «ಹಾ
ಗಾದರೆ ನೀನು ಇದನ್ನು ನನಗೆ ತಿೀಸದೆ ಯಾಕೆ ಹೊರಟು ಹೋಗುತ್ತಿದ್ದಿ? ”
ಎಂದು ಅಕಬರ ಬಾದಶಹನು ಆ ಫಕೀರನಿಗೆ ಪುನಃ ಕೇಳಲಾಗಿ ಅವನು ಬಾದ
ಶಹನಿಗೆ-* ನೀವು ಸ್ವತಃ ಭಿಕ್ಷುಕರಂತೆ ಪ್ರಭುವಿನ ಹತ್ತರ ಹಣವನ್ನೂ, ಅಧಿಕಾ
ರವನ್ನೂ, ದೇಶಗಳನ್ನೂ ಭಿಕ್ಷೆ ಬೇಡಿಕೊಳ್ಳುವದನ್ನು ನಾನು ನೋಡಿ-«"ಯಾರು
ಸ್ವತಃ ಭಿಕ್ಷುಕರಿರುತ್ತಾರೋ ಅಂಥವರ ಹತ್ತರ ಭಿಕ್ಷೆ ಬೇಡುವ ಪ್ರಯೋಜನ
ವೇನು? ನನಗೆ ಭಿಕ್ಷೆ ಬೇಡಿಕೊಂಡ ಹೊರತಾಗಿ ನಿರ್ವಾಹವಿಲ್ಲವೆಂದು ಕಂಡ.ಬಂ
ದರೆ ನಾನು ದೇವರ ಹತ್ತರ ಭಿಕ್ಷೆಯನ್ನು ಬೇಡುವದು ನೆಟ್ಟಗೆಂದು ನನ್ನಷ್ಟಕ್ಕೆ
ವಿಚಾರ ಮಾಡಿದೆನು ” ಎಂದು ಹೇಳಿದನು.
ತಾತ್ಪರ್ಯ.
ಜ್ಞಾ ನಿಗಳು ಜ್ಞಾನವನ್ನು ಕಲಿಸುತ್ತಾರೆಯೇ ಹೊರತು ಪ್ರಪಂಚದ ದು
ರಾಶೆಯಲ್ಲಿಯೂ ಮೋಹದಲ್ಲಿಯೂ ಬೀಳಲಿಕ್ಕೆ ಎಂದಿಗೂ ಕಲಿಸುವದಿಲ್ಲ. ಅಕ
ಬರನು ದೇವರ ಹತ್ತರ ತನಗೆ ಶಾಶ್ವತ ಸುಖವನ್ನೂ ಮೋಕ್ಷವನ್ನೂ ಕೊಡಲಿ
೨೨ ೪೧ __
ಕೈ ಕೇಳಿಕೊಳ್ಳುವ ಬದಲಾಗಿ ತನಗೆ ಹೆಚ್ಚು ಹಣವನ್ನೂ ಅಧಿಕಾರವನ್ನೂ
ದೇಶಗಳನ್ನೂ ಬೇಡಿಕೊಳ್ಳುವದನ್ನು ಫಕೀರನು ತನ್ನ ಕಿವಿಯಿಂದ ಕೇಳಿ ಅವ
ನನ್ನು ನಾಚಿಸುವದಕ್ಕಾಗಿ ಅಲ್ಲಿಂದ ಎದ್ದು ಹೋದಂತೆ ಮಾಡಿ ಅವನಿಗೆ ಕಡೆಗೆ
ಬುದ್ಧಿಯನ್ನು ಕಲಿಸಿದನು.
೨೬. ಒಬ್ಬ ಸಾಧುವಿನ ಭೂತದಯವು.
ಒಂದು ಹಳ್ಳಿಯೊಳಗೆ ಒಬ್ಬಾನೊಬ್ಬ ಸ್ವಾಮಿಯ ಮಠದಲ್ಲಿ ಇಬ್ಬರು
ಸಾಧುಗಳು ಇದ್ದರು. ಅವರು ಪ್ರತಿದಿನ ತಮ್ಮ ಭಿಜ್ಷಾಪಾತ್ರೆಯನ್ನು ತೆಗೆದು
ಕೊಂಡು ಊರೊಳಗೆ ಭಿಕ್ಷೆಯನ್ನು ಬೇಡಲಿಕೈ ಹೋಗುತ್ತಿದ್ದರು. ಅವರಲ್ಲಿ
ಒಬ್ಬ ಸಾಧುವು ಒಂದು ದಿವಸ ಒಬ್ಬ ಅನಾಮದಾರನ ಮನೆಯ ಮುಂದೆ
ಹಾದು ಹೋಗುವಾಗ ಆ ಇನಾಮದಾರನು ತನ್ನ ಮನೆಯಲ್ಲಿ ಒಬ್ಬ ಬಡವನ
ನ್ನು ಹೊಡೆಯುವದನ್ನು ಕಂಡನು. ಆಗ ಆ ಸಾಧುವು ಆ ಇನಾಮದಾರನ ಮನೆ
ಯೊಳಗೆ ಹೋಗಿ ಅವನಿಗೆ-« ನೀನು ಹೊಡೆಯಬೇಡ ” ಎಂದು ಬಹಳ ಆಂಗ
ಲಾಚಿ ಬೇಡಿಕೊಂಡನು. 'ಆದರೆ ಆ ಇನಾಮದಾರನು ಮತ್ತಿಷ್ಟು ಸಿಟ್ಟಿಗೆದ್ದು
ಆ ಸಾಧುವನ್ನು ಮೈಮುರಿ ಹೊಡೆದನು. ಇದರಿಂದ ಆ ಸಾಧುವಿಗೆ ಬಹಳ
ಪೆಟ್ಟು ಹತ್ತಲು ಅವನು ಎಚ್ಚರಿಕೆ ತಪ್ಪಿ ನೆಲದ ಮೇಲೆ ಬಿದ್ದುಕೊಂಡನು. ಇ
ದನ್ನು ಒಬ್ಬ ಮನುಷ್ಯನು ಕಣ್ಣಾರೆ ನೋಡಿ ಈ ಸಂಗತಿಯನ್ನು ಮಠಕ್ಕೆ
ಹೋಗಿ ತಿಳುಹಿಸಿದನು. ಆಗ ಅವನ ಜೊತೆಗಾರರಾದ ಎರಡನೇ ಸಾಧುಗಳು
ಅಲ್ಲಿಗೆ ಬಂದು ಅವನನ್ನು ಮಠಕ್ಕೆ ತೆಗೆದುಕೊಂಡು ಹೋಗಿ ಒಂದು ಕೋ
ಣೆಯಲ್ಲಿ ಹಾಕಿದರು. ಆ ಪೆಟ್ಟು ತಿಂದ ಸಾಧುವು ಬಹಳ ಹೊತ್ತು ಎಚ್ಚ
ರಿಕೆ ತಪ್ಪಿ ಮಲಗಿಕೊಂಡನು. ಆದುದರಿಂದ ಅವನ ಜೊತೆಗಾರರು ದುಃಖದಲ್ಲಿ
ಯೂ ಚಿಂತೆಯಲ್ಲಿಯೂ ಮುಳುಗಿ ಅವನಿಗೆ ಗಾಳಿ ಬೀಸುವುದನ್ನೂ, ಅವನ
ಮೋರೆ ತೊಳೆಯುವದನ್ನೂ, ಅವನ ಬಾಯೊಳಗೆ ಹಾಲು ಹಾಕುವದನ್ನೂ
ಮಾಡಿದರು. ಇದರಿಂದ ಅವನಿಗೆ ಬಹಳ ಹೊತ್ತಿನ ನಂತರ ಅರ್ಧಮರ್ಧ ಎಚ್ಚ
6
— ೪೨ _...
ರಿಕೆಯು ಬರಲಾಗಿ ಅವನು ಕಣ್ಣು ತೆರೆದು ತನ್ನ ಜೊತೆಗಾರರಾದ ಸಾಧುಗಳ
ಕಡೆಗೆ ನೋಡಿದನು. ಆಗ ಅವರಲ್ಲಿ ಒಬ್ಬನು ಅವನು ತಮ್ಮ ಗುರುತು ಹಿಡಿ
ಯುತ್ತಾ ನೋ ಇಲ್ಲವೋ ಎಂಬುವದನ್ನು ತಿಳಿದುಕೊಳ್ಳು ವದಕ್ಕಾಗಿ ಸ್ವಾ
ವಾ, ಈಗ ನಿಮ್‌ಂ ತಾರು ಹಾಲು ಕುಡಿಸುತ್ತಾರೆಂಬುವದನ್ನು ಗುರುತು
ಹಿಡಿಯುತ್ತೀರಾ? ಎಂದು ಸೇಳಿದನು. ಅದಕ್ಕೆ ಆ ನಾಧುವು ತನ್ನ ನಿರ್ಬಲ
ವಾದ ಧೃನಿಯಿದ-4 ತಮ್ಮಾ ನನ್ನನ್ನು ಹೊಡೆದವನು ಈಗ ನನಗೆ
ಹಾಲು ಹಾಕುತ್ತಿಣ್ಣನೆ? ಎಂಬ ಉತ್ತರಕೊಟ್ಟನು.
ಣತ್ಸರ್ಯ.
ಪರಮಾತ್ಮನ ಸ್ಪಾಕ್ಟಾಶ್ಟಾರವಾಗಿರುವ ಮನುಷ್ಯನು ತನಗೆ ಕೆಡಕು
ಮಾಡಿದವರನ್ನು ಸಹ ತಿರಸ್ವರಿಸುವದಿಲ್ಲ. ಅವನಿಗೆ ಸುಖದುಃಖಗಳು ಸರಿಯಾ
ಗಿಯೇ ಇರುತ್ತವೆ. ಅವನು ಸದ್ಗುಣಿಗಳ ಮೇಲೂ, ದುರ್ಗುಣಿಗಳ ಮೇಲೂ
ದಯವನ್ನು ತೋರಿಸಿ ಅವರ ಮೇಲೆ ಉಪಕಾರವನ್ನು ಮಾಡುತ್ತಾನೆ.
೨೭. ದೇವರು ಸರ್ವೋತ್ಕೃಷ್ಟ ಬಣ್ಣಗಾರನು.
ಒಬ್ಬ ಬಣ್ಣ ಗಾರನು ತನ್ನ ಕಡೆಗೆ ಯಾವನಾದರೂ ಗಿರಾಕಿಯು ಬಂ
ದಶೆ ನಿನ್ನ ಅರಿವೆಗೆ ಯಾವ ಬಣ್ಣವನ್ನು ಎದ್ದಿ ಕೊಡಲಿ? » ಎಂದು ಕೇಳು
ತ್ತಿದ್ದನು. ಆ ಗಿರಾಕಿಯು-« ಕೆಂಪು” ಎಂದು ಹೇಳಿದರೆ ಆ ಬಣ್ಣಗಾರನು
ಅವನ ಅರಿವೆಯನ್ನು ಒಳಗೆ ತೆಗೆದುಕೊಂಡು ಹೋಗಿ ತನ್ನ ದೋಣಿಯೊಳಗೆ
ಎದ್ದಿ ಕೊಂಡು ಬಂದು «ಇದು ತಕ್ಕೊಳ್ಳಿರಿ. ನಿಮ್ಮ ಅರಿವೆಗೆ ಕೆಂಪು ಬಣ್ಣ ಎದ್ದಿ
ರುತ್ತೇನೆ* ಎಂದು ಹೇಳಿ ಅದನ್ನು ತಂದುಕೊಡುತ್ತಿದ್ದ ನು. ಮತ್ತೊಬ್ಬನು
« ಹಳದಿ” ಎಂದು ಹೇಳಿದರೆ ಅವನು ಪುನಃ ಒಳಗೆ ಹೋಗಿ ಅವನ ಅರಿವೆ
ಯನ್ನು ಅದೇ ದೋಣಿಯಲ್ಲಿ ಎದ್ದಿ ಹೊರಗೆ ತಂದು-« ಇದು ತಕ್ಕೊಳ್ಳಿರಿ.
ನಿಮ್ಮ ಅರಿವೆಗೆ ಹಳದಿ ಬಣ್ಣ ಎದ್ದಿರುತ್ತೇನೆ” ಎಂದು ಹೇಳಿ ಅದನ್ನು ತಂದು
ಕೊಡುತ್ತಿದ್ದನು. ಇದೇ ಪ್ರಕಾರ ಅವನ ಬಳಿಗೆ ಯಾವ ಗಿರಾಕಿಗಳು ಬಂದ
ಎ ಭಕ್ಷಿ 2.
ರೊ ಅವನು ಅವರ ಅರಿವೆಗಳಿಗೆ ಅವರ ಇಚ್ಛಾ ನುಸಾರವಾಗಿ ನೀಲಿ, ಕಿತ್ತಳೆ,
ಹಸರು ಮುಂತಾದ ಬೇರೆ ಬೇರೆ ಬಣ್ಣಗಳನ್ನು ಆದೇ ದೋಣಿಯಲ್ಲಿ ಎದ್ದಿ ಅರಿ
ವೆಗಳನ್ನು ತಂದುಕೊಡುತ್ತಿದ್ದ ನು. ಇದನ್ನೆಲ್ಲ ದೂರದಿಂದಲೇ ನೋಡುತ್ತ ನಿಂತಿ
ದ್ದ ಬೇರೆ ಒಬ್ಬ ಗಿರಾಕಿಯು ೮ ಬಣ್ಣಗಾರನ ಬಳಿಗೆ ಬಂದು. « ಗೆಳೆಯಾ,
ನನಗೆ ಅಂಥಾದ್ದೇ ಒಂದು ಬಣ್ಣ ವ್ರ ಸೇರುತ್ತದೆಂದು ಹೇಳಲಾರೆನು. ನಾನು
ಬಣ್ಣದ ಪ್ರೀತಿಗಾರನು ಅಲ್ಲ. ನಿನ್ನ ಮನಸ್ಸಿಗೆ ಯಾವ ಬಣ್ಣ ವ್ರ ಸೇರುತ್ತ
ದೋಆ ಒಣ್ಣವನ್ನು ನೀನು ನನ್ನ ಅರಿವೆಗೆ ಕೊಡು” ಎಂದು ಹೇಳಿದನು.
ತಾತ್ಸರ್ಯ.
ದೇವರು ಭಕ್ತರ ಇಚ್ಛಾ ನುಸಾರವಾಗಿ ಅವರವರಿಗೆ ಸಾಕಾರದಿಂದಲೂ
ನಿರಾಕಾರದಿಂದಲೂ ದರ್ಶನ ಕೊಡುತ್ತಾನೆ. ಮೇಲಿನ ಕಥೆಯೊಳಗಿನ ಬಣ್ಣ
ಗಾರನು ಹೇಗೆ ಬೇರೆ ಬೇರೆ ಗಿರಾಕಿಗಳಿಗೆ ಅವರವರ ಅಪೇಕ್ಷೆಯ ಮೇರೆಗೆ ಬ
ಣ್ಣಗಳನ್ನು ಎದ್ದಿ ಕೊಡುತ್ತ ದ್ವನೋ ಅದರಂತೆ ದೇವರು ಭಕ್ತರ ಬೇರೆ ಬೇರೆ
ಸ್ಥಿತಿಗಳಲ್ಲಿ ಅವರವರ ಭಕ್ತಿಯ ಪ್ರಕಾರ ಅವರ ಇಷ್ಟಾರ್ಥಗಳನ್ನು ಪೂರೈಸಿ
ಕೊಡುತ್ತಾನೆ. ಇಲ್ಲವೆ ಆವುಗಳನ್ನು ನಿರಾಕರಿಸುತ್ತಾನೆ. ಆತನಿಗೆ ಇಂಥ ಮಾ
ರ್ಗದಿಂದ ಅಥವಾ ಇಂಧ ರೀತಿಯಿಂದ ಭಕ್ಕರ ಕಾಮನೆಗಳನ್ನು ತೃಪ್ತಿ ಬಡಿಸ
ಬೇಕೆಂಬ ನಿರ್ಬಂಧನೆಗಳು ಇರುವದಿಲ್ಲ.
೨೮. ಒಬ್ಬ ಡಾಂಭಿಕ ಅಕ್ಕಸಾಲಿಗನು,
ಒಬ್ಬ ಅಕ್ಕನಾಲಿಗನು ಅಭರಣಗಳನ್ನು ಮಾಡುವ ಒಂದು ಅಂಗಡಿ
ಯನ್ನು ಇಟ್ಟಿದ್ದ ನು. ಅವನು ವಿಷ್ಣು ಭಕ್ಕನು ಇದ್ದನು. ಅವನು ಕೊರ
ಳಲ್ಲಿ ತುಳಸೀ ಸರವನ್ನು ಹಾಕಿಕೊಂಡು, ಹಣೆಯ ಮೇಲೆ ಅಂಗಾರ ಅಕ್ಷತಿಗಳ
ನ್ನೂ ಭವ್ಯವಾದ ಮುದ್ರೆಗಳನ್ನೂ ಹಚ್ಚಿಕೊಂಡು, ಯಾವಾಗಲು ಕೈಯಲ್ಲಿ
ಜಪಮಾಲೆಯನ್ನು ಹಿಡಿದು, ವಿಷ್ಣು ಸಹಸ್ರ ನಾಮಾವಳಿಯನ್ನು ಜಪ ಮಾಡು
ತ್ತಿದ್ದನು: ಅವನ ಅಂಗಡಿಯಲ್ಲಿ ಅವನ ಸಂಗಡ ಕೆಲಸ ಮಾಡಲಿಕ್ಕೆ ನಾಲ್ಕ
ದು ಮಂದಿ ಕೆಲಸಗಾರರು ಇದ್ದರು. ಅವರಾದರೂ ದೇವಭಕ್ತರಂತೆ
ಎ. ೪ 1೦ಎ
ಕಾಣಿಸುತ್ತಿದ್ದರು. ಆದುದರಿಂದ ಅವರು ತಮ್ಮನ್ನು ವಂಚಿಸಲಿಕ್ಕಿಲ್ಲವೆಂದು
ಯಾವತ್ತು ಗಿರಾಕಿಗಳು ತಿಳಿದುಕೊಂಡು ತಮ್ಮ ಅಭರಣಗಳನ್ನು ಮಾಡಿಸಲಿಕೈೆ
ಅವರ ಅಂಗಡಿಗೆ ಹೋಗುತ್ತಿದ್ದರು. ಗಿರಾಕಿಗಳು ಯಾರಾದರೂ ಅವರ ಅಂಗೆ
ಡಿಗೆ ಬಂದ ಕೂಡಲೆ ಒಬ್ಬ ಕೆಲಸಗಾರನು " ಕೇಶವ? « ಕೇಶವ? ಎಂದು ಅ
ನ್ಹುತ್ತಿದ್ದನು. ಆ ಮೇಲೆ ಇನ್ನೊ ಬ್ಬನು « ಗೋಪಾಳ « ಗೋಪಾಳ: ಎಂದು
ಅನ್ನುತ್ತಿದ್ದನು. ಕೆಲವು ಹೊತ್ತಿನ ಮೇಲೆ ಮೂರನೇಯವನು " ಹರಿ? « ಹರಿ?
ಎಂದು ಅನ್ನುತ್ತಿದ್ದನು. ಇಷ್ಟಾದ ಮೇಲೆ ನಾಲ್ಕನೇಯವನು " ಹರ? « ಹರ'
ಎಂದು ಅನ್ನುತ್ತಿದ್ದನು. ಈ ಪ್ರಕಾರ ಆ ಅಂಗಡಿಯಲ್ಲಿ ಭಗವನ್ನಾಮೋಚ್ಚಾ
ರಣೆಯು ಮೇಲಿಂದ ಮೇಲೆ ಅಗುವದನ್ನು ನೋಡಿ ಜನರು ಆ ಅಕ್ಕ ಸಾಲಿಗನೂ
ಅವನ ಸಂಗಡ ಕೆಲಸ ಮಾಡುವವರೂ ಬಹಳ ಸಾತ್ವಿಕರೆಂದು ಸ್ವಾಭಾವಿಕ
ವಾಗಿ ತಿಳಕೊಂಡಿದ್ದರು. ಆದರೆ ನಿಜ ಸಂಗತಿಯು ಬಹಳ ಚಮತ್ಕಾರವುಳ್ಳದ್ದಿ
ತ್ತು. ಆ ಅಂಗಡಿಯಲ್ಲಿ ಕೆಲಸ ಮಾಡುವವರು " ಕೇಶವ? " ಕೇಶವ ಎಂದು
ನುಡಿದರೆ ಅಂಗಡಿಗೆ ಬಂದ ಗಿರಾಕಿಯು ಯಾರು? ” ಎಂತಲೂ "ಗೋಪಾಲ
"ಗೋಪಾಳ ಎಂದು ನುಡಿದರೆ « ನಾನು ಅವನನ್ನು ಪೂರಾ ಅನುಭವ ತೆಗೆದು
ಕೊಂಡಿದ್ದು ಇವನು ಶುದ್ಧ ಅಕಳದಂಥ ಮನುಷ್ಯನು ಇದ್ದಾನೆ” ಎಂತಲೂ,
« ಹರಿ: « ಹರಿ' ಎಂದು ನುಡಿದರೆ " ಇಂಥ ಹುಚ್ಚನಿರುವದಾದರೆ ನಾನು ಇವನ
ಭಂಗಾರ ಅಥವಾ ಬೆಳ್ಳಿ ಕಳವು ಮಾಡಬಹುದೋ!” ಎಂತಲೂ, "ಹರ? «ಹರ?
ಎಂದು ನುಡಿದರೆ « ನಿಸ್ಸಂಶಯದಿಂದ ಮಾಡು. ಅವನು [ಆಕಳದಂಥ ಮನು
ಸುನು ಇದ್ದಾನೆ” ಎಂತಲೂ ತಮ್ಮೊಳಗೆ ಆರ್ಥಗಳನ್ನುತಿಳಿದುಕೊಳ್ಳುತ್ತಿದ್ದರು.
ತಾತ್ಪರ್ಯ.
ಹೊಳೆಯುವದೆಲ್ಲ ಚಿನ್ನವಲ್ಲ. ಪರೀಕ್ಷೆ ಮಾಡದೆ ಎಂದೂ ನಂಬಬಾರ
ದು. ಹೊರಗೆ ಭಕ್ತಿಯ ಆಡಂಬರವನ್ನು ಮಾಡುವವರು ಬಹುಶಃ ಕಪಟಗಳಿ
ರುವರು. ಆದುದರಿಂದ ಒನರು ಒಮ್ಮೆಲೆ ಬರೀ ಸವಿಮಾತುಗಳ ಮೇಲಿಂದ ಅ
ಥವಾ ಅವರ ಬಟ್ಟಿಗಳ ಮೇಲಿಂದ ಅಥವಾ ಅವರ ಭಸ್ಮ, ರುದ್ರಾಕ್ಷಿ, ಅಂಗಾರ,
ಅಕ್ಷತಿಗಳ ಮೇಲಿಂದ ಮೋಸ ಹೋಗಬಾರದು. ಅವರ ಕೆಲಸವನ್ನೂ, ಪೂ
ಎ ಭ೫ ೨
ರ್ವೇತಿಹಾಸವನ್ನೂ, ಅವರ ನಡಾವಳಿಯನ್ನೂ ಚನ್ನಾಗಿ ಪರೀಕ್ಷಿಸಿದ ಹೊರತಾ
ಗಿ ಅವರ ಮೇಲೆ ವಿಶ್ವಾಸವಿಡಬಾರದು.
೨೯. ಶ್ರೀರಾಮ ಪ್ರಭುವಿನ ಇಚ್ಛೆಯು!
ಒಂದು ಹಳ್ಳಿಯಲ್ಲಿ ಒಬ್ಬ ನೇಕಾರನು ಇರುತ್ತಿದ್ದನು. ಅವನು ಮಹಾ
ಈಶ್ವರಭಕ್ಕನಿದ್ದನು. ಜನರು ಅವನನ್ನು ಯಾವಾಗಲು ಪ್ರೀತಿ ಮಾಡಿ ಅವನ
ಲ್ಲಿ ಬಹಳ ವಿಶ್ವಾಸವಿಡುತ್ತಿದ್ದರು. ಅವನು ತನ್ನ ಮಗ್ಗದ ಮೇಲೆ ನೇಯ್ಸ ಆರಿ
ವೆಗಳನ್ನು ಸಂತೆಗೆ ಮಾರಲಿಕ್ಕೆ ಒಯ್ದಾಗ ಜನರು ಅವನಿಗೆ-* ಇದರ ಬೆಲೆ
ಏನು? ಎಂದು ಕೇಳಿದರೆ ಅವನು. ಶ್ರೀರಾಮ ಪ್ರಭುವಿನ ಇಚ್ಛೆಯ ಮೇರೆಗೆ
ನೂಲಿನ ಬೆಲೆಯು ಒಂದು ರುಪಾಯಿ ಬಿತ್ತು, ಶ್ರೀರಾಮಪ್ರಭುವಿನ ಇಚ್ಛೆಯ
ಮೇರೆಗೆ ಅದರ ಲಾಭವು ಎರಡು ಆಣೆ ಇರುತ್ತದೆ. ಶ್ರೀರಾಮ ಪ್ರಭುವಿನ ಇಚ್ಛೆ
ಯ ಮೇರೆಗೆ ಈ ಅರಿವೆಯ ಬೆಲೆಯು ಈಗ ಸದ್ಯಕ್ಕೆ ಒಂದು ರುಪಾಯಿ ಆರು
ಆಣೆ ಇರುತ್ತದೆ” ಎಂದು ಉತ್ತರ ಕೊಡುತ್ತಿದ್ದನು. ಅವನ ಮಾತಿನ ಮೇಲೆ
ಜನರ ವಿಶ್ವಾಸವಿದ್ದುದರಿಂದ ಅವರು ಅವನು ಹೇಳಿದ ಬೆಲೆಯನ್ನು ಕೊಟ್ಟು
ಅರಿವೆಯನ್ನು ಕೊಳ್ಳುತ್ತಿದ್ದರು. ಅವನು ನಿಜವಾಗಿಯೂ ಈಶ್ವರಭಕ್ತನಿದ್ದು
ರಾತ್ರಿಯ ಕಾಲದಲ್ಲಿ ತನ್ನ ಊಟವಾದ ತರುವಾಯ ಬಹಳ ಹೊತ್ತು ಈಶ್ವರ
ಭಜನೆಯನ್ನು ಮಾಡುತ್ತಿದ್ದನು.
ಒಂದು ದಿವಸ ರಾತ್ರಿಯು ಬಹಳವಾದರೂ ಅವನಿಗೆ ನಿದ್ರೆಯು ಹತ್ತ
ಲಿಲ್ಲ. ಆದುದರಿಂದ ಅವನು ತಾನು ಮಲಗಲಿಕ್ಕೆ ಹೋಗುವ ಮುಂಚೆ ತನ್ನ
ಬಾಗಿಲದ ಬಳಿಯಲ್ಲಿ ಅಂಗಳದೊಳಗೆ ತಂಬಾಕ ಸೇದುತ್ತ ಕುಳಿತುಕೊಂಡಿದ್ದ
ನು. ಆಗ ಕೆಲವು ಕಳ್ಳರು ಅವನ ಮನೆಯ ಮುಂದಿಂದ ಹಾದು ಹೋದರು. ಅ
ವರಿಗೆ ತಮ್ಮ ಕಳವಿನ ಒಡವೆಗಳನ್ನು ತಲೆಯ ಮೇಲೆ ಹೊತ್ತು ಕೊಂಡ.-ಬರು
ವದಕ್ಕೆ ಒಬ್ಬ ಮನುಷ್ಯನು ಬೇಕಾಗಿದ್ದನು. ಅದುದರಿಂದ ಅವರು ಆ ನೇಕಾ
ರನನ್ನು ನೋಡಿ ಅವನನ್ನು ತಮ್ಮ ಸಂಗಡ ಎಳಕೊಂಡು ಹೋದರು. ಆ ಮೇಲೆ
ಎ ಭಟ್ಟ ಮಮ
ಆ ಕಳ್ಳರು ಒಂದು ಮನೆಗೆ ಕನ್ನಾ ತೋಡಿ ಆಲ್ಲಿ ಆನೇಕ ಸಾಮಾನುಗಳನ್ನು ಕ
ಛವ್ರ ಮಾಡಿ, ಆವುಗಳಲ್ಲಿ ಕೆಲವನ್ನು ಆ ನೇಕಾರನ ಮೇಲೆ ಹೊರಿಸಿದರು. ಆ
ಹೊತ್ತಿಗೆ ಒಬ್ಬ ಪೋಲಿಸ ಸಿಪಾಯಿಯು ಅಲ್ಲಿಗೆ ಬಂದನು. ಆಗ ಎಲ್ಲ ಕಳ್ಳರು ಓ
ಡಿಹೋಗಿಆ ನೇಕಾರನೊಬ್ಬನು ಮಾತ್ರ ಆ ಸಿಪಾಯಿಯ ಕೈಯಲ್ಲಿ ಸಿಕ್ಕನು.
ಆಗ ಆ ಸಿಪಾಯಿಯು ಆ ನೇಕಾರನನ್ನು ಚಾವಡಿಗೆ ಒಯ್ದು ಇಡೀ ರಾತ್ರಿ ಅವನ
ನ್ನು ಅಲ್ಲಿ ಕುಳ್ಳಿ ರಿಸಿ ಮರುದಿವಸ ಅವನನ್ನು ನ್ಯಾಯಾಧೀಶನ ಮುಂದೆ ಒ
ಯ್ದನು. ಈ ವರ್ತಮಾನವನ್ನು ಊರೊಳಗಿನ ಜನರು ಕೇಳಿ ಅವನನ್ನು ನೋಡ
ಲಿಕ್ಕೆ ಹೋಗಿ ನನ್ಯುಯಾಧೀಶರಿಗೆ-'" ದೊರೆಗಳೇ, ಈ ಮನುಷ್ಯನು ಕಳ
ವ್ರ ಮಾಡತಕ್ಕವನ್ನ್ಲ. ಇವನು ಎಂದೂ ಏನೂ ಕಳವು ಮಾಡಿಲ್ಲ” ಎಂದು ಹೇ
ಳಿದರು. ಆಗ ನ್ಯಾಯಾಧೀಶನು ಅ ನೇಕಾರನಿಗೆ-* ಏನೇನಾಯಿತೆಂಬುವದನ್ನು
ನಿಜವಾಗಿ ಹೇಳು” ಎಂದು ಕೇಳಿದನು. ಅದಕ್ಕೆ ಆ ನೇಕಾರನು- « ಸ್ವಾಮೀ,
ನಾನು ಶ್ರೀರಾಮ ಪ್ರಭುವಿನ ಇಚ್ಚೆಯ ಮೇರೆಗೆ ನಿನ್ನೆ ರಾತ್ರಿ ನನ್ನ ಮನೆಯ
ಅಂಗಳದಲ್ಲಿ ಕುಳಿತಿದ್ದೆ ನು. ಆಗ ಶ್ರೀರಾಮ ಪ್ರಭುವಿನ ಇಚ್ಛೆಯ ಮೇರೆಗೆ ಬ
ಹಳ ರಾತ್ರಿಯು ಆಗಿತ್ತು. ನಾನು ಶ್ರೀರಾಮ ಪ್ರಭುವಿನ ಇಚ್ಛೆ ಯ ಮೇರೆಗೆ
ಅತನ ಭಜನೆಯನ್ನು ಮಾಡಿ ಅತನ ನಾಮಸಂಕೀರ್ತನ ಮಾಡುವಲ್ಲಿ ತೊಡಗಿ
ದ್ದೆ ನು. ಆ ಸಮಯದಲ್ಲಿ ಶ್ರೀರಾಮ ಪ್ರಭುವಿನ ಆಚೆಯ ಮೇರೆಗೆ ಕಳ್ಳ ರು
ಅಲ್ಲಿಗೆ ಬಂದರು. ಅವರು ನನ್ನನ್ನು ನೋಡಿ ಶ್ರೀರಾಮ ಪ್ರಭುವಿನ ಅಣ್ಣೆ: ಯ
ಮೇಕೆಗೆ ನನ್ನನ್ನು ತಮ್ಮ ಸಂಗಡ ಬಲಾತ್ಕಾರದಿಂದ ಜಗ್ಗಿ ಕೊಂಡು
ಒಂದು ಮನೆಗೆ ಕನ್ನಾ ತೋಡಿದರು. ಅವರು ಅಲ್ಲಿ ಕಳವು. ಮಾಡಿ ತಂದದ್ದನ್ನು
ಮೊಟ್ಟೆ ಕಟ್ಟಿ ಶ್ರಿ ಶ್ರೀರಾಮ ಪ್ರಭುವಿನ ಇಚ್ಛೆಯ ಮೇರೆಗೆ ನನ್ನ ತಲೆಯ ಮೇಲೆ
ಹೊರಿಸಿದರು, ಆಗ ಅಲ್ಲಿಗೆ ಶ್ರೀರಾಮ ಪ್ರಭುವಿನ ಇಚ್ಛೆಯ ಮೇರೆಗೆ ಒಬ್ಬ
ಪೋಲಿಸ ಸಿಪಾಯಿಯು ಬಂದು ನನ್ನ ನ್ನು ESE ಹೋಗಿ ಆ ರಾತ್ರಿ
ಯಲ್ಲಿ ಜ್ಞಾ ನಮಂಟಪದೊಳಗೆ ಕುಳ್ಳಿರಿಸಿ ದನು. ಮರುದಿವಸ ಅಂದರೆ ಈಹೊತ್ತು
ಸ ಅವನು ಶ್ರೀರಾಮ ಪ 'ಭುವಿನ ಇಚ್ಛೆ ಯ ಮೇರೆಗೆ ನನ್ನನ್ನು ನಿಮ್ಮ
ಮುಂದೆ ತಂದು ನಿಲ್ಲಿಸಿರುತ್ತಾನೆ”ಈ ಪ್ರ ಕಾರ ಆ ನೇಕಾರನು ಹೇಳಿದ್ದನ್ನೆ ಲ್ಲನ್ಯಾ
ಯಾಧೀಶನು ಸಂಪೂರ್ಣವಾಗಿ ಕೇಳಿಕೊಂಡು, ಅವನ ಈಶ್ವರ ಭಕ್ತಿಯನ್ನೂ
ಎಎ ೪೩೬ ಎ.
ನಿರುಪದ್ರವವನ್ನೂ ಮನವರಿಕೆ ಮಾಡಿಕೊಂಡು, ಅವನನ್ನು ಬಿಡುಗಡೆ
ಮಾಡಿದನು. ಆಗ ಅವನು ಹೊರಗೆ ಬಂದು ತನ್ನ ಗೆಳೆಯರ ಮುಂದೆ... «ಶ್ರೀ
ರಾಮ ಪ್ರಭುವಿನ ಇಚ್ಚೆಯ ಮೇರೆಗೆ ನಾನು ಬಿಡುಗಡೆಯಾಗಿ ಬಂದೆನು? ಎಂ
ದು ಹೇಳಿದನು.
ತಾತ್ಸರ್ಯ.
ಎಲ್ಲವು ಭಗವಂತನ ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ನಾವು ಸಂ
ಸಾರದಲ್ಲಿರಲಿ ಅಥವಾ ಅದನ್ನು ತ್ಯಾಗ ಮಾಡಲಿ, ಅತನ ಮೇಲೆ ಯಾವತ್ತು
ಭಾರವನ್ನು ಹಾಕಿ ನಮ್ಮ ಕರ್ತವ್ಯವನ್ನು ಚನ್ನಾಗಿ ಮಾಡಿದರೆ ಅವನು ನಮ್ಮ
ನ್ನು ಯಾವಾಗಲು ರಕ್ಷಣ ಮಾಡುತ್ತಾನೆ. ನಮ್ಮ ಈ ಕಧಾನಾಯಕನಾದ
ನೇಕಾರನು ಪ್ರತಿಯೊಂದು ವಾಕ್ಯವನ್ನು ಮಾತಾಡುವಾಗ “ ಶ್ರೀರಾಮ ಪ್ರಭು
ವಿನ ಇಚ್ಛೆ 7 ಎಂದು ನುಡಿಯುತ್ತಿದ್ದ ಸಂಗತಿಯು ಅವನ ಭಾವಿಕತನವನ್ನೂ
ಲೌಕಿಕ ನಡತೆಗಳ ಅಜ್ಞಾನವನ್ನೂ ತೋರಿಸಿ ಅವನನ್ನು ಹಾಸ್ಯಕ್ಕೆ ಈಡು ಮಾ
ಡುತ್ತದೆ. ಆದರೂ ಅವನು ಬಹಿರಂಗದಂತೆಯೇ ಅಂತರಂಗದಲ್ಲಿ ಶುದ್ಧನಾಗಿದ್ದ
ಕಾರಣ ಅವನನ್ನು ಪರಮೇಶ್ವರನು ರಕ್ಷಣ ಮಾಡಿದನು. ಆದರೆ ಪರಮೇಶ್ವರ
ನಲ್ಲಿ ಭಕ್ತಿಯನ್ನು ಮಾಡುತ್ತಿದ್ದಾ ಗ್ಯೂ ಹೊರಗೆ ಅದರ ಆಟ್ಬಹಾಸವನ್ನು ಮಾ
ಡದೆ ತಮ್ಮ ಶುದ್ಧ ನಡಾವಳಿಯನ್ನು ಇಟ್ಟು ಕೊಳ್ಳುವದು ಯಾವಾಗಲು ಉತ್ತ
ಮವಾದ ಮಾರ್ಗವು.
೩೦. ಏಕಾಗ್ರಚಿತ್ತವು.
ಒಬ್ಬ ಗೃಹಸ್ಥನು ದಿನಾಲು ರಾತ್ರಿ ತನ್ನ ವೇಶ್ಯಿಯ ಮನೆಗೆ ನಿಯಮಿತ
ವೇಳೆಗೆ ಹೋಗುತ್ತಿ ದ್ದನು. ಒಂದು ದಿವಸ ಅವನು ತನ್ನ ತಂದೆಯ ಶ್ರಾದ್ಧ
ವಿದ್ದುದರಿಂದ ಮನೆಯಲ್ಲಿ ಬಹಳಹೊತ್ತು ಇರಬೇಕಾಯಿತು. ಅದುದರಿಂದ
ಅವನು ಬಹಳ ರಾತ್ರಿಯಾದ ನಂತರ ತನ್ನ ಮನೆಯಲ್ಲಿ ಮಾಡಿದ ಪಕ್ವಾ
ನ್ನವನ್ನು ಬಡಿಸಿದ ಒಂದು ತಾಟೆವನ್ನು ತನ್ನ ಕೈಯಲ್ಲಿ ಮುಚ್ಚಿಕೊಂಡು ಹೋ
ಗಲಿಕ್ಕೆ ಹತ್ತಿದ್ದನು. ಆಗ ಅವನ ಮನಸ್ಸು ತನ್ನ ಪ್ರಿಯಪಾತ್ರಳಲ್ಲಿ ಸಂಪೂರ್ಣ
ಎ. ಭಲ ೨.
ವಾಗಿ ಮಗ್ಗವಾಗಿದ್ದ ಕಾರಣ ಅವನಿಗೆ ತಾನು ದಾರಿಯಲ್ಲಿ ಏನು ತುಳಿಯುತ್ತೆ ©
ನೆಂಬುವ ಅಥವಾ ತಾನು ಯಾವ ಹಾದಿಯಿಂದ ಹೋಗುತ್ತೇನೆಂಬುವ ಎಚ್ಚ
ರವು ಸಹ ಇದ್ದಿಲ್ಲ. ಅವನು ಹೋಗುವಾಗ ದಾರಿಯಲ್ಲಿ ಒಬ್ಬ ಯೋಗಿಯು
ಕಣ್ಣು ಮುಚ್ಚಿಕೊಂಡು ಭಗವಂತನ ಜಪವನ್ನು ಮಾಡುತ್ತ ಕುಳಿತಿದ್ದನು. ಆಗ
ಈ ವಿಸಯಾಂಧ ಮನುಷ್ಯನ ಕಾಲು ಆ ಯೋಗಿಗೆ ತಾಕಿತು. ಆ ಕೂಡಲೆ ಆ
ಯೋಗಿಯು ಸಿಟ್ಟಿಗೆದ್ದು ಅವನಿಗೆ-« ಏನಿದು? ನಿನ್ನ ಕಣ್ಣು ಹೋದವೇ?
ನಾನು ಭಗವಂತನ ಜಪವನ್ನು ಮಾಡುತ್ತಿರುವಾಗ ನೀನು ನನ್ನನ್ನು ತುಳಿದಿ
ಯಾ?!” ಎಂದು ಕೇಳಿದನು. ಆಗ ಆ ಗ್ಯ ಹಸ್ಯನು ಆ ಯೋಗಿಗೆ-« ಕ್ಷಮೆ
ಇರಲಿ. ಅದರೆ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಅದಕ್ಕೆ ಉತ್ತರ ಕೊ
ಡಿರಿ. ನನ್ನ ವೇಶ್ಯೆಯ ಮನೆಗೆ ಹೋಗಬೇಕೆಂಬ ವಿಚಾರದಲ್ಲಿ ನನ್ನ ಮನಸ್ಸು
ಮಗ್ಗವಾಗಿದ್ದ ಕಾರಣ ನನಗೆ ದಾರಿಯಲ್ಲಿ ಎರಡನೇ ಯಾವ ಮನುಷ್ಯನಾಗಲೀ
ವಸ್ತುವಾಗಲೀ ಕಾಣಿಸಲಿಲ್ಲ. ಆದರೆ ನೀವು ಭಗವಂತನ ಧ್ಯಾನದಲ್ಲಿ ಮಗ
ರಾಗಿದ್ದರೂ ನಿಮಗೆ ಹೊರಗಿನ ಜನರ ಎಚ್ಚರಿಕೆಯು ಪೂರ್ಣವಾಗಿತ್ತು. ಅಂ
ದಮೇಲೆ ನೀವು ಮಾಡುತ್ತಿದ್ದ ಭಗವಂತನ ಧ್ಯಾನವು ಎಂಥದು?” ಎಂದು
ಹೇಳಿದನು. ಈ ಪ ಪ್ರಶ್ನೆಯನ್ನು. ಹೇಳಿ ಯೋಗಿಯು ನಾಚಿಕೊಂಡನು. ಮುಂದೆ
ಇದೇ ವಿಷಯಾಂಧನು ತನ್ನ ಕೆಟ್ಟ ನಡತೆಯನ್ನು ಬಿಟ್ಟುಕೊಟ್ಟು ಪರಮೇಶ್ವ
ರನ ಶೋಧ ಮಾಡುವದಕ್ಕಾಗಿ ಸಂಸಾರವನ್ನು. ತ್ಯಾಗ ಮಾಡಿದನು. ಜವ
ತನ್ನ ಸಂಸಾರ ತ್ಯಾಗ ಮಾಡುವ ಕಾಲಕ್ಕೆ ತನ್ನ ವೇಶ್ಯೆಯ ಮನೆಗೆ ಹೋಗಿ -
« ತಾಯೀ, ನೀನು ನನ್ನ ಗುರುವು ಇರುತ್ತೀ. ನಿನ್ನಿಂದಲೇ ನನಗೆ ದೇವರಲ್ಲಿ
ಲೀನವಾಗುವ ಬುದ್ಧಿಯು ಉತ್ಪನ್ನವಾಯಿತು » ಎಂದು ಹೇಳಿದನು.
ತಾತ್ಸರ್ಯ.
ಮನುಷ್ಯನಿಗೆ ಏಕಾಗ್ರಚಿತ್ತವು ಬಹಳ ಮಹತ್ವವುಳ್ವದ್ದಿ ರುವದು. ಏ
ಕಾಗ್ರಚಿತ್ತವಿರುವನನಿಗೆ ಪ್ರ ನದು ಕೆಲಸವು ಸುಲಭವಾಗುವದು. ಅವನ
ಮನಸ್ಸು ಒಮ್ಮೆ ಪ ಪರಮೇಶ್ವ ರನಲ್ಲಿ ಲೀನವಾಯಿತೆಂದರೆ ಅವನಿಗೆ ತನ್ನ ಸ್ವಂತ
ಹೃದಯದಲ್ಲಿಯೇ ಪರಮೇಶ್ವರನು ಕಾಣಿಸುತ್ತಾನೆ.
ಎಂಿ್ರಂ ೪ ಎ
೩೧ ಮೂರು ಮಂದಿ ಕಳ್ಳರು.
ಒಬ್ಬ ದಾರಿಕಾರನು ಒಂದು ಅಡನಿಯೊಳಗಿಂದ ಹಾದು ಹೋಗುತ್ತಿ
ದ್ಹನು. ಆಗ ಅವನಿಗೆ ದಾರಿಯಲ್ಲಿ ಮೂರು ಮಂದಿ ಕಳ್ಳರು WD ಅ
ವನ ಹತ್ತರ ಇದ್ದುದನ್ನೆಲ್ಲ ಕಸದುಕೂಂಡರು. ಆ ತ ಒಬ್ಬ ಕಳ್ಳ ನು
ವನನ್ನು ಜೀವಂಶ ಇಡುವದರಿಂದ ಉಪಯೋಗವೇನು? ? ಎಂದು ಹೇಳಿ ps
ನ್ನುತನ್ನ ಕೈಯೊಳಗಿನ ಕತ್ತಿಯಿಂದ ಕೊಲ್ಲಲಿಕ್ಕೆ ಹೋದನು. ಅದನ್ನು ಕಂಡು
ಎರಡನೇ ಕಳ್ಳ ನು-«ಅವನನ್ನು ಕೊಲ್ಲುವದರಿಂದ ನಮಗೆ ಆಗುವ ಲಾಭವೇನು?
ಇವನನ್ನು ಕೈಕಾಲು ಕಟ್ಟಿ ಒಂದುಕಡೆಗೆ ಒಗೆದು ಬಿಡೋಣ ? ಎಂದು ಹೇಳಿ
ದನು. ಈ ಪ್ರಕಾರ ಇಬ್ಬರು ಕಳ್ಳರು ಅವನ ಕೈಕಾಲು ಕಟ್ಟಿ ಅವನನ್ನು ದಾ
ರೀ ಬಿಡಿಸಿ ಜಟ ಒಕೊ ಟ್ಟು ಸ ಸ್ವಲ್ಪ ಮುಂದಕ್ಕೆ ಹೋದ ವಾಹ ಮೂ
ಕಳ್ಳನು ಹಿಂತಿರುಗಿ ಬಂದು- « ಅಯ್ಯೋ! ನಿನಗೆ ನೋವು ಆಗಿರುವದ
ಲ್ಲವೇ? ಬಾ. ನಿನಗೆ ಕಟ್ಟದ ಹಗ್ಗವನ್ನು ನಾನು ಬಿಚ್ಚಿ ಬಿಡುತ್ತೇನೆ” ಎಂದು
ಹೇಳಿ ಅವನ ಹಗ್ಗವನ್ನು ಬಿಚ್ಚಿದನು. ಹಾಗೂ ಅವನಿಗೆ. « ನನ್ನ ಸಂಗಡ
ಬಾ. ನಿನಗೆ ನಿನ್ನ ಮನೆಯ ದಾರಿಯನ್ನು ತೋರಿಸುತ್ತೇನೆ ? ಎಂದು ಹೇಳಿ ಅವ
ನನ್ನು ಕರೆದುಕೊಂಡು ಹೋದನು. ಮುಂದೆ ಅವರಿಬ್ಬರೂ ಬಹಳದೂರ ದಾ
ರೀ ನಡೆದಮೇಲೆ ಆ ಮೂರನೇ ಕಳ್ಳನು ದಾರಿಕಾರನಿಗೆ- « ಇತ್ತ ನೋಡು.
ಇಲ್ಲಿಂದ ನಿನ್ನ ಮನೆಯು ಕಾಣಿಸುತ್ತದ. ಈ ದಾರಿಯಿಂದ ನೆಟ್ಟಗೆ ಹೋಗು. ಅಂ
ದರೆ ನೀನು ಬೇಗನೆ ನಿನ್ನ ಮನೆಗೆ ಹೋಗಿ ಮುಬ್ಟುವಿ ” ಎಂದು ಹೇಳಿದನು.
ಅಗ ದಾರಿಕಾರನು ಮೂರನೇ ಕಳ ನಿಗೆ ಕೃತಜ್ಞ ತೆಯಿಂದ-- « ನನ್ನಮೇಲೆ
ನಿನ್ನ ಉಪಕಾರವು ತಾ ನೀನು ನನ್ನ ಮನೆಗೆ ಬಂದು ನನ್ನಆತಿಧ್ಯ
ವನ್ನು ಸ್ವೀಕರಿಸಿಕೊಂಡು ಹೋಗು” ಎಂದು ಆಗನ ಅದಕ್ಕೆ ಆ ಕಳ ಕನು-
*( ಜಾ ನಾನು ನಿನ್ನಮನೆಗೆ ಬರಲಾರೆನು. ನಾನು ಅಲ್ಲಿಗೆ ಬಂದರೆ ನನ್ನನ್ನು
ವೋಲಿಸರು ಹಿಡಿಯುತ್ತಾರೆ” ಎಂದು ಉತ್ತರ ಕೊಟ್ಟು ಹೊರಟು ಹೋದನು.
ತಾತ್ಪರ್ಯ.
ಈ ಇಗತ್ತು ದೊಡ್ಡ ಅರಣ್ಯದಂತೆ ಇರುತ್ತದೆ. ಸತ್ವ, ರಜಸ್ಸು ಮತ್ತು
ತಮಸ್ಸು ಈ ಮಾರು ಗುಣಗಳು ಈ ಕಥೆಯೊಳಗಿನ ಹೂಕ್ ಮಂದಿ ಕಳ್ಳ ರಂತೆ
ಗ್ಗ
ಎ. ೫೦
ಇರುತ್ತವೆ. ಜೀವವು ಅಥವಾ ಆತ್ಮವು ದಾರಿಕಾರನಂತೆ ಇರುತ್ತದೆ. ಆತ್ಮಜ್ಞಾ
ನವು ಅವನ ನಿಧಿಯು. ತಮಸ್ಸು ಜೀವವನ್ನು ನಾಶಪಡಿಸಲಿಕ್ಕೆ ಯತ್ನಿ ಸುತ್ತದೆ.
ರಜಸ್ಸು ಅವನನ್ನು ಸಂಸಾರದ ಮೋಹಪಾಶಗಳಿಂದ ಬಿಗಿಯುತ್ತದೆ. ಆದರೆ ಸತ್ವ
ವು ಅವನನ್ನು ರಜಸ್ಸಿನ ಮತ್ತು ತಮಸ್ಸಿನ ಕ್ರಿಯೆಗಳಿಂದ ಬಿಡುಗಡೆ ಮಾಡು
ತ್ತದೆ. ಆಗ ಜೀವವು ಸತ್ವ ಗುಣದ ಆಧಾರದಿಂದ ಕಾಮ, ಕ್ರೋಧ, ಲೋಭ,
ಮೋಹವೆಂಬ-ತಮಸ್ಸಿನ ಬಾಧೆಯಿಂದ ತಪ್ಪಿ ಹೋಗುತ್ತದೆ. ಆ ಬಳಿಕ ಸತ್ವವು
ಜೀವವನ್ನು ಸಂಸಾರದ ಬಂಧನೆಗಳಿಂದ ಮುಕ್ತ ಮಾಡುತ್ತದೆ. ಸತ್ತವು ಈ ಕ
ಥೆಯೊಳಗಿನ ಮೂರನೇ ಕಳ್ಳನಂತೆ ಇರುತ್ತದೆ. ಬರೀ ಸತ್ವದಿಂದ ಪರಮೇಶ್ವ
ರನ ಜ್ಞಾನವು ಪ್ರಾಪ್ತವಾಗಲಾರದು. ಅದು ಮನುಷ್ಯನ ಜೀವಕ್ಕೆ ಅಥವಾ
ಆತ್ಮಕ್ಕೆ « ಇಗೋ! ಅಲ್ಲಿ ಪರಮೇಶ್ವರನ ಮನೆಯು ಇರುತ್ತದೆ! ” ಎಂದು
ದಾರಿಯನ್ನು ತೋರಿಸಿ ಅದೃಶ್ಚವಾಗುತ್ತದೆ. ಸತ್ವವಾದರೂ ಪರಮೇಶ್ವರನ ಮ
ನೆಯ ಸಮೀಪಕ್ಕೆ ಬರಲಾರದು.
ಹ ವಾನ ಎವಾ
೩೨. ಒಬ್ಬ ಸಿದ್ಧ ಪುರುಷನ ಸಶ್ಚಾತ್ತಾಪವು.
ಒಂದಾನೊಂದು ಊರೊಳಗೆ ಒಬ್ಬ ಒಳ್ಳೆ ಕೇ ಸ್ವಭಾವದ ದೊಡ್ಡ
ಯೋಗಿಯು ಇರುತ್ತಿದ್ದನು. ಅವನಿಗೆ ತನ್ನ ಯೋಗಸಾಮರ್ಥ್ಯದ ಬಗ್ಗೆ ಬಹ
ಳ ಅಭಿಮಾನವಿತ್ತು. ಒಂದು ದಿವಸ ಪರಮೇಶ್ವರನು ಒಬ್ಬ ಸಣ್ಣ ಬೈರಾಗಿಯ
ವೇಷದಿಂದ ಅವನ ಬಳಿಗೆ ಬಂದು-- 4 ಪೂಜ್ಯನೇ, ನಿನ್ನಲ್ಲಿ ಬಹಳ ಅದ್ಭುತ
ವಾದ ಯೋಗಸಾಮರ್ಥ್ಯವುಂಟೆಂದು ನಾನು ಕೇಳುತ್ತೇನೆ? ಎಂದು ನುಡಿದ
ನು. ಅವನನ್ನುನೋಡಿ ಆ ಸಜ್ಜನನು ಅವನಿಗೆ ಬಹಳ ಆದರಮಾಡಿ ಅವನಿಗೆ
ಕುಳಿತುಕೊಳ್ಳಲಿಳ್ಕೆ ಯೋಗ್ಯ ಸ್ಥಳವನ್ನು ಕೊಟ್ಟನು. ಆ ಸಮಯದಲ್ಲಿ ಆ ದಾರಿ
ಯಿಂದ ಒಂದು ಅನೆಯು ಹಾದು ಹೋಗಲಿಕ್ಕೆ ಹತ್ತಿತ್ತು. ಅದನ್ನು ನೋಡಿ
ಬೈರಾಗಿಯು ಆ ಸಾಧುವಿಗೆ-: ಮಹಾತ್ಮನೇ, ನಿನ್ನಮಸ್ಸಿಗೆ ಬಂದರೆ ನಿನಗೆ ಈ
ಆನೆಯನ್ನು ಕೊಲ್ಲಲಿಕ್ಕೆ ಆಗುವದೇ? ” ಎಂದು ಕೇಳಿದನು. ಅದಕ್ಕೆ ಆಯೋ
ಗಿಯು--" ಹೌದು. ಅದೇನೂ ದೊಡ್ಡ ಕೆಲಸವಲ್ಲ ? ಎಂದು ಹೇಳಿ ಒಂದು
೨. ೫೧ ೨.
ಹಿಡಿ ಮಣ್ಮನ್ನು ತೆಗೆದುಕೊಂಡು ಆದನ್ನು ಮಂತ್ರಿಸಿ ಆ ಅನೆಯ ಮೇಲೆ ಒ
ಕ್ಯೊಟ್ಟನು. ಕೂಡಲೆ ಆ ಆನೆಯು ದೊಡ್ಡ ಧ್ವನಿಯಿಂದ ಕೂಗಿ ಸಂಕಟಿಪಡು'
ತ್ರ, ನೆಲದ ಮೇಲೆ ಬಿದ್ದು ಸತ್ತಿತು. ಇದನ್ನು ನೋಡಿದವನೇ ಆ ಬೈರಾಗಿಯು-
« ಅಹಹ! ನಿನ್ನಲ್ಲಿ ಎಂಥ ಅದ್ಭುತ EARN ನೀನು ಇಂಥ ದೊಡ್ಡ
ಪ್ರಾಣಿಯನ್ನು ಒಂದು ಕ್ಷಣದಲ್ಲಿ ಕೊಂದು ಬಿಟ್ಟಿ 1» ಎಂದು ಅವನ ಸ್ತುತಿ
ಸ « ನಿನಗೆ ಇದನ್ನು ತಿರುಗಿ ಜೀವಂತ ಮಾಡಲಿಕ್ಕೂ ಬರುತ್ತಿರಬಹು
ದು” ಎಂದು ನುಡಿದನು. "ಗ ಆ ಸಿದ್ದ ಪುರುಷನು- « ಹೌದು. ಅದಾದರೂ
ಬರುತ್ತದೆ ” ಎಂದು ಹೇಳಿ ತಿರುಗಿ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು
ಅದನ್ನು ಮಂತ್ರಿಸಿ ಅಫ್ಲಿ ಸತ್ತು ಬಿದ್ದಿದ್ದ ಆನೆಯ ಮೇಲೆ ಒಗೆದನು. ಅದರಿಂದ ಆ
ಆನೆಯು ಜೀವಂತವಾಗಿ ಮೇಲಕ್ಕೆ ಎದ್ದು ಹೊರಟು ಹೋಯಿತು. ಆಗ ಬೈ
ರಾಗಿಯು ತಿರುಗಿ ಆ ಸಿದ್ಧ ಪುರುಷನಿಗೆ. ಅಹಹ! ನಿನ್ನಲ್ಲಿ ಎಷ್ಟು ಆದ್ದುತ
ಸಾಮರ್ಥ್ಯವು ಇರುತ್ತದೆ! ಆದರೆ ನೀನು ಈ ಆನೆಯನ್ನು ಮೊದಲಿಗೆ ಕೊಂದು
ಹಿಂದುಗಡೆ ಬದುಕಿಸಿದಿ. ಇದರಿಂದ ನಿನಗೇನು ಲಾಭವಾಯಿತು? ನಿನಗೆ ಪರ
ಮಾತ್ಮನ ಸಾಕ್ಷಾತ್ಕಾರವಾಯಿತೋ?? ಎಂದು ಕೇಳಿ ಅಲ್ಲಿಂದ ಹೊರಟು ಹೋ
ದನು. ಆಗಿನಿಂದ ಸಿದ್ಧ ಪುರುಷನು ಜ್ಞಾನ ಮಾರ್ಗದ ಕಡೆಗೆ ಹೆಚ್ಚು ಲಕ್ಷ್ಯವನ್ನು
ಕೊಡಹತ್ತಿದನು.
ತಾತ್ಪರ್ಯ.
ಬರೀ ಮಂತ್ರ, ಸಿದ್ಧಿ, ಯೋಗ ಇವುಗಳ ಹಂಬಲವನ್ನು ಇಟ್ಟು ಕೊಂಡು
ತಮ್ಮ ಅದ್ಭುತಶಕ್ತಿಯ ಬಗ್ಗೆ ಕೀರ್ತಿಯನ್ನು ದೊರಕಿಸುವವರಿಗೆ ಪರಮೇಶ್ವರನ
ಸಾಕ್ಷಾತ್ಕಾರವಾಗುವದಿಲ್ಲ. ಯಾವ ಮನುಷ್ಯನು ಯಾವ ಉದ್ದೇಶದಿಂದ
ಮಂತ್ರಸಿದ್ಧಿಯನ್ನೂ, ಸಾಧನವನ್ನೂ, ಯೋಗವನ್ನು ಮಾಡುತ್ತಾನೆಂಬುದನ್ನು
ಪರಮೇಶ್ವರನು ಪರೀಕ್ಷಿಸುತ್ತಾನೆ. ಅವನು ಬಾಹ್ಯಾತ್ಕಾರಿಕ ಸೊಬಗಿಗೆ ಎಂದೂ
ಮೋಹಿಸುವದಿಲ್ಲ. ಎಷು
ಪುನರ್ಜನ್ಮವು.
ಮನುಷ್ಯನು ಅಜ್ಞಾನ ಸ್ಥಿತಿಯಲ್ಲಿ ಉಳಿಯುವ ತನಕ ಪುನರ್ಜನ್ನ
ವನ್ನು ಹೊಂದುತ್ತಾನೆ. ಅವನಿಗೆ ಪರಮೇಶ್ವರನ ಜ್ಞಾನವು ಪ್ರಾಪ್ತಿಯಾಗಿ
ಎ... ರಿ 2...
ಪರಮೇಶ್ವರನ ಸಾಹ್ಮಾತ್ವಾರವಾದ ಬಳಿಕ ಪುನರ್ಜನ್ಮವು ತಪ್ಪುವದು. ಆ
ಮೇಲೆ ಅವನಿಗೆ ಭೂಲೋಕದಲ್ಲಿ ತಿರುಗಿ ಬರುವ ಕಾರಣವು ಉಳಿಯುವದಿಲ್ಲ,
ಅಥವಾ ಎರಡನೇ ಯಾವ ಕಡೆಗೂ ಸಂಚರಿಸುವ ಕಾರಣವು ಇರುವದಿಲ್ಲ.
ಶುಂಬಾರನು ತಾನು ಮಾಡಿದ ಗಡಿಗೆಮಡಿಕೆಗಳನ್ನು ಬಿಸಿಲೊಳಗೆ ಒಣಹಾಕು
ವಾಗ ಕೆಲವು ಸುಟ್ಟಿದ್ದವುಗಳನ್ನು ಮತ್ತು ಕೆಲವು ಸುಡದೆ ಇದ್ದವುಗಳನ್ನು ಕೂಡಿ
ಇಡುವದುಂಟು. ಅವುಗಳನ್ನು ದನಗಳು ತುಳಿದು ಒಡೆದರೆ ಅವನು ಸುಟ್ಟೆ ಮ
ಡಿಕೆಗಳನ್ನು ಮಾತ್ರ ಅವು ತನ್ನ ಕೆಲಸಕ್ಕೆ ಉಪಯೋಗ ಬೀಳುವದಿಲ್ಲೆಂದು ಚಲ್ಲಿ
ಕೊಟ್ಟು ಸುಡದೆ ಇದ್ದ ಮಡಿಕೆಗಳ (ಹಸಿ ಮಡಿಕೆಗಳ) ನ್ನು ತಿರುಗಿ ಅರಲು
ಮಾಡಿ, ಅ ಅರಲನ್ನು ಕೊಳೆ ಹಾಕಿ, ಜಿಗಿಮಾಡಿ, ಅದರಿಂದ ಹೊಸ ಮಡಿಕೆಗ
ಳನ್ನು ಮಾಡುತ್ತಾ ನೆ.
ತಾತ್ಸರ್ಯ.
ಪರಮೇಶ್ವರನ ಸಾಕ್ಷಾತ್ಕಾರವು ಆಗದೆ ಇರುವ ಮನುಷ್ಯನು ತಿರುತಿರುಗಿ
ಈ ಜನ್ಮದಲ್ಲಿ ಬರುವದಕ್ಕಾಗಿ ಕುಂಬಾರನಾದ ಬ್ರಹ್ಮದೇವನ ಕೈಗೆ ಹೋಗ
ಬೇಕಾಗುತ್ತದೆ. ಕುದಿಸಿದ ಭತ್ತವನ್ನು ಬಿತ್ತುವದರಿಂದ ಮೊಳಕೆಯು ನಾಟುವ
ದಿಲ್ಲಾದ ಕಾರಣ ಅದನ್ನು ಬಿತ್ತುವದು ನಿರರ್ಥಕವಿರುತ್ತ ದೆ. ಇದರಂತೆ ಪರ
ಮೇಶ್ವರನ ಜ್ಞಾ ನವೆಂಬ ಅಗ್ನಿಯ ಸ್ಪರ್ಶವನ್ನು ಹೊಂದಿದ ಮನುಷ್ಯನು ಹೊಸ
ಸೃಷ್ಟಿಗೆ ಏನೂ ಉಪಯೋಗ ಬೀಳುವದಿಲ್ಲ.
೩೪. ತ್ಯಾಗವೇ ಶಾಂತಿಯು.
ಒಂದು ಸಾರೆ ಒಂದು ಹಾಳೇಹದ್ದು ತನ್ನ ಚುಂಚುಪುಬದಲ್ಲಿ ಒಂದು
ಮಾನವನ್ನು ಕಚ್ಚಿಕೊಂಡು ಆಕಾಶ ಮಾರ್ಗವಾಗಿ ಹೋಗುತ್ತಿ ರುವಾಗ ಅದರ
ಬೆನ್ನಹಿಂದೆ ಅನೇಕ ಕಾಗೆಗಳು ಕಾವ್ ಕಾವ್ ಎಂದು ಬಹಳ ಸಪ್ಪಳವಾಗುವಂತೆ
ಕೂಗುತ್ತಲೂ ಅದನ್ನು ಭಯಂಕರವಾಗಿ ಅಂಜಿಸುತ್ತಲೂ ನಡೆದಿದ್ದವು. ಅದು
ತನ್ನ ಬಾಯೊಳಗಿನ ಭಕ್ಷ್ಯ ಸಹಿತವಾಗಿ ತಪ್ಪಿಸಿಕೊಂಡು ಹೋಗಬೇಕೆಂದು
ಬಹಳ ಪ್ರಯತ್ನವನ್ನು ಮಾಡಿಶು. ಅದು ಒಮ್ಮೊಮ್ಮೆ ಬಹಳ ಮೇಲಕ್ಕೆ ಹಾರಿ
— ೪೩
ಹೋಗಿ ಅಕಸ್ಮಾತ್ ಕೆಳಗೆ ಇಳಿದು ಬರುತ್ತಿತ್ತು. ಒಮ್ಮೊಮ್ಮೆ ಒಂದು ದಿಕ್ಕಿ
ನಲ್ಲಿ ಹಾರಾಡುತ್ತ, ಇನ್ನೊಮ್ಮೆ ಇನ್ನೊಂದು ದಿಕ್ಕಿನಲ್ಲಿ ಹಾರಾಡುತ್ತ, ನಾಲೂ
ಕಡೆಗೆ ಹಾರಾಡಿತು. ಏನು ಮಾಡಿದರೂ ಆ ಹದ್ದಿಗೆ ಆ ಕಾಗೆಗಳ ಕಾಟವು
ತಪ್ಪಲಿಲ್ಲ. ಆಗ ಅದು ಬೇಸತ್ತು ಸಂತಾಪಪಟ್ಟು ತನ್ನ ಬಾಯೊಳಗಿನ ಮಾನ
ವನ್ನು ಕೆಳಗೆ ಚಲ್ಲಿಕೊಟ್ಟಿತು. ಆಗ ಇನ್ನೊಂದು ಹದ್ದು ಅದನ್ನು ತನ್ನ ಬಾ
ಯೊಳಗೆ ಕಚ್ಚಿ ಕೊಂಡಿತು. ಇದನ್ನು ನೋಡಿ ಆ ಕಾಗೆಗಳು ಆ ಎರಡನೇ ಹ,
ದ್ದನು ಬೆನ್ನ ಹತ್ತಿದವು. ಆ ಮೇಲೆ ಇಷ್ಟೊತ್ತಿನ ತನಕ ಆಕಾಶದಲ್ಲಿ ಹಾರಾ
ಡಿ ದಣಿದಂಥ ಮೊದಲನೇ ಹದ್ದು ವಿಶ್ರಾಂತಿಗಾಗಿ ಗಿಡದ ಮೇಲೆ ಬಂದು ಕುಳಿ
ತಿತು. ಇದನ್ನು ಒಬ್ಬ ಅವಧೂತನು ಕಂಡು ಆ ಹದ್ದಿಗೆ ನಮಸ್ಕಾರ ಮಾಡಿ-
« ಅಹಹ, ಹದ್ದೇ! ನೀನು ನನ್ನ ಗುರುವು ಇರುತ್ತೀ. ಮನುಷ್ಯನು ತನ್ನ
ಐಹಿಕ ವಾಸನೆಗಳನ್ನು ಬಿಟ್ಟು ಬಿಡುವ ತನಕ ಅವನಿಗೆ ಜನರ ಕಾಟವು ತಪ್ಪು
ವದಿಲ್ಲ ಮತ್ತು ಅವನಿಗೆ ಅತ್ಮಶಾಂತಿಯು ದೊರಕುವದಿಲ್ಲ ಎಂಬ ಉಪದೇಶವನು
ನಾನು ಇವತ್ತಿನ ದಿವಸ ನಿನ್ನಿಂದ ಕಲಿತುಕೊಂಡೆನು” ಎಂದು ನುಡಿದನು.
ತಾತ್ಸರ್ಯ.
ಮನುಷ್ಯನು ಆಕೆಯಿಂದ ಕುದಿಯುವ ತನಕ ಅವನಿಗೆ ಶಾಂತಿಯು ದೊ
ರಕುವದಿಲ್ಲ. ಆದುದರಿಂದ ಯಾರೂ ಅತ್ಯಾಶೆಯನ್ನು ಮಾಡಿ ಸಂಕಟಕ್ಕೆ ಗುರಿ
ಯಾಗಬಾರದು. ತೃಪ್ತಿಯು ಸುಖವನ್ನೂ ಸಮಾಧಾನವನ್ನೂ ಕೊಡುವದು.
ಅದರೆ ಪ್ರಯತ್ನ ಮಾಡದೆ ಮೈಗಳ್ಳ ತನದಿಂದ ಸುಮ್ಮನೆ ಕುಳಿತುಕೊಳ್ಳುವದು
ತೃಪ್ತಿಯೆಂದೆನಿಸಿಕೊಳ್ಳ ಲಾರದು. ತನ್ನ ಯೋಗ್ಯತೆಗೂ ಶಕ್ತಿಗೂ ಸಾಧ್ಯವಾದು
ದನ್ನು ಪ್ರಪಂಚದಲ್ಲಿ ಮಾಡಬೇಕಾಗುತ್ತದೆ. ಆದರೆ ಅದು ಸಾಧ್ಯವಾದ
ಬಳಿಕ ಅತ್ಯಾಕಿಗೆ ಹೋಗಬಾರದು.
೩೫. ಕನಕ ಮತ್ತು ಕಾಂತಾ.
ಈ ಜಗತ್ತಿನಲ್ಲಿ ಕನಕ ಮತ್ತು ಕಾಂತಾ ಇವುಗಳು ನಮಗೆ ಪ್ರಬಲ
ವಾದ ಶತ್ರುಗಳಿರುತ್ತವೆ. ಇವುಗಳು ನಮ್ಮನ್ನು ಒಮ್ಮೆ ತಮ್ಮ ಮೋಹಪಾಶಗ
ಎ. ೫೪ ಇ.
ಳಿಂದ ಬಿಗಿದವೆಂದರೆ ನಮ್ಮ ಸ್ವತಂತ್ರ ತೆಯೂ, ನಿಸ್ರ್ರಹತೆಯೂ, ನ್ವಾಭಿಮಾ
ನವೂ ಹೊರಟುಹೋಗುತ್ತವೆ. ಕಾಂತೆಯ ಸಲುವಾಗಿ ಕನಕದ ಅಗತ್ಯವು
ಹೆಚ್ಚಾಗುವದು. ಅವಳು ನಾವು ಏನು ಮಾಡಬೇಕೆಂಬದರ ಪರಿಮಿತಿಯನ್ನು
ಉಳಿಸುವದಿಲ್ಲ. ಅವಳು ನಮ್ಮನ್ನು ಪರವಶತೆಗೂ ದುಃಖಕ್ಕೂ ಈಡು ಮಾಡು
ವಳು.
| ಮೊದಲಿಗೆ ಜಯಪುರದ ಗೊವಿಂದಜಿ ಎಂಬ ಗುಡಿಯ ಪೂಜಾರರು
ಬ್ರಹ್ಮಚಾರಿಗಳಾಗಿರುತ್ತಿದ್ದರು. ಆದುದರಿಂದ ಅವರು ಬಹಳ ಈಶ್ವರಭಕ್ತರೂ
ಸ್ವಾಭಿಮಾನಿಗಳೂ ಇದ್ದರು. ಅವರನ್ನು ಅವರ ಒಡೆಯನಾದ ಜಯಪುರದ
ಅರಸನು ಕರೆಸಿದರೂ ಅವರು ಅವನಿಗೆ -« ನಮ್ಮ ಕೂಡ ಏನಾದರೂ ಕೆಲಸವಿ
ದ್ವರೆ ನೀವೇ ಇಲ್ಲಿಗೆ ಬನ್ನಿರಿ” ಎಂದು ಹೇಳಿ ಕಳುಹಿಸುತ್ತಿ ದ್ದರು. ಮುಂದೆ'
ಕೆಲವು ದಿವಸಗಳ ನಂತರ ಅರಸನು ಅವರ ಮದುವೆಯನ್ನು ಮಾಡಿದನು. ಆಗಿ
ನಿಂದ ಅವರು ತಮಗೆ ಅರಸನು ಕರೆಯಿಸದೆ ಇದ್ದರೂ ಅವನ ಕಡೆಗೆ ಹೋಗಹ
ತ್ತಿದರು. ಒಬ್ಬ ಪೂಜಾರಿಯು ಅರಸನಿಗೆ ಆಶೀರ್ವಾದವನ್ನು ಕೊಡುವದಕ್ಕಾಗಿ,
ಇನ್ನೊಬ್ಬನು ದೇವರ ಮೂರ್ತಿಯನ್ನು ಕುಳ್ಳಿರಿಸಿದ ಜಗಲಿಯ ಮೇಲಿನ ಹೂ
ವುಗಳನ್ನು ಕೊಡುವದಕ್ಕಾಗಿ, ಮೂರನೇಯವನು ದೇವರ ನೈವೇದ್ಯುವನ್ನು
ಮುಟ್ಟಿಸುವದಕ್ಕಾಗಿ ಈ ಪ್ರಕಾರ ಬೇರೆ ಬೇರೆ ಕೆಲಸಗಳಿಗಾಗಿ ಹೋಗಲಿಕ್ಕೆ
ಹತ್ತಿದರು. ಇದನ್ನೆಲ್ಲ ಇವರು ತಮ್ಮ ಸಂಸಾರದ ಸಲುವಾಗಿ ಮಾಡಬೇಕಾ
ಯಿತು. ಒಬ್ಬನು ತನ್ನ ಮನೆಯನ್ನು ಕಟ್ಟುವ ಸಲುವಾಗಿ, ಇನ್ನೊಬ್ಬನು ತನ್ನ
ಮಗನ ಮುಂಜೆ ಮದುವೆಯ ಸಲುವಾಗಿ, ಮೂರನೆಯವನು ತನ್ನ ಹೆಂಡತಿಯ
ಸೀರೆ ಕುಪ್ಪಸಗಳ ಸಲುವಾಗಿ ಈ ಪ್ರಕಾರ ಒಂದಿಲ್ಲೊಂದು ಕಾರಣದ ಸಲು
ವಾಗಿ ಅರಸನ ಬಳಿಯಲ್ಲಿ ಹಣವನ್ನು ಕೇಳಲಿಕ್ಕೆ ಹೋಗುವ ಪ್ರಸಂಗಗಳು
ಬರಹತ್ತಿದವು. ಪರವಶತೆಯು ಯಾವಾಗಲು ಕೆಡಕಿರುತ್ತದೆ.
ತಾತ್ಸರ್ಯ.
ಜನರು ಎರಡನೆಯವರ ಕೈಕೆಳಗೆ ಕೆಲಸ ಮಾಡುವಾಗ *ೆಲಕೆಲವು
ಸಾರೆ ಬೇಕೆ ಬೇರೆ ತರದ ಅವಮಾನಗಳನ್ನೂ ಕಷ್ಟಗಳನ್ನೂ ತಡೆದುಕೊಳ್ಳಬೇ
ಕಾಗುತ್ತದೆ. ಇದರ ಕಾರಣವೇನು? ದ್ರಮ್ಮಲೋಭವು. ಹಾಗೂ ಈ ದ್ರವ್ಯ
೨. ೫೫ ಎ
ಲೋಭವು ಸ್ತ್ರೀಯರ ಸಲುವಾಗಿಯೇ ಹೆಚ್ಚಾಗುತ್ತದೆ. ಕನಕ ಮತ್ತು ಕಾಂ
ತಾ ಇವುಗಳೆರಡನ್ನೂ ಬಿಟ್ಟು ಇರುವವರು ಬಹಳ ವಿರಳ. ಅವರೇ ಸಾಧು
ಸಜ್ಜ ನರು! ಅವರೇ ಪರಮೇಶ್ವರನ ಪರಮ ಪ್ರಿಯ ಭಕ್ತ ರು!
೩೬. ಶ್ರೀಮಂತಿಕೆಯ ಗರ್ವವು.
ಶ್ರೀಮಂತಿಕೆಯು ಬಂದ ಕೂಡಲೆ ಯಾರೂ ಗರ್ವವನ್ನು ಮಾಡಬಾ
ರದು. ಶ್ರೀಮಂತಿಕೆಯಲ್ಲಿ ಗರ್ವವು ಬರುವಂಥ ವಿಶೇಷ ಕಾರಣವೇನೂ ಇರು
ವದಿಲ್ಲ. ನಾವು ಶ್ರೀಮಂತರೆಂದು ತಿಳಿದುಕೊಂಡರೆ ನಮ್ಮಕಿಂತ ಎಷ್ಟೋ ಪಾ
ಲು ಹೆಚ್ಚಿನ ಶ್ರೀಮಂತರು ಅನೇಕರು ಇರುವರು. ಅವರ ಮುಂದೆ ನಾವು
ಕೇವಲ ಭಿಕ್ಷುಕರಂತೆ ತೋರುವೆವು. ರಾತ್ರಿಯಲ್ಲಿ ಕತ್ತಲಗವಿದ ಕೂಡಲೆ
ಹೊನ್ನೆ ಹುಳಗಳು ಬಂದು- “ನಾವು ಇಡೀ ಜಗತ್ತಿ ಗೆ ಬೆಳಕನ್ನು ಕೊಡುತ್ತೇವೆ”
ಎಂದು ತಿಳೆದುಕೊಳ್ಳು ವವು. ಆದರೆ ಆಕಾಶದಲ್ಲಿ ನಕ್ಷತ್ರಗಳು ಮೂಡಿದ ನಂತರ
ಅವುಗಳ ಸೊಕ್ಕು ಹೊರಟು ಹೋಗುವದು. ಅಗ ನಕ್ಷತ್ರಗಳು-""ನಾವು ಇಡೀ
ಜಗತ್ತಿಗೆ ಬೆಳಕನ್ನು ಕೊಡುತ್ತೇವೆ” ಎಂದು ತಿಳಿದುಕೊಳ್ಳುವವು. ಕೆಲವು
ಹೊತ್ತಿನ ಮೇಲೆ ಚಂದ್ರನು ಆಕಾಶದಲ್ಲಿ ಉದಯವಾಗಲು ನಕ್ಷತ್ರಗಳು
ಕಳೆಗುಂದಿ ತಮ್ಮ ಮೋರೆಯನ್ನು ಬಾಡಿಸಿಕೊಂಡು ಕುಳಿತುಕೊಳ್ಳುವವು. ಆ
ಮೇಲೆ ಚಂದ್ರನು ತನ್ನ ಬೆಳಕಿನಿಂದಲೇ ಜಗತ್ತು ಬೆಳಗಿ ಸೌಂದರ್ಯದಿಂದ
ಮೆಕೆಯುವದೆಂದು ತಿಳಿದು ಸೊಕ್ಕಿಗೆ ಬರುವನು. ಆದರೆ ಮರುದಿವಸ ಮುಂಜಾನೆ
ಪೂರ್ವದಿಕ್ಕಿನಲ್ಲಿ ಸೂರ್ಯನಾರಾಯಣನ ಆಗಮನವನ್ನು ಸಾರುವಂಥ ಪ್ರ
ಭಾಶಕಾಲವು ಪ್ರಾಪ್ತವಾಗಲು ಚಂದ್ರನ ಸೊಕ್ಕು ಎಲ್ಲಿ ಉಳಿಯುವದು? ಆದು
ದರಿಂದ ತಾವು ಶ್ರೀಮಂತರೆಂದು ತಿಳಿದುಕೊಳ್ಳು ವವರು ಈ ಎಲ್ಲ ಸಂಗತಿಗಳನ್ನು
ಕುರಿತು ವಿಚಾರ ಮಾಡಿದರೆ ಅವರಿಗೆ ತಮ್ಮ ಶ್ರೀಮಂತಿಕೆಯನ್ನು ಕುರಿತು
ಸೊಕ್ಕು ಮಾಡುವ ಕಾರಣವು ಉಳಿಯಲಾರದು.
ತಾತ್ಸರ್ಯ.
ಈ ಜಗತ್ತಿನಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಹೆಚ್ಚು ಶ್ರೀಮಂತರು ಅಥ
೨೨ ೫೬
ವಾ ಹೆಚ್ಚಿನ ಯೋಗ್ಯತೆಯವರು ಇರುತ್ತಾರೆ. ಆದುದರಿಂದ ಯಾರೂ ತಮ್ಮ
ಶ್ರೀಮಂತಿಕೆ, ವಿದ್ಯೆ, ಅಧಿಕಾರ, ಸೌಂದರ್ಯ, ಶಕ್ತಿ ಮುಂತಾದವುಗಳ ಬಗ್ಗೆ
ಗರ್ವ ಮಾಡಬಾರದು. ಪರಮೇಶ್ವರನೊಬ್ಬನೇ ಮಾತ್ರ ಎಲ್ಲರಿಗಿಂತ ಹೆಚ್ಚು
ಶ್ರೀಮಂತನೂ ಶ್ರಿ ೇಷ್ಠನೂ ಇರುತ್ತಾನೆ.
Ns)
೩೭. ದ್ರವ್ಯದ ತಿರಸ್ಕಾರವು.
ಒಂದು ದಿವಸ ಒಬ್ಬ ಮಾರವಾಡಿ ಸದ್ಭೃಹಸ್ಯನು ಭಗವಾನ್ ರಾಮ
ಕೃಷ್ಣ ಪರಮಹಂಸರ ಕಡೆಗೆ ಬಂದು -* ನಿಮಗೆ ಬೇಕಾಗುವ ವೆಚ್ಚವನ್ನುಮಾ
ಡುವದಕ್ಕೆ ನಿಮಗೆ ಕೆಲವು ಸಾವಿರ ರೂಪಾಯಿಗಳನ್ನು ಕಾಣಿಕೆಯಾಗಿ ಕೊಡು
ತ್ರೀನೆ. ಹಾಗೆ ಮಾಡುವದಕ್ಕೆ ನೀವು ನನಗೆ ದಯಮಾಡಿ ಅಪ್ಪಣೆಯನ್ನು ಕೊಡಿ
ರಿ” ಎಂದು ಬೇಡಿಕೊಂಡನು. ಆ ಮೂರವಾಡಿ ಸದ್ಗ )ಹಸ್ಮನ ಉದ್ದೇಶವು
ಸ್ತುತ್ಯುವಿದ್ದರೂ ಭಗವಾನರು “ ಬೇಡ” ಎಂದು ನಿಷ್ಮುರವಾಗಿ ಉತ್ತರ ಕೊ
ಟ್ವರು. ಅವರು ಆ ಮಾರವಾಡಿಗೆ.. ನನಗೆ ನಿನ್ನ ಹಣವನ್ನು ತೆಗೆದುಕೊಂಡು
ಏನೂ ಮಾಡಶಕ್ಯದ್ದಿ ರುವದಿಲ್ಲ. ಯಾಕಂದರೆ ನಾನು ಒಮ್ಮೆ ನಿನ್ನ ಹಣವನ್ನು
ತೆಗೆದುಕೊಂಡರೆ ನನ್ನ ಮನಸ್ಸು ಯಾವಾಗಲು ಅದರ ಮೇಲೆಯೇ ಕುಳಿತು
ಕೊಳ್ಳುವದು” ಎಂದು ಹೇಳಿದರು. ಇದನ್ನು ಕೇಳಿ ಆ ಮಾರವಾಡಿ ಸದ್ಭ್ಯೃ
ಹಸ್ಕೃನು-" ಹಾಗಾದರೆ ಆ ಹಣವನ್ನು ನಿಮ್ಮ ಉಪಯೋಗದ ಸಲುವಾಗಿ ನಿಮ್ಮ
ಯಾರಾದರೂ ಆಪ್ತರ ಹೆಸರಿನಿಂದ ಒಂದು ಕಡೆಗೆ ಬಡ್ಡಿಯಿಂದ ಇಡುತ್ತೇನೆ”
ಎಂದು ಹೇಳಿದನು. ಇದಕ್ಕೆ ಭಗವಾನರು-* ಛೇ. ಹಾಗೆ ಮಾಡಿದರೆ ಮೋಸ
ಮಾಡಿದಂತೆ ಅಗುವದು. ಮೇಲಾಗಿ ನನ್ನ ಹಣವು ಇಂಥವರ ಹತ್ತರ ಇಸಿ
ರುತ್ತದೆಂದು ಯಾವಾಗಲು ನನ್ನ ಮನಸ್ಸಿನಲ್ಲಿ ವಿಚಾರವು ಬರುವದು. ಆದುದ
ರಿಂದ ಅದು ನನಗೆ ಬೇಕಾಗಿಲ್ಲ” ಎಂದು ಉತ್ತರ ಕೊಟ್ಟರು. ಆದರೂ ಆ
ಮಾರವಾಡಿ ಸದ್ಭೃಹಸ್ಯನು ಪುನ ಭಗವಾನರಿಗೆ-“ ಮನಸ್ಸು ಎಣ್ಣೆಯಂತೆ
ಇದ್ದರೆ ಅದು ಕನಕ ಮತ್ತು ಕಾಂತಾ ಎಂಬ ಸಮುದ್ರದ ಮೇಲೆ ಸಹ ತೇಲಾ
ಡುವದು” ಎಂದು ಭಗವಾನರ ಬೋಧತಿಮೃತದೊಳಗಿನ ಒಂದು ಉಪದೇಶಪರ
ಎ೯ ೫8 ಎಂ
ವಾಕ್ಯುವನ್ನು ಹೇಳಿದನು. ಅದಕ್ಕೆ ಭಗವಾನರು-« ಅದೆಲ್ಲ ನಿಜವು. ಆದರೆ
ಸಾಸಿವೆ ಎಣ್ಣೆಯು ಬಹಳ ದಿವಸಗಳ ತನಕ ನೀರಿನ ಮೇಲೆ ತೇಲಾಡಿದರೆ ಅದು
ಕೊಳೆಯುವದು. ಆದುದರಿಂದ ಮನಸ್ಸು ಕನಕ ಮತ್ತು ಕಾಂತಾ ಎಂಬ ಸ
ಮುದ್ರದ ಮೇಲೆ ತೇಲಾಡಿದರೂ ಬಹಳ ದಿವಸಗಳ ತನಕ ಅದರ ಸಂಸರ್ಗವು
ಅಗುವದರಿಂದ ಅದು ನಿಶ್ಚಯವಾಗಿ ಭಷ್ಟವಾಗಿ ದುಷ್ಟ ವಾಸನೆಯನ್ನು ಪಸರಿ
ಸುವದು” ಎಂದು ಉತ್ತರಕೊಟ್ಟರು.
ತಾತ್ಸರ್ಯ.
ದ್ರವ್ಯಲೋಭವನ್ನು ಬಿಟ್ಟವರು ದ್ರವ್ಯದ ಹೆಸರೇ ತೆಗೆಯುವದಿಲ್ಲ. ದ್ರ
ವ್ಯವನ್ನು ತಮ್ಮಿಂದ ಯಾವಾಗಲೂ ದೂರ ಇಡುವರು. ಅದನ್ನು ಕೈಮುಟ್ಟುವ
ದಿಲ್ಲ ಅಥವಾ ಕಣ್ಣಿನಿಂದ ಸಹ ನೋಡುವದಿಲ್ಲ. ಹಾಗೂ ಅದರ ಬಗ್ಗ್ಗೆ ಒಂದು
ಕ್ಷಣವಾದರೂ ತಮ್ಮ ಮನಸ್ಸಿನಲ್ಲಿ ವಿಚಾರ ಮಾಡುವದಿಲ್ಲ.
೩೮. ದುಷ್ಟ ವಾಸನೆಗಳನ್ನು ಜಯಿಸುವ
ಬಗೆಯು.
ಭಗವಾನ್ ರಾಮಕೃಷ್ಣ ಪರಮಹಂಸರ ಒಬ್ಬ ಶಿಷ್ಟುನು ಭಗವಾನರ
ಮುಂದೆ ಒಂದು ದಿವಸ ಬಂದು-4 ನಾನು ನನ್ನ ಆಯುಷ್ಯವನ್ನು ಭಗವದ್ಧಾ 3ನ
ದಲ್ಲಿ ಕಳೆಯುತ್ತಿದ್ದರೂ ನನ್ನ ಮನಸ್ಸಿನಲ್ಲಿ ಆಗಾಗ ದುಸ್ಕವಾಸನೆಗಳು ಬರು
ತ್ತವೆ. ಆದುದರಿಂದ ಅವುಗಳನ್ನು ಹೇಗೆ ಗೆದೆಯಬೇಕು?” ಎಂದು ಪ್ರಶ್ನೆಮಾ
ಡಿದನು. ಅದಳ್ಕೆ ಭಗವಾನರು ಅವನ ಮುಂದೆ ಕೆಳಗೆ ಬರೆದ ಪ್ರಕಾರ ಒಂದು
ಕಥೆಯನ್ನು ಹೇಳಿದರು. ಅದೇನಂದರೆ:
ಒಬ್ಬ ಮನುಷ್ಯನ ಹತ್ತರ ಒಂದು ಪ್ರೀತಿಯ ನಾಯಿಯು ಇತ್ತು.
ಅದನ್ನು ಅವನು ಯಾವಾಲು ಪ್ರೀತಿಸುತ್ತಲ್ಲೂ, ಬಗಗಲೊಳಗೆ ಎತ್ತಿ ಕೊಂಡು
ಅಡ್ಡಾಡುತ್ತಲೂ, ಅದರ ಸಂಗಡ ಆಡುತ್ತ ಮುದ್ದು ಕೊಡುತ್ತಲೂ ಇದ್ದನು.
ಈ ಅವನ ಹಚ್ಚುತನವನ್ನು ನೋಡಿ ಒಬ್ಬ ಬುದ್ಧಿವಂತ ಮನುಷ್ಯನು ಅವ
8
— ಈ೫ಲ ಎ...
ನಿಗೆ-ನೀನು ಈ ಪ್ರಕಾರ ನಾಯಿಯ ಕೂಡ ಬಹಳ ಸಲಿಗೆಯನ್ನು ಮಾಡ
ಜೇಡ. ಅದು ಹೇಳಿ ಕೇಳಿ ಬುದ್ಧಿ ಇಲ್ಲಿದ ಪಶು ಇರುತ್ತದೆ. ಆದುದರಿಂದ ಅದು
ನಿನಗೆ ಒಂದಿಲ್ಲೊಂದು ದಿನ ಕಡಿದೀತು” ಎಂದು ಹೇಳಿದನು. ಈ ಉಪದೇಶ
ವನ್ನು ಕೇಳಿ ನಾಯಿಯ ಒಡೆಯನು ಅದು ನಿಜವೆಂದು ವಿಶ್ವಾಸವಿಟ್ಟು ಆ ಕೂ
ಡಲೆ ಆ ನಾಯಿಯನ್ನು ತನ್ನ ಬಗಲೊಳಗಿಂದ ಇಳಿಸಿ ಅದರಕೂಡ ಇನ್ನು
ಮುಂದೆ ಎಂದೂ ಸಲಿಗೆಯನ್ನು ಮಾಡುವದಿಲ್ಲೆ ಂದು ನಿಶ್ಚಯ ಮಾಡಿದನು.
ಆದರೆ ಆ ನಾಯಿಗೆ ತನ್ನ ಒಡೆಯನ ಮನಸ್ಸು ಈ ಪ್ರಕಾರ ಏಕೆ ಬದಲು ಆ
ಯಿತೆಂಬುವದು ಮೊದಲು ಗೊತ್ತಾಗಲಿಲ್ಲ. ಆದುದರಿಂದ ಅದು ಕೆಲವು ಹೊತ್ತು
ಅವನ ಕಡೆಗೆ ಅವನು ತನ್ನನ್ನು ಎತ್ತಿಕೊಂಡು ಮುದ್ದು ಕೊಡಲೆಂದು ಓಡಿ
ಬರಹತ್ತಿತು. ಆದರೆ ಆ ಒಡೆಯನು ಅದನ್ನು ಅನೇಕ ಸಾರೆ ಹೊಡೆಯಲಾಗಿ
ಅದು ಅವನಿಗೆ ತಿರುಗಿ ಪೀಡಿಸುವದನ್ನು ಬಿಟ್ಟಿತು. ಇದರಂತೆ ನಿನ್ನ ಅವಸ್ಥೆಯು
ಇರುತ್ತದೆ. ನೀನು ಇಷ್ಟು ದಿವಸ ನಿನ್ನ ಹೃದಯದಲ್ಲಿ ಇಟ್ಟು ಕೊಂಡು ಸಾಕಿ
ದಂಥ ವಿಷಯವಾಸನೆಯೆಂಬ ನಾಯಿಯನ್ನು ಈಗ ನೀನು ಬಿಡಬೇಕೆಂದುಮ
ನಸ್ಸು ಮಾಡಿದರೂ ಅದು ನಿನ್ನನ್ನು ಸುಲಭವಾಗಿ ಬಿಟ್ಟುಕೊಡಲಾರದು. ಅದ
ರೂ ಅದರಿಂದ ನಿನಗೆ ಏನೂ ಅಪಾಯವು ತಟ್ಬಲಿಕ್ಕಿಲ್ಲ. ಅದನ್ನು ನೀನು ಲಾ
ಲನ ಮಾಡಬೇಡ. ಅದು ನಿನ್ನ ಸಮಿಪಕ್ಕೆ « ನನ್ನನ್ನು ಎತ್ತಿಕೋ” ಎಂದು
ಬಂದಾಗ ನೀನು ಅದನ್ನು ಚನ್ನಾಗಿ ಥಳಿಸು. ಹೀಗೆ ನೀನು ಮಾಡಲಿಕ್ಕೆ ಹತ್ತಿ
ದರೆ ಕೆಲವು ದಿವಸಗಳ ತರುವಾಯ ಅದರ ಕಾಟವು ನಿನಗೆ ತಪ್ಪೀತು.
ತಾತ್ಸರ್ಯ.
ಮನುಷ್ಯನು ದುಷ್ಟ ವಾಸನೆಗಳಿಗೆ ಎಂದೂ ಅವಕಾಶವನ್ನು ಕೊಡಬಾ
ರದು. ಮನಸ್ಸಿನಿಂದಲೇ ಕೆಲವರು ಬುದ್ಧಿವಂತರು, ಜೆಲವರು ಮೂರ್ಬರು,
ಜೆಲವರು ಶಿಷ್ಟರು, ಕೆಲವರು ದುಷ್ಟರು, ಕೆಲವರು ಪುಣ್ಯವಂತರು, ಕೆಲವರು
ಪಾಪಿಗಳು ಆಗುತ್ತಾರೆ. ಮನಸ್ಸೇ ಪ್ರಪಂಚವು, ಮನಸ್ಸೇ ಯಮವುರವು,
ಮನಸ್ಸೇ ಸ್ವರ್ಗವು, ಮನಸ್ಸೇ ನರಕವು. ಮನಏವ ಮನುಷ್ಯಾಣಾಂ
ಕಾರಣಂ ಬಂಧಮೋಕ್ಷಯೋಃ ॥ ಎಂದು ಭಗವದ್ಗೀತೆಯಲ್ಲಿ ಹೇಳಿ
ರುತ್ತದೆ. ಮಾ
KR
ರಿ. ಅಹಂಕಾರವು.
ಅಕಳದ ಹೊಟ್ಟೆಯಿಂದ ಹೋರಿಯು ಹುಟ್ಟಿದ ಕೂಡಲೆ ಅದು «ಹಂ?
ಅಂದರೆ ಅಹಮ್? ಎಂದು ಒದರುತ್ತದೆ. ಈ ಅಹಂಕಾರದಿಂದ ಅದು ಮುಂದೆ
ಎಷ್ಟು ಕಷ್ಟಗಳನ್ನು ಅನುಭೋಗಿಸಬೇಕಾಗುತ್ತದೆ ನೋಡಿರಿ! ಅದು ದೊಡ್ಡ
ಬಾದ ಕೂಡಲೆ ಅದನ್ನು ನೇಗಿಲಕ್ಕೆ ಹೂಡುವದರಿಂದ ಅದು ಮುಂಜಾನೆಯಿಂದ
ಸಂಜೆಯ ವರೆಗೆ ಬಿಸಿಲಲ್ಲಿಯೂ ಮಳೆಯಲ್ಲಿಯೂ ಹೊಲದೊಳಗೆ ದುಡಿಯಬೇ
ಕಾಗುತ್ತದೆ. ಒಮ್ಮೊಮ್ಮೆ ಅದನ್ನು ಕಟಕನು ಕೊಲ್ಲುತ್ತಾನೆ. ಆಗ ಮಾಂಸಭಕ್ಷ
ಕರು ಅದರ ಮಾಂಸವನ್ನು ತಿಂದುಬಿಡುತ್ತಾರೆ. ಅದರ ತೊಗಲನ್ನು ಮೊಚ್ಚೆ
ಗಾರರು ಒಯ್ದು ಅದನ್ನು ಹದ ಮಾಡಿ ಅದರಿಂದ ಮೊಚ್ಚೆಗಳನ್ನು ಮಾಡು
ತ್ತಾಕೆ. ಅದರ ತೊಗಲಿನಿಂದ ಮೃದಂಗಗಳನ್ನು ಸಹ ಮಾಡುತ್ತಾ ಕೈ ಅಗ
ಮೃದಂಗ ಬಾರಿಸುವವರು ಏನೂ ಕರುಣವಿಲ್ಲದೆ ಆದರ ನೆತ್ತಿಯ ಮೇಲೆ ತಮ್ಮ
ಕೈಯಿಂದ ಹೊಡೆಯುತ್ತಾ ಕೆ ಮೃದಂಗವು ಚನ್ನಾಗಿ ನಾದವನ್ನು ಕೊಡದಿ
ದ್ದರೆ ಒಮ್ಮೊಮ್ಮೆ ಸುತ್ತಿಗೆಯಿಂದ ಸಹ ಹೊಡೆಯುತ್ತಾರೆ. ಪಿಂಜಾರನು ಅರಳಿ
ಯನ್ನು ಹಿಂಜುವಗೋಸ್ಕರ ಅದರ ಕರಳುಗಳಿಂದ ತನ್ನ ಧನುಷ್ಯದ ಹೆದೆಯ
ನ್ನು ಮಾಡಿದ ಬಳಿಕ ಆ ಬಡಪ್ರಾಣಿಯ ಕಷ್ಟಗಳು ಮುಗಿಯುವವು. ಯಾಕಂ
ದರೆ ಆಗ ಅದು « ಹಮ್» « ಹಮ್” (ನಾನು ನಾನು) ಎಂದು ಒದರುವ
ಬದಲಾಗಿ « ತುಹಮ್? « ತುಹಮ್” (ನೀನು, ನೀನು) ಎಂದು ಒದರುವದು.
ತಾತ್ಪರ್ಯ.
ಅಹಂಕಾರವನ್ನು ನಾಶಪಡಿಸುವದು ಬಹಳ ಅಗತ್ಯವಿರುತ್ತದೆ. ನಾನು”
ಎಂಬುವದು ಹೋಗಿ «ನೀನು ಎಂಬುವದು ಬರುವ ತನಕ ಮನುಷ್ಯನಿಗೆ
ಎಂದೂ ಗತಿಯಾಗದು. 4 ಹಮ್ಮಿನ ಬಿಮ್ಮು, ಸೊಮ್ಮಿನ ಸಂಬಂಧ
ಬಿಟ್ಟು, ಕಿಂಕರರ ಕಿಂಕರನಾಗಬೇಕು” ಎಂದು ಶ್ರೀ ಬಸವೇಶ್ವರ
ಬೋಧಾಮೃತದಲ್ಲಿ ಹೇಳಿರುತ್ತದೆ. ಇದನ್ನು ಎಲ್ಲರೂ ಚನ್ನಾಗಿ ಲಕ್ಷ್ಯದಲ್ಲಿಟ್ಟು
ನಡೆಯತಕ್ಕದ್ದು.
ಎ. EO —
೪೦. ದುಡ್ಡಿನ ಸೊಕ್ಕು.
ದ್ರವ್ಯವು ಬಹಳ ಪ್ರ ಬಲವಾದ ಉಪಾಧಿಯು ಇರುತ್ತದೆ. ಮನುಷ್ಯನಿಗೆ
ಶ್ರೀಮಂತಿಕೆಯು ಬಂದ ಕೂಡಲೆ ಅವನ ಸ್ವಭಾವದಲ್ಲಿ ಮಹತ್ವವಾದ ಬದಲು
ಉಂಟಾಗುತ್ತದೆ. ಬಡವನಿರುವಾಗ ಇರುವ ನಮ್ರತೆಯು ಶ್ರೀಮಂತಿಕೆಯು
ಬಂದ ಕೂಡಲೆ ಉಳಿಯುವದಿಲ್ಲ. ಒಬ್ಬ ಬಡ ಬ್ರಾಹ್ಮಣನು ಭಗವಾನ್ ರಾಮ
ಕೃಷ್ಣ ಪರಮಹಂಸರ ಬಳಿಗೆ ಉಪದೇಶವನ್ನು ಕೇಳಲಿಕ್ಕೆ ಮೇಲಿಂದ ಮೇಲೆ
ಬರುತ್ತಿದ್ದನು. ಅದರೆ ಕೆಲವು ದಿವಸಗಳ ನಂತರ ಅವನು ಬರುವದನ್ನು ಬಿಟ್ಟ
ನು. ಅವನು ಏಕೆ ಒಮ್ಮೆಲೆ ಬರುವದನ್ನು ಬಿಟ್ಟೆನೆಂಬುವದು ಯಾರಿಗೂ ತಿಳಿಯ
ಲಿಲ್ಲ. ಅದರೆ ಕೆಲವು ದಿವಸಗಳ ತರುವಾಯ ಭಗವಾನರು ತಮ್ಮ ಕೆಲವು ಶಿಷ್ಯ
ರೊಂದಿಗೆ ಒಂದು ಹಡಗದಲ್ಲಿ ಕುಳಿತು ಒಂದು ಊರಿಗೆ ಹೋಗಿ ಆ ಹಡಗ
ದಿಂದ ಕೆಳೆಗೆ ಇಳಿಯುವಾಗ ಆ ಬ್ರಾಹ್ಮಣನು ಗಂಗಾನದಿಯ ದಂಡೆಯ ಮೇಲೆ
ಕೆಲವು ದೊಡ್ಡ ಜನರ ಪದ್ಧತಿಯ ಪ್ರಕಾರ ನದಿಯ ಗಾಳಿಯಲ್ಲಿ ವಿಹಾರ ಮಾ
ಡುತ್ತ ಕುಳಿತುಕೊಂಡಿದ್ದನು. ಅವನು ಭಗವಾನರನ್ನು ನೋಡಿದವನೇ ಆಢ್ಯುತೆ
ಯಿಂದ ವಂದನೆಗಳನ್ನು ಮಾಡಿ ಅವರಿಗೆ“ ರಾಕೂರರೇ! ಈಗ ನೀವು ಹೇಗಿ
ರುವಿರಿ?” ಎಂದು ಪ್ರಶ್ನೆ ಮಾಡಿದನು. ಆಗ ಅವರು ಅವನು ಮಾತಾಡಿದ ಧ್ವ
ನಿಯ ಮೇಲಿಂದಲೂ ಅವನ ರೀತಿಯ ಮೇಲಿಂದಲೂ ತಮ್ಮ ಹತ್ತ ರ ಇದ್ದ
ಒಬ್ಬ ಶಿಷ್ಯನಿಗೆ ಈಗ ಇವನಿಗೆ ಕೆಲವು ದುಡ್ಡು ಬಂದಿರಬಹುದು! ಆದು
ದರಿಂದ ಇವನ ನಡುವಳಿಯಲ್ಲಿ ಬಹಳ ಬದಲಾಗಿರುವದು ನೋಡಿದಿಯಾ?”
ಎಂದು ಒಮ್ಮೆಲೆ ಕೇಳಿದರು. ಅದಕ್ಕೆ ಅ ಶಿಷ್ಯನು ಖೊಳ್ಳನೆ ನಕ್ಕನು.
ತಾತ್ಪರ್ಯ.
ಬಡವನಿಗೆ ಶ್ರೀಮಂತಿಕೆಯು ಬಂದ ಕೂಡಲೆ ಅವನಿಗೆ ತೀವ್ರವೇ ಸೊ
ಕ್ಕು ಬಂದು ಅವನ ಕಣ್ಣುಗಳು ತಿರುಗಿ ಹೋಗುವವು. ಮತ್ತು ಅವನ ಸ್ವಭಾ
ವದಲ್ಲಿ ಬಹಳ ಹೆಚ್ಚು ಕಡಿಮೆಯಾಗುವದು. ಅವನಿಗೆ ಹಿರಿಯರು, ಗುರುಗಳು,
ಪೂಜ್ಯರು ಯಾರೂ ತಿಳಿಯರು. ತನ್ನ ದ್ರಮ್ಯಮದದಿಂದ ಅವನು ತಾನೇ ಎಲ್ಲ
ರಿಗಿಂತ ಹಿರಿಯನು ಮತ್ತು ಫೂಬ್ಯುನೆಂದು ತಿಳಿಯುತ್ತಾನೆ. ಅದುದರಿಂದ ಅವನು
ಬಾ ಗ ಷು
ಮೂಢೋ ಮೂರೋ ಗಾರ್ದಭೋ ಏಕರಾಶಿ ಎಂಬಂತೆ ಈ
ಮೂರು ಜನರ ಮಾಲಿಕೆಯಲ್ಲಿ ಸೇರುವನು.
೪೧. ಈಶ್ವರಸಾಸ್ತಿ ಮಾಡಿಕೊಂಡನನೂ
ಚಿಕ್ಕ ಮಗುವೂ ಒಂದೇ.
ತೆಂಗಿನ ಗಿಡದ ಎಲೆಯು ಕೆಳಗೆ ಕಳಿಚಿ ಬಿದ್ದರೂ ಅದು ಆ ಗಿಡ
ದಲ್ಲಿ ಒಮ್ಮೆ ಇದ್ದ ಗುರುತು ಮಾಜುವದಿಲ್ಲ. ಅದುದರಿಂದ ಅ ಗಿಡವನ್ನು ನೋ
ಡುವವರಿಗೆ ಎಲೆಯು ಅಲ್ಲಿ ಇತ್ತೆಂಬುವದು ಕಾಣುವದು. ಇದರಂತೆ ಈಶ್ವರ
ಪ್ರಾಪ್ತಿಯನ್ನು ಮಾಡಿಕೊಂಡವನು ಸಿಟ್ಟು ಮತ್ತು ಆಶೆಗಳನ್ನು ಬಿಟ್ಟರೂ
ಅವುಗಳು ಮುಂಚೆ ಇದ್ದ ಗುರುತುಗಳು ಸ್ವಲ್ಪಾದರೂ ಕಾಣಿಸುವವು. ಈಶ್ವರ
ಪ್ರಾಪ್ತಿಯನ್ನು ಮಾಡಿಕೊಂಡವನು ಒಬ್ಬ ಚಿಕ್ಕ ಮಗುವಿನಂತೆ ಇರುತ್ತಾನೆ.
ನಾವು ಒಬ್ಬ ಚಿಕ್ಕ ಮಗುವಿಗೆ ಎರಡು ದುಡ್ಡಿನ ಆಟಿಕೆಯ ಸಾಮಾನು ಕೊ
ಟ್ವಲ್ಲಿ ಅವನು ಕೆಲವು ರೂಪಾಯಿಗಳ ಬೆಲೆ ಬಾಳುವ ತನ್ನ ಮೈಮೇಲಿನ ಹೊ
ದಿಕೆಯನ್ನು ಸಹ ಕೊಡುತ್ತಾನೆ. ಅವನು ಮೊದಲಿಗೆ-" ನಾನು ಇದನ್ನು ಕೊ
ಡುವದಿಲ್ಲ. ನಮ್ಮ ಅಪ್ಪನು ಇದನ್ನು ನನಗೆ ಕೊಂಡು ಕೊಟ್ಟಿರುವನು” ಎಂದು
ಹೇಳುತ್ತಾನೆ. ಅದರೂ ಅವನು ಕಡೆಗೆ ಅದನ್ನು ಕೊಡಲಿಕ್ಕೆ ಒಪ್ಪಿ ಕೊಳ್ಳು
ತ್ತಾನೆ. ಚಿಕ್ಕ ಮಗುವಿಗೆ ಎಲ್ಲವೂ ಅಷ್ಟೇ. ಎಲ್ಲರೂ ಅಷ್ಟೇ. ಆ ಮಗು
ವಿಗೆ ಉಚ್ಚ ನೀಚ ಭೇದವು ಏನೂ ಇರುವದಿಲ್ಲ. ಆದುದರಿಂದ ಆ ಮಗುವು
ಜಾತಿಭೇದವನ್ನು ಸಹ ಎಣಿಸುವದಿಲ್ಲ ಆ ಮಗುವಿನ ತಾಯಿಯು ಅವನಿಗೆ-
“ ಇಂಥವನು ನಿನ್ನ ಅಣ್ಣನಿರುತ್ಮಾನೆ” ಎಂದು ಹೇಳಿದರೆ ಆ ಮಗುವು ಬೇಕಾದ
ವನ ಬದಿಯಲ್ಲಿ ಕೂತು ಅವನ ಎಡೆಯೊಳಗಿಂದ ಅನ್ನವನ್ನು ಉಣ್ಣುವದು. ಆ
ಎರಡನೇಯವನು ಒಡಿಗನ ಮಗನಿದ್ದರೂ ಆ ಮಗುವು ಉಣ್ಣಲಿಕ್ಕೆ ಹಿಂದು
ಮುಂದೆ ನೋಡುವದಿಲ್ಲ. ಆ ಮಗುವಿಗೆ ಪರಕೀಯತ್ವವು ಅಥವಾ ದ್ವೇಷಭಾವ
ವು ಇರುವದಿಲ್ಲ. ಹಾಗೂ ಆದಕ್ಕೆ ಶುಚಿಯ ಅಥವಾ ಅಶುಚಿಯ ವಿಚಾರವೇ
ಬರುವದಿಲ್ಲ.
ಎ. ಓರಿ ಎ.
ತಾತ್ಪರ್ಯ.
ಈಶ್ವರ ಪ್ರಾಪ್ತಿಯನ್ನು ಮಾಡಿಕೊಂಡನನು ಇಡೀ ಜಗತ್ತು ತನ್ನ ಕು
ಟುಂಬವೆಂತಲೂ ಜಗತ್ತಿನೊಳಗಿನ ಯಾವತ್ತು ಜಾತಿಗಳ, ಧರ್ಮಗಳ, ಮತ್ತು
ಪಂಥಗಳ ಜನರು ತನ್ನ ಒಡಹುಟ್ಟಿದ ಅಣ್ಣ ತಮ್ಮ ಂದಿರೆಂತಲೂ ತಿಳಿದುಕೊಂಡು
ಅವರ ಕೂಡ ನಡೆಯುತ್ತಾನೆ. ಅವನುಯಾವದೂ ಭೇದವನ್ನು ಮಾಡುವದಿಲ್ಲ.
ತಾನು ಮತ್ತು ಇತರ ಪ್ರಾಣಿಮಾತ್ರರು ಪರಮಾತ್ಮನಿಂದ ನಿರ್ಮಾಣವಾದ
ಬಂಧುಗಳೆಂದು ತಿಳಿದುಕೊಂಡು ಅವರ ಮೇಲೆ ಸಮಾನ ಪ್ರೀತಿಯನ್ನು ಮಾ
ಡುವನು.
೪೨. ಒಕ್ಕಲಿಗನ ಕುಶಲತನವು.
ಒಕ್ಕಲಿಗರು ತಮಗೆ ಎತ್ತುಗಳನ್ನು ಮಾರಾಟಕ್ಕೆ ತೆಗೆದುಕೊಳ್ಳುವಾಗ
ಬಹಳ ಬುದ್ಧಿಯನ್ನು ಉಪಯೋಗಿಸುತ್ತಾರೆ. ಅವರು ಚಲೋ ಎತ್ತು ಯಾವ
ದ್ರು ಕೆಟ್ಟೆ ಎತ್ತು ಯಾವದು ಎಂಬದರ ಪರೀಕ್ಷೆಯನ್ನು ಚನ್ನಾಗಿ ಮಾಡು
ತ್ತಾರೆ. ಯಾವ ಎತ್ತುಗಳ ಎದೆಯು ಚನ್ನಾಗಿ ಇರುತ್ತದೆ ಹಾಗೂ ಯಾವ
ಎತ್ತುಗಳು ಎದೆಯನ್ನು ಒಡಕೊಂಡಿರುತ್ತವೆ ಎಂಬದು ಅವರಿಗೆ ಚನ್ನಾಗಿ
ಗೊತ್ತಿರುವದು. ಅವರು ತಾವು ಯಾವದಾದರೂ ಎತ್ತು ಮಾರಲಿಳ್ಳಿ ತೆಗೆದು
ಕೊಳ್ಳುವ ಮುಂಚೆ ಅದರ ಬಾಲವನ್ನು ಹಿಡಿಯುತ್ತಾರೆ. ಯಾವ ಎತ್ತುಗಳು
ಚುರುಕು ಇರುವದಿಲ್ಲವೋ ಅವುಗಳು ತಮ್ಮ ಬಾಲವನ್ನು ಹಿಡಿಯುವವನಿಗೆ
ಏನೂ ವಿರೋಧಿಸುವದಿಲ್ಲ. ಅವು ತಮಗೆ ನಿದ್ರೆಯು ಬಂದಿರುವದೋ ಏನೋ
ಎಂಬಂತೆ ನೆಲದ ಮೇಲೆ ಬಿದ್ದು ಕೊಳ್ಳುತ್ತ ಮೆ ಅದರೆ ಚುರುಕು ಇರುವಂಥ
ಎತ್ತುಗಳು ತಮ್ಮ ಬಾಲವನ್ನು ಯಾರಾದರೂ ಹಿಡಿದರೆ ಅವು ತಮ್ಮ ಸಂಗಡ
ಸಲಿಗೆಯನ್ನು ಬಯಸುವವರ ಕೃತಿಯನ್ನು ನಿಷೇಧ ಮಾಡಲಿಕ್ಕೆ ಠಣಕ್ಕನೆ
ಜಿಗಿಯುತ್ತವೆ. ಆಗೆ ಒಕ್ಕಲಿಗರು ಇಂಥ ಚುರುಕು ಎತ್ತುಗಳನ್ನು ಮಾರಲಿಕ್ಕೆ
ಕೊಳ್ಳುತ್ತಾರೆ.
8 2... ,
ತಾತ್ಪ ರ್ಯ.
ಯಾವನೊಬ್ಬ ಮನುಷ್ಯನು ಈ ಜಗತ್ತಿನಲ್ಲಿ ಯಶಸ್ಸು ಸಂಪಾದಿಸಬೇ
ಕಾದರೆ ಅವನಲ್ಲಿ ಸ್ಕೈರ್ಯ, ಧೈರ್ಯ, ಗಾಂಭೀರ್ಯ, ಔದಾರ್ಯಾದಿ ಗುಣ
ಗಳು ಇರಬೇಕು. ಆದರೆ ಅನೇಕ ಜನರಲ್ಲಿ ಈ ಪ್ರಕಾರದ ಗುಣಗಳು ಇರುವ
ದಿಲ್ಲ. ಅವರು ಬಹಳ ಆಂಜುಬುರುಕರು, ಮಿತಿವಿಖಾರಿದ ವಿನಯವುಳ್ಳ ವರು, ಮಾನ
ಸಿಕ ದುರ್ಬಲರು, ಸ್ಥಿರಪ್ರಯತ್ನ ಮಾಡುವದಕ್ಕೆ ಸಾಕಷ್ಟು ಸಾಮರ್ಥ್ಯವಿಲ್ಲದ
ವರು ಮತ್ತು ಸ್ವಾಭಿಮಾನ ಶೂನ್ಯರು ಇರುತ್ತಾ ರೆ. ಆದರಿಂದ ಅವರಿಗೆ ಯಾರೂ
ಮನ್ನಣೆಯನ್ನು ಮಾಡುವದಿಲ್ಲ.
ಹಾ ವಾವ
೪೩. ಮಾಯಾ ನಿವಾರಣವು.
ಮಾಯೆಯ ಗುರತು ಹತ್ತಿದ ಕೂಡಲೆ ಅದು ಓಡಿ ಹೋಗುತ್ತದೆ,
ಅದು ಹೇಗೆಂದರೆ:- ಒಬ್ಬ ಬ್ರಾಹ್ಮಣನು ಒಂದು ದಿವಸ ತನ್ನ ಶಿಷ್ಯನ ಮನೆಗೆ
ನಡೆದಿದ್ದನು. ಅದರೆ ಅವನ ಸಂಗಡ ಹೋಗಲಿಕ್ಕೆ ಯಾರೂ ಆಳು ಇದ್ದಿಲ್ಲ
ಆಗ ಅವನು ದಾರಿಯಲ್ಲಿ ಒಬ್ಬ ಮೊಚ್ಚೆಗಾರನು ಹೋಗುವದನ್ನು ಕಂಡು
ಅವಿಗೆ-« ಏನಯ್ಯಾ, ಒಳ್ಳೇ ಮನುಷ್ಯನೇ! ನೀನು ನನ್ನ ಕೂಡ ಆಳಾಗಿ
ಬರುವಿಯಾ? ನಿನಗೆ ಯಥಾಸ್ಥಿತವಾಗಿ ಭೋಜನವು ಸಿಗುವದಲ್ಲದೆ ನಿನ್ನ
ಉಪಚಾರವಾದರೂ ಚೆನ್ನಾಗಿ ಆಗುವದು. ನನ್ನ ಸಂಗಡಹೊರಟು ನಡೆ”
ಎಂದನು. ಆದಕ್ಕೆ ೮ ಮೊಚ್ಚೆಗಾರನು--* ಮಹಾಸ್ವಾಮಿಗಳೇ, ನಾನು
ಅತಿಶೂದ್ರನಿರುತ್ತೇನೆ. ನಾನು ನಿಮ್ಮ ಆಳಾಗಿ ಬಂದರೆ ನಿಮಗೆ ಹೇಗೆ
ನಡೆದೀತು?” ಎಂದು ಕೇಳಿದನು. ಅಗ ಆ ಬ್ರಾಹ್ಮಣನು ಅವನಿಗೆ-« ಚಿಂತಿ
ಲ್ಲ. ನೀನು ನನ್ನ ಕೂಡ ಇರುವ ತನಕ ಯಾರ ಸಂಗಡವೂ ಮಾತಾಡಬೇಡ
ಅಥವಾ ಪರಿಚಯವನ್ನು ಮಾಡಿಕೊಳ್ಳ ಬೇಡ” ಎಂದು ಹೇಳಿದನು. ಅದಕ್ಕೆ
ಆ ಮೊಚ್ಚೆಗಾರನು ಒಡಂಬಟ್ಟು ಆ ಬ್ರಾಹ್ಮಣನ ಕೂಡ ಅವನ ಶಿಷ್ಯನ ಮನೆಗೆ
ಹೋದನು. ಅಲ್ಲಿ ಆ ಬ್ರಾಹ್ಮಣನು ಸಾಯಂಕಾಲದಲ್ಲಿ ತನ್ನ ಸಂಧ್ಯಾಕರ್ಮ
ಎ. ಎಳ್ಳು
ವನ್ನುಮಾಡುತ್ತಿರಲು ಮತ್ತೊಬ್ಬ ಬ್ರಾಹ್ಮಣನು ಅಲ್ಲಿಗೆ ಬಂದು-“ಅಪ್ಪಯ್ಯಾ,
ಅಲ್ಲಿಗೆ ಹೋಗಿ ನನ್ನ ಪಾದರಕ್ಷೆಯನ್ನು ತೆಗೆದುಕೊಂಡು ಬಾ” ಎಂದು ಹೇಳಿ
ದನು. ಆಗ ಆ ಆಳು ತನ್ನ ಒಡೆಯನ ಅಪ್ಪಣೆಯ ಮೇರೆಗೆ ಆ ಎರಡನೇ ಬ್ರಾ
ಹ್ಮಣನಿಗೆ ಏನೂ ಉತ್ತರವನ್ನು ಕೊಡಲಿಲ್ಲ. ಅವನು ಎಷ್ಟು ಸಾರೆ ತಿರುತಿರುಗಿ
ಹೇಳಿದರೂ ಆ ಮೊಚ್ಚೆಗಾರನು ಸುಮ್ಮನೆ ಇದ್ದನು. ಚಾ ಚೂ ಎಂದು ಏನೂ
ಮಾತಾಡಲಿಲ್ಲ. ಇದನ್ನು ನೋಡಿ ಆ ಹೊಸದಾಗಿ ಒಂದ ಬ್ರಾಹ್ಮಣನು ಬಹಳ
ಸಿಟ್ಟಗೆದ್ದು-"" ಎಲೋ, ನಿನಗೆ ನನ್ನಂಥ ಬ್ರಾಹ್ಮಣನ ಆಜ್ಞೆಯನ್ನು ಮಿರ
ಲಿಕ್ಟೆ ಹೇಗೆ ಎದೆಯಾಯಿತು? ನಿನ್ನ ಜಾತಿ ಯಾವದು? ನೀನು ಮೊಚ್ಚೆಗಾರ
ನೋ?” ಎಂದು ನುಡಿದನು. ಇದನ್ನು ಫೇಳಿದವನೇ ಆ ಮೊಚ್ಚೆ ಗಾರನು ಅಂಬೆ
ಕೆಯಿಂದ ನಡಗುತ್ತ ತನ್ನ ಒಡೆಯನ ಬಳಿಗೆ ಬಂದು ಅವನ ಕಡೆಗೆ ಖಿನ್ನವಾದ
ಮುದ್ರೆಯಿಂದ ನೋಡುತ್ತ“ ಪೂಜ್ಯರೇ, ಇಲ್ಲಿಯ ಜನರಿಗೆ ನನ್ನ ಗುರುತು
ಹತ್ತಿತು. ಆದುದರಿಂದ ಇನ್ನುಮೇಲೆ ನನಗೆ ಇಲ್ಲಿ ಇರಲಿಕ್ಕೆ ಧೈೈರ್ಯವಾಗು
ವದಿಲ್ಲ. ನಾನು ಇಲ್ಲಿಂದ ಪಲಾಯನ ಮಾಡುತ್ತೆ ನೆ” ಎಂದು ಮಾತಾಡುತ್ತ
ಕಾಲಿಗೆ ಬುದ್ಧೀ ಹೇಳಿದನು.
ತಾತ್ಪರ್ಯ.
ಮನುಸ್ಯನಿಗೆ ಧೈರ್ಯವು ಮತ್ತು ಅತ್ಮ ವಿಶ್ವಾಸವು ಅವಶ್ಯವಾಗಿ ಇರಬೇ
ಕು. ತನಗೆ ಸತ್ಸಂಗತಿಯಾದ ಕೂಡಲೆ ತಾನು ಕಡಿಮೆಯವನೆಂಬ ವಿಚಾರವನ್ನು
ಬಿಟ್ಯುಬಿಡಬೇಕು. €" ಜತೆಯಂತೆ ಮತಿ * ಯಾಗುವದು. ಈ ಬಗ್ಗೆ
ಸರ್ವಜ್ಞ ಕವಿಯು ಹೇಳುವದೇನಂದಕೆ:--
ಒಳ್ಳೆ ದರ ಒಡನಾಡಿ ಕಳ್ಳನೊಳ್ಳೆದನಕ್ಕು ।
ಒಳ್ಳೆದ ಕಳ್ಳರೊಡನಾಡಿ ಅನ ಶುದ್ಧ |
ಕಳ್ಳ ತಾನಕ್ಕು! ಸರ್ವಜ್ಞ 8೧ 8
—— ೬% —
೪೪. ಹೆಂಡತಿಯು ಅಂತಃಪುರದ
ಗುರುವು!
ಒಬ್ಬ ಬ್ರಾ ಹ್ಮ್ಮಣನಿಗೆ ಒಬ್ಬ ಅರಿವೆಯ ವ್ಯಾಪಾರಸ್ಕನು ಶಿಸ್ಯನಾಗಿದ್ದ
ನು. ಆ ಶಿಸ್ಟುನು ಆ ಬ್ರಾಹ್ಮಣನ ಹತ್ತರ ಯಾವಾಗಲು ಧರ್ಮೋಪದೇಶವನ್ನು
ಕೇಳಲಿಕ್ಕೆ ಹೋಗುತ್ತಿದ್ದನು. ಆದರೂ ಅವನ ಕೃಪಣತನವು ಹೋಗಿದ್ದಿ ಲ್ಲ.
ಒಂದು ದಿವಸ ಆ ಬ್ರಾಹ್ಮಣನಿಗೆ ಅವನ ಪುರಾಣ ಪುಣ್ಯ ಕಥೆಗಳ ಗಂಟನ್ನು
ಕಟ್ಟಲಿಕ್ಕೆ ಒಂದು ಅರಿವೆಯ ಸಣ್ಣ ತುಂಡು ಬೇಕಾಗಿತ್ತು , ಆಗ ಅವನು
ಒಂದು ದಿವಸ ತನ್ನ ಶಿಷ್ಯನ ಅಂಗಡಿಗೆ ಹೋಗಿ ಒಂದು ಅರಿವೆಯ ಸಣ್ಣ ತುಂ
ಡನ್ನು ಬೇಡಿದನು. ಆಗ ಆ ಶಿಷ್ಯನು-« ಗುರುಗಳೇ, ನೀವು ಒಂದು ಗಳಿಗೆ
ಮುಂಚಿತವಾಗಿಯೇ ಬಂದಿದ್ದರೆ ಅದನ್ನು ನಿಮಗೆ ಕೊಡುತ್ತಿ ದ್ದನು. ಈಗೀಗ
ನಾನು ಅದನ್ನು ಮಾರಿಬಿಟ್ಟಿನು. ಇದಕ್ಕಾಗಿ ನನಗೆ ಬಹಳ ಅಸಮಾಧಾನವಾ
ಗುತ್ತದೆ. ಅದನ್ನು ನಿಮಗೆ ಮತ್ತೊಮ್ಮೆ ಯಾವಾಗಾದರೂ ಕೊಡುವೆನು. ನೀವು
ಮತ್ತೊಮ್ಮೆ ನನಗೆ ನೆನಪು ಮಾಡಿರಿ” ಎಂದು ಹೇಳಿದನು. ಅದನ್ನು ಆ ಬ್ರಾ
ಹ್ಮಣನು ಕೇಳಿ ನಿರಾಶಿಪಟ್ಟು ತನ್ನ ಮನೆಗೆ ಹೋಗಹತ್ತಿದನು. ಈ ಗುರು
ಶಿಷ್ಕರ ಸಂವಾದವನ್ನು ಆ ಅರಿವೆಯ ವ್ಯಾಪಾರಸ್ಕನ ಹೆಂಡತಿಯು ಆ ಅಂಗ
ಡಿಯ ಮಗ್ಗಲದೊಳಗಿದ್ದ ತನ್ನ ಮನೆಯೊಳಗೆ ನಿಂತುಕೊಂಡು ಕೇಳಿ ಆ ಬ್ರಾ
ಹ್ಮಣನನ್ನು ತನ್ನ ಬಳಿಗೆ ಕರೆಯಿಸಿ ಅವನ ಬಾಯಿಂದ ಎಲ್ಲ ವೃತ್ತಾಂತವನ್ನು
ಕೇಳಿಕೊಂಡು. ಸ್ವಾವಿಸ, ನೀವು ಈಗ ಸ್ವಸ್ಥೃಚಿತ್ತರಾಗಿ ಹೋಗಬೇಕು.
ನಾಳೆ ಬೆಳಿಗ್ಗೆ ನಿಮಗೆ ನೀವು ಬೇಡುವ ಅರಿವೆಯ ತುಂಡನ್ನು ಕೊಡಿಸುವೆನು ?
ಎಂದು ಅವನಿಗೆ ಸಮಾಧಾನ ಮಾಡಿ ಕಳುಹಿಸಿದಳು. ವ್ಯಾಪಾರಸ್ಕನು ಸಾಯಂ
ಕಾಲಕ್ಕೆ ತನ್ನ ವ್ಯಾಪಾರವನ್ನು ಮುಗಿಸಿಕೊಂಡು ಮನೆಯೊಳಗೆ ಬಂದ ಕೂ
ಡಲೆ ಅವಳು ತನ್ನ ಗಂಡನಿಗೆ-" ಅಂಗಡಿಗೆ ಕೀಲಿಯನ್ನು ಚನ್ನಾಗಿ ಹಾಕಿರು
ವಿರೋ?” ಎಂದು ಕೇಳಿದಳು. ಅದಕ್ಕೆ ಅವನು ತನ್ನ ಹೆಂಡತಿಗೆ-“ ಹೌದು.
ಹಾಕಿರುವೆನು ಆದರೆ ಈ ಪ್ರಶ್ನೆಯನ್ನು ನೀನು ಕೇಳುವ ಕಾರಣವೇನು? ”
ಎಂದು ಹೇಳಿದನು. ಆಗ ಅವನ ಹೆಂಡತಿಯು-*""ನೀವು ಈಗಲೇ ೬ಂಗಡಿಗೆ ಹೋ
9
ಮಾಷ ಕುಟ್ಟು ಬಮ
ಗಿ ನನಗೆ ಎರಡು ಉತ್ತಮವಾದ ಅರಿವೆಯ ತುಂಡುಗಳನ್ನು ತಂದುಕೊಡಿರಿ”
ಎಂದು ಹೇಳಿದಳು. ಅದಕ್ಕೆ ಆ ವ್ಯಾಪಾರಸ್ಥನು-« ಇಷ್ಟು ಅವಸರವೇಕೆ?
ನಾಳೆ ನಿನಗೆ ಬೇಕಾದಷ್ಟು ಉತ್ತಮ ಅರಿವೆಯ ತುಂಡುಗಳನ್ನು ತಂದುಕೊಡು
ತ್ತೆ ನೆ. ಎಂದು ಹೇಳಿದನು. ಆದರೆ ಅವನ ಹೆಂಡತಿಯು-« ನನಗೆ ಅವುಗಳ
ನ್ನು ಕೊಡುವದಿದ್ದರೆ ಈಗಲೇ ತಂದು ಕೊಡಿರಿ. ಇಲ್ಲದಿದ್ದರೆ ನನಗೆ ಬೇಡವೇ
ಬೇಡ” ಎಂದು ಉತ್ತರ ಕೊಟ್ಟಳು. ಆಗ ಆ ವ್ಯಾಪಾರಸ್ಕನು ನಿರುಪಾಯ
ದಿಂದ ಅಂಗಡಿಗೆ ತಿರುಗಿ ಹೋಗಿ ಕೀಲಿ ತೆಗೆದು ಎರಡು ಉತ್ತಮವಾದ ಅರಿ
ವೆಯ ತುಂಡುಗಳನ್ನು ತಂದುಕೊಟ್ಟನು. ಅವುಗಳನ್ನು ಅವಳು ಮರುದಿವಸ
ಬೆಳಿಗ್ಗೆ ತನ್ನ ಆಳಿನ ಕೈಯಿಂದ ಆ ಬ್ರಾಹ್ಮಣನ ಕಡೆಗೆ ಕಳುಹಿಸಿಕೊಟ್ಟಳು.
ತಾತ್ಸರ್ಯ.
ಹೆಂಡತಿಯು ಅಂತಃಪುರದ ಗುರುವು ಇರುತ್ತಾಳೆ. ಅವಳ ಅಪ್ಪುಣೆಯ
ನ್ನು ಕೇಳದಿದ್ದರೆ ಗಂಡನಿಗೆ ಮನೆಯಲ್ಲಿ ಶಾಂತಿಯೇ ಇರುವದಿಲ್ಲ. ಹೆಂಡತಿ
ಯು ದೊಡ್ಡ ಮನಸ್ಸಿನವಳು, ದಯಾದಾಕ್ಷಿಣ್ಯುವುಳ್ಳ ಸವಳು, ಉದಾರ ಬುದ್ಧಿಯ
ವಳು ಇದ್ದರೆ ಮನೆಯ ಯಜಮಾನನ ಗೌರವವು ಹೆಚ್ಚಾಗುತ್ತದೆ. ಹೆಂಡತಿ
ಯು ಕೃಪಣಳು ಅಥವಾ ಕ್ಷುದ್ರ ಮನಸ್ಸಿನವಳು ಇದ್ದರೆ ಗಂಡನು ಉದಾರ
ಮನಸ್ಸಿನವನಿದ್ದರೂ ಅವಳು ಅವನ ಸತ್ಕಾರ್ಯಕ್ಕೆ ವಿಘ್ನವನ್ನು ತರುತ್ತಾಳೆ.
ಹೆಂಡತಿಯು ಯಾವ ಪ್ರಕಾರದವಳು ಇರಬೇಕೆಂಬದು ಈ ಕೆಳಗಿನ ಸುಭಾಷಿತ
ದಲ್ಲಿ ಚನ್ನಾಗಿ ವಿವರಿಸಲ್ಪಟ್ಟಿರುತ್ತದೆ. ಅದೇನಂದರೆ:
ಸಾಧ್ವೀ ಶೀಲವತೀ ದಯಾವಸುಮತೀ ದಾಕ್ಷಿಣ್ಯ ಲಜ್ಜಾವತೀ।
ತನೀ ವ್ಯಾಜಪರಾಜ್ಮುಖೀ ಸ್ಮಿತನತೀ ಮುಗ್ಗಾ ಪ್ರಿಯಾಲಾ
ಹಿನೀ॥ ದೇವಬ್ರಾಹ್ಮಣ ಬಂಧು ಸಜ್ಜನರತಾ ಯಸ್ಸ್ಸಾಸ್ತಿ
ಭಾರ್ಯಾಗೃಹೇ। ತಸ್ಸ್ಯಾರ್ಥಾಗವು ಕಾಮುಮೋಕ್ಸ ಫಲದಾಃ
ಕುರ್ವಂತಿ ಪುಣ್ಯಂ ಕ್ರಿಯಾಃ ॥
(ಸಾಧ್ವಿಯೂ, ಸುಶೀಲೆಯ್ಯೂ ದಯಾವಂತಳೂ, ಬುದ್ಧಿ ವಂತಳ್ಕೂ ದಾ
ಪ್ರಿಣ್ಕುವುಳ್ಳೆ ಳೂ, ವಿನ:ಯವುಳ್ಳ ವಳ್ಕೂ ಲಾವಣ್ಯುವತಿಯೂ, ನಿಷ್ಕಪಟಿಯೂ,
ke ಪು
ಮಧುರಹಾಸ್ಯಳೂ, ಮೃದು ನುಡಿಗಳನ್ನು ಆಡುವವಳೂ, ದೇವಬ್ರಾ ಹ್ಮಣರನ್ನು
ಮತ್ತು ಬಂಧು ಜನರನ್ನು ಆದರಸತ್ಭಾರ ಮಾಡುವವಳೂ ಅದ ಹೆಂಡತಿಯು
ಗಂಡನಿಗೆ ಅರ್ಥ, ಕಾಮ, ಮೋಕ್ಷಗಳು ಲಭಿಸುವಂತೆ ಪುಣ್ಯ ಕಾರ್ಯಗಳನ್ನು
ಮಾಡುತ್ತಾಳೆ.)
೪೫. ಪೂರ್ಣ ಶ್ರದ್ಧೆಯು ಬೇಕು.
ಪರಮೇಶ್ವರನನ್ನು ಕಾಣಬೇಕಾದರೆ ಆತನಲ್ಲಿ ನಿಜವಾದ ಶ್ರದ್ಧೆಯನ್ನಿಡ
ಬೇಕು. ಸಣ್ಣ ಮಗುವು ತನ್ನ ತಾಯಿಯನ್ನು ಕಾಣುವದಕ್ಕಾಗಿ ಹೇಗೆ ಹಂಬ
ಲಿಸುವದೋ ಹಾಗೆ ಪರಮೇಶ್ವರನಲ್ಲಿ ಪೂರ್ಣ ಶ್ರದ್ಧೆ ಯನ್ನು ಅಂದರೆ ಪೂರ್ಣ
ವಿಶ್ವಾಸವನ್ನು ಇಟ್ಟಿ ಹೊರತಾಗಿ ಅತನು ಯಾರಿಗೂ ದರ್ಶನವನ್ನು ಕೊಡ
ಲಾರನು. ಜತಿಲಾ ಎಂಬ ಹೆಸರಿನ ಒಬ್ಬ ಹಳ್ಳಿಯ ಹುಡುಗನು ದಿನಾಲು ಆಡ
ವಿಯೊಳಗಿಂದ ಹಾದು ಒಂದು ಪಟ್ಟಣದೊಳಗಿನ ಸಾಲೆಗೆ ಬರುತ್ತಿದ್ದನು. ಆ
ದಾರಿಯಿಂದ ಜನರು ವಿಶೇಷವಾಗಿ ಅಡ್ಡಾಡುತ್ತಿದ್ದಿ ಲ್ಲ. ಅದುದರಿಂದ ಆ ಹುಡು
ಗನು ಸಾಲೆಗೆ ಬರಬೇಕಾದರೆ ಅಂಜುಕ್ತಿದ್ದನು. ಈ ಸಂಗತಿಯನ್ನು ಅವನು
ತನ್ನ ತಾಯಿಗೆ ಹೇಳಲಾಗಿ ಅವಳು ಅವನಿಗೆ-« ನಿನಗೆ ಈ ಪ್ರಕಾರ ಅಂಜಿ
ಹೆಯು ಬಂತೆಂದರೆ ನೀನು ಕೃಷ್ಣನ ಹೆಸರು ತೆಗೆದುಕೊಂಡು ಕರೆ” ಎಂದು
ಹೇಳಿದಳು. ಅದಕ್ಕೆ ಆ ಹುಡುಗನು ತನ್ನ ತಾಯಿಗೆ- ಅವ್ವಾ, ಕೃಷ್ಣನು
ಯಾರು?” ಎಂದು ಕೇಳಿದನು. ಆಗ ಆ ಹುಡುಗನ ತಾಯಿಯು-« ಕೃಷ್ಣ ನು
ನಿನ್ನ ಅಣ್ಣನಿರುತ್ತಾನೆ” ಎಂದು ಹೇಳಿದನು. ಈ ಮಾತಿನ ಮೇಲೆ ಆ ಹುಡು
ಗನು ಪೂರ್ಣವಾಗಿ ವಿಶ್ವಾಸವಿಟ್ಟು ಒಂದು ದಿವಸ ತನಗೆ ದಾರಿಯಲ್ಲಿ ಅಂಜಿ
ಕೆಯು ಬಂದ ಕೂಡಲೆ- « ಅಣ್ಣಾ, ಕೃಷ್ಣಾ! ಬಾ” ಎಂದು ಗಟ್ಟಿಯಾಗಿ ಕೂ
ಗಿದನು. ಅವನು ಮೊದಲನೇ ಸಾರೆ ಕೂ ಗದಾಗ್ಗೆ ಯಾರೂ ಬರಲಿಲ್ಲ. ಇದನ್ನು
ನೋಡಿ ಆ ಹುಡುಗನು ಮತ್ತೊಮ್ಮೆ. ಅಣ್ಣಯ್ಯಾ, ಕೃಷ್ಣಾ! ನೀನು
ಎನ್ಲಿರುತ್ತೀ? ಏಕೆ ಬರಲೊಲ್ಲೆ? ನನಗೆ ಬಹಳ ಅಂಜಿಕೆಯು ಬರಹತ್ತಿದೆ. ತೀ
ವ್ರವಾಗಿ ಬಂದು ನನ್ನನ್ನು ರಕ್ಷಿಸು ಎಂದು ದೈನ್ಯಭಾವದಿಂದ ಕೂಗಿದನು.
ಎ ಗಿ ಿ ವರ
ಆ ಹುಡುಗನ ಆರ್ಶಸ್ರರವನ್ನು ಕೇಳಿ ಶ್ರೀಕೃಷ್ಣನು ಒಬ್ಬ ಸಣ್ಣ ಹುಡುಗನ
ವೇಷದಿಂದ ಅವನ ಬಳಿಗೆ ಬಂದು-«" ಇಕೋ, ನಾನು ಇಲ್ಲಿ ಇದ್ದೇನೆ! ಅಂಜ
ಬೇಡ” ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿ ಅವನ ಸಾಲೆಗೆ ಮ
ಟ್ವಸಿದನು. ಈ ಪ್ರಕಾರ ಶ್ರೀಕೃಷ್ಣನು ಆ ಹುಡುಗನನ್ನು ಸಾಲೆಗೆ ಮುಟ್ಟಿಸಿದ
ತರುವಾಯ ಅವನಿಗೆ «ನೀನು ನನ್ನನ್ನು ಕೂಗಿದಾಗ್ಗೆ ನಾನು ನಿನ್ನ ಬಳಿಗೆ
ಬರುತ್ತೇನೆ. ನೀನು ಎಷ್ಟು ಮಾತ್ರಕ್ಕೂ ಹೆದರಬೇಡ? ಎಂದು ಹೇಳಿ ಹೊರಟು
ಹೋದನು.
ತಾತ್ಪರ್ಯ.
ಭಗವಂತನು ಅನಾಥಬಂಧು ಇರುತ್ತಾನೆ. ಅವನು ತನಗೆ ಮೊರೆ ಇಡು
ವವರನ್ನು ನಿಶ್ಚಯವಾಗಿ ರಕ್ಷಣ ಮಾಡುತ್ತಾನೆ. ಅದುದರಿಂದ ಯಾರೂ ಭಯ
ಪಡುವ ಅಥವಾ ನಿರಾಶೆಯಾಗುವ ಕಾರಣವಿಲ್ಲ. ಅದರೆ ಸಣ್ಣ ಮಕ್ಕಳು ತವ;
ತಾಯಿಯ ಮೇಲೆ ಶ ಶ್ರದ್ಧೆ ಯನ್ನು ವಹಿಸುವಂತೆ ನಾವು ಪರಮೇಶ್ವರನ ಮೇಲೆ
ಶ್ರದ್ಧೆಯನ್ನು ವಹಿಸಬೇಕು. ಅನಾಥೋ ದೇವ ರಕ್ಷಕಃ.
ಲ ಅ.
ಭೋಜನ ಸ್ವಾತಂತ್ರ್ಯವು.
ಒಂದು ಸಾರೆ ಒಬ್ಬಾನೊಬ್ಬ ವಿದ್ಯಾರ್ಥಿಯು ಭಗವಾನರ ಬಳಿಗೆ
ಬಂದು-* ಪರಮೇಶ್ವರನು ಯಾವತ್ತು ಪ್ರಾಣಿಮಾತ್ರರನ್ಲಿ ಸಮನಾಗಿಯೇ ವಾ
ಪಿಸುವದರಿಂದ ನಾವು ಪ್ರತಿಯೊಬ್ಬರ ಕೈಯಿಂದ ಮಾಡಿದ ಅನ್ನವನ್ನು ಏಕೆ
ಉಣ್ಣ ಬಾರದು? ಎಂದು ಪ್ರಶ್ನೆ ಮಾಡಿದನು. ಇದಕ್ಕೆ ಭಗವಾನರು ಉತ್ತರ
ಕೊಡುವಾಗ ಅ ವಿದ್ಯಾರ್ಥಿಗೆ-« ಇಂಥ ಪ್ರಶ್ನೆಯನ್ನು ಒಬ್ಬ ದುರುಳ ವೇದಾಂ
ತಿಯು ಮಾತ್ರ ಕೇಳತಕ್ಕದ್ದು. ನೀನು ಉರಿಯನ್ನು ಮಾಡಿ ಅದರ ಮೇಲೆ
ಒಮ್ಮೆಲೆ ಬಹಳ ಕಟ್ಟಿಗೆಗಳನ್ನು ತಂದು ಸುರಿವಿದಿ ಎಂದು ತಿಳಿದುಕೋ. ಆಗ
ಅದರ ಮೇಲೆ ಪರಿಣಾಮವು ಏನಾಗುವದು?? ಎಂದು ಶೇಳಿದರು. ಆದಕ್ಕೆ
ಅವನು-೬೮ ಕಟ್ಟ ಗೆಗಳ ನಡುವೆ ಉರಿಯು ಹೋಗಲಿಕ್ಕೆ ದಾರಿಯು ಇಲ್ಲ
ದ್ದರಿಂದ PH ನುಂದಿ ಹೋಗುವದು” ಎಂದು ಉತ್ತ ಕ ಕೊಟ್ಟನು. ಆ
ಅಸ ಓದ್ರಿ ಸಂತ
ಮೇಲೆ ಭಗವಾನರು- « ಒಂದು ಅಡವಿಯಲ್ಲಿ ಬೇಗೆಯು ಹತ್ತಿರುತ್ತದೆಂದು
ತಿಳಿ, ಆಗ ಆದರ ಮೇಲೆ ನೀನು ಹಸಿ ಕಂಬಗಳನ್ನು ತಂದು ಚನ್ಲಿದರೆ ಆ ಕಂಟಿ
ಗಳ ಅವಸ್ಥೆಯು ಏನಾಗುವದು?” ಎಂದು ತಿರುಗಿ ಅವನಿಗೆ ಕೇಳಿದರು. ಆಗ
ಅವನು-" ಒಂದು ಕ್ಷಣದಲ್ಲಿ ಆ ಕಂಬಗಳು ಸುಟ್ಟು ಬೂದಿಯಾಗುವವು” ಎಂದು
ಉತ್ತರ ತೊಟ್ಟನು. ಬಳಿಕ ಭಗವಾನರು ಅವನಿಗೆ-« ಹೀಗಾದ ಬಳಿಕ ನಿನ್ನಲ್ಲಿ
ಆಧ್ಯಾತ್ಮ ಜ್ಞಾನದ ಬೆಂಕಿಯು ಕಸವುಳ್ಳದ್ದು ಇಲ್ಲದಿದ್ದರೆ ಎಲ್ಲರಲ್ಲಿ ಭೇದಾಭೇ
ದವಿಲ್ಲದೆ ಉಣ್ಣುವದರಿಂದ ಆ ಬೆಂಕಿಯು ನುಂದಿ ಹೋಗುವದು. ಆ ಆಧ್ಯಾತ್ಮ
ಜ್ಞಾನವು ಒಳ್ಳೇ ಕಸವುಳ್ಳದ್ದು ಇದ್ದರೆ ನೀನು ಎಲ್ಲಿ ಉಂಡರೂ ಅದು ನಿನ್ನನ್ನು
ಬಾಧಿಸುವದಿಲ್ಲ. ದುರಾಚಾರ ಮಾಡುವವರು ದೇವರ ಗುಡಿಯಲ್ಲಿದ್ದು ದೇವರ
ನೈವೇದ್ಯವನ್ನು ಉಂಡರೂ ಅವರಿಗೆ ಮೋಕ್ಷವು ಸಿಗುವದೋ?? ಎಂದು ಕೇಳಿ
ದರು. ಅದಕ್ಕೆ ಆ ವಿದ್ಯಾರ್ಥಿಯು-" ಎಂದಿಗೂ ಸಿಗಲಾರದು. ಅವರಿಗೆ
ಮೋಕ್ಷದ ಒದಲು ನರಕವು ದೊರಕುವದಿಲ್ಲವೇ?” ಎಂದು ಭಗವಾನರಿಗೆ
ತಿರುಗಿ ಕೇಳಿದನು. ಆಗ ಭಗವಾನರು-« ನೀನು ಎಲ್ಲರಲ್ಲಿ ಉಣ್ಣು ವದರಿಂದ
ನಿನಗೆ ಬ್ರಹ್ಮಜ್ಞಾ ನವು ಪ್ರಾಪ್ತವಾಗಿರುತ್ತದೆಂದು ಅಥವಾ ನಿನಗೆ ಪ್ರತಿಯೊಂದು
ಕಡೆಗೆ ಪರಮೇಶ್ವರನು ಕಾಣಿಸುತ್ತಾನೆಂದು ತಿಳಿಯಲಿಕ್ಕೆ ಬರುವದಿಲ್ಲ. ಆದರೆ
ನಿನಗೆ ಅಕಳದ ಅಥವಾ ಹಂದಿಯ ಮಾಂಸವನ್ನು ತಿನ್ನುವ ಅಪೇಕ್ಷೆಯು ಬಹಳ
ಇರುತ್ತದೆಂದು ಮಾತ್ರ ತಿಳಿಯಲಿಕ್ಕೆ ಬರುವದು” ಎಂದು ಉತ್ತರ ಕೊಟ್ಟರು.
ತಾತ್ಪರ್ಯ.
ದೊಡ್ಡ ವರ ಹತ್ತರ ದೊಡ್ಡ ಸಂಗತಿಗಳನ್ನು ಮಾತ್ರ ಕೇಳಿಕೊಳ್ಳಬೇಕ
ಲ್ಲದೆ ಕ್ಷುದ್ರ ಸಂಗತಿಗಳನ್ನು ಎಂದೂ ಕೇಳಬಾರದು. ತಮಗೆ ದೊಡ್ಡ ಸಂಗ
ತಿಗಳನ್ನು ಕೇಳಿ ಕೊಳ್ಳು ವದಿಲ್ಲದಿದ್ದರೆ ಅವರ ಮುಂದೆ ತಾವು ಸುಮ್ಮನೆ ಕುಳಿತು
ಕೊಂಡು ಅವರು ಹೇಳುವದನ್ನು ಸಾವಧಾನಚಿತ್ತದಿಂದ ಕೇಳಬೇಕು. ಅವರ
ಕೂಡ ಸುಮ್ಮನೆ ವಾದಿಸಬಾರದು. ಹಾಗೂ ಅವರ ಮುಂದಿ ತಮ್ಮ ಶುದ್ರ
ವಿಚಾರಗಳನ್ನು ಇಡಬಾರದು.
PE RES
೪೭. ಧರ್ಮೋಪದೇಶಕರೂ ವೈದ್ಯರೂ.
ವೈದ್ಯುಕೊಳಗೆ ಮೂರು ವರ್ಗದವರು ಇರುವಂತೆ ಧರ್ಮೋಪದೇಶಕ
ಕೊಳಗೆ ಸಹ ಮೂರು ವರ್ಗದವರು ಇರುತ್ತಾರೆ:- (೧) ಒಂದು ವರ್ಗದ ವೈ
ದ್ಯರು ಕರೆಸಿದ ಕೂಡಲೆ ಬಂದು ಕೋಗಿಯನ್ನು ನೋಡಿ, ಅವನ ನಾಡಿಯನ್ನು
ಪರೀಕ್ಷಿಸಿ, ಅವನಿಗೆ ಬೇಕಾಗುವ ಔಷಧದ ಯೋಜನೆಯನ್ನು ಹೇಳಿ, ಇಂಧಿಂಥ
ಶೌಷಧದ ಸೇವನ ಮಾಡೆಂದು ಹೇಳುವರು. ಆ ರೋಗಿಯು ಔಷಧವನ್ನು
ಸೇವನ ಮಾಡುವದಿಲ್ಲೆಂದು ಹೇಳಿದರೆ ಇವರು ಆ ವಿಷಯದಲ್ಲಿ ಹೆಚ್ಚು ಶ್ರಮ
ವನ್ನು ತೆಗೆದುಕೊಳ್ಳ ದೆ ತಮ್ಮ ಮನೆಗೆ ಹೊರಟು ಹೋಗುವರು. ಇವರು
ಕನಿಷ್ಟ ವರ್ಗದ ವೈದ್ಯರು. ಇವರಂತೆ ಕೆಲವು ಧರ್ಮೋಪದೇಶಕರು ತಮ್ಮ
ಉಪದೇಶವನ್ನು ಜನರು ಮನ್ನಿಸಲಿ ಮನ್ನಿಸದಿರಲಿ ಆಥವಾ ೮ ಪ್ರಕಾರ ವ
ರ್ತಿಸಲಿ, ವರ್ತಿಸದಿರಲಿ ಅದರ ಕಡೆಗೆ ಏನೂ ಲಕ್ಷ್ಯ ಕೊಡುವದಿಲ್ಲ. (೨) ಎರ
ಡನೇ ವರ್ಗದ ವೈದ್ಯರು ರೋಗಿಗೆ ತಮ್ಮ ಔಷಧವನ್ನು ಸೇವನ ಮಾಡಲಿಕ್ಕೆ
ಹೇಳುವದಲ್ಲದೆ ಆ ರೋಗಿಯು ಅದನ್ನು ಸೇವನ ಮಾಡಲಿಕ್ಕೆ ಒಪ್ಪಿಕೊಳ್ಳದಿ
ದ್ದರೆ ಅವನಿಗೆ ಸಿಬ್ಬೈ ಮಾಡುವರು. ಇದೇ ಪ್ರಕಾರ ಕೆಲವು ಧರ್ಮೋಪದೇಶ
ಕರು ಸೌಮ್ಯರೀತಿಯಿಂದ ಜನರಿಗೆ ಒಡಂಬಡಿಸಿ ಅವರಿಗೆ ಸನ್ಕಾರ್ಗದಿಂದಲೂ
ಸತ್ಯುತನದಿಂದಲೂ ನಡೆದುಕೊಳ್ಳಲಿಕ್ಕೆ ಯಾವತ್ತು ತರದ ಪ್ರಯತ್ನವನ್ನು ಮಾ
ಡುವರು. ಇವರು ಮೇಲಿನಕಿಂತ ಹೆಚ್ಚನ ವರ್ಗದವರು. (೩) ಇನ್ನು ಮೂ
ರನೇ ಮತ್ತು ಶ್ರೇಷ್ಠ ವರ್ಗದ ವೈದ್ಯರು ತಾವು ರೋಗಿಗೆ ಸಿಬ್ಬು ಮಾಡಿದ್ದು
ಉಪಯೋಗವಾಗದಿದ್ದರೆ ಆ ರೋಗಿಯ ಎದೆಯ ಮೇಲೆ ಮೊಣಕಾಲು ಊರಿ
ಬಲಾತ್ಕಾರವನ್ನು ಉಪಯೋಗಿಸಿ ಅವನಿಗೆ ಔಷಧವನ್ನು ಕುಡಿಸುವರು. ಇವ
ರಂತೆ ಕೆಲವು ಧರ್ಮೋಪದೇಶಕರು ತಮ್ಮ ಶಿಷ್ಯರಿಗೆ ಪರಮೇಶ್ವರನ ಮೇಲೆ ಭ
ಕ್ರಿ ಯನ್ನಿಟ್ಟು ನಡೆಯಲಿಕ್ಕೆ ಪ್ರಸಂಗ ವಿಶೇಷದಲ್ಲಿ ಬಲಾತ್ಕಾರವನ್ನು ಮಾಡು
ವರು. ಇವರು ಶ್ರೇಷ್ಠ ವರ್ಗದ ಧರ್ಮೋಪದೇಶಕರು.
ಎ ಕೈಗ ವಿಸಾ
೪೮. ಕಪ್ಪೆಯ ಒದರುವಿಕೆಯೂ
ಹಾನಿನ ನೆರಳುವಿಕೆಯೂ.
ಭಗವಾನರು ಒಂದು ದಿವಸ ಪಂಚವಟಿಯೊಳಗಿಂದ ಹಾಡು ಹೋಗು
ವಾಗ ಒಂದು ಕಪ್ಪೆಯು ಆರ್ತಸ್ವರದಿಂದ ಒದರುವದನ್ನು ಕೇಳಿ ಅವರು ಅದನ್ನು
ಒಂದು ಹಾವು ಹಿಡಿದಿದ್ದೀತೆಂದು ತಿಳಕೊಂಡರು. ಮುಂದೆ ಒಹಳ ದಿವಸಗಳಾ
ದ ನಂತರ ಅವರು ಅದೇ ದಾರಿಯಿಂದ ತಿರುಗಿ ಹೋಗುವಾಗ ಮುಂಚಿನಂತೆ
ಯೇ ಆ ಕಪ್ಪೆಯು ಒದರುವದನ್ನು ಕೇಳಿ ಅಲ್ಲಿ ಬೆಳೆದಿದ್ದ ಜುಡುಪುಗಳನ್ಲಿ ಹ
ಣಕಿ ನೋಡಲು ಒಂದು ನೀರೊಳಗಿನ ಹಾವು ಅದನ್ನು ತನ್ನ ಬಾಯಲ್ಲಿ ಕಚ್ಚಿ
ಕೊಂಡು ಕೂತದ್ದನ್ನು ಕಂಡರು. ಆಗ ಆ ಹಾವು ಆ ಕಪ್ಪೆಯನ್ನು ನುಂಗಲೊ
ಆದು ಅಥವಾ ಅದನ್ನು ಹೊರಗೆ ಹೋಗಗೊಡಲೊಲ್ಲದು ಎಂದು ಅವರಿಗೆ ತಿಳಿ
ದು ಬಂತು. ಅದರ ಮೇಲಿಂದ ಅವರು-« ಈ ಕಪ್ಪೆಯು ಯಾವದಾದರೂ ವಿಷವು
ಳ್ಳ ಹಾವಿಗೆ ಸಿಕ್ಕಿದ್ದರೆ ಇದು ಮೂರು ಸಾರೆ ಒದರುವದರೊಳಗಾಗಿ ಆ ಹಾವು
ಇದನ್ನು ನುಂಗಿ ಬಿಡುತ್ತಿತ್ತು. ಅ ಪ್ರಕಾರ ಈ ಹಾವು ಮಾಡದೆ ಇರುವ
ದರಿಂದ ಈ ಹಾವಿಗಾದರೂ ಈ ಕಪ್ಪೆಯನ್ನು ನುಂಗಲಿಕ್ಕೆ ಆಗದೆ ಇದು
ತಾನೂ ಅ ಕಪ್ಪೆಯಂತೆ ದುಃಖದಿಂದ ನೆರಳುತ್ತಿರುವದು” ಎಂದು ನಿರ್ಣಯ
ಮಾಡಿದರು.
ತಾತ್ಪರ್ಯ.
ಒಬ್ಬ ಅಜ್ಞಾನ ಮನುಷ್ಯನು ಹುಚ್ಚು ತನದಿಂದ ಎರಡನೆಯವನ
ರಕ್ಷಣ ಮಾಡುವ ಹೊಣೆಯನ್ನು ತನ್ನ ಮೇಲೆ ತೆಗೆದುಕೊಂಡರೆ ಇಬ್ಬರ ದುಃಖ
ಕ್ಕೂ ಪಾರವೇ ಇಲ್ಲವೆಂದು ಹೇಳಬಹುದು. ಅಜ್ಞಾನ ಗುರುವಿನಿಂದ ಅವನ
ಶಿಷ್ಯನಿಗೆ ಜ್ಞಾ ನವು ಹುಟ್ಟಿ ಮೋಕ್ಷವು ದೊರಕುವದು ಅಸಾಧ್ಯವು. ಮತ್ತೆ ಆ
ಗುರುವಿನ ಅಹಂಕಾರವು ಹೋಗಿ ಅವನಿಂದ ಅಂಗೀಕೃತ ಕಾರ್ಯವು ಸಿದ್ಧಿಗೆ
ಹೋಗುವದು ಅಸಾಧ್ಯುವು. ಸಮರ್ಥನಾದ ಗುರುವನ್ನು ಕಂಡರೆ ಮಾತ್ರ
ಶಿಷ್ಯನ ಅಹಂಭಾವವು ಮೂರುಸಾರೆ ನೀರುಗುಟಿಕರಿಸುವದರೊಳಗಾಗಿ ವಿನಾಶ
ಹೊಂದುವದು.
— ತ ಆ...
೪೯. ಒಬ್ಬ ವ್ಯಾಖ್ಯಾತನ ಅಜ್ಞಾನವು.
ಒಂದು ಸಾರೆ ಒಬ್ಬ ವ್ಯಾಖ್ಯಾತನು ಒಂದು ಧರ್ಮಮಂಡಲದ ಮುಂದೆ
ವ್ಯಾಖ್ಯಾನ ಕೊಡುವಾಗ... ಪರಮೇಶ್ವರನು ಪೂರ್ಣ ರಸವರ್ಜಿತನು ಇರು
ತ್ತಾನೆ. ಆದುದರಿಂದ ನಾವು ಅವನನ್ನುನಮ್ಮ ಗುಣಮಾಧುರ್ಯಗಳಿಂದ ರಸಭರಿ
ತನಾಗಿ ಮಾಡತಕ ಸಿದ್ದು ” ಎಂದು ಹೇಳಿದನು. ವ್ಯಾಖ್ಯಾತನು ಪರಮೇಶ್ವರನ
ಪ್ರೇಮ ಸಂತೋಷಾದಿ ಗುಣಗಳ ಸಂಬಂಧವಾಗಿ ಈ ಪ್ರಕಾರ ಸುಳ್ಳು ವಿಧಾನ
ಮಾಡಿದ್ದನ್ನು ಕೇಳಿದ ಕೂಡಲೆ ಭಗವಾನರು-""ಒಬ್ಬ ಹುಡುಗನು ತನ್ನ ಸೋ
ದರ ಮಾವನ ಹತ್ತ ರ ಅನೇಕ ಕುದುರೆಗಳಿರುತ್ತವೆಂದು ಹೇಳಿ ತನ್ನ ಶ್ರೋತೃ
ಗಳಲ್ಲಿ ವಿಶ್ವಾಸ ಹುಚ್ಚಿ ಸುವದಕ್ಕಾಗಿ ತನ್ನ ಮಾವನು ಆ ಎಲ್ಲ ಕುದುರೆಗಳನ್ನು
ದನದ ಹಕ್ಕಿ ಯಲ್ಲಿ ಕಟ್ಟಿ ರುತ್ತಾನೆಂದು pis ಕಥೆಯು ನನಗೆ pie:
ಆಯಿತು” ಸದು ಹೇಳಿದರು.
ತಾತ್ಪರ್ಯ.
ದನದ ಹಕ್ಕಿಯು 'ಕುದುರೆಗಳನ್ನು ಕಟ್ಟತಕ್ಕ ಸ್ಕಳವಲ್ಲವೆಂಬ ಕಾರ
ಣದಿಂದ ಮೇಲ್ಕಂಡ ಹುಡುಗನು ತನ್ನ ಮಾವನ ಹತ್ತರ ಕುದರೆಗಳಿದ್ದ ವೆಂದು
ಹೇಳಿದಮಾತು ಸುಳ್ಳೆಂದು ಬುದ್ಧಿವಂತರಿಗೆ ಹೇಗೆ ನಿದರ್ಶನಕ್ಕೆ ಬರುವದೋ
ಹಾಗೆ ವ್ಯಾಖ್ಯಾತನು ಪರಮೇಶ್ವರನು ರಸವರ್ಜಿತನು ಅಂದರೆ ಆತನಿಗೆ ಪ್ರೇಮ
ಸಂತೋಷಾದಿ ಗುಣಗಳು ಇಲ್ಲವೆಂದು ಹೇಳಿದ ಮಾತಿನ ಮೇಲಿಂದ ಮ್ಯಾಖಾ್ರ
ತನಿಗೆ ಪರಮೇಶ್ವರನ ಗುಣಗಳ ಸಂಬಂಧವಾಗಿ ಏನೂ ಗೊತ್ತಿಲ್ಲವೆಂಬುವದು
ನಿದರ್ಶನಕ್ಕೆ ಬರುವದು. ಪರಮೇಶ್ವರನು ಪ್ರೇಮ, ಜ್ಞಾನ ಮತ್ತು ಅನಂದ
ಇವುಗಳ ಮೂಲ ಸ್ವರೂಪನಿದ್ದು ಅವನಿಗೆ ರಸವರ್ಜಿತನೆಂದು ಹೇಳಿದ ವ್ಯಾಖ್ಯಾ
ತನಿಗೆ ಬುದ್ಧಿವರ್ಜಿತನೆಂದು ಹೇಳಲಿಕ್ಕೆ ಏನೂ ಅಡ್ಡಿಯಿಲ್ಲ.
೫೦. ಒಬ್ಬ ಸಾಧುವು ರೋಗಿಗೆ
ಹೇಳಿದ ಔಷಧವು.
ಒಬ್ಬ ಮನುಷ್ಯನು ತನ್ನ ಬೇಸೆಯ ಕೂಸಿಗೆ ಔಷಧವನ್ನು ತರುವ
ಸಲುವಾಗಿ ಆದನ್ನು ಬಗಲಲ್ಲಿ ಎತ್ತಿ ಕೊಂಡು ಒಬ್ಬ ಸಾಧುವಿನ ಕಡೆಗೆ ಹೋ
ಎಮು ಶಹ ಭನ
ದನು. ಆಗ ಆ ಸಾಧುವು ಅವನಿಗೆ « ನಾಳೆ ಬಾ? ಎಂದು ಹೇಳಿದನು. ಆ
ಪ್ರಕಾರ ಆ ಮನುಷ್ಯನು ಮರುದಿವಸ ಆ ಸಾಧುವಿನ ಬಳಿಗೆ ತಿರುಗಿ ಹೋಗ
ಲು ಆ ಸಾಧುವು ಅವನಿಗೆ-« ನಿನ್ನ ಕೂಸಿಗೆ ತಿನ್ನಲಿಕ್ಕೆ ಏನೂ ಸೀ ಪದಾರ್ಥ
ಕೊಡಬೇಡ, ಅಂದರೆ ಅದು ನೆಟ್ಟಗಾಗುವದು ೫ ಎಂದು ನುಡಿದನು. ಅದಕ್ಕೆ
ಆ ಮನುಷ್ಯನು-* ಸ್ವಾಮಿ, ಇದನ್ನು ನಿನ್ನೆ ಯೇ ಹೇಳಿಬಿಟ್ಟದ್ದ ರೆ ಆಗುತ್ತಿತ್ತು?
ಎಂದು ಹೇಳಿದನು. ಇದನ್ನು ಕೇಳಿ ಆ ಸಾಧುವು- ನಿನ್ನೆ ನನ್ನ ಮುಂದೆ ಸಕ್ಕ
ರಿಯ ರಾಶಿಯು ಬಿದ್ದಿತ್ತು. ನಿನ್ನೆ ನಾನು ಇದನ್ನು ಹೇಳಿದ್ದರೆ ನಿನ್ನ ಕೂಸು
ನಾನು ಡಾಂಭಿಕನು ಇರುತ್ತೇನೆಂತಲೂ, ನಾನು ಸ್ವತಃ ಸಕ್ಕರಿಯನ್ನು ಬೇಕಾ
ದಷ್ಟು ತಿನ್ನುತ್ತಿದ್ದು ತನಗೆ ಮಾತ್ರ ತಿನ್ನ ಬೇಡವೆಂದು ಹೇಳುತ್ತೇನೆಂತಲೂ ತಿಳಿ
ದುಕೊಳ್ಳುತ್ತಿತ್ತು ? ಎಂದು ಉತ್ತರ ಕೊಟ್ಟನು.
ತಾತ್ಸರ್ಯ.
ಅ ಸುಚ್ಜರು ತಮ್ಮ ಮಾತು ಪರಿಣಾಮಕಾರಕವಾಗುವಂತೆ ಕಾಲಸ್ಥಿತಿಗ
ಳನ್ನು ನೋಡಿಕೊಂಡು ಮಾತಾಡುತ್ತಾರೆ. ಅವರು ಎಂದೂ ವೃರ್ಧವಾಗಿ
ಮಾತಾಡುವದಿಲ್ಲ.
೫೧. ಆಲಸೈವು ಮನುಷ್ಯನ ವೈರಿಯು.
ಇಬ್ಬರು ಮನುಷ್ಯರು ಒಂದು ತೋಟಕ್ಕೆ ಹೋಗಿದ್ದರು. ಅವರು
ಅಲ್ಲಿಗೆ ಹೋದ ಕೂಡಲೇ ಒಬ್ಬನು ಆ ತೋಟದೊಳಗೆ ಎಷ್ಟು ಮಾವಿನ
ಗಿಡಗಳು ಇರುತ್ತವೆ, ಪ್ರತಿಯೊಂದು ಮಾವಿನ ಗಿಡಕ್ಕೆ ಎಷ್ಟು ಕಾಯಿಗಳು ಬಿ
ಡುತ್ತವೆ, ಹಾಗೂ ಇಡೀ ತೋಟದ ಉತ್ಪನ್ನವು ಎಷ್ಟಾಗುವದು ಎಂದು ಲೆ
ಕೃವನ್ನು ಮಾಡುವಲ್ಲಿ ತೊಡಗಿದನು. ಇನ್ನೊಬ್ಬನು ಆ ತೋಟದ ಯಜಮಾ
ನನ ಕಡೆಗೆ ಹೋಗಿ, ಅವನನ್ನು ಮಾತಾಡಿಸಿ, ಅವನ ಗುರುತು ಮಾಡಿಕೊಂ
ಡು ಅವನ ಅಪ್ಪಣೆಯ ಮೇರೆಗೆ ಒಂದು ಮಾವಿನ ಗಿಡದಲ್ಲಿ ಆದ ಪಾಡು ಹ
ಣ್ಣನ್ನು ಹರಿದು ತಿನ್ನಹತ್ತಿದನು. ಈ ಇಬ್ಬರಲ್ಲಿ ಬುದ್ಧಿವಂತರು ಯಾರು?
10
— ಶಿಲ್ಪ .—
ಮಾವಿನ ಹಣ್ಣು ತಿನ್ನುವದರಿಂದ ಹಸಿವೆಯಾದರೂ ಶಾಂತವಾಗುವದು. ಬರೀ
ಗಿಡಗಳ ಎಲೆಗಳನ್ನಾಗಲೀ ಕಾಯಿಗಳನ್ನಾಗಲೀ ಎಣಿಕೆ ಮಾಡುವದರಿಂದ
ಪ್ರಯೋಜನವೇನು? ಬುದ್ಧಿಯ ಅಹಂಕಾರವುಳ್ಳ ಮನುಷ್ಯನು 4 ದೇವರು
ಈ ಸೃಷ್ಟಿಯನ್ನು ಏಕೆ ನಿರ್ಮಿಸಿದನು ಮತ್ತು ಹೇಗೆ ನಿರ್ಮಿಸಿದನು?” ಎಂಬ
ವಿಷಯಗಳನ್ನು ವಿಚಾರ ಮಾಡುವಲ್ಲಿ ವೇಳೆಗಳೆಯುತ್ತಾನೆ. ಆದರೆ ತನ್ನ ಬುದ್ಧಿ
ಯ ಅಹಂಕಾರ ರಹಿತನಾದ ನಮ್ರ ಮನುಷ್ಯನು ಪರಮೇಶ್ವರನ ಬಗ್ಗೆ ಜ್ಞಾನ
ವನ್ನು ಮಾಡಿಕೊಂಡು ಜಗತ್ತಿನಲ್ಲಿ ಶ್ರೆಷ್ಠತರವಾದ ಅನಂದವನ್ನು ಆನುಭೋ
ಗಿಸುತ್ತಾನೆ.
ತಾತ್ಪರ್ಯ.
ನಾವು ವ್ಯರ್ಥವಾಗಿ ಎಂದೂ ವೇಳೆಯನ್ನು ಕಳೆಯಬಾರದು. ನಮ್ಮ ಆ
ಯುಷ್ಯುವು ನೂರು ವರ್ಷಗಳೆಂದು ತಿಳಿದುಕೊಂಡರೂ ನಮ್ಮ ಅರ್ಧ ಆಯುಷ್ಯ
ವು ರಾತ್ರಿಯೊಳಗೆ ನಿದ್ರೆ ಮಾಡುವಲ್ಲಿ ಹೋಗುತ್ತ ದೆ. ಮಿಕ್ಕುದ್ದ ರಲ್ಲಿ ಕೆಲವು ವರ್ಷ
ಗಳು ರೋಗಗಳಿಂದ ನೆರಳುವದರಲ್ಲಿ ಹೋಗುತ್ತವೆ. ಕೆಲವು ವರ್ಷಗಳು ಸೆಮ್ಮ
ಹುಡುಗತನದ ಅಜ್ಜಾ ನಾವಸ್ಯೆಯಲ್ಲಿ ಹೋಗುತ್ತವೆ. ಕೆಲವು ವರ್ಷಗಳು ನಮ್ಮ
ಮುಪ್ಪಿನಲ್ಲಿಯೂ ಪರಾವಲಂಬನೆಯಲ್ಲಯೂ ಹೋಗುತ್ತವೆ. ಈ ಪ್ರಕಾರ ವ
ರ್ಷಗಳು ಕಳೆದ ನಂತರ ನಮ್ಮ ಆಯುಷ್ಯವು ಅತ್ಯುಲ್ಪವೇ ಉಳಿಯುವದು. ಆ
ದುದರಿಂದ ನಾವು ಯಾವಾಗಲು ಜ್ಞಾನ ಸಂಪಾದನ ಮಾಡುವಲ್ಲಿಯೂ, ಜ
ನರಿಗೆ ಉಪಕಾರ ಮಾಡುವಲ್ಲಿಯೂ, ಪರಮೇಶ್ವರನ ಭಕ್ತಿಯಲ್ಲಿಯೂ, ನಮ್ಮ
ವೇಳೆಯ ಉಪಯೋಗವನ್ನು ಮಾಡತಕ್ಕದ್ದು. ಆಲಸ್ಯುವು ಮನುಷ್ಯನ ಪ್ರಬಲ
ವಾದ ವೈರಿಯು. ಭರ್ತ್ವೃಹರಿಯು ಹೇಳುವದೇನಂದರೆ:- -
ಅಲಸ್ಕಂ ಹಿ ಮನುಷ್ಯಾಣಾಂ ಶರೀರಸ್ಫೋ ಮಹಾ ರಿಪುಃ ।
೫೨. ಒಬ್ಬ ಒಕ್ಕಲಿಗನ ದೃಢನಿಶ್ಚಯವು.
ಒಂದು ಸಾರೆ ಒಂದು ಊರಲ್ಲಿ ಮಳೆಯು ತಕ್ಕ ಹೊತ್ತಿನಲ್ಲಿ ಬೀಳದೆ
ಇದ್ದುದರಿಂದ ಅಲ್ಲಿಯ ಒಕ್ಕಲಿಗರು ತಮ್ಮ ಬೆಳೆಗಳು ಒಣಗುವವೆಂದು ಬಹಳ
HN
ಚಿಂತೆ ಮಾಡುತ್ತ ಒಂದು ದಿನ ತಮ್ಮ ಹೊಲಗಳಲ್ಲಿ ಕಾಲಿವೆಗಳನ್ನು ಮಾಡಿ
ಕೊಂಡು ನದಿಯ ನೀರನ್ನು ತಿರುವಿ ಕೊಳ್ಳುವ ಕೆಲಸದಲ್ಲಿ ತೊಡಗಿದ್ದರು.
ಒಬ್ಬ ಒಕ್ಕಲಿಗನು ಆ ದಿನ ಸೆಂಜೆಯಾಗುವದರೊಳಗಾಗಿ ಕಾಲಿವೆ ಕಡಿಯುವ
ದನ್ನು ಮುಗಿಸಬೇಕೆಂಬ ನಿಶ್ಚಯದಿಂದ ತನ್ನ ಕೆಲಸವನ್ನು ನಡೆಸಿದ್ದನು. ಮ
ಧ್ಯಾಹ್ನದ ಹೊತ್ತು ಆದರೂ ಅವನು ಊಟಕ್ಕೆ ಸಹ ಕೆಲಸವನ್ನು ಬಿಟ್ಟಿದ್ದಿಲ್ಲ.
ಆಗ ಅವನ ಹೆಂಡತಿಯು ತನ್ನ ಮಗಳ ಕಡೆಯಿಂದ ಅವನಿಗೆ ಎಣ್ಣೆಯ ಬಟ್ಟ
ಲವನ್ನು ಕಳುಹಿಸಿಕೊಟ್ಟಳು. ತಾಯಿಯ ಅಪ್ಪಣೆಯ ಪ್ರಕಾರ ಮಗಳು ತನ್ನ
ತಂದೆಯ ಕಡೆಗೆ ಹೋಗಿ--« ಅಪ್ಪಾ, ಬಹಳ ಹೊತ್ತಾ ಯಿತು. ಈ ಎಣ್ಣೆಯ
ನ್ನು ಹಚ್ಚಿಕೊಂಡು ನದಿಯಲ್ಲಿ ಜಳಕ ಮಾಡಿ ಊಜಕ್ಕೆ ನಡೆ” ಎಂದು ಅವ
ನಿಗೆ ಹೇಳಿದಳು. ಆಗ ಅವನು--« ಮಗುವೇ, ನಾನು ಬರಲಾರೆನು. ನನಗೆ ಇ
ನ್ನೂ ಕೆಲಸವು ಬಹಳವದೆ” ಎಂದು ಉತ್ತರಕೊಟ್ಟನು. ಮಧ್ಯಾಹ್ನದ ಎರಡು
ಘಂಟಿಯಾದರೂ ಅವನಿಗೆ ಜಳಕ ಮಾಡುವ ಆಥವಾ ಊಟಿ ಮಾಡುವ ವಿಚಾ
ರವು ಬರಲಿಲ್ಲ. ಮಧ್ಯಾಹ್ನ ೨ ಘಂಟಿಯಾದರೂ ಗಂಡನು ಮನೆಗೆ ಬಾರದೆ ಇ
ದ್ಹದ್ದನ್ನು ಕಂಡು ಅವನ ಹೆಂಡತಿಯು ಅವನನ್ನು ಸರೆಯಲಿಕ್ಕೆ ಹೊಲಕ್ಕೆ
ಬಂದು- « ಇನ್ನೂ ನೀವು ಏಕೆ ಜಳಕವನ್ನು ಮಾಡಲಿಲ್ಲ? ಮನೆಯಲ್ಲಿ ಮಾಡಿ
ದ ಅಡಿಗೆಯು ಅರಿ ಹೋಯಿತು. ನೀವು ಯಾವದಾದರೂ ಅತಿ ಮಾಡುತ್ತೀರಿ.
ದಯಮಾಡಿ ಇನ್ನು ಮನೆಗೆ ನಡೆಯಿರಿ. ಉಳಿದ ಕೆಲಸ ನಾಳೆ ಮಾಡಿದರೆ ಆದೀ
ತು. ಅಥವಾ ಊಬ ತೀರಿಸಿಕೊಂಡ ಬಳಿಕ ಮಾಡಿದರೆ ಬಂದೀತು” ಎಂದು
ಹೇಳಿದಳು. ಇದರಿಂದ ಆ ಮನುಷ್ಯನು ಹುಚ್ಚನಂತೆ ಸಿಟ್ಟಿಗೆದ್ದು ತನ್ನ ಹೆಂಡ
ತಿಯನ್ನು ಬೈಯ್ಯುಲಿಕ್ಕೆ ಹತ್ತಿದನು. ಅವನು ಬೈದದ್ದೆ ನಂದರೆ «« ಹುಚ್ಚೇ,
ಮಳೆಯು ಇಲ್ಲದ್ದರಿಂದ ನಾವೆಲ್ಲರೂ ಉಪವಾಸ ಸಾಯಬೇಕಾದೀತು. ನಾನು
ಇವತ್ತಿನ ದಿವೆಸ ಹೇಗಾದರೂ ಮಾಡಿ ಸಂಜಿಯಾಗುವದರೊಳಗಾಗಿ ಹೊಲದಲ್ಲಿ
ನದಿಯ ನೀರು ಬರುವಂತೆ ಕಾಲಿವೆಯನ್ನು ಕಡಿದು ಮುಗಿಸಬೇಕೆಂದು ನಿಶ್ಚ
ಯ ಮಾಡಿರುತ್ತೇನೆ? ಇದನ್ನು ಕೇಳಿ ಅವನ ಹೆಂಡತಿಯು ಸುಮ್ಮನೆ ಮನೆಗೆ
ಹೊರಟು ಹೋದಳು. ಆ ಮೇಲೆ ಅವನು ಸಂಜೆಯ ತನಕ ಬಿಟ್ಟೂ ಬಿಡದೆ ಕೆ
ಲಸ ಮಾಡಲು ಕಾಲಿವೆ ಕಡಿಯುವ ಕೆಲಸವು ಮುಗಿದು ಅವನ ಹೊಲಕ್ಕೆ ನದಿ
ಎ. dk —
ಯ ನೀರು ಬರಲಿಕ್ಕೆ ಹತ್ತಲಾಗಿ ಅವನು ಬಹು ಹಿಗ್ಗಿದನು. ಹಿಂದುಗಡೆ ಅ
ವನು ತನ್ನ ಮನೆಗೆ ಬಂದು ತನ್ನ ಮೈಗೆಲ್ಲ ಎಣ್ಣೆಯನ್ನು ಹಚ್ಚಿ ಎರಕೊಂಡು
ಊಟ ಮಾಡಿ ಗಡದು ಮಲಕೊಂಡ: ಬಿಟ್ಟನು.
ಇನ್ನೊಬ್ಬ ಒಕ್ಕಲಿಗನು ಇಂಥ ಕೆಲಸ ಮಾಡುತ್ತಿದ್ದಾಗ ಅವನ ಹೆಂಡ
ತಿಯು ಊಟಕ್ಕೆ ಕರೆಯುವದಕ್ಕಾಗಿ ಬರಲು ಒಲ್ಲೆ ಎಂದು ಉತ್ತರ ಕೊಡದೆ
ಅಥವಾ ಯಾವ ರೀತಿಯಿಂದಲೂ ಅವಳ ಮನಸ್ಸನ್ನು ಅಸ್ಸಮಾಧಾನ ಮಾ
ಡದೆ ಹೆಗಲ ಮೇಲೆ ಗುದ್ದಲಿ ಸಲಕಿಗಳನ್ನು ಹೊತ್ತು ಕೊಂಡು ತನ್ನ ಹೆಂಡತಿಯ
ಬೆನ್ನುಹತ್ತಿ ಮನೆಗೆ ಹೊರಟು ಹೋದನು. ಆದುದರಿಂದ ಅವನಿಗೆ ತನ್ನ ಹೊ
ಲಕ್ಕೆ ನದಿಯ ನೀರು ತಿರುವಿಕೊಳ್ಳುವ ಕೆಲಸವು ಆಗದೆ ಅವನ ಬೆಳೆಯು ಒಣ
ಗಿ ಹೋಯಿತು.
ತಾತ್ಸರ್ಯ.
ಮೋಕ್ಷವು ಪ್ರಾಪ್ತಿಯಾಗಬೇಕಾದರೆ ಪರಮೇಶ್ವರನನ್ನು ದೃಢನಿಶ್ಚಯ
ದಿಂದ ಹುಡುಕಬೇಕಾಗುತ್ತದೆ. « ನಾಳೆ ಮಾಡೋಣ” « ನಾಡದು ಮಾ
ಡೋಣ” ಎಂದು ವಿಲಂಬ ಮಾಡಿದರೆ ಮೋಕ್ಷಪ್ರಾಪ್ತಿಯು ಎಂದೂ ಆಗುವ
ದಿಲ್ಲ. ಮೋಕ್ಷವನ್ನು ದೊರಕಿಸುವ ಮನಸ್ಸುಳ್ಳವನು ಪರಮೇಶ್ವರನ ಹೊರ
ತಾಗಿ ಯಾರ ವಿಚಾರವನ್ನೂ ಮಾಡಬಾರದು. « ಹೊಲಕ್ಕೆ ನೀರು ತಿರುವಿ
ಕೊಳ್ಳದೆ ಬಾಯಿಯಲ್ಲಿ ಅನ್ನದ ತುತ್ತು ಹಾಕಲಿಕ್ಕಿಲ್ಲ* ಎಂದು ದೃಢನಿಶ್ಚಯ
ದಿಂದ ಕೆಲಸ ಮಾಡಿದ ಒಕ್ಕಲಿಗನ ಪ್ರಕಾರ ಎಲ್ಲರು ಪರಮೇಶ್ವರನ ಪ್ರಾಪ್ತಿ
ಯ ಸಲುವಾಗಿ ಕಷ್ಟಪಡಶಕ್ಕದ್ದು.
೫೩. ಅಂತಃಕರಣವೇ ದೇವರ ಗುಡಿಯು.
ಒಂದಾನೊಂದು ಹಳ್ಳಿ ಯಲ್ಲಿ ಒಂದು ಹಳೇ ಮುರುಕ ಗುಡಿಯು ಇದ್ದು
ಅದರಲ್ಲಿಯ ದೇವರ ಮೂರ್ತಿಯನ್ನು ಯಾರೋ ಒಯ್ದು ಬಿಟ್ಟಿದ್ದರಿಂದ ಆ
ಗುಡಿಯು ಪಕ್ಷಿಗಳಿಗೂ ಕಣ್ಣ ಕಪ್ಪಡಿಗಳಿಗೂ ಯಾವಾಗಲು ಬಂದು ಕೂಡ್ರು
ವ ಸ್ಥಳವಾಗಿತ್ತು. ಒಂದು ದಿವಸ ರಾತ್ರಿಯಾಗಲಾಗಿ ಆ ಗುಡಿಯೊಳಗೆ ಗಂಟಿ
— 88 ಇಇ |
ಜಾಗಟಿಗಳನ್ನು ಬಾರಿಸುವ ಸಪ್ಪ ಕ್ಸ್ಳಳವೂ, ಶಂಖ ಊದುವ ಸಪ್ಪಳವೂ ಕೇಳಿಸ
ಲಾಗಿ ಊರ ಜನರೆಲ್ಲರು ಅಶ ಶ್ಚರ್ಯಚಕಿತರಾದರು. ಇದರಿಂದ ಊರೊಳಗಿನ
ಎಲ್ಲ ಗಂಡಸರು, ಹೆಂಗಸರು ಗು ಗುಡಿಯೊಳಗೆ ಯಾವನಾದರೂ ಭಕ್ತ
ನು ದೇವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನ ಮಾಡಿ ದೇವರ ಆರುತಿಯ
ನ್ನು ಮಾಡುತ್ತಿರಬಹುದೆಂದು ತಿಳಿಕೊಡು ಆ ಗುಡಿಗೆ ಬಂದು ತಮ್ಮ ಎರಡೂ
ಕೈಗಳನ್ನು ಮುಗಿದುಕೊಂಡು ಈ ಸಪ್ಪಳಗಳನ್ನು ಕೇಳುತ್ತ ಅದರ ಮುಂದೆ
ನಿಂತರು. ಅವರಲ್ಲಿ ಒಬ್ಬನು ಎಲ್ಲರಿಗಿಂತ ಹೆಚ್ಚು ಕೌತುಕದಿಂದ ಆ ಗುಡಿಯೊ
ಳಗೆ ಹೋಗಿ ಹಣಕಿ ನೋಡಲು ಒಬ್ಬ ಚೇಷ್ಟೆ ಗಾರ ಹುಡುಗನು ಗಂಟಿ ಬಾರಿ
ಸುವದನ್ನೂ ಶಂಖ ಊದುವದನ್ನೂ ಕಂಡನು! ಆ ಗುಡಿಯಲ್ಲಿ ಪೂಜಿ ಮಾಡ
ಲಿಕ್ಕೆ ದೇವರ ಮೂರ್ತಿಯು ಇದ್ದಿಲ್ಲವಷ್ಟೇ ಅಲ್ಪ ಅದರ ನೆಲವನ್ನು ಸಹ
ಯಾರೂ ಉಡುಗಿದ್ದಿಲ್ಲ ಅದರಲ್ಲಿ ಮೊದಲಿನಂತೆಯೇ ಕಸವು ತುಂಬಿತ್ತು! ಅಗ
ಅವನು-* ಎಲೋ ಪೋರನೇ, ಗುಡಿಯಲ್ಲಿ ದೇವರ ಮೂರ್ತಿಯು ಇಲ್ಲ!
ನೀನು ಈ ಗುಡಿಯ ಕಸವನ್ನು ಸಹ ಉಡುಗಿ ಸ್ವಚ್ಛ ಮಾಡಿಲ್ಲ! ಹೀಗಿದ್ದು
ನೀನು ಶಂಖವನ್ನು ಊದಿ ಈ ಗದ್ದಲವನ್ನು ಏಕೆ ಉಡೆಸಿರುವ? 1» ಎಂದು
ಹೇಳಿದನು.
ತಾತ್ಪರ್ಯ.
ನಾವು ಮೊದಲಿಗೆ ನಮ್ಮ ಅಂತಕಕರಣವೆಂಬ ಗುಡಿಯೊಳಗಿನ ದೇವರ
ಒಗ್ಗೆ ಜ್ಞಾ ನವನ್ನು ಮಾಡಿಕೊಳ್ಳಬೇಕು. ಇದಕ್ಕೋಸ್ಕರ ನಾವು ನಮ್ಮ ಪಂ
ಚೇಂದ್ರಿಯಗಳಿಂದ ಹುಟ್ಟುವ ವಿಷಯವಾಸನೆಗಳನ್ನು ತೆಗೆದು ಹಾಕಬೇಕು.
ಆ ಮೇಲೆ ನಮಗೆ ಅಗತ್ಯವು ತೋರಿದರೆ ಶಂಖವನ್ನು ಊದಿ ಜನರನ್ನು ನಮ್ಮ
ಹತ್ತರ ಕರೆಯಿಸಿ ಅವರಿಗೆ ಧರ್ಮೋಪದೇಶ ಮಾಡಬೇಕು. ಎರಡನೆಯವರಿಗೆ
ಧರ್ಮೋಪದೇಶ ಮಾಡುವ ಕೆಲಸವು ಬಹಳ ಬಿರಿಯಾದದ್ದು. ಯಾರು ದೇವ
ರನ್ನು ಜ್ಞಾನದೃಷ್ಟಿಯಿಂದ ತಿಳಿದುಕೊಳ್ಳುತ್ತಾರೋ ' ಅವರಿಗೆ ದೇವರು ತನ್ನ
ಅಜ್ಜಿ ಗಳನ್ನು ತಿಳಿಸುತ್ತಾನೆ. ಅಂಥವರೇ ಎರಡನೇಯವರಿಗೆ ಉನದೇಶ ಮಾಡ
ಲಿಕ್ಕೆ ಅಧಿಕಾರಿಗಳಾಗುವರು.
ಮು ಶಕೆ ಮಾ
೫೪. ಎಷ್ಟು ವಂದಿ ಸೂರ್ಯರು?
ಒಂದು ದಿವಸ ಶ್ರೀರಾಮಕೃಷ್ಣ ಪರಮಹಂಸರು ಒಬ್ಬಾನೊಬ್ಬ ಭಕ್ತನ
ಕೂಡ ಕೆಳಗೆ ಬರೆದ ಪ್ರಕಾರ ಸಂಭಾಷಣೆ ಮಾಡಿದರು:
ಪರಮಹಂಸರು-- ಇಲ್ಲಿ ನಿನ್ನ ಮುಂದೆ ನೀರು ತುಂಬಿದ ಹತ್ತು ಕೊ
ಡಗಳನ್ನು ಇಟ್ಟಿದ್ದು ಆ ಪ್ರತಿಯೊಂದು ಕೊಡದಲ್ಲಿ ಸೂರ್ಯನ ಪ್ರತಿಬಿಂಬವು
ಮೂಡಿರುತ್ತದೆಂದು ತಿಳಿದುಕೋ. ಅಂದಮೇಲೆ ನಿನ್ನ ಕಣ್ಣಿಗೆ ಎಷ್ಟು ಮಂದಿ
ಸೂರ್ಯರು ಕಾಣುವರು?
ಒಬ್ಬ ಭಕ್ತ--ಸೂರ್ಯನ ಹತ್ತು ಪ್ರತಿಬಿಂಬಗಳು ಹಾಗೂ ಒಬ್ಬ
ನಿಜವಾದ ಸೂರ್ಯನು.
ಪರಮಹಂಸರು--ನೀನು ಒಂದು ಕೊಡವನ್ನು ಒಡಿದೆಯೆಂದು ತಿಳಿ
ದುಕೋ. ಆಗ ಎಷ್ಟು ಮಂದಿ ಸೂರ್ಯರು ಕಾಣಿಸುವರು?
ಒಬ್ಬ ಭಕ್ತ--ಒಂಬತ್ತು ಸೂರ್ಯನ ಪ್ರತಿಬಿಂಬಗಳು ಹಾಗೂ ಒಬ್ಬ
ನಿಜವಾದ ಸೂರ್ಯನು,
ಪರಮುಹಂಸರು-- ಈಗ ಒಂಬತ್ತು ಕೊಡಗಳನ್ನು ಒಡಿದೆಯೆಂದು
ತಿಳಿದುಕೋ. ಎಷ್ಟು ಮಂದಿ ಸೂರ್ಯರು ಕಾಣಿಸುವರು?
ಒಬ್ಬ ಭಕ್ತ-- ಸೂರ್ಯನ ಒಂದು ಪ್ರತಿಬಿಂಬವು ಹಾಗೂ ಒಬ್ಬ
ನಿಜವಾದ ಸೂರ್ಯನು,
ಪರಮಹಂಸರು--ಕಡೇ ಕೊಡವು ಒಡೆದ ಮೇಲೆ ಏನು ಉಳಿ
ಯುತ್ತದೆ?
ಒಬ್ಬ ಭಕ್ತ--ನಿಜವಾದ ಸೂರ್ಯನು.
ಪರಮಹಂಸರು--ಹಾಗಲ್ಲ. ಏನು ಉಳಿಯಿತೆಂಬುವದನ್ನು ಶಬ್ದ
ಗಳಿಂದ ಹೇಳಲಿಕ್ಕಾಗುವದಿಲ್ಲ. ಏನು ಉಳಿಯುವದೋ ಉಳಿಯುವದು! ಸೂ
ರ್ಯನ ಪ್ರತಿಬಿಂಬವು ಕಾಣಿಸದಿದ್ದರೆ ನಿಜವಾದ ಸೂರ್ಯನು ಇರುತ್ತಾನೆಂದು
ಹೇಗೆ ತಿಳಿದುಕೊಳ್ಳುವ? ಸಮಾಧಿಯು ಹತ್ತಿ ತೆಂದರೆ ಪ್ರಜ್ಞೆಯು ಹೊರಟು
— 8೯ —
ಹೋಗುತ್ತದೆ. ಸವೂಧಿಯು ಹತ್ತಿದ ಬಳಿಕ ಏನಾಯಿತೆಂಬುವದನ್ನು ಪ್ರಜೆ
ಯೆಂಬ ಕೆಳಗಿನ ಕ್ಷೇತ್ರಕ್ಕೆ ಬಂದ ಮನುಷ್ಯನು ಶಬ್ದಗಳಿಂದ ಹೇಳುವದು
ಅಸಾಧ್ಯವು.
೫೫. ಆಶೆಗಳ ಮನೋರಾಜ್ಯವು.
ಜೂನ ತಿಂಗಳದಲ್ಲಿ ಒಂದು ದಿವಸ ಮುಂಜಾನೆ ಒಂದು ಕುರಿಮರಿಯು
ತನ್ನ ತಾಯಿಯ ಹತ್ತರ ಆಡುತ್ತಿದ್ದಾಗ ಬಹಳ ಆನಂದದಿಂದ... ಅವ್ವಾ,
ನವ್ಹಂಬರ ತಿಂಗಳದಲ್ಲಿ ತರತರದ ಸುವಾಸನೆಯ ಹೂವುಗಳನ್ನು ತಂದು ಮೇಜ
ವಾನಿಯನ್ನು ಮಾಡೋಣ” ಎಂದು ಹೇಳಿತು. ಆಗ ಆ ಕುರಿಯು-« ಮಗು
ವೇ, ಆ ಮೇಜವಾನಿಯು ನೀನು ತಿಳಕೊಂಡಷ್ಟು ಸುಲಭವಾಗಿರುವದಿಲ್ಲ. ಆ
ಮೇಜವಾನಿಯ ಕಾಲವು ಬರುವದಕೊಳಗಾಗಿ ನೀನು ನಿನ್ನ ಜೀವದ ಮೇಲಿನ
ಎಸ್ಟೋ ಗಂಡಾಂತರಗಳನ್ನು ಕಳೆಯಬೇಕಾಗುವದು. ಸಪ್ಟಂಬರ ಮತ್ತು
ಅಕ್ಟೋಬರ ತಿಂಗಳುಗಳ ನಡುವಿನ ಕಾಲವು ನಿನಗೆ ಬಹಳ ಅಶುಭವಾದದ್ದು-
ನಿನಗೆ ಕೆಲವರು ದುರ್ಗಾದೇವತೆಗೆ ಬಲಿ ಕೊಡಲಿಕ್ಕೆ ಒಯ್ಯಬಹುದು. ಅದೂ
ತಪ್ಪಿದರೆ ಕಾಳಿಕಾದೇವಿಯ ಪೂಜಿಗಾಗಿ ನಿನ್ನನ್ನು ಒಯ್ಯುವರು. ಅಗ ಸುದ
ವದಿಂದ ನೀನು ಬದುಕಿದರೆ ಜಗದಾತ್ರಿ ಪೂಜೆಯು ಬರುವದು. ಆಗಂತೂ
ನಮ್ಮ ವಂಶದ ಯಾವತ್ತು ಗಂಡು ಜಾತಿಯನ್ನು ಬಲಿಕೊಡುವರು. ಇವೆಲ್ಲ
ಗಂಡಾಂತರಗಳಿಂದ ನೀನು ಬದುಕಿದ ತರುವಾಯ ನವ್ಹಂಬರ ತಿಂಗಳದ
ಪ್ರಾರಂಭಕ್ಕೆ ಮೇಜವಾನಿಯ ಬಗ್ಗೆ ವಿಚಾರ ಮಾಡು” ಎಂದು ಉತ್ತರ.
ಕೊಟ್ಟಿತು.
ತಾತ್ಪರ್ಯ.
ನಾವು ನಮ್ಮ ತಾರುಣ್ಯದಲ್ಲಿ “ ಮುಂದೆ ಈ ಪ್ರಕಾರ ಮಾಡೋಣ, ಆ
ಪ್ರಕಾರ ಮಾಡೋಣ” ಎಂದು ಮನೋರಾಜ್ಯದ ಆಶೆಗಳನ್ನು ಮಾಡಬಾರದು
ನಮ್ಮ ಜೀವಕ್ಕೆ ಮುಂದೆ ಎಷ್ಟೆಷ್ಟು ಸಂಕಟಗಳು ಬರುತ್ತವೆಂಬದನ್ನು ಯಾರಿ
ಗೂ ಹೇಳಲಿಕ್ಕಾಗದು.
ಎ. ೮೦ ಎ.
೫೬. ಯಮುನಾನದಿಗೆ ವ್ಯಾಸಯಷಿಯ
ಪ್ರಾರ್ಥನೆ.
ವ್ಯಾಸಯಸಿಯು ಒಂದು ದಿವಸ ಯಮುನಾನದಿಯನ್ನು ದಾಟಿ ಹೋ
ಗತಕ್ಕವನಿದ್ದನು. ಆ ಹೊತ್ತಿ ಗೆ ಕೆಲವು ಗೋಪಿಕಾ ಸ್ತ್ರೀಯರು ಅಲ್ಲಿ ಬಂದರು.
ಅವರಿಗೂ ನದಿಯನ್ನು ದಾಟಿ ಹೋಗತಕ್ಕದ್ದಿತ್ತು. ಆದರೆ ಅಲ್ಲಿ ಹರಗೋಲು
ಇದ್ದಿಲ್ಲ. ಆಗ ಆ ಗೋಪಿಕಾ ಸ್ತ್ರೀಯರು ವ್ಯಾಸಯಸಿಗೆ...« ಸ್ವಾಮಿಗಳೇ,
ನಾವು ಈ ನದಿಯನ್ನು ಇನ್ನು ದಾಟುವದು ಹೇಗೆ?” ಎಂದು ಕೇಳಿದರು.
ಅದಕ್ಕೆ ವ್ಯಾಸಯಸಿಯು-"“ ನಾನು ಬಹಳ ಹಸಿದಿದ್ದೀನೆ. ನನಗೆ ಏನಾದರೂ
ತಿನ್ನಲಿಕ್ಕೆ ಕೊಡುತ್ತೀರೋ?? ಎಂದು ಕೇಳಿದನು. ಆಗ ಆ ಗೋಷಿಕಾ ಸ್ತ್ರೀ
ಯರು ಆ ಮಹಾನುಭಾವನಿಗೆ ಹಾಲು ಕೆನೆಮೊಸರು, ಬೆಣ್ಕೆಗಳನ್ನು ಕೊಟ್ಟ
ರು. ಅವನು ಅವುಗಳಿಂದ ತನ್ನ ಶುಧೆಯನ್ನು ಶಾಂತಪಡಿಸಿಕೊಂಡನು. ಆ
ಮೇಲೆ ಆ ಗೋಪಿಕಾ ಸ್ತ್ರೀಯರು ವ್ಯಾಸಖಸಿಗೆ..4 ಇನ್ನು ನಾವು ನದಿಯನ್ನು
ದಾಚುವ ಮಾರ್ಗವು ಯಾವದು?” ಎಂದು ಕೇಳಲಾಗಿ ಅವನು ಯಮುನಾ
ನದಿಯ ದಂಡೆಯ ಮೇಲೆ ನಿಂತು-*“ ಎಲ್ಲೆ ಯಮುನಾದೇವಿಯೇ, ನಾನು ಇವ
ತ್ತಿನ ದಿವಸ ಏನೂ ತಿನ್ನದೆ ಇದ್ದದ್ದಾದರೆ ನೀನು ಇಬ್ಲಾಗವಾಗಿ ನಮಗೆ ಹಾ
ದು ಹೋಗಲಿಕ್ಕೆ ನಿನ್ನ ನಡುವೆ ದಾರಿಯನ್ನು ಕೊಡು. ಅಂದರೆ ನಾವು ಆಚೆಯ
ದಂಡೆಗೆ ಹೋಗುವೆವು” ಎಂದು ಯಮುನೆಯನ್ನು ಪ್ರಾರ್ಥಿಸಿದನು. ಆ ಮೇಲೆ
ಯಮುನೆಯು ಅದರಂತೆ ದಾರಿಯನ್ನು ಕೊಟ್ಟಳು. ಇದನ್ನುನೋಡಿ ಆಗೋ
ಪಿಕಾ ಸ್ತ್ರೀಯರು ಆಶ್ಚರ್ಯಪಟ್ಟು-. ಈ ಯಸಿಯು ನಮ್ಮ ಕಣ್ಣ ಮುಂದೆ
ನಾವು ಕೊಟ್ಟ ಹಾಲು ಮೊಸರು ಬೆಣ್ಣಿಗಳನ್ನು ಯಥಾಸ್ಥಿತವಾಗಿ ತಿಂದು ತಾ
ನೇನೂ ತಿಂದಿಲ್ಲವೆಂದು ಹೇಳಿದನಲ್ಲಾ!” ಎಂದು ತಮ್ಮ ತಮ್ಮೊಳಗೆ ಗುಜು
ಗುಜು ಮಾತನಾಡಿದರು.
ತಾತ್ಸರ್ಯ.
ವ್ಯಾಸಯಸಿಗೆ ತಾನು ತಿನ್ನುವದಿಲ್ಲವೆಂತಲೂ ತನ್ನ ಅಂತ8ಕರಣದನ್ನಿ
ವಾಸಿಸುವ ಪರಮೇಶ್ವರನು ನಿಜವಾಗಿ ತಿನ್ನುತ್ತಾನೆಂತಲೂ ಇದ್ದ ದೃಢ ವಿ
೨. ಆಗಿ ೨.
ಶ್ರಾಸವು ಸಾಕ್ಷಾತ್ಕಾರವಾಯಿತೆಂಬುವದು ಆ ಗೋಪಿಕಾ ಸ್ತ್ರೀಯರಿಗೆ ತಿಳಿಯ
ಲಿಲ್ಲ. ಸಾಧನಗಳು ಪರಮೇಶ್ವರನ ಜ್ಞಾನವನ್ನು ಮಾಡಿಕೊಳ್ಳುವದಕ್ಕೆ ಅ
ತ್ಯಂತ ಅವಶ್ಯವಿರುತ್ತವೆ. ಆದರೆ ಪೂರ್ಣ ವಿಶ್ವಾಸವಿದ್ದವರಿಗೆ ಸ್ವಲ್ಪ ಸಾಧ
ನವಾದರೂ ನಾಕಾಗುವದು.
೫೭. ಪರಮೇಶ್ವರನು ಕಲ್ಪನೃಕ್ಷವು.
ಒಬ್ಬ ದಾರಿಕಾರನು ಒಮ್ಮೆ ಬಹಳ ದಾರಿಯನ್ನು ನಡೆದು ದಣಿದ ಕಾ
ರಣ ಒಂದು ಕಲ್ಪವೃಶ್ಥದ ನೆರಳಿನ ಕೆಳಗೆ ಕುಳಿತನು. ಆಗ ಅವನು ತನಗೆ
ಉಣ್ಣ ಲಕ್ಕ ಮೃಷ್ಟಾನ್ನವೂ, ಕುಡಿಯಲಿಕ್ಕೆ ಶೀತಲೋದಕವೂ ದೊರೆಯಬೇ
ಕೆಂದು ಅಪೇಕ್ಷಿಸಿದನು. ಆಗಲೇ ಅವನ ಮುಂದೆ ಇವೆಲ್ಲ ತಂದು ಇಡಲ್ಪಟ್ಟವು.
ಆಗ ಅವನು ಇವುಗಳನ್ನು ಉಂಡು ಕುಡಿದು ಶಾಂತನಾದ ತರುವಾಯು-
ನನಗೆ ಈ ಹೊತ್ತಿನಲ್ಲಿ ಒಬ್ಬ ಸುಂದರ ತರುಣಿಯು ಪ್ರ್ರಾಪ್ಮಳಾದರೆ ಎಷ್ಟು
ಸೌಖ್ಯವಾದೀತು?” ಎಂದು ತನ್ನ ಮನಸ್ಸಿನಲ್ಲಿ ವಿಚಾರಮಾಡಿದನು. ಕೂಡಲೇ
ಅವನ ಮುಂದೆ ಒಬ್ಬ ಸುಂದರ ತರುಣಿಯು ಬಂದು ನಿಂತಳು. ಆ ಮೇಲೆ ಅವನು
ಅವಳ ಕೂಡ ಅನಂದದಿಂದ ಮಾತಾಡುತ್ತಿರುವಾಗ-* ಈಗ ಒಂದು ಹುಲಿಯು
ಬಂದು ನನ್ನನ್ನು ತಿಂದಿತೆಂದು ತಿಳಿಯೋಣ * ಎಂದು ತನ್ನ ಮನಸ್ಸಿನಲ್ಲಿ ವಿ
ಚಾರ ಮಾಡಿದನು. ಕೂಡಲೇ ಒಂದು ಹುಲಿಯು ಅಲ್ಲಿಗೆ ಬಂದು ಅವನನ್ನು
ತಿಂದು ಬಿಟ್ಟಿತು.
ತಾತ್ಪರ್ಯ.
ದೇವರು ಕಲ್ಪವೃಕ್ಷದಂತೆ ಇರುತ್ತಾನೆ. ಯಾವನು ಅವನ ಮುಂದೆ
ತಾನು ನಿರ್ಜಲನೂ ಅನಾಥನೂ ಇರುತ್ತೇನೆಂದು ಅನ್ನುತ್ತಾನೋ ಅವನು ಹಾ
ಗೆಯೇ ಆಗುತ್ತಾನೆ. ಯಾವನು- “ ಎಲ್ಲೆ ಪರಮೇಶ್ವರನೇ, ನೀನು ನನಗೆ ಬೇ
ಹಾದದ್ದನ್ನೆಲ್ಲ ಕೊಟ್ಟಿರುವೆ. ನನಗೆ ನಿನ್ನ ಕೃಪೆಯಿಂದ ಯಾತರದೂ ಕೊರತೆ
ಯು ಇಲ್ಲ? ಎಂದು ಅನ್ನುತ್ತಾನೋ ಅವನಿಗೆ ಎಲ್ಲವು ದೊರಕುತ್ತದೆ.
pe
11
ಎ ಓತಿ ಇ.
೫೮. ಪರಮೇಶ್ವರನಿಗೆ ಯಾವದೂ
ಅಸಂಭವವಿಲ್ಲ.
ಒಂದುಸಾರೆ ಇಬ್ಬರು ಸಾಧುಗಳು ತಮಗೆ ಪರಮೇಶ್ವರನ ದರ್ಶನವಾ
ಗಬೇಕೆಂದು ತಪಶ್ಚರ್ಯವನ್ನು ನಡೆಸಿದಾಗ್ಗೆ ಒಂದು ದಿವಸ ನಾರದನು ಆ ಸಾ
ಧುಗಳ ಪರ್ಣಕುಓಯ ಮುಂದೆ ಹಾದು ಹೋಗುತ್ತಿದ್ದನು. ಆಗ ಒಬ್ಬ ಸಾ
ಧುವು ನಾರದನನ್ನು ನೋಡಿ - « ನೀವು ಸ್ವರ್ಗಲೋಕದಿಂದ ಬಂದಿರಾ?” ಎಂ
ದು ಕೇಳಿದನು. ಆದಕ್ಕೆ ಅವನು ಹೌದು? ಎಂದು ಹೇಳಿದನು. “ಹಾಗಾದ
ರೆ ಸ್ವರ್ಗದಲ್ಲಿ ಪರಮೇಶ್ವರನು ಏನು ಮಾಡುತ್ತಿರುವನು ಹೇಳಿರಿ” ಎಂದು ಆ
ಸಾಧುವು ನಾರದನಿಗೆ ಕೇಳಿದನು. ಅದಕ್ಕೆ ನಾರದನು -"" ಪರಮೇಶ್ವರನು ಸೂ
ಜಿಯ ಬಾಯಿಯೊಳಗಿಂದ ಒಂಟೆಗಳನ್ನೂ ಆನೆಗಳನ್ನೂ ಹಾಯಿಸುತ್ತಿದ್ದು ಅ
ವು ಸೂಜಿಯ ಒಳಗೆ ಹೋಗಿ ಹೊರಗೆ ಬರುತ್ತಿರುವದನ್ನು ನಾನು ಕಂಡೆನು”
ಎಂದು ಹೇಳಿದನು. ಇದಕ್ಕೆ ಒಬ್ಬ ಸಾಧುವು-" ಇದರಲ್ಲಿ ಆಶ್ಚರ್ಯವೇನೂ
ಇಲ್ಲ ಪರಮೇಶ್ವರನಿಗೆ ಯಾವದೂ ಅಸಾಧ್ಯವಲ್ಲ” ಎಂದು ಹೇಳಿದನು. ಅಗ
ಇನ್ನೊಬ್ಬ ಸಾಧುವು- « ಇದು ಅಸಂಭವವದೆ. ಇದರ ಮೇಲಿಂದ ನೀನು ಪರ
ಮೇಶ್ವರನು ಇದ್ದಲ್ಲಿಗೆ ಎಂದೂ ಹೋಗಲಿಲ್ಲವೆಂದು ಕಾಣುತ್ತದೆ” ಎಂದು
ಹೇಳಿದನು. ಮೊದಲನೆಯವನು ಭಕ್ತ ನಿದ್ದ ಕಾರಣ ಅವನು ಸಣ್ಣ ಕೂಸಿನಂತೆ
ವಿಶ್ವಾಸವಿಟ್ಚನು. ಎರಡನೆಯವನು ಭಕ್ತನಲ್ಲದ ಕಾರಣ ತನ್ನ ಬುದ್ಧಿಗೆ ಅಸಂಭ
ವವೆಂದು ಕಂಡ ಪ್ರಕಾರ ವಿಶ್ವಾಸವಿಡಲಿಲ್ಲ.
ತಾತ್ಪರ್ಯ.
ಪರಮೇಶ್ವರನಿಗೆ ಯಾವದೂ ಅಸಂಭವವಿಲ್ಲ. ಅವನಲ್ಲಿ ಕರ್ತುಂ,
ಅಕರ್ತುಂ, ಅನ್ಯಥಾ ಕರ್ತುಂ ಶಕ್ರಿಯುಂಟು.
ಲ
೫೯. ಒಬ್ಬ ವೇಷಧಾರಿ ಸಾಧುವು.
ಒಬ್ಬ ವಿಸನ ಹಿಡಿಯುವವನು ರಾತ್ರಿಯ ಹೊತ್ತಿನಲ್ಲಿ ಒಂದು ತೋಟ
ದೊಳಗೆ ಹೋಗಿ ಅದರಲ್ಲಿದ್ದ ನೀರಿನ ಹೊಂಡದಲ್ಲಿ ತನ್ನ ಬಲಿಯನ್ನು ಹಾಕಿ
ಮಾನಗಳನ್ನು ಹಿಡಿಯುತ್ತಿದ್ದನು. ಆಗ ಆ ತೋಟದ ಒಡೆಯನು ಈ ಮಾನ
ಹಿಡಿಯುವ ಸಪ್ಪಳವನ್ನು ಕೇಳಿ ಆ ಮಾನಗಾರನನ್ನು ಹಿಡಿದು ತರಲಿಕ್ಕೆ ತನ್ನ
ಸೇವಕರನ್ನು ಕಳುಹಿಸಿದನು. ಆ ಸೇವಕರು ಆ ಕಳ್ಳನನ್ನು ಹುಡುಕಲಿಕ್ಕೆ
ತಮ್ಮ ಕೈಯಲ್ಲಿ ದೀವಟಗೆಗಳನ್ನು ಹಿಡಕೊಂಡು ಬಂದರು. ಇಷ್ಟರಲ್ಲಿ ಆ
ಮಾನ ಹಿಡಿಯುವವನು ತನ್ನ ಬಲಿಯನ್ನು ನೀರೊಳಗೆ ಚಲ್ಲಿಕೊಟ್ಟು, ತನ್ನ
ಮೋರೆಗೆ ಬೂದಿಯನ್ನು ಹಚ್ಚಿ ಕೊಂಡು, ಒಂದು ಗಿಡದ ಕೆಳಗೆ ಜಪ ಮಾಡುವ
ಸಾಧುವಿನಂತೆ ಕುಳಿತುಕೊಂಡನು. ಆ ಸೇವಕರು ಎಷ್ಟು ಹುಡುಕಿದರೂ ಕ
ಳೃನು ಸಿಗಲಿಲ್ಲ. ಅದರೆ ಅವರು ಈ ಸಾಧುವು ಜಪ ಮಾಡುತ್ತ ಕುಳಿತಿರುವ
ದನ್ನು ಕಂಡರು. ಆಗ ಅವರು ತಮ್ಮ ಒಡೆಯನ ಕಡೆಗೆ ತಿರುಗಿ ಹೋಗಿ ತಾವು
ನೋಡಿದ್ದನ್ನೆಲ್ಲ ಹೇಳಿದರು. ಆಗ ಅನೇಕ ಜನರು ಅವನ ದರ್ಶನಕ್ಕಾಗಿ
ಬಂದು ಅವನ ಮುಂದೆ ಹೂವು ಹಣ್ಣು ಮಿಠಾಯಿಗಳನ್ನು ಇಟ್ಟು ಅವನಿಗೆ
ನಮಸ್ಕಾರಗಳನ್ನು ಮಾಡಿದರು. ಮರುದಿವಸ ಜನರು ಗುಂಪು ಗುಂಪಾಗಿ
ಬಂದು ಅವನಿಗೆ ರೊಕ್ಕವನ್ನೂ ಬೇಕಬೇಕಾದ ಸಾಮಾನುಗಳನ್ನೂ ತಂದು
ಕೊಟ್ಟರು. ಅಗ ವಿಸನಗಾರನು-- ನಾನು ವೇಷಧಾರಿ ಸಾಧುವು ಇದ್ದರೂ
ನನಗೆ ಜನರು ಇಷ್ಟು ಹೆಚ್ಚಾಗಿ ಕಾಣಿಕೆಗಳನ್ನು ತಂದು ಕೊಡುತ್ತಾರೆ.
ಆದರೆ ನಾನು ನಿಜವಾದ ಸಾಧುವು ಆದಲ್ಲಿ ನನಗೆ ಇನ್ನೂ ಎಷ್ಟು ಹೆಚ್ಚು
ಸಿಗಬಹುದು! ಇದಲ್ಲದೆ ಅದರಿಂದ ನನಗೆ ನಿಸ್ಸಂಶಯವಾಗಿ ದೇವರ ದರ್ಶ
ನವು ಆಗಬಹುದು? ಎಂದು ತಿಳಿದುಕೊಂಡು ಸನ್ಮಾರ್ಗದಿಂದ ನಡೆಯಲಿಕೈ
ಹತ್ತಿದನು.
ತಾತ್ಸರ್ಯ.
ಮನುಷ್ಯನಿಗೆ ದುರ್ಬುದ್ಧಿಯು ಹೋಗಿ ಸದ್ದುದ್ಧಿಯು ಬರಬೇಕಾದರೆ
ಏನಾದರೂ ಒಂದು ಕಾರಣವು ಸಂಭವಿಸಬೇಕಾಗುತ್ತದೆ. ಯೋಗವು ಬಂದ
೨_. ಲ್ರಾ
ಕೂಡಲೆ ಸದ್ಗುರುಗಳು ಯಾವದಾದರೂ ರೂಪದಿಂದ ಬಂದು ಸದ್ಬುದ್ಧಿ ಯನ್ನು
ಉಪದೇಶಿಸುವರು.
೬೦. ಅಪಾತ್ರ ದಾನವು.
ಒಂದಾನೊಂದು ದಿವಸ ಒಬ್ಬ ಕಟಕನು ಒಂದು ಆಕಳವನ್ನು ದೂರದ
ಲ್ಲಿರುವ ಒಂದು ಸ್ಥಳಕ್ಕೆ ಕೊಯ್ಯುವದಕ್ಕಾಗಿ ಒಯ್ಯುತ್ತಿದ್ದ ನು. ಅಗ ಆ ಮನು
ಷ್ಯನು ದಾರಿಯಲ್ಲಿ ಆ ಆಕಳಿಗೆ ಹೊಡದು ಬಡದು ಮಾಡಿದ ಕಾರಣ ಅದು ದಾರಿ
ಯಲ್ಲಿ ಬಹಳ ಗೊಂದಲವನ್ನು ಮಾಡಳಿಕ್ಕೆ ಹತ್ತಿತು. ಇದರಿಂದ ಅವನಿಗೆ ಅದ
ನ್ನು ತನ್ನ ಸಂಗಡ ಒಯ್ಯಲಿಕ್ಕೆ ಬಹಳ ಕಷ್ಟವಾಯಿತು. ಆದುದರಿಂದ ಅವನು
ಕೆಲವು ತಾಸು ನಡೆದ ಮೇಲೆ ಮಧ್ಯಾಹ್ನದಲ್ಲಿ ಒಂದು ಹಳ್ಳಿಗೆ ಬಂದು ಮುಟ್ಟಿ
ದನು. ಅವನಿಗೆ ಹಸಿವೆ ನೀರಡಿಕೆಗಳು ಬಹಳ ಆಗಿ ಅವನು ದಣಿದದ್ದರಿಂದ
ಸಮಾಪದಲ್ಲಿದ್ದ ಒಂದು ಅನ್ನಛತ್ರಕ್ಕೆ ಹೋಗಿ ತನ್ನ ಊಟವನ್ನು ತೀರಿಸಿ
ಕೊಂಡನು. ಈ ಮೇರೆಗೆ ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಅವನು ಆ
ಆಕಳವನ್ನು ತನ್ನ ಊರಿಗೆ ಸುಲಭವಾಗಿ ಒಯ್ದನು. ಅದರೆ ಆ ಆಕಳವನ್ನು
ಕೊಂದ ಪಾಪವು ಅನ್ನಛತ್ರದ ಒಡೆಯನಿಗೆ ಸಹ ತಟ್ಟಿತು.
ತಾತ್ಸರ್ಯ.
ಸತ್ಪಾತ್ರರಿಗೆ ದಾನಧರ್ಮ ಮಾಡಬೇಕಲ್ಲದೆ ಪಾಪಿಸ್ಮರಿಗೂ ದುರ್ವ್ಯಸ
ನಿಗಳಿಗೂ ಎಂದೂ ಮಾಡಬಾರದು.
೬೧. ಜ್ಞಾನನೆಂಬ ನಿದ್ಯುಲ್ಲತೆಯ ಬೆಳಕು.
ಬರೇ ದುಡ್ಡು ಇದ್ದವರು ಶ್ರೀಮಂತರೆನಿಸುವದಿಲ್ಲ ಯಾರ ಮನೆಯ
ಪ್ರತಿಯೊಂದು ಕೋಣೆಯಲ್ಲಿ ದೀಪವು ಉರಿಯುತ್ತಿರುವದೋ ಅಂಥವರು
ಶ್ರೀಮಂತರು. ಬಡವರಿಗೆ ಇಷ್ಟೊಂದು ಎಣ್ಣೆಯನ್ನು ವೆಚ್ಚ ಮಾಡುವದು
೨. ಅಆ೫
ಆಗುವದಿಲ್ಲ. ಆದುದರಿಂದ ಅವರಿಗೆ ಇಷ್ಟು ದೀಪಗಳನ್ನು ಇಡಲಿಕ್ಕೆ ಆಗುವ
ದಿಲ್ಲವೆಂಬುವದು ಸಹಜವು. ಇದೇ ಮೇರೆಗೆ ಈ ದೇಹವೆಂಬ ಗುಡಿಯನ್ನು
ಕತ್ತ ಲು ಮಾಡಿಗೊಡದೆ ಅದರಲ್ಲಿ ಜ್ಞಾನವೆಂಬ ದೀಪ ವನ್ನು ಹಚ್ಚಿ ಬೆಳಕು
ಮಾಡಬೇಕು. ಮನುಷ್ಯರು ತಮ್ಮ ಕೋಣೆಯಲ್ಲಿ ಜ್ಞಾ ನದ ತೆ ಹಚ್ಚಿ
ಲ ಜಗನ್ಮಾತೆಯ ಮೋರೆಯ ಕಡೆಗೆ ನೋಡಿದರೆ ಪ್ರತಿಯೊಬ್ಬರಿಗೂ ಜ್ಞಾ ನವು
ಪ್ರಾಪ್ತಿಯಾಗಿ ಆತ್ಮಭೇದ ಮಾಡಿದವನ ಮತ್ತು ಆತ್ಮೆ ಪಕ್ತುನಾದವನ ಅಂತರ
ವ್ರ ನಿಜವಾಗಿ ತಿಳಿದುಬರುವದು. ಪ್ರತಿಯೊಬ್ಬರಿಗೆ ತಮ್ಮ ಮನೆಯಲ್ಲಿ ವಿದ್ಯುಲ್ಲ
ತೆಯ ದೀಪವನ್ನು ತೆಗೆದುಕೊಳ್ಳು ವದು ಸಾಧ್ಯವಿರುತ್ತದೆ. ವಿದ್ಯುಲ್ಲತೆಯ ಸಂಘ
ದವರು ಪ್ರತಿಯೊಂದು ಮನೆಗೆ ವಿದ್ಯುಲ್ಲತೆಯನ್ನು ಪೂರೈಸುತ್ಮಾರೆ. ಆದರೆ
ನಾವು ಯೋಗ್ಯ ಅಧಿಕಾರಿಗಳಿಗೆ ಬರೆದುಕೊಂಡರೆ ಅವರು ಅದನ್ನು ಪೂರೈಸುವ
ವ್ಯವಸ್ಥೆಯನ್ನು ಮಾಡುವರು. ಆ ಮೇಲೆ ನಮ್ಮ ಕೋಣೆಯಲ್ಲಿ ವಿದ್ಯುಲ್ಲತೆಯ
ದೀಪದ ಪ ಪ್ರಕಾಶವು ಸಹಜವೇ ಬೀಳುವದು.
ತಾತ್ಸ ರ್ಯ.
ನಾವು ವಿದ್ಯುಲ್ಲತೆಯ ಸಂಘದ ಅಧಿಕಾರಿಗಳಿಗೆ ಬರೆದ ಕೂಡಲೆ ಅವ
ರು ನಮ್ಮ ಮನೆಗೆ ವಿದ್ಯುಲ್ಲತೆಯನ್ನು ಪೂರೈಸಿ ಪ್ರಕಾಶವನ್ನು ಮಾಡುವಂತೆ
ಸದ್ದುರುಗಳಿಗೆ ಮೊರೆ ಹೋದರೆ ಅವರು ದಿವ್ಯ ಉಪದೇಶವೆಂಬ ವಿದ್ಯುಲ್ಲತೆ
ಯಂದ ನಮ್ಮ ಆತ್ಮದಲ್ಲಿ ಜ್ಞಾನವೆಂಬ ಪ್ರಕಾಶವನ್ನು ಂಟು ಮಾಡುತ್ತಾರೆ.
೬೨. ಆತ್ಮದ ಅಂತಿಮ ಥ್ಯೇಯವು.
ಒಬ್ಬ ಗೃಹಸ್ಯನಿಗೆ ಅವನ ಊರಿಂದ ಅವನ ಆಪ್ತರಿಗಾಗಿ ಕೆಲವು ಸಾ
ಮಾನುಗಳನ್ನು ಕಳುಹಿಸಲಿಕ್ಕೆ ಒಂದು ಪತ್ರವು ಬಂದಿತ್ತು. ಅದರಂತೆ ೪ ಸಾ
ಮಾನುಗಳನ್ನು ಕೊಂಡುಕೊಳ್ಳಲಿಕ್ಕೆ ಅವನು ಪೇಟಿಯೊಳಗೆ ಹೋಗಶಕ್ಕವನಿ
ದ್ದನು ಆದರೆ ಅವನು ಪೇಟಿಗೆ ಹೊರಡುವ ಸಮಯದಲ್ಲಿ ಅವನಿಗೆ ಆ ಪತ್ರ
ವ್ರ ಸಿಗಲಿಲ್ಲ. ಅದು ಎಲ್ಲಿಯೋ ಬಿದ್ದು ಹೋಗಿತ್ತು. ಅವನು ಅದನ್ನು ಬಹ
— ಛಲ. 2...
ಳೊತ್ತಿನ ತನಕ ಹುಡುಕಿದನು. ಅವನ ಕಡೆಯ ಜನರೂ ಅವನಂತೆ ಅದನ್ನು
ಹುಡುಕಿದರು. ಕಡೆಗೆ ಅದು ಸಿಕ್ಕಿತು. ಆಗ ಅವನು ಅದನ್ನು ಕೈಯಲ್ಲಿ ತೆಗೆದು
ಕೊಂಡು ಉತ್ಕೃಂಶತೆಯಿಂದ ಓದಿದನು. ಅದರೊಳಗೆ «ಐದು ಸೇರು ಮಿಠಾಯಿ,
೧೦೦ ಕಿತ್ತಳೆ ಹಣ್ಣು ಮತ್ತು ಎಂಟು ಅರಿವೆಯ ತುಂಡುಗಳನ್ನು ಕಳಿಸು” ಎಂದು
ಬರೆದಿತ್ತು. ಆ ಪತ್ರದಲ್ಲಿ ಬರೆದದ್ದು ಏನೇನು ಎಂಬುವದು ಅವನಿಗೆ ಚನ್ನಾಗಿ
ತಿಳಿದ ನಂತರ ಅವನು ಅದನ್ನು ಚಲ್ಲಿಕೊಟ್ಟನು. ಇಂಥ ಪತ್ರವನ್ನು ಒಬ್ಬನು
ಎಷ್ಟು ಹೊತ್ತಿನ ತನಕ ಓದುತ್ತಾನೆ? ಅದರೊಳಗೆ ಬರೆದದ್ದು ತನಗೆ ಚನ್ನಾಗಿ
ತಿಳಿಯುವ ತನಕ ಓದುತ್ತಾನೆ. ಆ ಮೇಲೆ ಅವನು ಅದರಲ್ಲಿ ಬರೆದ ಪ್ರಕಾರ
ಸಾಮಾನುಗಳನ್ನು ಕೊಂಡು ತರುವ ಉದ್ಯೋಗಕ್ಕೆ ಹತ್ತು ತ್ತಾನೆ.
ತಾತ್ಸರ್ಯ.
ಧರ್ಮಗ್ರಂಥಗಳನ್ನು ಓದಿ ಪರಮೇಶ್ವರನ ಮಾರ್ಗವನ್ನು ಒಮ್ಮೆ ತಿಳಿ
ದುಕೊಂಡ ಮನುಷ್ಯನು ಏಕಾಂತದಲ್ಲಿ ಆತನ ಧ್ಯಾನ ಮಾಡಿ, ಅತನಿಗೆ ಭಕ್ತಿ
ಯನ್ನರ್ಪಿಸಿ, ಆತನನ್ನು ಪ್ರಸನ್ನ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡುವನು.
ಸುಮ್ಮನೆ ಧರ್ಮಗ್ರಂಥಗಳನ್ನು ತಿರುತಿರುಗಿ ಓದುವದರಿಂದ ಪ್ರಯೋಜನವಿಲ್ಲ.
ಅವುಗಳಲ್ಲಿ ಹೇಳಿದ್ದನ್ನು ನೆನಪು ಇಬ್ಬ ಕೊಂಡು ಅದರಂತೆ ಆಚರಿಸಬೇಕು.
ಅಂದರೆ ಅವುಗಳನ್ನು ಓದಿಕೊಂಡದ್ದು ಸಫಲವಾದಂತಾಗುವದು. ಬೋಧವಿ
ಲ್ಲದ ಓದು ನೀರೊಳಗೆ ಹೋಮ ಮಾಡಿದಂತೆ ನಿರುಪಯೋಗವಾಗುವದು.
೬4. ಅತ್ಯಾಶೆಯು ಗತಿಗೆಡಿಸಿತು.
ಒಬ್ಬ ನಾವಲಿಗನು ಯಕ್ಷನಿರುವಂಥ ಒಂದು ಗಿಡದ ಬಳಿಯಿಂದ ಹಾದು
ಹೋಗುತ್ತಿದ್ದನು. ಅಗ ಅವನಿಗೆ-« ನಿನಗೆ ಹೊನ್ನು ತುಂಬಿದ ಏಳು ಕೊಡ
ಗಳು ಬೇಕೋ?” ಎಂದು ಯಾರೋ ಅವನಿಗೆ ಪ್ರಶ್ನೆ ಕೇಳಿದಂತೆ ಕೇಳ
ಬಂತು. ಅಗ ಅವನು ಆಶ್ಚರ್ಯದಿಂದ ತನ್ನ ಸುತ್ತಲು ನೋಡಲಾಗಿ ಅಲ್ಲಿ
ಯಾರೂ ಕಾಣಿಸಲಿಲ್ಲ. ಅದರೂ ಆ ನಾವಲಿಗನು ದ್ರವ್ಯದ ಅಶೆಯಿಂದ ಗಟ್ಟಿ
ಲಷ
ಮನಸ್ಸು ಮಾಡಿ-“ ಹೌದು. ನನಗೆ ಅವು ಬೇಕು” ಎಂದು ಉತ್ತರ ಕೊಟ್ಟ
ನು. ಆ ಕೂಡಲೆ-« ಅವುಗಳನ್ನು ನಿನ್ನ ಮನೆಯಲ್ಲಿ ಒಯ್ದು ಇಟ್ಟಿ ರುವೆನು.
ನೀನು ಮನೆಗೆ ಹೋಗಿ PUR ೫ ಎಂದು ಅವನಿಗೆ ಪ ್ರತ್ಯುತ್ತ ರವು ಕೇಳಿ
ಸಿತು. ಆ ಬಳಿಕ ಆ ನಾವಲಿಗನು ತನ್ನ ಮನೆಗೆ ಹೋಗಿ ನೋಡಲಾಗಿ ಆರು
ಕೊಡಗಳು ಬಂಗಾರದಿಂದ ಪೂರ್ಣವಾಗಿ ತುಂಬಿದ್ದು ಏಳನೇ ಕೊಡವು ಮಾತ್ರ
ಅರ್ಧ ತುಂಬಿತ್ತು. ಆಗ ಅವನು ಆ ಏಳನೇ ಕೊಡವನ್ನು ಸಹ ತುಂಬಬೇಕೆಂ
ದು ನಿಶ್ಚಯ ಮಾಡಿ ತನ್ನ ಮನೆಯೊಳಗಿನ ಯಾವತ್ತು ವಸ್ತು ಒಡಿವೆಗಳನ್ನು
ಮಾರಾಟಿ ಮಾಡಿ ಅದರಿಂದ ಬಂದ ಬಂಗಾರದ ನಾಣ್ಯಗಳನ್ನು ಆ ಕೊಡದಲ್ಲಿ
ಹಾಕಿದನು. ಆದರೂ ಅದು ತುಂಬಲಿಲ್ಲ. ಅಗ ಆ ನಾವಲಿಗನು ಸಿಟ್ಟಿಗೆದ್ದು
ತನ್ನ ಹೆಂಡರು ಮಕ್ಕಳನ್ನು ಉಪವಾಸಕೆಡವಿ, ತಾನೂ ಉಪವಾಸ ಬಿದ್ದು,
ತನ್ನ ಪ್ರಪಂಚಕ್ಕೆ ಇಟ್ಟುಕೊಂಡಿದ್ದ ಸಾಮಾನುಗಳನ್ನು ಮಾರಾಟೆ ಮಾಡಿ
ಅದರಿಂದ ಬಂದ ಬಂಗಾರದ ನಾಣ್ಯುಗಳನ್ನು ಸಹ ಆ ಕೊಡದಲ್ಲಿ ತುಂಬಿದನು,
ಆದರೂ ಆ ಏಳನೇ ಕೊಡವು ತುಂಬಲಿಲ್ಲ. ಆ ನಾವಲಿಗನು ದಿನಾಲು ಅರಸನ
ಪ್ರೌರಮಾಡಲಿಕ್ಕೆ ಹೋಗುತ್ತಿದ್ದನು. ಅವನು ತನ್ನ ನಿತ್ಯ ಸಾಂಪ್ರದಾಯದಂತೆ
ಆರಸನ ಹೌರ ಮಾಡಲಿಕ್ಕೆ ಹೋದಾಗ ಅರಸನಿಗೆ ಮ ನೀವು
ಈಗ ನನಗೆ ಕೊಡುವ NE ಸಾಕಾಗುವದಿಲ್ಲ. ಆದುದರಿಂದ ಅದನ್ನು ಹೆಚ್ಚಿ
ಸಬೇಕು ಎಂದು ದೈನ್ಯಭಾವದಿಂದ ಬೇಡಿಕೊಂಡನು. ಅರಸನು ಅವನ ದೈನ್ಯ
ಭಾವವನ್ನು ನೋಡಿ ಅವನ ಸಂಬಳವನ್ನು ಇಮ್ಮಡಿ ಮಾಡಿದನು. ಆ ನಾವಲಿಗ
ನು ತನ್ನಸಂಬಳದ ಹಣವನ್ನೂ ಇತರ ಪ್ರಾಪ್ತಿಯ ಹಣವನ್ನೂ ತನ್ನಮತ್ತುತನ್ನ
ಕುಟುಂಬದವರ ಹೊಟ್ಟೆಯನ್ನು ಸಹ ಕಟ್ಟಿ ಕೊಂಡು ಆ ಕೊಡದಲ್ಲಿ ಹಾಕಹತ್ತಿ
ದನು. ಆದರೂ ಆ ಕೊಡವು ತುಂಬಲಿಲ್ಲ. ಆಗ ಅವನು ಊರಲ್ಲಿ ಭಿಕ್ಷೆಯನ್ನು
ಬೇಡಿ ಅದರಿಂದ ಬಂದ ಹಣವನ್ನು ಅದರಲ್ಲಿ ಹಾಕಹತ್ತಿ ದನು. ಆದರೂ ಆ
ಸರ್ವಭಕ್ಷಕ ಕೊಡವು ತುಂಬಲಿಲ್ಲ. ಬರಬರುತ್ತ ಆ ನಾವಲಿಗನ ಸ್ಥಿತಿಯು
ಬಹಳೇ ಹೀನವಾಯಿತು. ಅರಸನು ಈ ಅವನ ದುರ್ದಶಿಯನ್ನು ಕಂಡು ಒಂದು
ದಿವಸ ಅವನಿಗೆ..." ಈ ಮೊದಲು ನಿನಗೆ ನಾನು ಕೊಡುತ್ತಿ ದ್ಧ ಸಣ್ಣ ಸಂಬಳ
ದಿಂದ ನೀನು ಸುಖಿಯಾಗಿದ್ದಿ. ಈಗ ನಾನು ನಿನ್ನ ಸಂಬಳವನ್ನು ಇಮ್ಮಡಿ ಮಾಡಿ
ಎ. ಲಲ ಎ.
ದಾಗ್ಯೂ ನೀನು ಇನ್ನೂ ಮಿಡುಕುವದು ತಪ್ಪಲೊಲ್ಲದು. ನಿನಗೆ ಯಕ್ಷನಿಂ
ಏಳು ಹೊನ್ನಿನ ಕೊಡಗಳು ಸಿಕ್ಕಿರುತ್ತ ವೋ?” ಎಂದು ಕೇಳಿದನು. ಆಗ
ನಾವಲಿಗನು ಆಶ್ಚರ್ಯಪಟ್ಟು." ನಿಮಗೆ ಈ ವರ್ತಮಾನವನ್ನು ಯಾರು ಹೇ
ದರು?” ಎಂದು ಕೇಳಿದನು. ಅದಕ್ಕೆ ಅರಸನು-* ಯಕ್ಷನಿಂದ ಏಳು ಕೊಡ
ಳನ್ನು ಪಡೆದವನ ಅವಸ್ಥೆಯು ಹೀಗೆ ಆಗುವದು ಸಾ ಶ್ರಭಾವಿಕವಿರುತ್ತದೆ. ೦
ಶ್ಷನು ನನಗಾದರೂ ಏಳು ಹೊನ್ನಿನ ಕೊಡಗಳನ್ನು ತೆಗೆದುಕೋ ಎಂ
ಬಿನ್ನವಿಸಿದನು. ಆದರೆ ನಾನು ಆ ಹಣವನ್ನು ನನ್ನ ಮನಸ್ಸಿಗೆ ಬಂದ
ವೆಚ್ಚ ಮಾಡುವೆನು; ಇದಕ್ಕೆ ನಿನ್ನ ಒಪ್ಪಿಗೆ ಇದ್ದರೆ ಕೊಡೆಂದು ಕೇಳಲು
ವನು ಸುಮ್ಮನೆ ಹೊರಟು ಹೋದನು. ಯಕ್ಷನ ಕೊಡಗಳನ್ನು ಇಟ್ಟುಕೊ
ಡವರಿಗೆ ದ್ರಮ್ಯವನ್ನು ಹೆಚ್ಚಿಗೆ ಸಂಗ್ರಹ ಮಾಡುವ ಇಚ್ಛೆಯು ಮಾತ್ರ ಜೆ
ಯುವದಲ್ಲದೆ ಆದನ್ನು ವೆಚ್ಚ ಮಾಡುವ ಅಪೇಕ್ಷೆಯು ಆಗುವದಿಲ್ಲ, ಆದು
ರಿಂದ ಆ ಕೊಡಗಳನ್ನು ಯಕ್ರನಿಗೆ ತಿರುಗಿ ಮುಚ್ಚಿಸಿ ಬಾ” ಎಂದು ಉಪದೇ
ಮಾಡಿದನು. ಆಗ ಆ ನಾವಲಿಗನು ತನ್ನ ಕೊಡಗಳನ್ನೆಲ್ಲ ತೆಗೆದುಕೊಂಡು ೦
ಕ್ಷನು ಇದ್ದ ಗಿಡದ ಬಳಿಗೆ ಹೋಗಿ-« ನಿನ್ನ ಒಂಗಾರದ ಕೊಡಗಳನ್ನು ನೀ;
ತಿರುಗಿ ತೆಗೆದುಕೊಳ ಬೇಕು? ಎಂದು ಹೇಳಿ ಕೊಟ್ಟು ಬಂದನು. ಆಗಿನಿಂ
ಅವನ ಅತ್ಯಾತೆಯು ಹೊರಟು ಹೋಗಿ ಮುಂಚಿನಂತೆ ಸಮಾಧಾನದಿಂದ ಇ
ಲಿಕ್ಕೆ ಹತ್ತಿದನು.
ತಾತ್ಸರ್ಯ.
ಅಶ್ಯಾಶೆಯನ್ನು ಎಂದೂ ಮಾಡಬಾರದು. ಅತ್ಯಾಶೆಯು ಯಾವಾಗ
ಗತಿಗೆಡಿಸುವದು, ಮನುಷ್ಯನು ಒಮ್ಮೆ ದ್ರವ್ಯಲೋಭದಲ್ಲಿ ಸಿಲ್ಕಿ ಕೊಂಡರೆ ಅ:
ನಿಗೆ ಎಷ್ಟು ಗಳಿಸಿದರೂ ತೃಪ್ತಿಯೇ ಆಗುವದಿಲ್ಲ. ದ್ರವ್ಯಕ್ಕೆ ಯಾವಾಗಲ
ಬಹಳ ಗಂಡಾಂತರಗಳಿರುತ್ತವೆ. ದ್ರಮ್ಯವಿರುವವರಿಗೆ ತಮ್ಮಲ್ಲಿರುವದನ್ನು ಕ
ರು ಕದ್ದೊ ಯ್ಹಾರೆಂದು ಯಾವಾಗಲು ಚಿಂತೆ ಮಾಡುತ್ತ ಕೂಡ್ರಬೇಕಾಗುತ
ದೆ. ಹಣವನ್ನು ಗಳಿಸುವದೂ ಕಷ್ಟ. ಅದನ್ನು ಕಾಪಾಡುವದೂ ಕಷ್ಟ. ಅದ:
ನಿಜವಾದ ಉಪಯೋಗವನ್ನು ಮಾಡಬಲ್ಲವರು ಮಾತ್ರ ಸುಖಿಗಳು. ಹಣಃ
ರುವ ಯಾವತ್ತರು ಸುಖಿಗಳೆಂದು ತಿಳಿಯಲಾಗದು. ಎಷ್ಟೋ ಬಡಜನರು ತ
ಎ... ೨
ವ್ರ ದುಡಿದು ತಂದ ಅಲ್ಪ ಹಣದಿಂದ ಬಾಳುವೆ ಮಾಡಿ ಸುಖಪಡುತ್ತಾರೆ. ಆದರೆ
ಎಷ್ಟೋ ಶ್ರೀಮಂತರು ತಮ್ಮ ಹಣವನ್ನು ಹೇಗೆ ಹೆಚ್ಚು ಕೂಡಿಸಬೇಕು ಮತ್ತು
ಹೇಗೆ ಕಾಪಾಡಬೇಕು ಎಂಬ ಚಿಂತೆಯಲ್ಲಿ ನಿಮಗ್ಗರಾಗಿರುತ್ತಾರೆ. ಹಣದ
ಯೋಗ್ಯ ಉಪಯೋಗವನ್ನು ಮಾಡದಂಥ ಕೃಪಣ ಶ್ರೀಮಂತರಾಗುವದಕ್ಕಿಂಶ
ಪರೋಪಕಾರ ಮಾಡುವ ಬಡವರಾಗಿರುವದು ಸಾವಿರ ಪಾಲು ನೆಟ್ಟಗೆ.
ನಿಃಸ್ವಾರ್ಥ ಪ್ರೇಮವು.
ಒಬ್ಬಾನೊಬ್ಬ ಬ್ರಾಹ್ಮಣನು ಒಬ್ಬ ಸನ್ಯಾಸಿಯ ಬಳಿಗೆ ಧರ್ಮಸಂಬಂಧ
ವಾಗಿ ಉಪದೇಶವನ್ನು ಕೇಳಲಿಕ್ಕೆ ಹೋದಾಗ ಅ ಸನ್ಯಾಸಿಯು ಅವನಿಗೆ. ಈ
ಜಗತ್ತಿನಲ್ಲಿ ನಿಸ್ವಾರ್ಥ ಪ್ರೇಮವು ಎಲ್ಲಿಯೂ ಇಲ್ಲ” ಎಂದು ಹೇಳಿದನು. ಅದನ್ನು
ಆ ಬ್ರಾಹ್ಮಣನು ಒಡಂಬಡಲಿಲ್ಲ. ಅಗ ಆ ಸನ್ಯಾಸಿಯು ಅವನಿಗೆ ಈ ಮಾತಿನ
ಸತ್ಯತೆಯನ್ನು ಅನುಭವಕ್ಕೆ ತಂದುಕೊಡುವದಕ್ಕಾಗಿ- ನೀನು ನಿನ್ನ ಮನೆಗೆ
ಹೋದ ಬಳಿಕ ಕೆಲವು ಹೊತ್ತು ನಿನ್ನ ಕೈಕಾಲು ಸೆಟಸಿ ಸತ್ತಂತೆ ಬಿದ್ದುಕೋ.
ಆಮೇಲೆ ನಾನು ಅನ್ಲಿಗೆ ಬಂದು ಒಂದು ಚಮತ್ಕಾರವನ್ನು ಮಾಡುವೆನು” ಎಂದು
ಹೇಳಿದನು. ಅದರಂತೆ ಆ ಬ್ರಾಹ್ಮಣನು ಮಾಡಿದನು. ಆಗ ಸ್ವಲ್ಪ ಹೊತ್ತಿನಲ್ಲಿ
ಯೇ ಆ ಸನ್ಯಾಸಿಯು ಅಲ್ಲಿಗೆ ಹೋಗಿ ಅವನ ಹೆಂಡತಿಗೆ" ನೀನು ಈ ಹೆಣ
ವನ್ನು ಕೋಣೆಯ ಹೊರಗೆ ಹೇಗೆ ಒಯ್ಯುತ್ತಿ €? ಈ ಕೋಣೆಯ ಬಾಗಿಲವು
ಸಣ್ಣ ದಿದ್ದು ಹೆಣವು ಬಹಳ ಗಡುತರವಿರುತ್ತ ದೆ. ಆದುದರಿಂದ ನಿನಗೆ ಈ ಬಾಗಿ
ಲವನ್ನು ಕೊರಿಸಿ ಗೋಡೆಯನ್ನು ಸೆಡವಿಸಬೇಕಾಗುವದು. ಇಲ್ಲವೆ ನಿನ್ನ ಗಂ
ಡನ ಕೈಕಾಲು ಕಡಿದು ಈ ಹೆಣವನ್ನು ಸ್ವಲ್ಪ ಸಣ್ಣದು ಮಾಡಬೇಕಾಗುವದು.
ಇವೆರಡರಲ್ಲಿ ಒಂದು ಮಾಡಿದ ಹೊರತು ಈ ಹೆಣವನ್ನು ಕೋಣೆಯಿಂದ ಹೊ
ರಗೆ ಒಯ್ಯುವದು ಅಸಾಧ್ಯವದೆ * ಎಂದು ಹೇಳಿದನು. ಇದನ್ನು ಕೇಳಿ ಅವಳು
ಬಹಳ ಅತ್ತು-« ಅಯ್ಯೋ! ಈ ನನ್ನ ಹಣೇಬರಹದ ಮೂಲಕ ನಾನು
ಆಜನ್ಮ ಬಡ ವಿಧವೆಯಾಗಿ ಇರಬೇಕಾಯಿತು. ನನ್ನ ಹೊಟ್ಟಿಗೆ ಏನೂ ಸಾಧ
ನವು ಇಲ್ಲ. ಹೀಗಿದ್ದು ಈ ಬಾಗಿಲವನ್ನು ಸೊರಿಸಿ ಗೋಡೆಯನ್ನು ಕೆಡವಿಸಿದರೆ
12
ಧರಿ
ಇದನ್ನು ಹೊಸದಾಗಿ ಮಾಡಿಸಲಿಕ್ಕೆ ನಾನು ಎಲ್ಲಂದ ದುಡ್ಡು ತರಲಿ?
ರಿಂದ ಎರಡನೇ ಹಂಚಿಕೆಯೇ ನನಗೆ ನೆಬ್ಬಗೆ ಕಾಣುತ್ತದೆ” ಎಂದು
ಕೊಬ್ಬಳು.
ಅದನ್ನು ಕೇಳಿದ ಕೂಡಲೆ ಸುಳ್ಳೇ ಸತ್ತಂತೆ ಬಿದ್ದುಕೊಂಡಿದ್ದ
ಣನು ಸಿಟ್ಟನಿಂದಲೂ ತಿರಸ್ಕಾರದಿಂದಲೂ ಮೇಲಕ್ಕೆ ಎದ್ದು-" ಎಲೇ
ಳಾದ ಮಾಟಗಾರತಿಯೇ, ನೀನು ಇಷ್ಟು ದಿವಸ ನನ್ನನ್ನು ಇದೇ ಕಪ!
ಯಿಂದ ಪ್ರೀತಿ ಮೂಡಿದೆಯಾ? ನೀನು ಮೇಲಿಂದ ಮೇಲೆ ನನ್ನನ್ನು ನಿನ್ನ
ದಕಿಂತಲು ಹೆಚ್ಚು ಪ್ರೀತಿ ಮಾಡುತ್ತೆ €ನೆಂದು ಹೇಳುತ್ತಿದ್ದೆ. ಆದರೆ
ಪ್ರೀತಿಯು ಎಲ್ಲಿ ಓಡಿಹೋಯಿತು? ನೀನು ಇಷ್ಟು ದಿವಸ ನನ್ನನ್ನು ವಂ
ನಿನ್ನ ಮಾಟವು ಇನ್ನು ಮೇಲೆ ಮುಗಿಯಿತೆಂದು ತಿಳಿದುಕೋ” ಎಂರಿ
ಡಿದು ಸಂಸಾರದಲ್ಲಿಯ ಆಸಕ್ತಿಯನ್ನು ಕಡಿಮೆ ಮಾಡಿ ತನ್ನ ಆಯುಷ್ಯ
ಪರಮೇಶ್ವರನ ಧ್ಯಾನದಲ್ಲಿಯೂ, ಭಕ್ತಿಯಲ್ಲಿಯೂ ಕಳೆದನು.
ತಾತ್ಪರ್ಯ.
ಜಗತ್ತಿ ನಲ್ಲಿ ಎಲ್ಲರು ಸ್ವಾರ್ಥಕ್ಕಾಗಿಯೇ ಪ್ರೇಮ ಮಾಡುತ್ತಾರೆ.
ತಾಯಿ ಹೆಂಡತಿ ಮಕ್ಕಳು ಇವರೆಲ್ಲರು ತಮಗೆ ನಾವು ಒಂದಿಲ್ಲೊಂದ
ಯಿಂದ ಉಪಯೋಗಕ್ಕೆ ಬೀಳುತ್ತೇವೆಂದು ತಿಳಿದು ನಮ್ಮ ಮೇಲೆ
ಮಾಡುತ್ತಾರೆ. ನಾವು ಸತ್ತು ಹೋದ ನಂತರ ಅವರು ನಮ್ಮ ಬಗ್ಗೆ
ದಿವಸ ಹೆಚ್ಚುಕಡಿಮೆ ದುಃಖ ಮಾಡಿ ಹಿಂದುಗಡೆ ನಮ್ಮನ್ನು ಮರೆತುಬಿಡಿ
ಇದೇ ಜಗತ್ತಿನ ಮಾಯೆಯು, ಜಗತ್ತಿನಲ್ಲಿ ನಿಸ್ವಾರ್ಥ ಪ್ರೇಮವು
ಕಡಿಮೆ ಇರುವದು. ಅದುದರಿಂದ ನಾವು ಪ್ರಪಂಚದಲ್ಲಿದ್ದರೂ ಅದ
ಶೇಷ ಅಸಕ್ತಿಯನ್ನಿಡದೆ ಪರಮೇಶ್ವರನಲ್ಲಿ ಭಕ್ತಿ ವಿಶ್ವಾಸಗಳನ್ನು ಕಿ
ಯಬೇಕು. ಆತನೇ ನಮಗೆ ಅಂತಿಮ ಸೌಖ್ಯವನ್ನು ಕೊಡುವನು.
ಇ, ಧಿ ಷಾ
ಭಗವದ್ಗೀತೆಯ ಅರ್ಥವು.
ಒಬ್ಬ ವೇದಶಾಸ್ತ್ರವಿಶಾರದನಾದ ಪಂಡಿತನು ಭೆಗವದ್ಗೀತೆಯನ್ನು ಹೇ
ಳುವಾಗ ಅದನ್ನು ಸೇಳಲಿಕ್ಕೆ ಒಬ್ಬಾನೊಬ್ಬ ಅರಸನು ದಿನಾಲು ತಪ್ಪಿ
ಬಂದು ಕೂಡ್ರುತ್ತಿದ್ದನು. ಭಗವದ್ಗೀತೆಯನ್ನು ಓದುವದು ಮುಗಿದ ಬಳಿಕ
ಆ ಪಂಡಿತನು ಆ ಅರಸನಿಗೆ-« ರಾಜನೇ, ನಾನು ಇಷ್ಟೊತ್ತಿನ ತನಕ ನಿನ್ನ
ಮುಂದೆ ಓದಿದ್ದರ ಅರ್ಧವು ತಿಳಿಯಿತೋ?” ಎಂದು ಶೇಳುತ್ತಿದ್ದನು. ಅದಕ್ಕೆ
ಆ ಅರಸನು-« ಸ್ವಾಮಿಗಳೇ, ಇದರ ಅರ್ಥವನ್ನು ನೀವು ಮೊದಲಿಗೆ ತಿಳಿದು
ಕೊಳ್ಳಿರಿ” ಎಂದು ಉತ್ತರ ಕೊಡುತ್ತಿದ್ದನು. ಪಂಡಿತನು ಭಗವದ್ಗೀತೆಯನ್ನು
ಹೇಳುವದು ಮುಗಿಸಿ ತನ್ನ ಮನೆಗೆ ಹೋದ ಬಳಿಕ ದಿನಾಲು ಅರಸನು ತನಗೆ
«ನೀವು ಮೊದಲಿಗೆ ಭಗವದ್ಗೀತೆಯ ಅರ್ಥವನ್ನು ತಿಳಿದುಕೊಳ್ಳಿರೆಂದು ಏಕೆ
ಹೇಳುತ್ತಿ ರಬಹುದು?” ಎಂದು ವಿಚಾರ ಮಾಡಲಿಕ್ಕೆ ಹತ್ತಿದನು. ಅವನು
ವಿಚಾರಸಂಪನ್ನ ಬ್ರಾಹ್ಮ ್ಸಣನಿದ್ದು ಕಾರಣ ಕೆಲವು ನ ತರುವಾಯ ಅವ
ನಿಗೆ ಪರಮೇಶ್ವರನ ಬು ಮುಖ್ಯವಿರುತ್ತದೆಂದು ತಿಳಿದುಬಂತು. ಆಗಿ
ನಿಂದ ಅವನು ಈ ಜಗತ್ತಿನ ಮೋಹವನ್ನೂ ಸೌಖ್ಯಗಳನ್ನೂ ತೊರೆದು
4( ಪರಮೇಶ್ವರನಿಗೆ ಆತ್ಮಾರ್ಪಣ ಮಾಡುವದು ಭಗವದ್ಗೀತೆಯ ನಿಜವಾದ
ಅರ್ಥವೆಂದು ಈಗ ನನಗೆ ತಿಳಿಯಿತು” ಎಂದು ಅರಸನಿಗೆ ಹೇಳಿ ಕಳುಹಿಸಿದನು.
ತಾತ್ಸರ್ಯ.
ಜಾಣರು ಸೂಕ್ಷ್ಮವಾದ ರೀತಿಯಿಂದ ಎರಡನೇಯವರ ಸೂಚನೆಗಳನ್ನು
ತಿಳಿದುಕೊಂಡು ತಮ್ಮ ಸು ಸುಧಾರಣೆಯನ್ನು ಮಾಡಿಕೊಳ್ಳು ತ್ತಾರೆ. ಜಾಣನಿಗೆ
ಕಣ್ಣಿನ ಸನ್ನೆ, ಕೋಣನಿಗೆ ಒನಿಕೆಯ ಟೊಣ್ಣೆ ಎಂಬ ನಾಣ್ಣುಡಿಯು
ಪ್ರಸಿದ್ಧವಿರುತ್ತದೆ. ವಾ
೬೬. ಒಂದು ದುಡ್ಡಿನ ಬೆಲೆಯ ಜ್ಞಾನವು.
ಒಂದು ಊರಲ್ಲಿ ಇಬ್ಬರು ಅಣ್ಣ ತಮ್ಮಂದಿರು ಇರುತ್ತಿದ್ದರು. ಅವರಲ್ಲಿ
ಹಿರೆಯನು ಮನೆಯನ್ನು ಬಿಟ್ಟು ಹೋಗಿ ಸನ್ಯಾಸಿಯಾದನೆ. ಮುಂದೆ ಅವನು
ಎ. ೪3 ಎ.
ಹನ್ನೆರಡು ವರ್ಷಗಳ ತರುವಾಯ ಮನೆಗೆ ತಿರುಗಿ ಬರಲು ಅವನ ತಮ್ಮನು-
« ಆಣ್ಣಾ, ಇಷ್ಟು ದಿವಸ ನೀನು ಮನೆಯನ್ನು ಬಿಟ್ಟು ದೂರ ದೂರ ಅಡ್ಡಾಡಿ
ಏನು ಕಲಿತುಕೊಂಡು ಬಂದೆ?” ಎಂದು ಕೇಳಿದನು, ಅದಕ್ಕೆ ಅಣ್ಣನು- ತ
ಮ್ಕಾ, ನನ್ನ ಸಂಗಡ ಬಾ. ಅದನ್ನು ತೋರಿಸುತ್ತೇನೆ” ಎಂದು ಹೇಳಿ ಅವನನ್ನು
ಒಂದು ನದಿಗೆ ಕರೆದುಕೊಂಡು ಹೋಗಿ ಅಲ್ಲಿಯ ನೀರಿನ ಮೇಲಿಂದ ನಡೆದು
ಆಚೆಯ ದಂಡೆಗೆ ಹೋಗಿ ಮುಟ್ಟಿದನು. ತಮ್ಮನು ಹರಗೋಲು ನಡೆಸುವ ಅಂಬಿ
ಗರಿಗೆ ಒಂದು ದುಡ್ಡು ಕೊಟ್ಟು ಹರಗೋಲಿನಿಂದ ತಾನೂ ಆಚೆಯ ದಂಡೆಗೆ
ಹೋಗಿ ಮುಟ್ಟಿದನು. ಈ ಪ್ರಕಾರೆ ಇಬ್ಬರೂ ಒಂದೇ ವೇಳೆಗೆ ಆಚೆಯ ದಂ
ಡೆಗೆ ಹೋಗಿ ಮುಟ್ಟಿದ ತರುವಾಯ ತಮ್ಮನು ಅಣ್ಣನಿಗೆ- ಅಣ್ಣಾ, ಇಷ್ಟು ವ
ರ್ಷ ನೀನು ನಿನ್ನದೇಹವನ್ನು ಪರಿಪರಿಯಿಂದ ಕಷ್ಟ ಪಡಿಸಿ ಘೋರವಾದ ತಪಶ್ಚ
ರ್ಯವನ್ನು ಮಾಡಿ, ಒಂದು ದುಡ್ಡಿನ ಬೆಲೆಯ ಜ್ಞಾನವನ್ನು ಕಲಿತುಕೊಂಡು
ಬಂಡೆಯಾ?” ಎಂದು ಅವನಿಗೆ ನಗೆ ಮಾಡಿದನು.
ತಾತ್ಸರ್ಯ.
ಮಂತ್ರ, ತಂತ್ರ, ಸಿದ್ಧಿ ಇವುಗಳಿಂದ ಏನೂ ಉಪಯೋಗವಿಲ್ಲ. ಪರಮೇ
ಶ್ವರನ ಭಕ್ತಿಯನ್ನು ಮಾಡಿ, ಆತನ ಜ್ಞಾನವನ್ನು ಸಂಪಾದಿಸುವದೇ ಜಗತ್ತಿನಲ್ಲಿ
ಮುಖ್ಯವಾದದ್ದು.
೬೭. ಕಾಮಿನಿ ಕಾಂಚಾಣಗಳ ತ್ಯಾಗವು.
ಸನ್ಯಾಸಾಶ್ರಮಿಗಳು ಕಾಮಿನಿ ಕಾಂಚಾಣಗಳ ತ್ಯಾಗವನ್ನು ಮಾಡಬೇ
ಕೆಂದು ಕಠಿಣವಾದ ನಿರ್ಬಂಧವುಂಟು. ಸನ್ಯಾಸಿಗಳು ಸ್ತ್ರೀಯರ ಚಿತ್ರಗಳನ್ನು
ನೋಡಬಾರದು. ಉತ್ತಮ ಮಸಾಲಿ ಹಾಕಿದ ಉಪ್ಪಿನಕಾಯಿಗಳನ್ನು ತಿನ್ನ
ಬಾರದು ಮತ್ತು ಕಣ್ಣಿನಿಂದ ಸಹ ನೋಡಬಾರದು. ಇಷ್ಟೇ ಅಲ್ಲ, ಅವು
ಗಳ ವಿಚಾರವನ್ನು ಮನಸ್ಸಿನೊಳಗೆ ಏನೂ ತರಬಾರದು. ಒಂದು ವೇಳೆ ತಂದರೆ
ಬಾಯಲ್ಲಿ ನೀರು ಬಿಡುತ್ತವೆ. ಆದರೆ ಈ ಕಠಿಣ ನೇಮವು ಗೃಹಸ್ಥಾಶ್ರಮಿಗಳಿಗೆ
೨ ೯೩ ಎ
ಸಂಬಂಧಿಸಿರುವದಿಲ್ಲ. ಅದು ಕೇವಲ ಸನ್ಯಾಸಿಗಳಿಗೆ ಸಂಬಂಧಿಸಿರುತ್ತದೆ. ಗೃಹ
ಸ್ಕಾಶ್ರಮಿಗಳು ಸ್ತ್ರೀಯರೊಳಗೆ ಇದ್ದರೂ ಅವರು ತಮ್ಮ ಮನಸ್ಸನ್ನು ಸ್ತ್ರೀ
ಯರಲ್ಲಿ ತೊಡಸಗಿದೆ ಪರಮೇಶ್ವರನ ಭಕ್ತಿಯಲ್ಲಿ ತೊಡಗಿಸಿದರೆ ಸಾಕಾಗು
ವದು. ಗೃಹಸ್ಥಾಶ್ರಮಿಗಳು ತಮ್ಮ ಮನಸ್ಸು ಸ್ತ್ರೀಯರಲ್ಲಿ ತೊಡಗಿಕೊಳ್ಳದೆ
ಪರಮೇಶ್ವರನ ಭಕ್ತಿಯಲ್ಲಿ ತೊಡಗಬೇಕೆಂತಲೂ, ಗಂಡಸರನ್ನೂ ಹೆಂಗಸರ
ನ್ನೂ ಬಟ್ಟು ದೂರ ಇರುವಂಥ ಏಕಾಂತ ಸ್ಥಳದಲ್ಲಿ ಮೇಲಿಂದ ಮೇಲೆ ಹೋ
ಗಿ ಇರುವದು ಯೋಗ್ಯವು. ಯಾಕಂದರೆ ಅಂಥ ಸ್ಕ್ಯಳದಲ್ಲಿ ಅವರಿಗೆ ಸಂಸಾ
ರದ ವಿಚಾರವು ಬರಲಿಕ್ಕೆ ಏನೂ ಆಸ್ಪದವಾಗುವದಿಲ್ಲ. ಈ ಪ್ರಕಾರ ಗೃಹ
ಸ್ವಾಶ್ರಮಿಗಳು ಏಕಾಂತ ಸ್ಥಳದಲ್ಲಿ ಮೂರು ದಿವಸಗಳ ತನಕ, ಅಥವಾ ತಮ್ಮ
ಕಡೆಯಿಂದ ಮೂರು ದಿವಸ ಇರುವದು ಆಗದಿದ್ದರೆ ಕನಿಷ್ಠ ಒಂದು ದಿವಸದ
ತನಕ, ಹೋಗಿ ಇರುವದಾದಲ್ಲಿ ಅವರಿಂದ ಪರಮೇಶ್ವರನ ಭಕ್ತಿಯೂ ಆರಾ
ಧನೆಯೂ ಹೆಚ್ಚು ಘಟಸಿ ಅವರಿಗೆ ಪರಮೇಶ್ವರನ ನಿದಿಧ್ಯಾಸವು ಹತ್ತುವದು.
ಗೃಹಸ್ಥಾಶ್ರಮಿಗಳು ತಮಗೆ ಒಬ್ಬಿಬ್ಬರು ಮಕ್ಕಳು ಹುಟ್ಟಿದ ಬಳಿಕ ತಮ್ಮ
ಹೆಂಡಂದಿರನ್ನು ಅಕ್ಕತಂಗಿಯರೆಂದು ತಿಳಿದುಕೊಂಡು ಅವರ ಕೂಡ ನಡೆಯಬೇ
ಕು. ಹಾಗೂ ತಮ್ಮಿಬ್ಬರಿಗೂ ಪಾರಮಾರ್ಥಿಕ ಮಾರ್ಗದಿಂದ ಆಯುಷ್ಯಕ್ರ ಮಣ
ಮಾಡಲಿಕ್ಕೆ ಶಕ್ತಿಯನ್ನು ಕೊಡಬೇಕೆಂದು ಪರಮೇಶ್ವರನನ್ನು ನಿರಂತರವಾಗಿ
ಬೇಡಿಕೊಳ ಬೇಕು.
ತಾತ್ಪರ್ಯ.
ಸಾಧುಗಳೂ ಸನ್ಯಾಸಿಗಳೂ ಜಗತ್ತಿನ ಯಾವ ಮೋಹಕ್ಕೂ ಒಳಗಾಗ
ಬಾರದೆಂದು ಅವರಿಗೆ ಕಾಮಿನಿ ಕಾಂಚಾಣಗಳ ಬಗ್ಗೆ ಕಠಿಣ ನಿರ್ಬಂಧವು
ಮಾಡಲ್ಪಟ್ಟಿರುವದು. ಹಾಗೂ ಅವರ ಭೋಜನದ ಬಗ್ಗೆ ಸಹ ನಿರ್ಬಂಧವು
ಮಾಡಲ್ಪಟ್ಟ ರುವದು. ಅವರು ಒಂದೇ ಹೊತ್ತು ಭೋಜನ ಮಾಡಬೇಕೆಂತ
ಲೂ ಅವರು ಮೃಷ್ಟಾನ್ನ ಭೋಜನವನ್ನು ಮಾಡಬಾರದೆಂತಲೂ ನಿರ್ಬಂಧ
ವಿರುತ್ತದೆ. ಪಕ್ಚಾನ್ನಗಳಿಗೆ ಮೆಚ್ಚಿದ ಸಾಧುಗಳ ಮತ್ತು ಸನ್ಯಾಸಿಗಳ ಚಿತ್ತವು
ಪಲ್ಲಜವಾಗಿ ಸ್ತ್ರೀಯರ ಕಡೆಗೆ ಹೋಗುವದು ಸ್ವಾಭಾನಿಕವಿರುತ್ತದ. ಆ
ದುದರಿಂದ ಸಾಧುಗಳು ಮತ್ತು ಸನ್ಯಾಸಿಗಳು ಅರಣ್ಯದಲ್ಲಿ ಏಕಾಂಶವಾಗಿ
ಹ ಗಸ
ಅರುವದು ಉತ್ತಮ ಪಕ್ಷವು. ಅವರಿಗೆ ಜಗತ್ತಿನ ಮೋಹವು ಬಿಡದಂತೆ ಇದ್ದ
ರೆ ಅವರು ಸಾಧುಗಳು ಮತ್ತು ಸನ್ಯಾಸಿಗಳು ಆಗುವ ಪ್ರಯೋಜನವಾದರೂ
ಏನು?
೬೮. ಮಾದಿಗನ ಬುದ್ಧಿ ಚಾತುರ್ಯವು.
ಒಬ್ಬ ಮಾದಿಗನು ಒಂದು ತಕ್ಕಡಿಯ ಎರಡು ಪರಡಿಗಳಲ್ಲಿ ದನಗಳ
ಮಾಂಸ ತುಂಬಿದ ಎರಡು ಪುಟ್ಟಿಗಳನ್ನು ಇಟ್ಟುಕೊಂಡು ಬರುವಾಗ ಗಂಗಾ
ನದಿಯೊಳಗೆ ಸ್ನಾನ ಮಾಡಿಕೊಂಡು ಮಡಿಯಿಂದ ಬರುತ್ತಿದ್ದ ಶಂಕರಾಚಾ
ರ್ಯರೆಂಬ ಸ್ವಾಮಿಗಳನ್ನು ಮುಟ್ಟಿದನು. ಅದರಿಂದ ಆ ಸ್ವಾಮಿಗಳು ಸಿಟ್ಟ
ಗೆದ್ದು-* ಎಲೋ ಅಧಮಾ, ನೀನು ನನಗೆ ಮುಟ್ಟಿದೆ!» ಎಂದು ಅವನಿಗೆ ದೊ
ಡ್ತ ಧ್ವನಿಯಿಂದ ಬೈದರು. ಆಗ ಆ ಮಾದಿಗನು- ಗುರುಗಳೇ, ನಾನು ತಮ್ಮ
ಸ್ನು ಮುಟ್ಟಲಿಲ್ಲ ಅಥವಾ ತಾವು ನನ್ನನ್ನು ಮುಟ್ಟಲಿಲ್ಲ. ತಾವು ಚನ್ನಾಗಿ ವಿ
ಚಾರ ಮಾಡಿ ತಮ್ಮ ನಿಜ ಸ್ವಯಂಭುವು ತಮ್ಮ ದೇಹವಾಗಲಿ, ಮನಸ್ಸಾಗಲಿ,
ಜ್ಞಾನವಾಗಲಿ ಇರುತ್ತದೋ ಹೇಗೆ? ಹಾಗೂ ತಾವು ನಿಜವಾಗಿ ಏನಿರುವಿರಿ?
ಎಂಬುವದನ್ನು ಸನಗೆ ಹೇಳಿರಿ. ತಮ್ಮ ಆತ್ಮವು ಪರಮೇಶ್ವರನ ಕಡೆಗೆ ಕರೆ
ದೊಯ್ಯುವ ಸತ್ವಗುಣದಲ್ಲಿಯಾಗಲಿ, ಕರ್ಮವನ್ನು ಮಾಡಿಸುವ ರಜಸ್ಸಿ ನಲ್ಲಿ
ಯಾಗಲಿ, ಜ್ಞಾನಪ್ರಕಾಶದಿಂದ ದೂಡಿ ಹಾಕುವ ತಮಸ್ಸಿ ನಲ್ಲಿಯಾಗಲಿ, ಇರು
ವದಿಲ್ಲವೆಂಬುವದು ತಮಗೆ ಗೊತ್ತಿಲ್ಲವೇ?” ಎಂದು ನುಡಿದನು. ಇದನ್ನು ಕೇಳಿ
ಸ್ವಾಮಿಗಳು ಸುಮ್ಮನೆ ಹೊರಟುಹೋದರೆಂದು ಹೇಳುವದು ಕಾರಣವಿಲ್ಲ.
ತಾತ್ಪರ್ಯ.
ಬುದ್ಧಿಯಾಗಲಿ, ಜ್ಞಾನವಾಗಲಿ, ಜಾತಿಯನ್ನು ಅವಲಂಬಿಸಿರುವದಿಲ್ಲ.
ಬಾತಿಯನ್ನು ಮನುಷ್ಯನು ನಿರ್ಮಾಣ ಮಾಡಿರುವನಲ್ಲದೆ ದೇವರು ನಿರ್ಮಾಣ
ಮಾಡಿರುವದಿಲ್ಲ. ಆದುದರಿಂದ ಬುದ್ಧಿ ಜ್ಞಾ ನಗಳು ಯಾರಲ್ಲಿದ್ದರೂ ಅವುಗಳ
ಸ್ನ ನಾವು ಮಾನ್ಯ ಮಾಡತಕ್ಕದ್ದು.
ಎ. ೯೫ ೨.
೬೯. ನಿರಶ್ಸರಿಯಾದ ಜ್ಞಾನಿಯು.
ಚೈತನ್ಯುದೇವನು ಒಂದು ಸಾರೆ ದಕ್ಷಿಣ ಹಿಂದುಸ್ಥಾನದ ಕಡೆಗೆ ತೀರ್ಥ
ಯಾತ್ರೆಗಳನ್ನು ಮಾಡಿಕೊಂಡು ಬರಲಿಕ್ಕೆ ಹೋದಾಗ ಒಬ್ಬ ಪಂಡಿತನು ಭಗ
ವದ್ಗೀತೆಯನ್ನು ಓದುವ ಕಾಲಕ್ಕೆ ಒಬ್ಬಾನೊಬ್ಬ ಭಕ್ತನ ಕಣ್ಣೊಳಗಿಂದ
ಅಶ್ರುಗಳು ಹರಿಯುವದನ್ನು ನೋಡಿದನು. ಆ ಭಕ್ತನಿಗೆ ಭಗವದ್ಗೀತೆಯೊಳ
ಗಿನ ಒಂದೂ ಶ್ಲೋಕವು ಗೊತ್ತಿ ದ್ದಿಲ್ಲ. ಅಷ್ಟೇ ಅಲ್ಲ, ಅವನಿಗೆ ಅಕ್ಷರಗಳ
ಜ್ಞಾನವು ಸಹ ಇದ್ದಿಲ್ಲ. ಆಗ ಜೈತನ್ಯನು ಅವನಿಗೆ-«" ನೀನು ಏಕೆ ಕಣ್ಣೀರು
ಉದುರಿಸುತ್ತೀ?? ಎಂದು ಕೇಳಿದನು. ಆಗ ಅವನು-«"ಗೀತೆಯೊಳಗಿನ ಒಂದೂ
ಶಬ್ದವು ನನಗೆ ತಿಳಿಯುವದಿಲ್ಲೆಂಬುವದು ನಿಜವು. ಆದರೆ ನನ್ನ ಆಂತರ್ದ್ಯಷ್ಟಿ
ಯ ಮುಂದೆ ಕುರುಕ್ಷೇತ್ರದ ರಣಾಂಗಣದಲ್ಲಿ ಅರ್ಜುನನ ರಧದೊಳಗೆ ಅವನ
ಸಾರಥಿಯಾಗಿ ಕುಳಿತುಕೊಂಡು ಅವನಿಗೆ ಗೀತೋಪದೇಶವನ್ನು ಮಾಡುತ್ತಿರು
ವ ಶ್ಯಾಮಸುಂದರ ಮೂರ್ತಿಯಾದ ಶ್ರೀಕೃಷ್ಣ ನು ಸ್ಪಷ್ಟವಾಗಿ ಕಾಣಿಸುತ್ತಿರು
ವನು. ಆದುದರಿಂದ ನನ್ನ ಕಣ್ಣೊ ಳಗಿಂದ ಅನಂದಾಶ್ರುಗಳೂ ಪ್ರೇಮಾಶ್ರು
ಗಳೂ ಸುರಿಯಹತ್ತಿವೆ ” ಎಂದು ಉತ್ತರಕೊಟ್ಟನು.
ತಾತ್ಸರ್ಯ.
ಪರಮೇಶ್ವರನು ಸಾಕ್ಷರಿಗಳು, ನಿರಕ್ರರಿಗಳು, ಶ್ರೀಮಂತರು, ಬಡವರು,
ಬ್ರಾಹ್ಮಣರು, ಬ್ರಾಹ್ಮಣೇತರರು ಅವರೆಲ್ಲರ ಮೇಲೆ ಸಮನಾಗಿಯೇ ಪ್ರೀತಿ
ಮಾಡುತ್ತಾ ನೆ. ಆತನು ಎಂದೂ ಯಾವದೂ ತರದ ಭೇದವನ್ನು ಮಾಡುವ
ದಿಲ್ಲ. ತನ್ನನ್ನು ಭಕ್ತಿಯಿಂದ ಆರಾಧಿಸುವವರಿಗೆ ಆತನು ಪ್ರಸನ್ನನಾಗುತ್ತಾನೆ.
ಯೇ ಯಥಾಮಾಂ ಪ್ರಪದ್ಯಂತೆ ತಾಂಸ್ತಥೈವ ಭಜಾಮ್ಯಹಂ 1
ಎಂದು ಭಗವಂತನ ಉಕ್ತಿಯುಂಟು, ಯಾರು ಆತನ ಮೇಲೆ ಯಾವ ರೀತಿ
ಯಿಂದ ಭಕ್ತಿಯನ್ನು ಮಾಡುತ್ತಾರೋ ಅ ಪ್ರಕಾರ ಅವನು ಅವರಿಗೆ ಫಲವನ್ನು
ಕೊಡುವನು.
ಎ ಧ್ನ. ಷಾ
೭೦. ನಿನ್ನ ನುನೆಯೇ ಗೋಕುಲ
ವೃಂದಾವನವು.
ಒಬ್ಬ ಮುದುಕಿಯು ಇನ್ನುಮೇಲೆ ತಾನು ಈ ಪ್ರಪಂಚವನ್ನು ಬಿಟ್ಟು
ತನ್ನ ಆಯುಷ್ಯದ ಕೊನೆಯ ದಿವಸಗಳನ್ನು ಗೋಕುಲ ವೃಂದಾವನದಲ್ಲಿದ್ದು
ಕೊಂಡು ಶಾಂತ ರೀತಿಯಿಂದ ಕಳೆಯಬೇಕೆಂದು ಅಪೇಕ್ಷಿಸಿ ತನ್ನ ಅಪೇಕ್ಷೆಯ
ನ್ನು ಭಗವಾನರ ಮುಂದೆ ತಿಳುಹಿಸಿದಳು. ಆಗ ಭಗವಾನರು ಅವಳಿಗೆ ಹೇಳಿ
ದ್ಲೇನಂದರೆ:
“ ನಿನಗೆ ನಿನ್ನ ಮಗನ ಚಿಕ್ಕ ಮಗಳ ಮೇಲೆ ಬಹಳ ಪ್ರೀತಿಯುಂಟು.
ನೀನು ಎಲ್ಲಿ ಹೋದರೂ ಆ ಕೂಸು ನಿನ್ನ ಹತ್ತರ ಇಲ್ಲದಿದ್ದರೆ ನಿನಗೆ ಅದರ
ನೆನಪು ಆಗಿ ಬಹಳ ಕಸವಿಸಿಯಾಗುವದು. ನಿನ್ನ ಮನಸ್ಸಿಗೆ ಬಂದರೆ ನೀನು
ವೃಂದಾವನದಲ್ಲಿ ಹೋಗಿ ಇರು. ಆದರೆ ನೀನು ಅಲ್ಲಿ ಇದ್ದರೂ ನಿನ್ನ ಮನಸ್ಸು
ಮಾತ್ರ ನಿನ್ನ ಮನೆಯ ಸುತ್ತಲು ಸುಳಿದಾಡುವದು. ಅದುದರಿಂದ ನೀನು ನಿನ್ನ
ಮನೆಯಲ್ಲಿಯೇ ಇದ್ದು ಕೊಂಡು ನಿನ್ನ ಮಗಳೇ ಪ್ರತ್ಯಕ್ಷ ಶ್ರೀರಾಧೆಯೆಂದು
ತಿಳಿದು ಅವಳ ಮೇಲೆ ಪ್ರೀತಿ ಮಾಡಿದರೆ ನಿನಗೆ ವೃಂದಾವನದಲ್ಲಿದ್ದ ಸೌಖ್ಯ
ವೂ ಶಾಂತಿಯೂ ಉಂಟಾಗುವವು. ಆ ಕೂಸಿಗೆ ನೀನು ಬೇಕಾದಷ್ಟು ಮುದ್ದು
ಕೊಡು. ಅದಕ್ಕೆ ನೀನು ನಿನ್ನ ಮನದಣಿಯುವಂತೆ ಉಣ್ಣಿಸು, ತಿನ್ನಿಸು, ತರ
ತರದ ಸುಂದರವಾದ ಅರಿವೆಗಳನ್ನು ಹೊದಿಸು. ಆದರೆ ಇದನ್ನೆಲ್ಲ ಮಾಡುವಾ
ಗ ನೀನು ಯಾವಾಗಲು ವೃಂದಾವನದ ದೇವತೆಯನ್ನೇ ಪೂಜಿಸುತ್ತೇನೆಂದು
ತಿಳಿದುಕೋ. ಅಂದರೆ ನಿನ್ನ ಮನಸ್ಸಿಗೆ ಯೋಗ್ಯ ಶಾಂತಿಯು ಸಿಗುವದು.
ತಾತ್ಸರ್ಯ.
44 ನಮ್ಮ ಮನಸ್ಸೇ ಕಾಶಿಯು ಮತ್ತು ಅಲ್ಲಿಯೇ ಶ್ರೀವಿಶ್ವೇಶ್ವರನು ಜರು
ತ್ತಾನೆ” ಎಂದು ತಿಳಿದುಕೊಳ್ಳು ವಂಥ ಜನರು ಕೆಲವರು ಇರುತ್ತಾರೆ. ಆದರೆ
ಈ ಪ್ರಕಾರ ತಿಳಿದುಕೊಳ್ಳು ವವರು ಇದ್ದಾ ಗ್ಯೂ ಭಗವಂತನ. ಮೇಲೆ ಅಚಲ
ವಾದ ಭಕ್ತಿಯನ್ನಿಡುವವರು ಬಹಳ ವಿರಳ. ಆದುದರಿಂದ ತೀರ್ಥಯಾತ್ರೆಗ
RE ಸತಾಜ
ಳನ್ನು ಮಾಡಿದರೆ ಮನಸ್ಸು ಸ್ವಾರ್ಥಪರವಾದ ಮತ್ತು ಪಾಪಮಯವಾದ ಸಂ
ಸಾರದ ವಿಚಾರಗಳನ್ನು ಕೆಲವು ದಿವಸಗಳ ಮಟ್ಟಿಗಾದರೂ ಬಿಟ್ಟು ಇರುವದು.
ತೀರ್ಥಯಾತ್ರೆಗಳಿಗೆ ಹೋಗಿ ಅನ್ಲಿ ಹೆಂಡರು ಮಕ್ಕಳನ್ನು ಅಥವಾ ವೇಶ್ಯಾಸ್ತ್ರೀ
ಯರನ್ನು ನೆನಪು ಮಾಡಿಕೊಳ್ಳುತ್ತ ಕಾಲಕಳೆಯುವವರಿಗೆ ಕ್ಷೇತ್ರಗಳಿಗೆ ಹೋದ
ಮತ್ತು ದೇವದರ್ಶನ ಮಾಡಿಕೊಂಡ ಪುಣ್ಯವು ಎಂದೂ ಲಭಿಸಲಾರದು.
೭೧. ಇಬ್ಬರು ಮಿತ್ರರು.
ಒಂದಾನೊಂದು ದಿವಸ ಸಾಯಂಕಾಲದಲ್ಲಿ ಇಬ್ಬರು ಮಿತ್ರರು ಅಡ್ಡಾಡ
ಲಿಕ್ಕೆ ಹೊರಟರಲು ದಾರಿಯಲ್ಲಿ ಒಂದು ಕಡೆಗೆ ಭಾಗವತದ ಪುರಾಣವು ನಡೆ
ದಿತ್ತು. ಆಗ ಆ ಇಬ್ಬರು ಮಿತ್ರರಲ್ಲಿ ಒಬ್ಬನು- ಮಿತ್ರಾ, ಭಾಗವತವನ್ನು
ಕೇಳಲಿಕ್ಕೆ ತುಸು ಹೊತ್ತು ಕುಳಿತುಕೊಳ್ಳೋಣ ನಡೆ” ಎಂದು ಹೇಳಿ ಅಲ್ಲಿ
ಹೋಗಿ ಕುಳಿತುಕೊಂಡನು. ಆದರೆ ಇನ್ನೊಬ್ಬನು ಅಲ್ಲಿ ಸ್ವಲ್ಪ ಹಣಿಕಿ ಹಾಕಿ,
ಆ ಸ್ಥಳವನ್ನು ಕೂಡಲೆ ಬಿಟ್ಟುಕೊಟ್ಟು, ಒಂದು ನೇಶ್ಯಾಗೃಹದಲ್ಲಿ ನಡೆದಿದ್ದ
ಸಂಗೀತವನ್ನು ಕೇಳಲಿಕ್ಕ ಹೋದನು. ಅಲ್ಲಿ ಅವನಿಗೆ ಬೇಗನೆ ಬೇಸರಿಕೆಯು
ಬಂದು-* ಛೇ, ನಾನು ಇಲ್ಲಿ ಬರತಕ್ಕದ್ದಿದ್ದಿಲ್ಲ. ನನಗೆ ಧಿಕ್ಕಾರವಿರಲಿ. ನನ್ನ
ಗೆಳೆಯನು ಭಾಗವತವನ್ನು ಕೇಳಲಿಕ್ಕೆ ಹೋಗಿ ಭಗವಂತನ ನಾಮಸಂಕೀರ್ತ
ನವನ್ನು ಕೇಳುತ್ತ ಅನಂದವನ್ನು ಪಡುತ್ತಿರಬಹುದು. ನಾನೆಂಥ ಅರಿಷ್ಟ ಸ್ಥಳಕ್ಕೆ
ಬಂದೆನು?” ಎಂದು ಪಶ್ಚಾತ್ತಾಪಪಟ್ಟನು. ಆದರೆ ಭಾಗವತವನ್ನು ಕೇಳಲಕ್ಕೆ
ಕುಳಿತವನು ಭಾಗವತವನ್ನು ಕೇಳುವದರಿಂದ ಬೇಸತ್ತು-« ನಾನೆಂಥ ಮೂರ್ಜ
ನು? ಈ ಪುರಾಣಿಕನು ಏನು ಒಣ ರಗಳೆಯನ್ನು ಹಚ್ಚಿ ರುತ್ತಾನೆ? ನನ್ನ ಮಿ
ತ್ರನು ಪಾತರದವರ ಸಂಗೀತವನ್ನು ಕೇಳುತ್ತ ಎಷ್ಟು ಆನಂದದಲ್ಲಿ ಕುಳಿತಿರಬ
ಹುದು?” ಎಂದು ಅಲ್ಲಿಂದ ಹೊರಟು ಹೋದನು. ಈ ಇಬ್ಬರೂ ಸತ್ತ ಮೇಲೆ
ಭಾಗವತನ್ನು ಕೇಳಲಿಕ್ಕೆ ಹೋಗಿ ಪಶ್ಚಾತ್ತಾಪ ಹೊಂದಿದವನನ್ನು ಯಮ
ಕಿಂಕರರು ಯಮಲೋಕಕ್ಕೆ ಕರೆದುಕೊಂಡು ಹೋದರು. ಆದರೆ ಪಾತರದ
18
೨. ಗ೦೦ ೨
ಕಲಿಯಬಹುದು. ಈ ಜಗತ್ತು ಪರಮೇಶ್ವರನ ಮಹಾವಿದ್ಯಾಲಯವಿರುತ್ತ ದಿ.
ಅದರಲ್ಲಿ ಯಾವದೇ ಜೀವರಾಶಿಯಿಂದ ಅಥವಾ ಯಾವದೇ ವಸ್ತುವಿನಿಂದ ಒಂದಿ
ಲ್ಲೊಂದು ತರದ ಉಪದೇಶವು ಸಿಗುವದು. ನಾವು ಯಾವದನ್ನೂ ಧಿಕ್ಕರಿಸಲಾ
ಗದು. ಹೀಗಿದ್ದು ಅಹಂಕಾರಿಯಾದ ಮನುಷ್ಯನು ತಾನು ಶ್ರೇಷ್ಮನೆಂಬ ಸೊಕ್ಕಿ
ನಿಂದ ಮೆರೆಯುತ್ತಾನೆ.
೭೪. ಚೇಷ್ಟೆಯು ಸಂಕಟದ ಮೂಲವು.
ಒಬ್ಬ ಮನುಷ್ಯನು ಬಹಳ ಸಾಲದಲ್ಲಿ ಮುಳುಗಿದ್ದನು. ಆದುದರಿಂದ
ಆವನು ಸಾವುಕಾರರ ಸಾಲದ ಹೊಣೆಯನ್ನು ತಪ್ಪಿಸಿಕೊಳ್ಳುವದಕ್ಕಾಗಿ ಹುಚ್ಚ
ನಂತೆ ಎಡ್ಡು ಮಾಡಹತ್ತಿದನು. ಎಷ್ಟೋ ಮಂದಿ ವೈದ್ಯರು ಅವನಿಗೆ ಔಷಧ
ವನ್ನು ಕೊಟ್ಟರು. ಆದರೆ ಒಬ್ಬರಿಂದಲೂ ಅವನಿಗೆ ಗುಣವಾಗಲಿಲ್ಲ. ವೈದ್ಯರು
ಅವನಿಗೆ ಔಷಧ ಕೊಟ್ಟಂತೆ ಅವನ ಹುಚ್ಚು ಹೆಚ್ಚಾಗಹತ್ತಿತು. ಕಡೆಗೆ ಒಬ್ಬ
ಬುದ್ಧಿವಂತ ವೈದ್ಯುನು ಅವನು ಹುಚ್ಚನಂತೆ ಎಡ್ಡು ಮಾಡುವದನ್ನು ಕಂಡು
ಹಿಡಿದು ಅವನನ್ನು ಒಂದು ಮಗ್ಗಲಿಗೆ ಕರೆದು-"" ಅಪ್ಪಾ, ನೀನು ಇದೇನು
ಮಾಡುತ್ತಿ. ರುವೆ? ನೀನು ಈ ಪ್ರಕಾರ ಹುಚ್ಚನಂತೆ ಎಡ್ಡು ಮಾಡಲಿಕ್ಕೆ ಹತ್ತಿ
ದರೆ ಕೆಲವು ದಿವಸಗಳ ತರುವಾಯ ನಿಜವಾಗಿಯೂ ಹುಚ್ಚ ನಾಗುನೆ. ಈಗಲೇ
ನಿನ್ನಲ್ಲಿ ನಿಜವಾದ ಹುಚ್ಚನ ಚಿಹ್ನಗಳು ಕೆಲವು ಬಂದಿರುತ್ತವೆ” ಎಂದು
ಸಿಟ್ಟ ಮಾಡಿದನು. ಈ ಉಪದೇಶವು ಆ ಮನುಷ್ಯನ ಮನಸ್ಸಿಗೆ ಚನ್ನಾಗಿ
ಹತ್ತಿ ಅವನು ಬೇಗನೆ ಎಚ್ಚರಿಕೆಯ ಮೇಲೆ ಬಂದು ಹುಚ್ಚುತನದ ಎಡ್ಡು
ಮಾಡುವದನ್ನು ಬಿಟ್ಟು ಕೊಟ್ಟನು.
ತಾತ್ಪರ್ಯ.
ನಾಟಕದಲ್ಲಿ ಸ್ತ್ರೀಯರ ಭೂಮಿಕೆಯನ್ನು ತೆಗೆದುಕೊಳ್ಳು ವವರು ಕೆಲವು
ದಿವಸಗಳ ರೂಢಿಯಿಂದ ನಾಟಕದ ಹೊರಗೂ ಸ್ತ್ರೀಯರಂತೆ ಮಾತಾಡುವದ
ನ್ನು ಅನೇಕರು ನೋಡಿರಬಹುದು. ಆದುದರಿಂದ ನಾವು ಯಾವದಾದರೂ
೨. ಗಿಂಗಿ ೨.
ರೂಢಿಯನ್ನು ಮಾಡಿಕೊಳ್ಳುವ ಮುಂಚೆ ಆ ರೂಢಿಯ ಇಪ್ಟಾನಿಷ್ಟಗಳನ್ನೂ,
ಒಳಿತುಕೆಡಕುಗಳನ್ನೂ ಚನ್ನಾಗಿ ವಿಚಾರ ಮಾಡಬೇಕು. ಜೇಷ್ಟೈಯಿಂದ
ಜಡ್ಡು ಬಿದ್ದ ಂತೆ ಅಳುವದು ಅಧವಾ ನೆರಳುವದು, ಮೂಕನಂತೆ ಕೈಸನ್ನೆ ಬಾ
ಯಿಸನ್ನೆಗಳನ್ನು ಮಾಡುವದು, ಹೆಂಗಸರಂತೆ ಅಥವಾ ಹುಚ್ಚರಂತೆ ಮಾತಾಡು
ವದು ಇವು ಯಾವಾಗಲು ಕೆಡಕು. ಒಮ್ಮೆ ಜೇಷ್ಟೆಯಿಂದ ಮಾಡಲಿಕ್ಕೆ ಆರಂ
ಭವಾದದ್ದು ರೂಢಿಯಾಯಿತೆಂದರೆ ಮನುಷ್ಯನು ಅದರಂತೆಯೇ ಕಡೆಗೂ ಮಾ
ಡುತ್ತ ಕೇಡನ್ನು ಅನುಭೋಗಿಸುವನು.
೭೫. ಇರಿವೆಗಳ ಸುಖಸ್ಪಪ್ನವು.
ಒಂದು ಸಾರೆ ಕೆಲವು ಇರಿವೆಗಳು ಒಂದು ಸಕ್ಕರಿಯ ಗುಡ್ಡಕ್ಕೆ ಬಂದ
ವ್ರ. ಅವುಗಳಿಗೆ ಆ ಗುಡ್ಡವು ದೆಸಡ್ಡದಿರುವದೆಂಬುವದು ತಿಳಿಯಲಿಲ್ಲ. ಅವು
ಆ ಗುಡ್ಡದಲ್ಲಿಯ ಕೆಲವು ಸಕ್ಕರಿಯ ಚೂರುಗಳನ್ನು ತಿಂದು ಬಹಳ ತೃಪ್ತಿ
ಬಟ್ಟು ತಾವು ಹೋಗುವಾಗ ತಮ್ಮ ಮನೆಗೆ ಒಂದೊಂದು ಎರಡೆರಡು ಚೂರು
ಗಳನ್ನು ತೆಗೆದುಕೊಂಡು ಹೋದವು. ಅವು ಈ ಪ್ರಕಾರ ತಮ್ಮ ಮನೆಗೆ ಹೋ
ಗುವಾಗ ತಾವು ಇಡೀ ಗುಡ್ಡ ವನ್ನೇ ಹೊತ್ತು ಕೊಂಡು ಹೋದೆವೆಂದು ತಿಳಿದು
ಕೊಂಡವು! ಪಾಪ! ಮನುಷ್ಯನ ಸ್ಥಿತಿಯಾದರೂ ಇದೇ ಪ್ರಕಾರ ಇರುತ್ತದೆ.
ಪರಮೇಶ್ವರನ ಜ್ಞಾ ನವನ್ನು ಪೂರ್ಣವಾಗಿ ಮಾಡಿಕೊಂಡವರು ಬಹಳ ಸ್ವಲ್ಪ
ಮಂದಿ ಪುಣ್ಯವಂತರು ದೊರಕುವರು. ಅದು ಎಲ್ಲರಿಗೂ ಸಾಧೃವಿರುವದಿ ಲ್ಲ.
ಹೀಗಿದ್ದು ದುರ್ದೈವದಿಂದ ಅನೇಕರು ತಮಗೆ ಪರಮೇಶ್ವರನ ಜ್ಞಾನವು
ಪೂರ್ಣವಾಗಿ ಆಗಿರುತ್ತದೆಂಬ ಭ್ರಾಮಕ ಕಲ್ಪನೆಯನ್ನು ಮಾಡಿಕೊಂಡಿರು
ತ್ತಾರೆ. ಹಿಮಾಲಯದಂಥ ದೊಡ್ಡ ಸಕ್ಕರಿಯ ಗುಡ್ಡವನ್ನು ತಾವ್ರ ಎತ್ತಿ ಕೊಂಡು
ಬಂದೆವೆಂಬ ಅಸಂಭವವಾದ ಕಲ್ಪನೆಯನ್ನು ಇರಿವೆಗಳು ಮಾಡಿಕೊಂಡಂತೆಯೇ
ಅವರು ತಾವು ಬ್ರಹ್ಮನನ್ನು ಪೂರ್ಣವಾಗಿ ತಿಳಿದುಕೊಂಡಿರುತ್ತೇವೆಂಬ ಕಲ್ಪನೆ
ಯನ್ನು ಮಾಡಿಕೊಳ್ಳುವದು ಹುಚ್ಚುತನವು.
೨_. ಗಿಂತಿ ೨.
ತಾತ್ಸರ್ಯ.
ನಾವು ನಮ್ಮ ಶಕ್ತಿಯ ಪ್ರಕಾರ ನಮ್ಮ ತಿಳುವಳಿಕೆಯನ್ನು ಮಾಡಿಕೊ
ಳೃಬೇಕು. ಆಕಾಶದಲ್ಲಿ ಹಾರುವ ಹಾಳೇಹದ್ದು ತಾನು ಸೂರ್ಯನನ್ನು ಮುಟ್ಟಿ
ಬಂದೆನೆಂದು ಹೇಳುವದೂ, ಮನುಷ್ಯನು ತನಗೆ ಪರಮೇಶ್ವರನ ಪೂರ್ಣ ಜ್ಞಾನ
ವಾಗಿರುತ್ತ ದೆಂದು ಹೇಳುವದೂ ಒಂದೇ.
೭೬. ವಿಧೇಯತ್ತವು ಮತ್ತು
ಅನಿಧೇಯತ್ನವು.
ದೇವರಿಗೆ ವಿಧೇಯರಾಗುವ ಸಲುವಾಗಿ ಗುರುಹಿರಿಯರಿಗೆ ಅವಿಧೇಯ
ರಾಗಿ ನಡೆದರೂ ಪಾಪವೆನಿಸುವದಿಲ್ಲ. ಭರತನು ಶ್ರೀರಾಮನ ಸಲುವಾಗಿ ತನ್ನ
ತಾಯಿಯಾದ ಕೈಕೆಯಿಯ ಮಾತನ್ನು ವಿಸರಿದನು. ಗೋಪಿಯರು ಶ್ರೀಕೃಷ್ಣ
ನ ಸಲುವಾಗಿ ತಮ್ಮ ಗಂಡಂದಿರ ಮಾತನ್ನು ಮಾರಿದರು ಪ್ರಹ್ಲಾದನು ಶ್ರೀ
ವಿಷ್ಣುವಿನ ಸಲುವಾಗಿ ತನ್ನ ತಂದೆಯಾದ ಹಿರಣ್ಯಕಶ್ಯಪುವಿನ ಮಾತನ್ನು ಮಾ
ರಿದನು. ವಾಲಿಯು ಪರಮಾತ್ಮನನ್ನು ಸಂತೋಷಪಡಿಸುವ ಸಲುವಾಗಿ ತನ್ನ
ಗುರುವಾದ ಶುಕ್ರಾಚಾರ್ಯನ ಮಾತು ಮಿರಿದನು. ವಿಭೀಷಣನು ಶ್ರೀರಾಮ
ನ ಕೃಪೆಯನ್ನು ಸಂಪಾದಿಸುವ ಸಲುವಾಗಿ ತನ್ನ ಅಣ್ಣ ನಾದ ರಾವಣನ ಮಾ
ತನ್ನು ಮಾರಿದನು.
ತಾತ್ಸರ್ಯ.
ತಾಯಿತಂದೆಗಳಿಗೂ, ಗುರುಗಳಿಗೂ, ಅರಸರಿಗೂ ಯಾವಾಗಲು ಮನ್ನ
ಣೆಯನ್ನು ಮಾಡಬೇಕು. ಅದರೆ ತಾಯಿತಂದೆಗಳು, ಬಂಧುಗಳು, ಗುರುಗಳು
ಮತ್ತು ಅರಸರು ದೇವರಿಗಿಂತಲು ಶ್ರೇಷ್ಠರಲ್ಲ. ಆದುದರಿಂದ ಪರಮಾತ್ಮನ
ಅಜ್ಜಿ ಯನ್ನು ಪಾಲಿಸುವದಕ್ಕಾಗಿಯೂ, ಪರಮಾತ್ಮನಿಗೆ ಮೆಚ್ಚಿ ಗೆಯಾಗುವಂಥ
ಕಾರ್ಯಗಳನ್ನು ಮಾಡುವದಕ್ಕಾಗಿಯೂ ಅವರೆ ಅಪ್ಪಣೆಯನ್ನು ಮಾರುವದು
ಸಹ ಪಾಪವೆನಿಸಲಾರದು.
— ಗಿ೦೩ —
೭೭. ಜಗನ್ಮಾತೆಯು ಎಲ್ಲವು ಇರುವಳು;
ಹಾಗು ಎಲ್ಲವನ್ನು ಮಾಡುವಳು.
ನನಗೆ ಯಾರು ಕಲಿಸುತ್ತಾರೆ? ನಾನು ಏನು ಓದಿರುತ್ತೆ ನೆ? ನನಗೇನು
ಗೊತ್ತಿರುತ್ತದೆ? ಎಲೈ ತಾಯೀ, ನಾನು ಯಂತ್ರವು; ನೀನು ಯಂತ್ರಿಯು ಅಂದರೆ
ಅದನ್ನುನಡೆಸುವವಳು. ನಾನು ಕೋಣೆಯು; ನೀನು ಅದರಲ್ಲಿ ವಾಸ ಮಾಡುವ
ಒಕ್ಕಲು. ನಾನು ಕತ್ತಿಯ ಮೇಲಿನ ವರಿಯು; ನೀನು ಕತ್ತಿಯು. ನಾನು ರಥ
ವು; ನೀನು ರಥವನ್ನು ನಡೆಸುವ ಸಾರಥಿಯು. ನೀನು ನನಗೆ ಮಾಡಿಸುವಂತೆ
ನಾನು ಮಾಡುತ್ತೇನೆ. ನೀನು ನನಗೆ ಮಾತಾಡಿಸುವಂತೆ ನಾನು ಮಾತಾಡುತ್ತೇ
ನೆ. ನನ್ನ ಅಂತರ್ಯಾಮಿಯಾಗಿರುವ ನೀನು ನಡೆಸುವಂತೆ ನಾನು ನಡೆಯುತ್ತೆ ನೆ.
ನೀನೇ ಎಲ್ಲವು ಇರುತ್ತೀ. ನೀನೇ ಎಲ್ಲವನ್ನು ಮಾಡಿಸುತ್ತೀ.
ತಾತ್ಸರ್ಯ.
ಮನುಷ್ಯರು ಏನಾದರೊಂದು ಕೆಲಸ ಮಾಡಿದ ಕೂಡಲೆ ತಾವು ಮಾಡಿ
ದೆವೆಂದು ತಿಳಿಯುತ್ತಾರೆ. ಆದರೆ ಅದು ತೀರ ತಪ್ಪು. ದೇವರೇ ಮಾಡುವವ
ನು ಮತ್ತು ಮಾಡಿಸುವವನು. ಅವನೇ ಈ ವಿಶ್ವದ ಸೂತ್ರಧಾರನು. ಅವನು
ಜಗ್ಗಿದಂತೆ ನಾವು ಅವನ ಕೈಕೆಳಗಿನ ಸೂತ್ರದ ಗೊಂಬೆಗಳಾಗಿ ಕುಣಿಯು
ತ್ಮೇವೆ.
೭೮. ಮನಸ್ಸಿನ ಸೃತಂತ್ರತೆಯನ್ನು ಇಡಬೇಕು.
ಮನಸ್ಸೇ ಮನುಷ್ಯನ ಸಕಲ ಸಂಪತ್ತು ಇರುತ್ತದೆ. ಅವನು ತನ್ನಮನ
ಸ್ಲಿನ ಸ್ವಾತಂತ್ರ್ಯವನ್ನು ಕಳೆದುಕೊಂಡರೆ ತನ್ನನ್ನೇ ತಾನು ಕಳೆದುಕೊಂಡಂತೆ
ಆಗುತ್ತದೆ. ಅವನು ತನ್ನ ಮನಸ್ಸನ್ನು ಸ್ವತಂತ್ರವಾಗಿ ಇಟ್ಟುಕೊಂಡರೆ ತಾ
ನೂ ಸ್ವತಂತ್ರನಾಗಿ ಉಳಿಯುವನು. ಗಂಜೀ ಮಾಡಿದ ಬಿಳೇ ಅರಿವೆಯನ್ನು
ಬೇಕಾದ ಬಣ್ಣ ದಲ್ಲಿ ಎದ್ದಲಿಳ್ಕೆ ಬರುವಂತೆ ನಮ್ಮ ಮನಸ್ಸನ್ನು ಬೇಕಾದ ಕ
ಎ... ಗಿ೦೪
ಡೆಗೆ ತಿರುವಿಕೊಳ್ಳಲಿಕ್ಕೆ ಬರುತ್ತದೆ. ಅದನ್ನು ಒಳ್ಳೆಯದರ ಕಡೆಗೆ ಒಯ್ಯು
ವದೂ ಸುಲಭ; ಕೆಡಕಿನ ಕಡೆಗೆ ಒಯ್ಯುವದೂ ಸುಲಭ. ಮನುಷ್ಯನು ಇಂ
ಗ್ರೇಜಿ ಕಲಿಯಲಿಕ್ಕೆ ಹತ್ತಿದರೆ ತನಗೆ ಬೇಕಾಗದಿದ್ದೆರೂ ತನ್ನ ಮಾತಿನಲ್ಲಿ ಇಂ
ಗ್ರೇಜಿ ಶಬ್ದಗಳನ್ನು ಸ್ವಾಭಾವಿಕವಾಗಿ ಮಿಶ್ರ ಮಾಡುತ್ತಾನೆ. ಸಂಸ್ಕೃ ವನ್ನು
ಅಭ್ಯಾಸ ಮಾಡುವ ಪಂಡಿತನು ತನ್ನ ಮಾತುಗಳಲ್ಲಿ ಸಂಸ್ಕ ಫೌ ಶ್ಲೋಕಗಳನ್ನು
ಹೇಳದೆ ಇರುವದು ಅಶಕ್ಯ. ಮನಸ್ಸನ್ನು ಕೆಟ್ಟ ಜನರ ಸಹವಾಸದಲ್ಲಿ ಇರ
ಗೊಟ್ಟಕೆ ವಿಚಾರಗಳೂ ಸಂಭಾಷಣವೂ *ೆಟ್ಟವು ಆಗುವವು. ಮನಸ್ಸನ್ನು
ಈಶ್ವರಭಕ್ಕರ ಸೇವೆಯಲ್ಲಿ ಇರಗೊಟ್ಟರೆ ದೇವರ ಧ್ಯಾನ ಮತ್ತು ದೇವರ
ಚಿಂತನ ಇವುಗಳ ಹೊರತಾಗಿ ಮನಸ್ಸಿನಲ್ಲಿ ಏನೂ ಬರುವದಿಲ್ಲ. ಮನಸ್ಸು
ಯಾವ ಜನರ ನಡುವೆ ಇದ್ದು ಕೆಲಸ ಮಾಡುವದೋ ಅವರಂತೆಯೇ ಸ್ವಭಾ
ವವು ನಿರ್ಮಾಣವಾಗುವದು.
ತಾತ್ಸರ್ಯ.
ಸಹವಾಸದಂತೆ ಗುಣಗಳು ಬರುವವು. ಒಳ್ಳೇ ಸಹವಾಸದಲ್ಲಿರುವ ಮ
ನುಷ್ಯನು ಕೆಚ್ಚವನಾಗುವ ಸಂಭವವಿಲ್ಲ. ಹಾಗೂ ಕೆಟ್ಟ ಮನುಷ್ಯನ ಸಹವಾ
ಸದಲ್ಲಿ ಇರುವವನು ಮೊದಲಿಗೆ ಒಳೆ ಫ್ಸೇಯವನಿದ್ದರೂ ಒಳ್ಳೇಯವನಾಗಿ ಉಳಿ
ಯುವ ಸಂಭವವು ಇರುವದಿಲ್ಲ. ಮನುಷ್ಯನು ಯಾರ ಸಹವಾಸದನ್ಲಿರುತ್ತಾ
ನೆಂಬದನ್ನು ನನಗೆ ತೋರಿಸಿರಿ. ಅಂದರೆ ಅವನು ಎಂಥ ನಡತೆಯವನಿರುತ್ತಾ
ನೆಂಬದನ್ನು ನಾನು ನಿಮಗೆ ಹೇಳುತ್ತೇನೆ'' (51:0%/ me the company
in which a man is, and I shall teil you what he is)
ಎಂದು ಇಂಗ್ರೇಜಿಯಲ್ಲಿ ಒಂದು ಗಾಡೆಯುಂಟು. ಆದುದರಿಂದ ಸಹವಾಸವೇ
ಮುಖ್ಯ. ಸರ್ವಜ್ಞನು ಹೀಗೆ ಹೇಳುತ್ತಾನೆ:
ಸಜ್ಜನರ ಸಂಗವದು ಹೆಜ್ಜೆ ನು ಸವಿದಂತೆ ।
ದುರ್ಜನರ ಸಂಗದೊಡನಾಟ ಬಚ್ಚಲ!
ಕೊಜ್ಜಿ ನೆಂತಿಹುದು, ಸರ್ವಜ್ಞ Hon
— ಗಿಂ —
೭೯. ದೇವರಿಗೆ ಪೂರ್ಣವಾಗಿ ಶರಣು
ಹೋಗತಕ್ಕದ್ದು.
ಮಂಗನ ಮರಿಯು ತಾನು ಕೆಳಗೆ ಬೀಳಬಾರದೆಂದು ತನ್ನ ತಾಯಿಯ
ನ್ನು ಅವಚಿಕೊಳ್ಳುತ್ತದೆ. ಆದರೆ ಬೆಕ್ಕಿನ ಮರಿಗೆ ಈ ಪ್ರಕಾರ ತನ್ನ ತಾಯಿಯನ್ನು
ಅವಚಿಕೊಳ್ಳಲಿಕ್ಕೆ ಬರುವದಿಲ್ಲ. ಆದುದರಿಂದ ಅದು ತನ್ನ ತಾಯಿಯನ್ನೇ ವೂ
ರ್ಣವಾಗಿ ಅವಲಂಬಿಸಿಕೊಂಡು ಇರುವದರಿಂದ ಅದರ ತಾಯಿಯು ಅದನ್ನು
ನ್ಗ ಬಾಯಿಯಲ್ಲಿ ಕಚ್ಚಿ ಕೊಂಡು ತನಗೆ ಸುರಕ್ಷಿತವಾಗಿ ಕಂಡ ಸ್ಥಳದಲ್ಲಿ ಒಬ
ಯ್ದು ಇಡುತ್ತದೆ. ಬೆಕ್ಕಿನ ಮರಿಯು ತನ್ನ ತಾಯಿಯು ಒಯ್ದು ಇಬ್ಬನ್ಲಿಯೇ
ಇದ್ದು ಕೊಂಡು " ಮ್ಯಾಂವ್, ಮ್ಯಾಂವ್? ಎಂದು ದೀನಸ್ವರದಿಂದ ಒದರುತ್ತ
ದೆ. ಮಂಗನ ಮರಿಯು ತನ್ನ ತಾಯಿಯನ್ನು ಅವಚಿಕೊಳ್ಳದೆ ಕೆಳಗೆ ಇಳಿಯಿ
ತೆಂದರೆ ಕೆಳಗೆ ಬಿದ್ದು ಪೆಟ್ಟು ತಿನ್ನುತ್ತದೆ. ಅದರಿಂದ" ಅದು ಸ್ವಂತ ಶಕ್ತಿಯ
ನ್ನು ಅವಲಂಬಿಸಿ ತನ್ನ ತಾಯಿಯನ್ನು ಅವಚಿಕೊಳ್ಳುತ್ತದೆ. ಬೆಕ್ಕಿನ ಮರಿ
ಯು ಈ ಪ್ರಕಾರ ಸ್ವಂತಶಕ್ತಿಯನ್ನು ಅವಲಂಬಿಸದೆ ತನ್ನ ತಾಯಿಯನ್ನು ಅವ
ಲಂಬಿಸಿಕೊಂಡು ಅದು ಒಯ್ದ ಕಡೆಗೆ ಹೋಗುತ್ತದೆ. ಇದರಿಂದ ಅದಕ್ಕೆ ಮಂ
ಗನ ಮರಿಯಂತೆ ಬಿದ್ದೆ ನೆಂಬ ಅಂಜಿಕೆ ಇರುವದಿಲ್ಲ. ಇದೇ ಸ್ವಂತ ಶಕ್ತಿ
ಮತ್ತು ಕರ್ತೃತ್ವ ಇವುಗಳ ಮೇಲಿನ ವಿಶ್ವಾಸ ಹಾಗೂ ದೇವರಿಗೆ ಎಲ್ಲ ರೀತಿ
ಯಿಂದ ಶರಣು ಹೋಗುವದು ಇವುಗಳ ನಡುವಿನ ಹೆಚ್ಚು ಕಡಿಮೆ ಇರುತ್ತದೆ.
ತಾತ್ಪರ್ಯ.
ತನಗಿಂತ ಹೆಚ್ಚು ಬುದ್ಧಿವಂತರು ಮತ್ತು ಅನುಭವಿಕರು ಇದ್ದು ಅವ
ರು ಸುಹೃದಯರು ಇದ್ದ ಮೇಲೆ ಅವರು ತನ್ನನ್ನು ಕೆಡಿಸಲಿಕ್ಕಿಲ್ಲವೆಂದು ಅವರ
ಮೇಲೆ ವಿಶ್ವಾಸವಿಟ್ಟು ನಡೆಯುವದು ಒಳೆ ಸ್ಸೇದು. ದೇವರು ಎಲ್ಲರ ತಂದೆಶಾ
ಯಿಯು. ಅವನು ಸರ್ವಜ್ಞಾನಿಯು ಮತ್ತು ಭಕ್ತರ ಕಲ್ಯಾಣವನ್ನು ಮಾಡ
ಲಿಕ್ಕೆ ಬದ್ಧನು ಇರುತ್ತಾನೆ. ಆದ್ದರಿಂದ ಅಂಥವನಿಗೆ ಯಾವ ಕೆಲಸದಲ್ಲಿಯೇ
ಆಗಲಿ, ಎಲ್ಲ ರೀತಿಯಿಂದ ಶರಣು ಹೋಗುವದು ಉತ್ತ ಮವಾದದ್ದು.
14
ಎ NOt —
೪೦. ದಿವ್ಯಾಮೃುತ ಪ್ರಾಶನ. :
ಒಮ್ಮೆ ಶ್ರೀರಾಮಕೃಷ್ಣ ಪರಮಹಂಸರು ಸಚ್ಚಿದಾನಂದ ದಿವ್ಯಾಮೃತ
ವನ್ನು ಹೇಗೆ ಪ್ರಾಶನ ಮಾಡತಕೃದ್ದೆ ಂಬುವದನ್ನು ಕುರಿತು ತಮ್ಮ ಶಿಷ್ಯನ ಕೂಡ
ಈ ಪ್ರಕಾರ ಸಂಭಾಷಣೆ ಮಾಡಿದರು: --
ಪರಮಹಂಸರು--ಒಂದು ದೊಡ್ಡ ಪಾತ್ರೆಯಲ್ಲಿ ಸಕ್ಕರೆಯ ಪಾಕ
ವನ್ನು ಹಾಕಿಟ್ಟರೆ ಅ ಪಾತ್ರೆಯ ಸುತ್ತಲು ನಾಲ್ಕೂ ಕಡೆಯಿಂದ ನೊಣಗಳು
ಮುಕ್ಕರುತ್ತವೆ. ಅವುಗಳಲ್ಲಿ ಕೆಲವು ಪಾತ್ರೆಯ ಮೇಲೆ ಕುಳಿತು ಆ ಪಾಕದ
ರಸವನ್ನು ಕುಡಿಯುತ್ತವೆ. ಬೇರೆ ಕೆಲವು ರಸದೊಳಗೆ ಬಿದ್ದು ಒದ್ದಾಡುತ್ತ ಅ
ಪಾಕದ ಬುಡದ ತನಕ ಹೋಗುತ್ತ ವೆ. ಇದರಂತೆ ನಮಗೆ ಸಚ್ಚಿದಾನಂದ
ದಿವ್ಯಾಮೃತವನ್ನು ಪ್ರಾಶನ ಮಾಡತಕ್ಕದ್ದಿರುತ್ತದೆ. ಇದನ್ನು ನೀನು ಪಾತ್ರೆ
ಯ ಮೇಲೆ ಕುಳತು ಪ್ರಾಶನ ಮಾಡುವಿಯೋ? ಅಥವಾ ಆ ಪಾತ್ರೆಯೊಳಗೆ
ಧುಮುಕಿ ಆ ಪ್ರಾಶನ ಸುಖದ ಉಪಭೋಗವನ್ನು ತೆಗೆದುಕೊಳ್ಳು ವಿಯೋ??
ಶಿಷ್ಯ--ನಾನಂತೂ ಪಾತ್ರೆಯ ಮೇಲೆ ಕುಳಿತು ಪ್ರಾಶನ ಮಾಡುವೆನು.
ಒಳಗೆ ಧುಮಕಿ ಸಾಯಲಾರೆನು.
ಪರಮಹಂಸರು--ನೀನು ನಿಜವಾಗಿ ಹುಚ್ಚನು. ಅಮೃತಾಂಬುಧಿ
ಯಲ್ಲಿ ಧುಮಕುವವನು ಎಂದಿಗೂ ಸಾಯುವದಿಲ್ಲ.
ತಾತ್ಪರ್ಯ.
ಪರಮೇಶ್ವರನನ್ನು ತಿಳಿದುಕೊಂಡು ಅವನಲ್ಲಿ ಭಕ್ತಿ ವಿಶ್ವಾಸವಿಟ್ಟವರಿಗೆ
ಕಷ್ಟ ನಷ್ಟಗಳ ಅಥವಾ ಮರಣದ ಅಂಜಿಕೆಯು ಇರಲಿಕ್ಕೆ ಕಾರಣವಿಲ್ಲ.
ಯಾವನಲ್ಲಿ ವಿಶ್ವಾಸವು ಇನ್ನೂ ಮೂಡಿಲ್ಲವೋ ಅವನಿಗೆ ಈ ಭೀತಿಯು ತಪ್ಪ
ಲಾರದು. ಹ ರ
೪೧. ಶುದ್ರ ಅನುಕರಣ.
ಶ್ರೀತಂಕರಾಚಾರ್ಯರ ಬಳಿಯಲ್ಲಿ ಒಬ್ಬ ಮೂರ್ಬ ಶಿಷ್ಯುನಿದ್ದನು. ಆ
ವನು ಯಾವಾಗಲು ತನ್ನ ಗುರುಗಳು ಮಾಡುವಂತೆಯೇ ಮಾಡುತ್ತಿದ್ದನು. ಗು
ಎ೨ ಗಿ೦ಕಿ ೨
ರುಗಳು 4 ಶಿವೋಹಮ್ ? ಎಂದು ನುಡಿದ ಕೂಡಲೆ ಶಿಷ್ಛನು ತಾನೂ « ಶಿವೋ
ಹಮ್» ಎಂದು ನುಡಿಯುತ್ತಿದ್ದನು. ಇದೇ ಪ್ರಕಾರ ಇನ್ನೂ ಅನೇಕ ರೀತಿ
ಯಿಂದ ಅವನು ತನ್ನಗುರುಗಳು ಮಾಡಿದಂತೆ ಮಾಡುತ್ತಿದ್ದನು. ಇದನ್ನು ಶ್ರೀ
ಶಂಕರಾಚಾರ್ಯರು ಮನಗಂಡು ಇವನ ತಲೆಯೊಳಗಿನ ಹುಚ್ಚು ಬಿಡಿಸಬೇ
ಕೆಂದು ವಿಚಾರ ಮಾಡಿ ಒಮ್ಮೆ ಅವನನ್ನು ಕರೆದುಕೊಂಡು ಕಮ್ಮಾರಶಾಲೆಯ
ಮೇಲಿಂದ ಹಾದು ಹೋಗುವಾಗ ತಾವು ಒಂದು ಬೊಗಸೆ ತುಂಬ ಕಬ್ಬಿಣದ
ತಪ್ಪರಸವನ್ನು ಕುಡಿದು ಅವನಿಗೂ ಕುಡಿಯಲಿಕ್ಕೆ ಹೇಳಿದರು. ಆಗ ಅವನಿಗೆ
ಅದನ್ನು ಕುಡಿಯಲಿಕ್ಕೆ ಆಗಲಿಲ್ಲ. ಅಂದಿನಿಂದ ಆ ಶಿಷ್ಯನು ನಾಚಿಕೊಂಡು ಈ
ನೀಚವಾದ ಅನುಕರಣವನ್ನು ಬಿಟ್ಟುಕೊಟ್ಟನು.
ತಾತ್ಸರ್ಯ.
ಪ್ರತಿಯೊಬ್ಬನು ತನ್ನಯೋಗ್ಯತೆಯನ್ನು ತಿಳಿದುಕೊಂಡು ಕೆಲಸ ಮಾಡ
ತಕ್ಕದ್ದು. "ಹುಲಿಯ ಬಣ್ಣಕ್ಕಾಗಿ ನರಿಯು ಮೈ ಸುಟ್ಟುಕೊಂಡಂ
ತೆ? ಯಾರೂ ಮಾಡಬಾರದು. ಯೋಗ್ಯತೆಯನ್ನು ತಿಳಿದುಕೊಂಡು ಕೆಲಸ
ಮಾಡುವವರು ಸುಖದಿಂದ ಇರುವರು. ಯೋಗ್ಯತೆಗೆ ಮಿರಿ ಕೆಲಸಗಳನ್ನು
ಮಾಡಲಿಕ್ಕೆ ಪ್ರಯತ್ನ ಮಾಡುವವರು ತಮ್ಮ ಜೀವಕ್ಕೆ ಸುಮ್ಮನೆ ಕಷ್ಟ ಪಡಿಸಿ
ನಿರಾತೆಯನ್ನೂ ದುಃಖವನ್ನೂ ಅನುಭೋಗಿಸಬೇಕಾಗುವದು.
೪೨. ಸಂಕುಚಿತ ಮನಸು.
ಒಂದು ಬಾವಿಯೊಳಗೆ ಒಂದು ಕಪ್ಪೆಯು ಇರುತ್ತಿತ್ತು. ಅದು ಅಲ್ಲಿಯೇ
ಹುಟ್ಟಿ ಬೆಳೆದಿದ್ದ ತನ್ನ ಬಾವಿಯ ಹೊರಗೆ ಹೋಗುವ ಪ್ರಸಂಗವು ಎಂದೂ
ಬಂದಿದ್ದಿಲ್ಲ. ಆದುದರಿಂದ ಅದಕ್ಕೆ ತನ್ನ ಬಾವಿಯ ಹೊಂಗೆ ಏನು ಇರುತ್ತದೆಂಬ
ದರ ತಿಳುವಳಿಕೆ ಸಹ ಇದ್ದಿಲ್ಲ. ಇಂಥ ಹೊತ್ತಿನಲ್ಲಿ ಒಂದು ಸಮುದ್ರದೊಳಗೆ
ಇರತಕ್ಕ ಕಪ್ಪೆಯು ಆ ಬಾವಿಗೆ ಬಂತು. ಆಗ ಆ ಬಾವಿಯೊಳಗಿನ ಕಪ್ಪೆಯ
ಮತ್ತು ಸಮುದ್ರದೊಳಗಿನ ಕಪ್ಪೆಯ ನಡುವೆ ಕೆಳಗೆ ಬರೆದ ಪ್ರಕಾರ ಸಂಭಾ
ಷಣೆಯಾಯಿತು;
— ಗಿಂಲ —
ಬಾವಿಯೊಳಗಿನ ಕಪ್ಪೆ --ಗೆಳೆಯಾ, ನೀನು ಎಲ್ಲಿಂದ ಬಂದೆ?
ಸಮುದ್ರದ ಕಪ್ಪೆ -- ನಾನು ಸಮುದ್ರದಿಂದ ಬಂದೆನು.
ಜಾವಿಯೊಳಗಿನ ಕಪ್ಪೆ--ಸಮುದ್ರದಿಂದಲೋ! ಸಮುದ್ರವು ಎ
ಷ್ಟು ದೊಡ್ಡದಿರುವದು?
ಸಮುದ್ರದ ಕಪ್ಟೆ--ಆದು ಬಹಳ ದೊಡ್ಡದಿರುವದು.
ಬಾವಿಯೊಳಗಿನ ಕಪ್ಸೆ--( ತನ್ನ ಕಾಲುಗಳನ್ನು ಚಾಚಿ) ನೀನು
ಹೇಳುವ ಸಮುದ್ರವು ಇಷ್ಟು ದೊಡ್ಡದಿರುತ್ತ ದೋ?
ಸಮುದ್ರದ ಕಪ್ಪೆ--ಇದಕ್ಕಿಂತ ಬಹಳೇ ದೊಡ್ಡದಿರುವದು.
ಬಾವಿಯೊಳಗಿನ ಕಪ್ಪೆ--( ಬಾವಿಯ ಒಂದು ದಂಡೆಯಿಂದ ಇ
ನ್ನೊಂದು ದಂಡೆಗೆ ಜಿಗಿದು) ನಿನ್ನ ಸಮುದ್ರವು ಇಷ್ಟು ದೊಡ್ಡದಿರುವರೋ?
ಸಮುದ್ರದ ಕಪ್ಪೆ-_ ಏನು? ಸಮುದ್ರವನ್ನು ನಿನ್ನ ಬಾವಿಗೆ ಹೋ
ಲಿಸುವೆಯಾ? ನಿನ್ನ ಬಾವಿಯು ಹೇಗೆ ಸಮುದ್ರವನ್ನು ಸರಿಗಟ್ಟೀತು?
ಬಾವಿಯೊಳಗಿನ ಕಪ್ಪೆ-- ಜಗತ್ತಿನಲ್ಲಿ ಈ ಬಾವಿಗಿಂತ ಯಾವದೂ
ದೊಡ್ಡದಿರುವದಿಲ್ಲ. ನೀನು ನನ್ನ ಮುಂದೆ ಜೊಳ್ಳು ಕೊಚ್ಚಬೇಡ. ಇಲ್ಲದ್ದೊಂ
ದು ಜಂಭ ಬಡಿದು ನನ್ನನ್ನು ವಂಚಿಸಬೇಕೆನ್ನುತ್ತೀಯಾ? ಹಾಗಾದರೆ ಈಗಲೇ
ನಿನ್ನನ್ನು ಇಲ್ಲಿಂದ ಹೊರಗೆ ದೂಡಿ ಹಾಕುತ್ತೇನೆ.
ತಾತ್ಸರ್ಯ.
ಬಾವಿಯೊಳಗಿನ ಕಪ್ಪೆಯಂತೆ ನಾವು ಎಂದೂ ಸಂಕುಚಿತ ಮನಸ್ಸಿನಿಂದ
ನಡೆಯಬಾರದು. ಈ ಜಗತ್ತಿನಲ್ಲಿ ನಮಗೆ ಗೊತ್ತಿರದ ಅನೇಕ ಸ್ಥಳಗಳು
ಮತ್ತು ಸಂಗತಿಗಳು ಇರುತ್ತವೆ. ಅವುಗಳನ್ನು ಯಾರಾದರೂ ಹೇಳಿದರೆ ಆ
ಸ್ಥಳಗಳು ಇಲ್ಲ ಮತ್ತು ಆ ಸಂಗತಿಗಳು ಸುಳ್ಳು ಎಂದು ಒಮ್ಮೆಲೆ ಆಭಿಪ್ರಾ
ಯ ಕೊಡಬಾರದು. ಅವುಗಳನ್ನು ನಾವು ಚನ್ನಾಗಿ ಹೇಳಿಕೊಂಡು ಬುದ್ಧಿ
ಯಿಂದ ಮತ್ತು ವಿಚಾರದಿಂದ ಪರಿಶೀಲಿಸಬೇಕು. ಆ ಮೇಲೆ ಅವಶ್ಯ ಬಿದ್ದರೆ
ಗ್ಗ ಸ ಅಡ
ನಾವು ನಮ್ಮ ಅಭಿಪ್ರಾಯ ಕೊಡಬೇಕು. ಇಲ್ಲದಿದ್ದರೆ ನಾವು ನಮ್ಮ ಅಜ್ಜಾ
ನವನ್ನೂ ದುರಭಿಮಾನವನ್ನೂ ತೋರಿಸಿದಂತೆ ಆಗುವದು.
೩. ಚಂಚಲ ಮನಸ್ಸು.
ನಾವು ಪರಮೇಶ್ವರನ ಧ್ಯಾನ ಮಾಡುವಾಗ ಮನಸ್ಸು ಯಾಕೆ ಸ್ಥಿರ
ವಾಗಿ ನಿಲ್ಲುವದಿಲ್ಲ? ಅದು ಚಂಚಲವಾಗುವ ಕಾರಣವೇನು? ನೊಣವು ಮಿಠಾ
ಯಿಗಾರನ ಅಂಗಡಿಯಲ್ಲಿ ಮಿಠಾಯಿಯ ಮೇಲೆ ಕುಳಿತಿದ್ದರೂ, ಅಂಗಡಿಯ
ಮೇಲಿಂದ ಒಬ್ಬ ಹಲಾಲಖೋರನು ಹೇಸಿಗೆಯ ಬುಟ್ಟಿಯನ್ನು ತಲೆಯಮೇಲೆ
ಹೊತ್ತು ಕೊಂಡು ಹೋಗಹತ್ತಿದನೆಂದರೆ ಅದು ಮಿಠಾಯಿಯನ್ನು ಬಿಟ್ಟು ಆ
ಹೇಸಿಗೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತ ದೆ. ಆದರೆ ಜೀನನೊಣವು
ಮಾತ್ರ ಹಾಗೆ ಮಾಡದೆ ಯಾವಾಗಲು ಹೂವಿನ ಮೇಲೆ ಕುಳಿತು ಅದರ ಮಕ
ರಂದವನ್ನು ಸೇವಿಸುತ್ತದೆ. ಅದು ಎಂದೂ ಹೊಲಸಿನ ಕಡೆಗೆ ಹೋಗುವ
ದಿಲ್ಲ. ಪ್ರಾಪಂಚಿಕರು ನೊಣದಂತೆ ಇರುವರು. ಒಂದೊಂದು ವೇಳೆ ಅವರಿಗೆ
ಸೀ ಪದಾರ್ಥವು ರುಚಿ ಹತ್ತಿದರೂ ಅವರ ಮನಸ್ಸಿನ ಪ್ರವೃತ್ತಿಯು ಹೊಲ
ಸಿನ ಕಡೆಗೆ ಅಂದರೆ ವಿಷಯಗಳ ಕಡೆಗೆ ಇರುವದರಿಂದ ಅವರು ಮತ್ತೆ ತಿಪ್ಪಿ
ಯ ಕಡೆಗೆ ಹೋಗುತ್ತಾರೆ.
ಪೂರ್ಣವಾಗಿ ಸಂಸಾರ ಬದ್ಧವಾದ ಜೀವವು ತಿಪ್ಪಿಯಲ್ಲಿ ಹುಟ್ಟಿ ಅಲ್ಲಿ
ಯೇ ಸಾಯುವ ಹುಳದಂತೆ ಇರುವದು. ಇದಕ್ಕೆ ತಿಪ್ಪಿಯ ಹೊರತು ಒಳ್ಳೆಯ
ವಸ್ತುಗಳ ಕಲ್ಪನೆಯು ಇರುವದಿಲ್ಲ. ಸಾಧಾರಣ ಪ್ರಾಪಂಚಿಕ ಜೀವವು ಒಂ
ದೊಂದು ವೇಳೆ ಸಕ್ಕರಿಯ ಮೇಲೆಯೂ ಒಂದೊಂದು ವೇಳೆ ಹೊಲಸಿನ ಮೇಲೆ
ಯೂ ಕುಳಿತುಕೊಳ್ಳುವ ನೊಣವನ್ನು ಹೋಲುವದು. ಆದರೆ ಮುಕ್ತ ಜೀವವು
ಯಾವಾಗಲು ಮಧುವನ್ನೇ ಸೇವಿಸುತ್ತಿರುವ ಜೀನನೊಣವನ್ನು ಹೋಲುವದು.
ಆಡು ಅನ್ಯ ಪದಾರ್ಥಗಳನ್ನು ಎಂದೂ ಮುಟ್ಟುವದಿಲ್ಲ.
ತಾತ್ಸರ್ಯ.
ಒಳ್ಗೆ ಕೀ ಮನುಷ್ಯರ ಮನಸ್ಸಿನ ಒಲವು ಒಳ್ಳೇದರ ಕಡೆಗೆ ಇರುತ್ತದೆ.
೨. ಗಿಗಿ೦ ೨
ಶೆಟ್ಟ ಮನುಷ್ಯರ ಮನಸ್ಸಿನ ಒಲವು ಕೆಟ್ಟದರ ಕಡೆಗೆ ಇರುತ್ತದೆ. ಸಾಧಾರಣ
ಮನುಷ್ಯರ ಮನಸ್ಸಿನ ಒಲವು ಒಮ್ಮೊಮ್ಮೆ ಒಳ್ಳೆ ೇೀದರ ಕಡೆಗೂ ಒಮ್ಮೊಮ್ಮೆ
ಕೆಡಕಿನ ಕಡೆಗೂ ಇರುವದು. ಯಾವಾಗಲು ಒಳ್ಳೇದರ ಕಡೆಗೆ ಒಲವು ಇ
ಟ್ಟು ನಡೆಯುವ ಮನುಷ್ಯನೇ ಜನರ ಮನ್ನಣೆಗೂ ಪರಮೇಶ್ವರನ ಕೃಪೆಗೂ
ಪಾತ್ರನಾಗುತ್ತಾನೆ. ಸೋ ತೆ
೮೪. ಸಂಸಾರದ ಮನುಷ್ಯನೂ ಸಾಕಿದ
ಮುಂಗಲಿಯೂ ಒಂದೇ.
ಸಂಸಾರದಲ್ಲಿ ಆಸಕ್ತನಾದ ಮನುಷ್ಯನ ಸ್ಥಿತಿಯು ಮನೆಯಲ್ಲಿ ಸಾಕಿದ
ಮುಂಗಲಿಯಂತೆ ಇರುತ್ತದೆ. ಮುಂಗಲಿಯನ್ನು ಸಾಕಿದವನು ಆ ಪ್ರಾಣಿಯ
ಸಲುವಾಗಿ ಒಂದು ಗೋಡೆಯ ಮೇಲೆ ಎತ್ತ ರೆವಾದ ಸ್ಥಳದಲ್ಲಿ ಒಂದು
ಗೂಡನ್ನು ಕಟ್ಟಿಸಿ ಕೊಡುವನು. ಆ ಮೇಲೆ ಅದರ ಕುತ್ತಿ ಗೆಗೆ ಒಂದು ಹುರಿ
ಯ ತುದಿಯಿಂದ ಬಿಗಿದು ಅದರ ಇನ್ನೊಂದು ತುದಿಗೆ ಒಂದು ಭಾರವಾದ ಕ
ಬ್ಲ ಯನ್ನು ಕಟ್ಟಿ ಆ ಕಟ್ಟೆಯನ್ನು ಗೋಡೆಯ ಮೇಲಿಂದ ಇಳಿಬಿಡುವನು. ಆ
ಮೇಲೆ ಆ ಮುಂಗಲಿಯನ್ನು ಅದರ ಗೂಡಿನ ಹೊರಗೆ ಆಡಲಿಕ್ಕೆ ಬಿಡುವನು.
ಅಗ ಅದು ಆ ಗೋಡೆಯ ಕೆಳಗೆ ಇಳಿದು ತನಗೆ ಬೇಕಾದ ಕಡೆಗೆ ಮನೆಯ
ಕೋಣೆಯಲ್ಲಾಗಲಿ, ಅಂಗಳದಲ್ಲಾಗಲಿ ಆಡುವದು ಹೀಗೆ ಆಡುವಾಗ ಅದು
ಏನಾದರೂ ನೋಡಿ ಹೆದರಿತೆಂದರೆ ತಿರುಗಿ ಗೋಡೆಯನ್ನೇರಿ ತನ್ನ ಗೂಡಿನೊ
ಳಗೆ ಹೋಗುವದು. ಅಯ್ಯೋ! ಅದು ಅಲ್ಲಿ ಬಹಳ ಹೊತ್ತು ನಿಂತುಕೊಳ್ಳಲಾ
ರದು. ಯಾಕಂದರೆ ಹುರಿಯ ತುದಿಗೆ ಕಟ್ಟಿದ ಭಾರವಾದ ಕಟ್ಟೆಯು ಅದನ್ನು
ಆ ಸ್ಥಳದಿಂದ ತಿರುಗಿ ಕೆಳಗೆ ಜಗ್ಗುವದು! ಇದರಂತೆ ಸಂಸಾರದೊಳಗಿನ ಕಷ್ಟ
ಗಳಿಗೂ ದುಃಖಗಳಿಗೂ ಬೇಸರಪಟ್ಟಂಥ ಮನುಷ್ಯನು ಪರಮೇಶ್ವರನಿಗೆ ಶರಣು
ಹೋಗಲಿಕ್ಕೆ ಹಾತೊರೆದ ಕೂಡಲೆ ಪುನಃ ಸಂಸಾರದ ಮೋಹವೆಂಬ ಕಟ್ಟೆಯು
ಅವನನ್ನು ಜಗ್ಗಿ ತಂದು ಸಂಸಾರದ ದುಃಖದಲ್ಲಿ ಕೆಡವುತ್ತದೆ.
ತಾತ್ಸರ್ಯ.
ಸೂಸಾಕದ ಮೋಹವು ಅನಿವಾರವಿರುತ್ತದೆ. ಅದನ್ನು ತಪ್ಪಿಸಿಕೊಂಡು
ಎ. ಗಿ೧ಗಿ --
ಪರಮೇಶ್ವರನಿಗೆ ಶರಣು ಹೋಗಬೇಕಾದರೆ ಪರಮೇಶ್ವರನಲ್ಲಿ ಬಹಳ ದೃಢ
ವಾದ ಭಕ್ತಿಯನ್ನು ಇಡತಕ್ಕದ್ದು.
ಲೆಜ. ದಿನ್ಕಪ್ರೇಮವಿದ್ದಲ್ಲಿ ದೇವರು
ದರ್ಶನ ಕೊಡುತ್ತಾನೆ.
ಭಾಗವತರ ಆಟೆದಲ್ಲಿ ತಾಳಗಳನ್ನು ಕಟಿಯುತ್ತ ಮತ್ತು ಮೃದಂಗ ಪಿ.
ಟೀಲುಗಳನ್ನು ಬಾರಿಸುತ್ತ ಎಲ್ಲಿಯತನಕ ದೊಡ್ಡ ಧ್ವನಿಯಿಂದ ಹಾಡುವದು,
ಒದರಾಡುವದು, ಚೀರಾಡುವದು ನಡೆಯುತ್ತದೋ ಅಲ್ಲಿಯ ವರೆಗೆ ಕೃಷ್ಣನ
ವೇಷವನ್ನು ಹಾಕಿಕೊಂಡವನು ಒಳಗೆ ಕೋಣೆಯಲ್ಲಿ ತಂಬಾಕು ಸೇದುತ್ತ
ಹರಟಿಯನ್ನು ಕೊಚ್ಚುತ್ತ ಕುಳಿತುಕೊಂಡಿರುತ್ತಾನೆ. ಆದರೆ ಇದೆಲ್ಲ ಗದ್ದಲವು
ತೀರಿ ನಾರದನ ವೇಷ ಹಾಕಿಕೊಂಡವನು ಬಂದು ಪ್ರೇಮಭಾವದಿಂದಲೂ ತನ್ನ
ಮಂಜುಳವಾದ ಧ್ವನಿಯಿಂದಲೂ « ಮುಕುಂದಾ, ಕೃಷ್ಣಾ, ಬಾ” ಎಂದು ಕರೆ
ದ ಕೂಡಲೆ ಕೃಷ್ಣನಿಗೆ ಒಳಗೆ ಕೂಡ್ರಲಿಕ್ಕೆ ಆಗುವದಿಲ್ಲ. ಅದರಂತೆ ಭಕ್ತನು
ಪರಮೇಶ್ವರನಿಗೆ ಸುಮ್ಮನೆ ಬಾ ಎಂದು ಎಷ್ಟು ಸಾರೆ ಒದರಿದರೂ ಅವನು ದ
ರ್ಶನ ಕೊಡುವದಿಲ್ಲ. ಅದರೆ ಭಕ್ತನು ಪ್ರೇಮಪೂರ್ವಕವಾದ ಅಂತಃಕರಣ
ದಿಂದ ಆತನ ಧ್ಯಾನ ಮಾಡಿ ಕರೆದರೆ ಆತನು ದರ್ಶನ ಕೊಡಲಿಕ್ಕೆ ಎಂದೂ
ತಡಮಾಡುವದಿಲ್ಲ.
ತಾತ್ಸರ್ಯ.
ದೇವರಿಗೆ ಡಾಂಭಿಕ ಭಕ್ತಿಯು ಸೇರುವದಿಲ್ಲ. ಅತನು ಭಕ್ತನ ನಿಜ
ವಾದ ಅಂತಃಕರಣವನ್ನು ಪರೀಕ್ಷಿಸುತ್ತಾನೆ.
ನಮ್ರತೆಯ ಉಪದೇಶೆ.
ಒಬ್ಬ ಗೃಹಸ್ಥನು ಒಬ್ಬ ಸಾಧುವಿನ ಬಳಿಗೆ ಹೋಗಿ ಸುಳ್ಳೆ ಕೇ ನಮ್ರ ತೆ
ಯನ್ನು ತೋರಿಸಿ ಸ್ವಾವಿಸಾ, ನಾನು ತಮ್ಮ ದೀನನಾದ ದಾಸ;ಿರುತ್ತೆ
೨. ಗಿ೧ು ೨.
ನನಗೆ ಮೋಕ್ಷವು ಹೇಗೆ ದೊರಕುವದೆಂಬದನ್ನು ದಯಮಾಡಿ ಹೇಳಬೇಕು ”
ಎಂದು ಬೇಡಿಕೊಂಡನು. ಅದಕ್ಕೆ ಆ ಸಾಧುವು ಅವನ ಕಪಟವಾದ ನಮ್ರತೆ
ಯನ್ನು ನೋಡಿಕೊಂಡು-" ಒಳ್ಳೆ ದು. ನಿನಗಿಂತ ಅಪವಿತ್ರವಾದ ಪದಾರ್ಥ
ವನ್ನು ತೆಗೆದುಕೊಂಡು ಬಾ. ಅಂದರೆ ನಿನಗೆ ಮೋಕ್ತವು ಹೇಗೆ ದೊರಕುವದೆಂ
ಬದನ್ನು ಹೇಳುವೆನು” ಎಂದು ಉತ್ತರ ಕೊಟ್ಟನು. ಆ ಮೇಲೆ ಆ ಗೃಹಸ್ಥನು
ತನಗಿಂತ ಅಪವಿತ್ರ ಪದಾರ್ಥವನ್ನು ಹುಡುಕಹತ್ತಿದನು. ಕೆಲವು ಹೊತ್ತು
ಅವನಿಗೆ ಆಂಥ ಪದಾರ್ಥವು ಯಾವದೂ ಸಿಗಲಿಲ್ಲ. ಕಡೆಗೆ ಅವನು ತನ್ನ ಮ
ಲವನ್ನು ನೋಡಿ-« ಇದು ಮೂತ್ರ ನನಗಿಂತ ಅಪವಿತ್ರವಾದದ್ದು. ಇದನ್ನು
ತೆಗೆದುಕೊಂಡು ಹೋಗೋಣ ” ಎಂದು ಅದಕ್ಕೆ ಕೈಹಾಕಿದನು. ಆದರೆ ಅದ
ಕೊಳಗಿಂದ-ಎಲ್ಫೈ ಪಾಪಿಷ್ಕನೇ, ನೀನು ನನ್ನನ್ನು ಸ್ಪರ್ಶ ಮಾಡಬೇಡ. ನಾನು
ಮೊದಲಿಗೆ ಅನ್ನದ ರೂಪದಿಂದ ಒಳೆ ತೆ ಸ್ಥಿತಿಯಲ್ಲಿದ್ದಾಗ್ಗೆ ದೇವರಿಗೆ ನೈವೇದ್ಯ
ಕೊಡಲಿಕ್ಕೆ ಸಹ ಯೋಗ್ಯನಿದ್ದೆನು. ಆದರೆ ನಿನ್ನ ದುಷ್ಟ ಸಂಸರ್ಗದಿಂದ ನನ
ಗೆ ಈ ನೀಚ ಸ್ಥಿತಿಯು ಪ್ರಾಪ್ತವಾಯಿತು. ಜನರು ನನ್ನನ್ನು ನೋಡಿದ ಕೂ
ಡಲೆ ತಮ್ಮ ಮೂಗನ್ನು ಮುಚ್ಚಿಕೊಂಡು ನನ್ನಿಂದ ದೂರ ಹೋಗುತ್ತಾರೆ.
ನೀನು ಇನ್ನೊಮ್ಮೆ ಸ್ಪರ್ಶ ಮಾಡಿದರೆ ನನ್ನ ಸ್ಥಿತಿಯು ಇದಕ್ಕೂ ಎಷ್ಟು ನೀಚ
ವಾಗುವದೋ ದೇವರೇ ಬಲ್ಲ” ಎಂಬ ಶಬ್ದಗಳು ಹೊರಟವು. ಅದರಿಂದ ಆ
ಗೃಹಸ್ಥನಿಗೆ ನಮ್ರತೆಯ ಉಪದೇಶವು ಪೂರ್ಣವಾಗಿ ದೊರಕಲು ಅವನು ನಮ್ರ
ನಾಗಿ ಪೂರ್ಣಾವಸ್ಯೆಯನ್ನು ಹೊಂದಿದನು.
ತಾತ್ಸರ್ಯ,
ಈಶ್ವರನಿರ್ಮಿತ ಈ ಅಗಾಧವಾದ ಸೃಷ್ಟಿಯಲ್ಲಿ ಚೇತನ ಅಚೇತನ
ಯಾವತ್ತು ಪದಾರ್ಥಗಳಿಂದ ಮನುಷ್ಯನಿಗೆ ಒಮ್ಮೊಮ್ಮೆ ಉಪದೇಶವು ದೊರ
ಶುವದು. ಆದರೆ ಯೋಗ್ಯ ಲಕ್ಷ ಕೊಟ್ಟು ಉಪದೇಶವನ್ನು ತಿಳಕೊಳ್ಳುವವ
ರು ಮಾತ್ರ ಇರಬೇಕು.
OA ಪಿಂ
೮೭. ಜಗತ್ತಿನ ಬಾಳುವೆಯು ಒಂದು
ಕ್ಷಣದ ಆಟಿವು.
ಸಣ್ಣ ಹುಡುಗರು ತಾವೊಬ್ಬರೇ ಇದ್ದಾಗ ತಮ್ಮ ಗೊಂಬೆಗಳ ಕೂಡ
ಆಟವನ್ನು ಆಡುತ್ತಾರೆ. ಆದರೆ ಅವರು ತಮ್ಮ ತಾಯಿಯು ಬಂದ ಕೂಡಲೆ ಆ
ಗೊಂಬೆಗಳನ್ನು ಚಲ್ಲಿಕೊಟ್ಟು-« ಅವ್ವಾ? ಅವ್ವಾ!” ಎಂದು ಕೂಗುತ್ತ ಅವ
ಳ ಬಳಿಗೆ ಓಡಿಹೋಗುತ್ತಾರೆ. ಅದರಂತೆ ನೀವು ಈ ಜಗತ್ತಿನಲ್ಲಿ ದ್ರವ್ಯ, ಮಾಸ,
ಕೀರ್ತಿ ಎಂಬ ಗೊಂಬೆಗಳ ಕೂಡ ಅಂಜಿಕೆ ಅಥವಾ ಚಿಂತೆ ಇಲ್ಲದೆ ಆಟವನ್ನು
ಆಡುತ್ತಿದ್ದೀರಿ. ಒಮ್ಮೆ ನೀವು ಜಗನ್ಮಾತೆಯನ್ನು ನೋಡಿದ ಕೂಡಲೆ ದ್ರವ್ಯ;
ಮಾನ್ಯ ಕೀರ್ತಿಗಳಲ್ಲಿ ನಿಮ್ಮ ಪ್ರೀತಿಯು ಆಳಿದುಹೋಗಿ ನೀವು ಅವಳ ಕಡೆಗೆ
ಶಿಡಿಹೋಗುವಿರಿ.
ತಾತ್ಪರ್ಯ.
ಪರಮೇಶ್ವರನ ಜ್ಞಾನವಾಗುವತನಕೆ ಜನರು ತಮ್ಮ ಸಂಸಾರ, ತಮ್ಮ
ಮನೆ, ಶಮ್ಮ ಹೊಲ, ತಮ್ಮ ವ್ಯಾಪಾರ ಮುಂತಾದ ಕಾರ್ಯಕಲಾಪಗಳಲ್ಲಿ
ತೊಡಗುತ್ತಾರೆ. ಪರಮೇಶ್ವರನ ಜ್ಞಾನವಾದ ಬಳಿಕ ಆ ಕಾರ್ಯಕಲಾಪಗಳು
ಅಲ್ಲಿಂದಲ್ಲೇ ಉಳಿದುಹೋಗುತ್ತವೆ. ಅವುಗಳ ಕಡೆಗೆ ಯಾರೂ ಲಕ್ಷಿಸುವದಿಲ್ಲ.
ಕುಡಿಯಲಿಕ್ಕೆ ಅಮೃತವು ಸಿಕ್ಕ ಬಳಿಕ ಹಾಲು ಅಥವಾ ಮಜ್ಜಿಗೆ ಯಾರು
ಅಪೇಕ್ಷೆ ಮಾಡುವರು?
ಆಲೆ. ಬ್ರಹ್ಮಚರ್ಯದ ಮಹತ್ವವು.
ಹೊಸದಾಗಿ ಹುಟ್ಟಿದ ಆಕಳ ಕರುವು ಬಹಳ ಉಲ್ಲಾ ಸವುಳ್ಳದ್ದೂ,
ಅನಂದವುಳ್ಳದ್ದೂ ಇರುತ್ತದೆ. ಅದು ಹಗಲೆಲ್ಲ ಟಣ್ ಟುಣ್ ಎಂದು ಜಿಗಿ
ದಾಡುತ್ತದೆ. ಆದರೆ ತನ್ನ ತಾಯಿಯ ಮೊಲೆಯುಣ್ಣುವಾಗ ಅದರ ಜಿಗಿದಾಟವು
ಕಡಿಮೆಯಾಗುತ್ತದೆ. ಆದರ ಕುತ್ತಿಗೆಗೆ ಕಣ್ಣಿಯನ್ನು ಹಚ್ಚಿದ ಕೂಡಲೆ ಅ
ದರ ಉಲ್ಲಾಸವು ಹೊರಟುಹೋಗುತ್ತ ದೆ. ಮೋರೆಯು ಬಾಡುತ್ತದೆ. ಮತ್ತು
ಸೊರಗಹತ್ತ್ಮುತ್ತದೆ, ಅದರಂತ ಹುಡುಗನು ತನ್ನ ಮಿದುವಯಾ।) ತಿನ್ನಮೇಲ
ಸಂಸಾರದ ಭಾರವು ಬೀಳುವವರೆಗೆ ಆನಂದದಲ್ಲಿರುತ್ತಾನೆ. ಅವನ ಮೇಲೆ
ಒಮ್ಮೆ ಸಂಸಾರದ ಭಾರವು ಬಿತ್ತೆಂದರೆ ಅವನ ಮೋರೆಯ ಮೇಲೆ ಉದಾಪ್ಟೀನ
ತೆಯ ಮತ್ತು ಚಿಂತೆಯ ಲಕ್ಷಣಗಳು ಕಾಣಹತ್ತುತ್ತವೆ. ಹಾಗೂ ಅವನ
ದ ಮೇಲಿನ ಗುಲಾಬಿ ಬಣ್ಣವು ಹೊರಟುಹೋಗಿ ಅವನ ಹಣೆಯ ವ
ನೀರಿಗೆಗಳು ಬೀಳುತ್ತವೆ. ೬೫ ಅವಿವಾಹಿತನಾಗಿರುವವನು ಪಾ ್ರ್ರತಃಕಾಲಡ
ಗಾಳಿಯಂತೆ ಸ್ವತಂತ್ರನೂ ಇದೇ ಈಗ ಅರಳಿದ ಹೂವಿನಂತೆ pe
ಹಿಮಬಿಂದುವಿನಂತೆ ಪವಿತ್ರನೂ ಆಗಿರುವನು.
ತಾತ್ಸರ್ಯ.
ಅಖಂಡ ಬ್ರಹ್ಮಚರ್ಯವನ್ನು ಪಾಲಿಸುವವರ ಶಾರೀರಿಕ ಮತ್ತು ಮಾನ
ಸಿಕ ಶಕ್ತಿಯು ಸರ್ವರೀತಿಯಿಂದ ಬೆಳೆಯುವದು. ಹನುಮಂತನು ಬ್ರಹ್ಮಚಾರಿಯಾ
ಗಿದ್ದರಿಂದ ದ್ರೋಣಗಿರಿ:ರುಂಥ ಪರ್ವತವನ್ನು ಚಂಡಿನೆಂತೆ ಹಾರಿಸಿಕೊಟ್ಟನು.
Rp ಬ್ರಹ್ಮಚಾರಿಯಾಗಿದ್ದರಿಂದ ಭಾರತೀಯ ಯುದ್ಧದಲ್ಲಿ
ಶ್ರೀಕೃಷ್ಣನಿಗೆ ಸಹ ತನ್ನ ಪ್ರತಿಜ್ಞಾಭಂಗವನ್ನು ಮಾಡಲಿಕ್ಕೆ ಹಚ್ಚಿ ಅವನಿಗೆ
ಸುದರ್ಶನ ಚಕ ಕ್ರವನ್ನು ಕೈಯಲ್ಲಿ ಓಡಿದುಕೊಳ್ಳ ವಪ ಪ್ರಸಂಗವನ್ನು. ತಂದನು.